Celebrity Food: ಕತ್ರೀನಾ ಕೈಫ್ ಫಿಟ್ನೆಸ್ ಸೀಕ್ರೆಟ್ ಏನ್ ಗೊತ್ತಾ ?
ಸೆಲೆಬ್ರಿಟಿ (Celebrity)ಗಳ ಬಗ್ಗೆ ಜನಸಾಮಾನ್ಯರಿಗೆ ಯಾವಾಗ್ಲೂ ಒಂದು ಕ್ಯೂರಿಯಾಸಿಟಿ ಇದ್ದೇ ಇರುತ್ತೆ. ಅವ್ರ ಲೈಫ್‌ಸ್ಟೈಲ್ (Lifestyle),ಹ್ಯಾಬಿಟ್ಸ್, ಅವ್ರೇನು ತಿನ್ತಾರೆ ಅನ್ನೋ ಬಗ್ಗೆ ತಿಳಿದುಕೊಳ್ಳಲು ಯತ್ನಿಸುತ್ತಾರೆ. ಬಾಲಿವುಡ್ ಸೂಪರ್ ಕ್ಯೂಟ್ ಕತ್ರೀನಾ ಕೈಫ್ ಫಿಟ್ನೆಸ್ ಕುರಿತಾದ ಟಾಪ್ ಸೀಕ್ರೇಟ್ ನಾವ್ ಹೇಳ್ತೀವಿ.
ಸೆಲೆಬ್ರಿಟಿಗಳ ಲೈಫ್‌ಸ್ಟೈಲ್ (Lifestyle) ಎಲ್ಲರಂಥಲ್ಲ. ಅದು ಬೇರೆಯದ್ದೇ ಲೋಕ. ಡಿಸೈನರ್ ಡ್ರೆಸ್, ಸೆಲೆಬ್ರಿಟಿ ಆರ್ಟಿಸ್ಟ್ ಮೇಕಪ್, ನ್ಯೂಟ್ರಿಷಿಯನ್ ಸಜೆಸ್ಟೆಡ್ ಫುಡ್ ಎಲ್ಲಾನೂ ಲಕ್ಸುರಿಯಸ್. ವಯಸ್ಸಾದರೂ ಯಂಗ್ ಆಗಿ ಕಾಣುವ ಸೆಲೆಬ್ರಿಟಿಗಳು ಅದಕ್ಕಾಗಿ ಯೋಗ, ಜಿಮ್ ಎಂದು ಹಲವರು ವಿಧಾನಗಳನ್ನು ಅನುಸರಿಸುತ್ತಾರೆ. ಹಾಗೆಯೇ ಮುಖ್ಯವಾಗಿ ಉತ್ತಮ ಆಹಾರಪದ್ಧತಿಯನ್ನು ಅಳವಡಿಸಿಕೊಂಡಿರುತ್ತಾರೆ. ಅದರಲ್ಲೂ ಬಾಲಿವುಡ್‍ನ ನಟಿಯರಂತೂ ಕಟ್ಟುನಿಟ್ಟಿನ ಆಹಾರಕ್ರಮವನ್ನು ಅನುಸರಿಸುತ್ತಾರೆ.
ಬಾಲಿವುಡ್‌ನ ನವವಿವಾಹಿತೆ ಕತ್ರಿನಾ ಕೈಫ್ (Katrina Kaif) ಫಿಟ್ ಆಂಡ್ ಫೈನ್ ದೇಹವನ್ನು ಹೊಂದಿದ್ದಾರೆ. ನಟ ವಿಕ್ಕಿ ಕೌಶಲ್‌ನ್ನು ಮದುವೆಯಾಗಿರುವ ಕತ್ರೀನಾ ಕೈಫ್ ಫಿಟ್ನೆಸ್ (Fitness) ಮತ್ತು ಆಹಾರದ ಬಗ್ಗೆ ತುಂಬಾ ಕಟ್ಟುನಿಟ್ಟಾಗಿದ್ದಾರೆ. ಕತ್ರೀನಾ ಕೈಫ್ ಆಹಾರಪ್ರಿಯೆ ಅನ್ನೋದು ನಿಜವಾಗಿದ್ದರೂ, ಅವರ ಪ್ರತಿ ಆಹಾರವು ಹೆಚ್ಚು ಪೋಷಕಾಂಶಗಳಿಂದ ತುಂಬಿರುವಂತೆ ನೋಡಿಕೊಳ್ಳುತ್ತಾರೆ. ಅದರಲ್ಲೂ ಬೆಳ್ಳುಳ್ಳಿ, ಈರುಳ್ಳಿ, ಸಕ್ಕರೆ ಅಥವಾ ಜೇನುತುಪ್ಪ ಸೇರಿಸಿದ ಆಹಾರವನ್ನು ಕತ್ರೀನಾ ಸೇವಿಸುವುದಿಲ್ಲ.
