- Home
- Entertainment
- Cine World
- ನ್ಯಾಚುರಲ್ ಬ್ಯೂಟಿ ಕೀರ್ತಿ ಸುರೇಶ್‌ಗೆ 'ಸರ್ಜರಿ ಬಾಡಿ' ಎಂದು ಟೀಕೆ; ವಿಡಿಯೋ ತೋರಿಸಿ ತಿರುಗೇಟು ಕೊಟ್ಟ ನಟಿ!
ನ್ಯಾಚುರಲ್ ಬ್ಯೂಟಿ ಕೀರ್ತಿ ಸುರೇಶ್‌ಗೆ 'ಸರ್ಜರಿ ಬಾಡಿ' ಎಂದು ಟೀಕೆ; ವಿಡಿಯೋ ತೋರಿಸಿ ತಿರುಗೇಟು ಕೊಟ್ಟ ನಟಿ!
ನಟಿ ಕೀರ್ತಿ ಸುರೇಶ್ ಅವರು 9 ತಿಂಗಳ ಕಠಿಣ ಪರಿಶ್ರಮದಿಂದ 10 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಆದರೆ, ಸರ್ಜರಿ ಮಾಡಿಸಿಕೊಂಡು ಸಣ್ಣಗಾಗಿದ್ದಾರೆ ಎಂಬ ಸುಳ್ಳು ಸುದ್ದಿಯಿಂದ ಬೇಸರಗೊಂಡಿದ್ದಾರೆ. ಇದೀಗ, ಯೋಗ ಮತ್ತು ವರ್ಕೌಟ್ ಮೂಲಕವೇ ಈ ಫಿಟ್ನೆಸ್ ಸಾಧಿಸಿದ್ದು ಎಂದು ಸ್ಪಷ್ಟಪಡಿಸಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಅವರು, '9 ತಿಂಗಳು ಕಷ್ಟಪಟ್ಟು ವರ್ಕೌಟ್ ಮಾಡಿ 10 ಕೆಜಿ ತೂಕ ಇಳಿಸಿಕೊಂಡಿದ್ದೆ. ಆದರೆ, ಇದನ್ನ ನೋಡಿದ ಕೆಲವರು ನಾನು ಸರ್ಜರಿ ಮಾಡಿಸಿಕೊಂಡು ಸಣ್ಣ ಆದೆ ಅಂತ ಸುದ್ದಿ ಹಬ್ಬಿಸಿದರು. ಇದು ನನಗೆ ತುಂಬಾ ನೋವು ಕೊಡ್ತು' ಎಂದು ಅಳಲು ತೋಡಿಕೊಂಡಿದ್ದಾರೆ.

ಪ್ರಿಯದರ್ಶನ್ ನಿರ್ದೇಶನದ ಮೋಹನ್‌ಲಾಲ್ ನಟನೆಯ 'ಗೀತಾಂಜಲಿ' ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ಕೀರ್ತಿ, ಇಂದು ತಮಿಳು, ತೆಲುಗು, ಮಲಯಾಳಂ ಚಿತ್ರರಂಗದಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಅವರು ತಮ್ಮ ಫಿಟ್ನೆಸ್ ಹಾಗೂ ಆರೋಗ್ಯದ ಬಗ್ಗೆ ಹಂಚಿಕೊಂಡ ಮಾತುಗಳು ಚರ್ಚೆಗೆ ಗ್ರಾಸವಾಗಿವೆ.
'ಇವತ್ತು ನನ್ನನ್ನು ನಾನು ನೋಡಿಕೊಳ್ಳುವ ರೀತಿ ಬಗ್ಗೆ ನನಗೆ ಹೆಮ್ಮೆ ಇದೆ. ಆದರೂ ಜನ ನನ್ನ ಬಗ್ಗೆ ಮಾತಾಡೋದನ್ನ ನಿಲ್ಲಿಸಲ್ಲ. ನೀವು ದಪ್ಪಗಿದ್ದರೆ ಸಣ್ಣ ಆಗಿ ಅಂತಾರೆ, ಸಣ್ಣಗಿದ್ದರೆ ದಪ್ಪ ಆಗಿ ಅಂತಾರೆ. ಈ ಪ್ರಪಂಚ ಹೇಗೆ ಕೆಲಸ ಮಾಡುತ್ತೆ ಅಂತ ನನಗೆ ಕೆಲವೊಮ್ಮೆ ಆಶ್ಚರ್ಯ ಆಗುತ್ತೆ' ಎಂದು ಕೀರ್ತಿ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
ಯೋಗ ಮಾಡಿದ್ದರಿಂದ ತಮಗೆ ಒಳ್ಳೆ ಮನಸ್ಥಿತಿ ಮತ್ತು ಆತ್ಮವಿಶ್ವಾಸ ಬಂದಿದೆ, ಜೊತೆಗೆ ತಮ್ಮ ದೇಹವನ್ನು ಇನ್ನಷ್ಟು ಪ್ರೀತಿಸುವುದನ್ನು ಯೋಗ ಕಲಿಸಿದೆ ಎಂದು ಕೀರ್ತಿ ಹೇಳಿದ್ದಾರೆ.
ನನಗೆ ಜಿಮ್ ಮಾಡುವುದು ಕಷ್ಟವೇನಲ್ಲ, ಆದರೆ ಅದನ್ನು ಸರಿಯಾದ ರೀತಿಯಲ್ಲಿ ಹೇಗೆ ಮಾಡಬೇಕು ಎಂಬುದು ತಮಗೆ ಗೊತ್ತಿರಲಿಲ್ಲ, ಈಗ ಅದನ್ನು ಅರ್ಥ ಮಾಡಿಕೊಂಡಿದ್ದೇನೆ ಎಂದೂ ಹೇಳಿದ್ದಾರೆ. ಈ ಎಲ್ಲ ವಿಚಾರಗಳನ್ನು ಹೇಳಿಕೊಳ್ಳಲು ಕೀರ್ತಿ ತಮ್ಮ ಇನ್ಸ್ಟಾಗ್ರಾಂನಲ್ಲಿ ವರ್ಕೌಟ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಕೀರ್ತಿ ಅವರ ಈ ಪೋಸ್ಟ್‌ಗೆ ಅಭಿಮಾನಿಗಳಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಇನ್ನು, ಜೆ.ಕೆ. ಚಂದ್ರು ನಿರ್ದೇಶನದ 'ರಿವಾಲ್ವರ್ ರೀಟಾ' ಕೀರ್ತಿ ನಟನೆಯ ಕೊನೆಯ ಸಿನಿಮಾ. ಈ ವರ್ಷ ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲಿ ಅವರ ಹಲವು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

