ಫ್ಯಾಮಿಲಿ ಜೊತೆ Katrina -Vicky ಡಿನ್ನರ್ ಡೇಟ್ ಫೋಟೋ ವೈರಲ್!
ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರಾದ ಕತ್ರಿನಾ ಕೈಫ್ (Katrina kaif) ಸದ್ಯ ಪತಿ ವಿಕ್ಕಿ ಜೊತೆ ಅತ್ತೆಯ ಮನೆಯಲ್ಲಿ ನೆಲೆಸಿದ್ದಾರೆ. ದಿನವೂ ಅವರ ಫೋಟೋಗಳು ಹೊರಬರುತ್ತಿವೆ. ಇದನ್ನು ನೋಡಿದ ಅಭಿಮಾನಿಗಳು ಕ್ಯಾಟ್ ಆದರ್ಶ ಸೊಸೆ ಎಂದು ಹೇಳುತ್ತಿದ್ದಾರೆ. ಅದೇ ಸಮಯದಲ್ಲಿ, ವಿಕ್ಕಿ ಕೌಶಲ್ (Vicky Kaushal) ಕೂಡ ಕತ್ರಿನಾ ಕುಟುಂಬದೊಂದಿಗೆ ತುಂಬಾ ಕಂಫರ್ಟಬಲ್ ಆಗಿದ್ದಾರೆ. ಕತ್ರಿನಾ ಕುಟುಂಬ ಸದ್ಯ ಮುಂಬೈಗೆ ಬಂದಿದೆ. ಮಾರ್ಚ್ 20 ರಂದು ಅಂದರೆ ಶನಿವಾರ, ದಂಪತಿ ತಮ್ಮ ಕುಟುಂಬ ಸದಸ್ಯರೊಂದಿಗೆ ಡಿನ್ನರ್ ಡೇಟ್‌ಗೆ ತೆರಳಿದ್ದರು. ಈ ವೇಳೆ ಅವರು ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾದರು. ಕುಟುಂಬದೊಂದಿಗೆ ಕ್ಯಾಟ್-ವಿಕ್ಕಿಯ ಡಿನ್ನರ್ ಫೋಟೋಗಳು ಸಖತ್ ವ ವೈರಲ್ ಆಗಿವೆ.
ಹೋಳಿ ಹಬ್ಬದ ನಂತರ ವಿಕ್ಕಿ ಕೌಶಲ್- ಕತ್ರಿನಾ ಕೈಫ್ ತಮ್ಮ ಕುಟುಂಬದೊಂದಿಗೆ ಮುಂಬೈನ ವರ್ಲಿಯಲ್ಲಿರುವ ರೆಸ್ಟೋರೆಂಟ್‌ಗೆ ಡಿನ್ನರ್‌ಗೆ ತೆರಳಿದ್ದರು. ಈ ವೇಳೆ ಅವರು ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾದರು.
ಈ ಸಮಯದಲ್ಲಿ, ಕತ್ರಿನಾ ಕೈಫ್ ಅವರ ತಾಯಿ ಸುಸಾನ್ ಟರ್ಕಾಟ್ ಸಹ ಜೊತೆಗೆ ಕಾಣಿಸಿಕೊಂಡರು. ಇವರಲ್ಲದೆ ವಿಕ್ಕಿ ಕೌಶಲ್ ತಂದೆ ಶ್ಯಾಮ್ ಕೌಶಲ್, ತಾಯಿ ಮತ್ತು ಸಹೋದರ ಸನ್ನಿ ಕೌಶಲ್ ಕೂಡ ಜೊತೆಗಿದ್ದರು.