ಕತ್ರೀನಾ ಕೈಫ್‌ಗೆ ಡಯಟೀಷಿಯನ್ ಆಗಿ ಕೆಲಸ ಮಾಡಿರುವ ದೆಹಲಿಯ ಇಂಪೀರಿಯಲ್‌ನ ಕಾರ್ಯನಿರ್ವಾಹಕ ಬಾಣಸಿಗ ಪ್ರೇಮ್ ಕುಮಾರ್, ‘ಕತ್ರೀನಾ ತಾಜಾ ಹಣ್ಣುಗಳು ಮತ್ತು ತೆಂಗಿನ ಹಾಲನ್ನು ಸೇವಿಸಲು ಇಷ್ಟಪಡುತ್ತಾರೆ. ಊಟದಲ್ಲಿ ಕಡಿಮೆ ಉಪ್ಪು ಇರಬೇಕೆಂದು ಬಯಸುತ್ತಾರೆ’ ಎಂದು ಮಾಹಿತಿ ನೀಡಿದ್ದಾರೆ. ಹಾಗಿದ್ರೆ ಕತ್ರೀನಾ ಕೈಫ್‌ಗೆ ಇಷ್ಟವಾದ ಆಹಾರಗಳು ಯಾವುವು ಎಂಬುದನ್ನು ತಿಳಿಯೋಣ.
Celebrity Food: ಲೇಡಿ ಸೂಪರ್ ಸ್ಟಾರ್ ನಯನತಾರಾ ಫಿಟ್ನೆಸ್ ಸೀಕ್ರೆಟ್ ಏನ್ ಗೊತ್ತಾ ?
ಅವಕಾಡೊ, ಸಿಹಿ ಆಲೂಗೆಡ್ಡೆ ಮತ್ತು ಮಿಶ್ರ ಹಣ್ಣುಗಳು: ಅವಕಾಡೊ ಹಣ್ಣನ್ನು ಎರಡು ಭಾಗವಾಗಿ ಕತ್ತರಿಸಿ, ಸಿಹಿ ಗೆಣಸು, ಮಿಶ್ರ ಹಣ್ಣುಗಳು ಮತ್ತು ಒಂದು ಲೋಟ ತಾಜಾ ತೆಂಗಿನ ಹಾಲಿನೊಂದಿಗೆ ತಿನ್ನುವುದು ಕತ್ರೀನಾ ಕೈಫ್‌ಗೆ ಪ್ರಿಯವಾಗಿದೆ.
ತೆಂಗಿನಕಾಯಿ ಪ್ರಿಯೆ: ಕತ್ರೀನಾ ಕೈಫ್ ತನ್ನ ಎಲ್ಲಾ ಬಗೆಯ ಊಟದಲ್ಲಿ ತೆಂಗಿನಕಾಯಿ ಸೇರಿಸುವುದನ್ನು ಇಷ್ಟಪಡುತ್ತಾರೆ ಎಂದು ಬಾಣಸಿಗ ಪ್ರೇಮ್ ಹೇಳುತ್ತಾರೆ. ಬೆಳಗ್ಗೆ ತೆಂಗಿನ ಹಾಲನ್ನು ಮತ್ತು ಹಗಲಿನಲ್ಲಿ ತೆಂಗಿನಕಾಯಿ ಗಂಜಿಯನ್ನು ಸೇವಿಸುತ್ತಾರೆ ಎಂದು ಪ್ರೇಮ್ ತಿಳಿಸಿದ್ದಾರೆ.
ಸೂಪ್: ಕತ್ರೀನಾ ಕೈಫ್ ಸೂಪ್ ಪ್ರೇಮಿಯೂ ಹೌದು. ಮಸಾಲೆಗಳಿಲ್ಲದ ಮತ್ತು ಕಡಿಮೆ ಉಪ್ಪು ಹೊಂದಿರುವ ನುಗ್ಗೇಕಾಯಿ ಸೂಪ್‌ನ್ನು ನಟಿ ಇಷ್ಟಪಡುತ್ತಾರೆ.
