ಮತ್ತೆ ಪ್ರೀತಿಯಲ್ಲಿ ಬಿದ್ದ ಕಾರ್ತಿಕ್ ಆರ್ಯನ್ ಪೋಟೋ ಹಂಚಿಕೊಂಡ ನಟ!
ಬಾಲಿವುಡ್ (Bollywood) ನಟ ಕಾರ್ತಿಕ್ ಆರ್ಯನ್ (Kartik Aaryan) ಪ್ರಸ್ತುತ ಸುದ್ದಿಯಲ್ಲಿದ್ದಾರೆ. ನಾನು ಮತ್ತೆ ಪ್ರೀತಿಯಲ್ಲಿದ್ದೇನೆ ಎಂದು ಸ್ವತಃ ಕಾರ್ತಿಕ್ ಹೇಳಿಕೊಂಡಿದ್ದಾರೆ ಮತ್ತು ಪ್ರಸ್ತುತ ನಟ ಕಟೋರಿ ಆರ್ಯನ್ ಜತೆ ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗೆ ಕಾರ್ತಿಕ್ ತಮ್ಮ ಕುಟುಂಬಕ್ಕೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ಪುಟಾಣಿ ಫರ್ಬಾಲ್, ಕಟೋರಿ ಆರ್ಯನ್ ಅನ್ನು ಕಾರ್ತಿಕ್ ಪರಿಚಯಿಸಿದ್ದಾರೆ. ನಾಯಿ ಮರಿಯ ಫೋಟೋಗೆ 'ಕಟೋರಿ ನಾನು ಮತ್ತೆ ಪ್ರೀತಿಯಲ್ಲಿದ್ದೇನೆ @katoriaaryan' ಎಂದು ಕ್ಯಾಪ್ಷನ್ ನೀಡಿದ್ದಾರೆ.
ಕಾರ್ತಿಕ್ ಮಹಿಳಾ ಅಭಿಮಾನಿಗಳನ್ನು ಹೊಂದಿದ್ದಾರೆ. ಹುಡುಗಿಯರು ಅವರ ಲುಕ್ ಮತ್ತು ನಟನೆಯನ್ನು ಸಖತ್ ಇಷ್ಟಪಡುತ್ತಾರೆ. ಕಾರ್ತಿಕ್ ಬಾಲಿವುಡ್‌ನಲ್ಲಿ ಅಲ್ಪಾವಧಿಯಲ್ಲಿಯೇ ಹೆಸರು ಮಾಡಿದ ನಾಯಕರಲ್ಲಿ ಒಬ್ಬರು. ತಮ್ಮ ಪ್ರೇಮ ಜೀವನಕ್ಕಾಗಿ ಆಗಾಗ ಸುದ್ದಿಯಲ್ಲಿರುವ ಕಾರ್ತಿಕ್ ಇದೀಗ ಈ ಪುಟ್ಟ ನಾಯಿಮರಿಯಿಂದಾಗಿ ಸುದ್ದಿಯಲ್ಲಿದ್ದಾರೆ.
ಅವರು ಹಂಚಿಕೊಂಡ ಫೋಟೋದಲ್ಲಿ ಕಾರ್ತಿಕ್ ಪೀಚ್ ಹೂಡಿಯನ್ನು ಧರಿಸುತ್ತಾರೆ. ನಾಯಿಮರಿಯೊಂದಿಗೆ ಮುದ್ದಾಗಿರುವ ಫೋಟೋ Instagram ನಲ್ಲಿ 1.5 ದಶಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಕಟೋರಿ ಆರ್ಯನ್ ಅವರನ್ನು ನಟನ ಫ್ಯಾನ್ಸ್ ಮತ್ತು ಕೋಸ್ಟಾರ್ಸ್ ಪ್ರೀತಿಯಿಂದ ಸ್ವಾಗತಿಸಿದರು.
ಕಟೋರಿ ಆರ್ಯನ್ ತನ್ನದೇ ಆದ Instagram ಪುಟವನ್ನು ಹೊಂದಿದ್ದು, 8.4k ಫಾಲೋವರ್ಸ್ ಇದ್ದಾರೆ. ಈ ಪೇಜ್ ಎರಡು ಪೋಸ್ಟ್‌ಗಳನ್ನು ಹೊಂದಿದೆ. ಫ್ರೆಡ್ಡಿ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ಜೊತೆ ಕಾಣಿಸಿಕೊಳ್ಳಲಿರುವ ಅಲಯಾ ಎಫ್, 'ಈ ಚಿಕ್ಕ ಮುದ್ದಾದ ಮಗು ಯಾರು' ಎಂದು ಕೇಳಿದರು.ಕೃತಿ ಸನೋನ್ ಕೂಡ ಕಾಮೆಂಟ್ ಮಾಡಿದ್ದಾರೆ. 'ಕಟೋರಿ ಆರ್ಯನ್' ಎಂದು ಕಾರ್ತಿಕ್ ಉತ್ತರಿಸಿದ್ದಾರೆ.
ಕಳೆದ ವರ್ಷ, ಕರಣ್ ಜೋಹರ್ ಅವರ ದೋಸ್ತಾನಾ 2 ನಿಂದ ಹೊರಹಾಕಲ್ಪಟ್ಟ ನಂತರ ಕಾರ್ತಿಕ್ ಸುದ್ದಿಯಲ್ಲಿದ್ದರು. ಕರಣ್ ಜೋಹರ್ ಅವರೊಂದಿಗೆ ಕೆಲವು ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರಿಂದ ಮತ್ತು ಧರ್ಮ ಪ್ರೊಡಕ್ಷನ್ಸ್‌ನಿಂದ ಹೊರಬಂದರು ಎಂದು ಅನೇಕ ವರದಿಗಳು ಹೇಳಿದ್ದವು.
ಕಾರ್ತಿಕ್ ಸದ್ಯಕ್ಕೆ ಸಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರು ಭೂಲ್ ಭುಲೈಯಾ 2, ಶೆಜಾದಾ, ಕ್ಯಾಪ್ಟನ್ ಇಂಡಿಯಾ, ಫ್ರೆಡ್ಡಿ ಮತ್ತು ಸಾಜಿದ್ ನಾಡಿಯಾಡ್ವಾಲಾ ಅವರ ಇನ್ನೂ ಹೆಸರಿಡದ ಮುಂದಿನ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಾರ್ತಿಕ್ ಆರ್ಯನ್ ಕೊನೆಯದಾಗಿ ಧಮಾಕಾ ಎಂಬ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು.