Katrina Kaif Bikini Look: ಸಮುದ್ರದ ವೇಸ್ಟ್‌ನಿಂದ ಮಾಡಿದ ಬಿಕಿನಿಯಲ್ಲಿ ಕತ್ರೀನಾ
ಕತ್ರೀನಾ ಕೈಫ್ ಮಾಲ್ಡೀವ್ಸ್‌ನಿಂದ ಚಂದ ಫೋಟೊಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ನಟಿಯ ಫ್ಯಾಷನೆಬಲ್ ಬಿಕಿನಿ ಫೋಟೋಗಳು ವೈರಲ್ ಆಗುತ್ತಿವೆ. ಇದರಲ್ಲೊಂದು ವಿಶೇಷತೆಯೂ ಇದೆ.
ನಟಿ ಕತ್ರಿನಾ ಕೈಫ್ ಬ್ರಾಂಡ್ ಜಾಹೀರಾತಿನ ಚಿತ್ರೀಕರಣಕ್ಕಾಗಿ ಮಾಲ್ಡೀವ್ಸ್‌ಗೆ ತೆರಳಿದ್ದಾರೆ. ಅವರು ತನ್ನ ಗೆಟ್‌ವೇಯಿಂದ ನಿಯಮಿತವಾಗಿ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಬೀಚ್‌ಗಾಗಿ ಡ್ರೆಸ್ಸಿಂಗ್ ಫ್ಯಾಷನ್ ಗೋಲ್ಸ್ ತೋರಿಸುತ್ತಿದ್ದಾರೆ.
ನಟಿಯ ಇತ್ತೀಚಿನ ಫೊಟೋಗಳು ಅವರು ನಿಯಾನ್ ಬಿಕಿನಿ ಸೆಟ್ ಧರಿಸಿರುವುದನ್ನು ತೋರಿಸುತ್ತವೆ. ಇದು ಎಥಿಕಲ್ ಫ್ಯಾಷನ್ ಕಾರಣದಿಂದ ಹೈಲೈಟ್ ಆಗಿದೆ. ಬೀಚ್ ಡೇ ಎಂದು ಶೀರ್ಷಿಕೆ ನೀಡಿದ್ದರು.
ಚಿತ್ರೀಕರಣಕ್ಕಾಗಿ ಬಹುವರ್ಣದ ಬಿಕಿನಿ ಸೆಟ್ ಮತ್ತು ಬಿಳಿ ಬಣ್ಣದ ಶರ್ಟ್ ಧರಿಸಿದ್ದರು ನಟಿ. ಬಿಕಿನಿಯು ರೆಸಾರ್ಟ್ ವೇರ್ ಲೇಬಲ್ ಗ್ವಾಪಾದ ಕಲೆಕ್ಷನ್‌ನದ್ದು.
ಬೀಚ್ ಔಟಿಂಗ್‌ಗಾಗಿ ಕತ್ರಿನಾ ನೀಲಿ ಮತ್ತು ನಿಯಾನ್ ಹಸಿರು ವರ್ಣಗಳಲ್ಲಿ ರಿವರ್ಸಿಬಲ್ ತ್ರಿಕೋನ ಬಿಕಿನಿಯನ್ನು ಆರಿಸಿದ್ದಾರೆ. ಇದು ಕೇವಲ ಹಿಂಭಾಗದಲ್ಲಿ ಕ್ರಿಸ್-ಕ್ರಾಸ್ ಪಟ್ಟಿಗಳನ್ನು ಹೊಂದಿದೆ. ಹ್ಯಾಂಗಿಂಗ್ ನೆಕ್ ಲೈನ್ ಇದೆ.
ಕತ್ರಿನಾ ಅವರ ಬಿಕಿನಿ ಸೆಟ್ ಪರಿಸರ ಸ್ನೇಹಿ ಫ್ಯಾಷನ್ ಅನ್ನು ಉತ್ತೇಜಿಸುತ್ತದೆ. ಈಜುಡುಗೆಯನ್ನು ಸಾಗರ ತ್ಯಾಜ್ಯದಿಂದ ಪಡೆದ ಸುಸ್ಥಿರವಾದ ಇಕಾನಿಲ್ ನೂಲಿನಿಂದ ತಯಾರಿಸಲಾಗುತ್ತದೆ.
ಕತ್ರಿನಾ ಅವರ ಬಿಕಿನಿಯು ಅದರ ಆಹ್ಲಾದಕರ ವರ್ಣಗಳೊಂದಿಗೆ ಬೀಚ್ ದಿನದಂದು ಧರಿಸಲು ಅಗತ್ಯವಾದ ಫ್ಯಾಷನ್ ಆಗಿದೆ. ನಿಮ್ಮ ವಾರ್ಡ್‌ರೋಬ್‌ನಲ್ಲಿ ಈ ಈಜುಡುಗೆಯ ಸೆಟ್ ಅನ್ನು ಸೇರಿಸಲು ನೀವು ಬಯಸಿದರೆ, ಇದು ₹10,900 ಗೆ Guapa ವೆಬ್‌ಸೈಟ್‌ನಲ್ಲಿ ಲಭ್ಯವಿದೆ.