ಫ್ಯಾಮಿಲಿ ಡಿನ್ನರ್ ಡೇಟ್ ಗೆ ಕತ್ರಿನಾ ಡೆನಿಮ್ ಶರ್ಟ್ ಮತ್ತು ಮ್ಯಾಚಿಂಗ್ ಸ್ಕರ್ಟ್ ಧರಿಸಿದ್ದರು. ಅದೇ ಸಮಯದಲ್ಲಿ, ವಿಕ್ಕಿ ಕೌಶಲ್ ಬೂದು ಬಣ್ಣದ ಪ್ಯಾಂಟ್ ಮತ್ತು ಕಪ್ಪು ಶರ್ಟ್ ಧರಿಸಿದ್ದರು. ಕತ್ರಿನಾ ಮತ್ತು ವಿಕ್ಕಿ ಕೌಶಲ್ ಪಾಪರಾಜಿಗಳಿಗೆ ನಗುತ್ತಲೇ ಪೋಸ್ ಕೊಟ್ಟರು.
ಇದಾದ ಬಳಿಕ ಕುಟುಂಬ ಸಮೇತ ಫೋಟೋಗಳನ್ನೂ ಕ್ಲಿಕ್ಕಿಸಲಾಯಿತು.ಕತ್ರಿನಾ ಮತ್ತು ವಿಕ್ಕಿಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.ಒಬ್ಬ ಅಭಿಮಾನಿ 'ವಿಕ್ಕಿ ಅತ್ತೆಯೊಂದಿಗೆ' ಎಂದು ಬರೆದಿದ್ದಾರೆ. ಅದೇ ಸಮಯದಲ್ಲಿ, ಒಬ್ಬರು 'ಆತ್ಮೀಯ ಕುಟುಂಬ' ಎಂದು ಬರೆದರೆ, ಅಭಿಮಾನಿಗಳಲ್ಲಿ ಒಬ್ಬರು 'ಅತ್ಯಂತ ಸುಂದರ ಬಾಲಿವುಡ್ ಜೋಡಿ' ಎಂದು ಬರೆದಿದ್ದಾರೆ.
ಕೆಲಸದ ಮುಂಭಾಗದಲ್ಲಿ, ಕತ್ರಿನಾ ಕೈಫ್ 'ಟೈಗರ್ 3 ' ಸಿನಿಮಾ ಚಿತ್ರೀಕರಣದಲ್ಲಿದ್ದಾರೆ. ಇದರಲ್ಲಿ ಸಲ್ಮಾನ್ ಖಾನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಶ್ರೀರಾಮ್ ರಾಘವನ್ ಅವರ 'ಮೆರ್ರಿ ಕ್ರಿಸ್ಮಸ್' ಚಿತ್ರದಲ್ಲಿ ಅವರು ನಟಿಸಲಿದ್ದಾರೆ. ಅವರು ಸಿದ್ಧಾಂತ್ ಚತುರ್ವೇದಿ ಮತ್ತು ಇಶಾನ್ ಖಟ್ಟರ್ ಅವರೊಂದಿಗೆ 'ಫೋನ್ ಭೂತ್' ನಲ್ಲಿ ಹಾರರ್ ಕಾಮಿಡಿಯಲ್ಲಿ ಸಹ ಕೆಲಸ ಮಾಡಲಿದ್ದಾರೆ.
ಅದೇ ಸಮಯದಲ್ಲಿ, ವಿಕ್ಕಿ ಕೌಶಲ್ 'ಸ್ಯಾಮ್ ಬಹದ್ದೂರ್' ಮತ್ತು 'ಗೋವಿಂದಾ ನಾಮ್ ಮೇರಾ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಎರಡೂ ಚಿತ್ರಗಳ ಚಿತ್ರೀಕರಣ ನಡೆಯುತ್ತಿದೆ. ಕೆಲವು ದಿನಗಳ ಹಿಂದೆ, ವಿಕ್ಕಿ ಕೌಶಲ್ ಇಂದೋರ್‌ನಲ್ಲಿ ಸಾರಾ ಅಲಿ ಖಾನ್ ಜೊತೆ ಶೂಟಿಂಗ್‌ನಲ್ಲಿ ಕಾಣಿಸಿಕೊಂಡಿದ್ದರು.