ಹುರಿದ ಕೆಂಪು ಸೇಬು (Apple): ಕತ್ರೀನಾ ಕೈಫ್‌ಗೆ ಹಣ್ಣುಗಳು ಹೆಚ್ಚು ಪ್ರಿಯವಾಗಿದೆ. ಹೀಗಾಗಿಯೇ ಅವರು ಹಣ್ಣುಗಳನ್ನು ವಿಶಿಷ್ಟವಾಗಿ ತಿನ್ನಲು ಇಷ್ಟಪಡುತ್ತಾರೆ. ಅದರಲ್ಲೂ ಹುರಿದ ಕೆಂಪು ಸೇಬನ್ನು ತಿನ್ನಲು ಅವರು ಹೆಚ್ಚು ಇಷ್ಟಪಡುತ್ತಾರೆ. ಪ್ಯಾನ್‌ಗೆ ಕೆಲವು ಹನಿ ತೆಂಗಿನೆಣ್ಣೆ ಸೇರಿಸಿ ಅದಕ್ಕೆ ಕಟ್ ಮಾಡಿದ ಸೇಬುಗಳನ್ನು ಹಾಕಿ ಹುರಿದು ಬಳಿಕ ಸೇವಿಸುತ್ತಾರೆ. ಕೆಲವೊಮ್ಮೆ ಉಪಾಹಾರಕ್ಕಾಗಿ, ಇನ್ನು ಕೆಲವೊಮ್ಮೆ ಊಟದ ನಂತರ ಕತ್ರೀನಾ ಕೈಫ್ ಈ ಹುರಿದ ಕೆಂಪು ಸೇಬನ್ನು ತಿನ್ನಲು ಇಷ್ಟಪಡುತ್ತಾರೆ.
Fitness Secret: ಸಮಂತಾ ಸ್ಲಿಮ್ ಆಗಿರೋ ಸೀಕ್ರೆಟ್ ಗೊತ್ತಾ ?
ಮೀನು ಮತ್ತು ಚಿಕನ್: ಕತ್ರೀನಾ ಅವರ ದೈನಂದಿನ ಆಹಾರದಲ್ಲಿ ಕೋಳಿ (Chicken) ಮತ್ತು ಮೀನಿನ ಖಾದ್ಯ ಎರಡೂ ಸಹ ಒಳಗೊಂಡಿರುತ್ತದೆ. ನಟಿ ಕೆಲವು ತರಕಾರಿಗಳು ಮತ್ತು ಕಡಿಮೆ ಉಪ್ಪಿನೊಂದಿಗೆ ಚಿಕನ್ ಸೇವಿಸಲು ಇಷ್ಟಪಡುತ್ತಾರೆ. ಕಡಿಮೆ ಎಣ್ಣೆಯಲ್ಲಿ ಫ್ರೈ ಮಾಡುವ ಮೀನು (Fish) ಸಹ ಕತ್ರೀನಾ ಕೈಫ್‌ಗೆ ಪ್ರಿಯವಾಗಿದೆ.
ಬೇಯಿಸಿದ ಅನ್ನ ಮತ್ತು ಸೋರೆಕಾಯಿ ಕರಿ: ಸೆಲೆಬ್ರಿಟಿಗಳು ಸಾಮಾನ್ಯವಾಗಿ ಅನ್ನವನ್ನು ತಿನ್ನಲು ಇಷ್ಟಪಡುವುದಿಲ್ಲ. ಆದರೆ ಕತ್ರೀನಾ ಕೈಫ್ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಆಹಾರದಲ್ಲಿ ಆವಿಯಲ್ಲಿ ಬೇಯಿಸಿದ ಅನ್ನ (Rice) ಮತ್ತು ಕಡಿಮೆ ಉಪ್ಪಿನೊಂದಿಗೆ ಬೇಯಿಸಿದ ಬೂದಿ ಸೋರೆಕಾಯಿ ಸಾಂಬಾರು ತಿನ್ನಲು ಬಯಸುತ್ತಾರೆ. ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟವಾಗಿಯೂ ಇದನ್ನು ಇಷ್ಟಪಡುತ್ತಾರೆ.
ಡೆಸರ್ಟ್ ಪ್ರೀತಿ: ಫಿಟ್ನೆಸ್ ಬಗ್ಗೆ ತಲೆಕೆಡಿಸಿಕೊಳ್ಳುವ ಕ್ಯಾಟ್ ಸಹ ಡೆಸರ್ಟ್‌ನ್ನು ಇಷ್ಟಪಟ್ಟು ತಿನ್ನುತ್ತಾರೆ. ದಾಲ್ಚಿನ್ನಿ, ಒಣದ್ರಾಕ್ಷಿ ಮತ್ತು ತೆಂಗಿನ ಹಾಲಿನೊಂದಿಗೆ ಸಕ್ಕರೆ ಅಥವಾ ಜೇನುತುಪ್ಪವನ್ನು ಸೇರಿಸದ ಅಕ್ಕಿ ಗಂಜಿಯನ್ನು ಸೇವಿಸುತ್ತಾರೆ.