Asianet Suvarna News Asianet Suvarna News

Kartik Aryan Fan Moment: ನಟನ ಮನೆಮುಂದೆ ಕಿರುಚಾಡಿದ ಹೆಣ್ಮಕ್ಕಳು, ಏನಾಯ್ತ ?

  • Kartik Aryan: ಬಾಲಿವುಡ್ ನಟನ ಮನೆಮುಂದೆ ಕಿರುಚಾಡಿದ ಫ್ಯಾನ್ಸ್
  • ದಿಢೀರ್ ಏನಾಯ್ತು ? ಕಾರ್ತಿಕ್ ಆರ್ಯನ್ ಮನೆಮುಂದೆ ಏನು ರಂಪಾಟ ?
Kartik Aaryan Reacts As Fans Scream His Name Under His Building dpl
Author
Bangalore, First Published Jan 5, 2022, 7:26 PM IST | Last Updated Jan 5, 2022, 7:26 PM IST

ಕಾರ್ತಿಕ ಆರ್ಯನ್ ಬಾಲಿವುಡ್‌ನ ಯಂಗ್ ನಟ. ಚಾಕಲೇಟ್ ಹೀರೋ ಪಾತ್ರಗಳನ್ನೇ ಮಾಡಿರೋ ನಟ ಹೆಣ್ಮಕ್ಕಳ ಹಾಟ್ ಫೇವರೇಟ್. ಕರಣ್ ಜೋಹರ್ ಜೊತೆ ಸಿನಿಮಾ ವಿಚಾರ ತಕರಾರು ನಡೆದ ನಂತರ ಆರ್ಯನ್ ಬೇರೆ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದಷ್ಟು ಸಿನಿಮಾಗಳನ್ನು ಮಾಡಿದ ನಂತರ ಸ್ವಲ್ಪ ಮಟ್ಟಿಗೆ ಫೇಮ್ ಪಡೆದ ನಟನಿಗೆ ಖ್ಯಾತಿಗೇನೂ ಕಮ್ಮಿ ಇಲ್ಲ. ಬಾಲಿವುಡ್ ಹಾರ್ಟ್‌ಥ್ರೋಬ್ ಕಾರ್ತಿಕ್ ಆರ್ಯನ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಬಿ ಟೌನ್‌ನ ಅತ್ಯಂತ ಅರ್ಹ ಬ್ಯಾಚುಲರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಕಾರ್ತಿಕ್ ಆರ್ಯನ್ ಅವರ ಮಹಿಳಾ ಅಭಿಮಾನಿಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಕೆಲವು ಅಭಿಮಾನಿಗಳು 'ಶೆಹಜಾದಾ' ನಟನ ಹೆಸರನ್ನು ತಮ್ಮ ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡರೆ, ಕೆಲವು ಅಭಿಮಾನಿಗಳು ಕಾರ್ತಿಕ್ ಆರ್ಯನ್ ಅವರನ್ನು ನೋಡಲು ಅಡೆತಡೆಗಳನ್ನು ದಾಟಿ ಹಾತೊರೆಯುತ್ತಾರೆ.

ಮುಂಬೈನಲ್ಲಿರುವ ಕಾರ್ತಿಕ್ ಆರ್ಯನ್ ಅವರ ನಿವಾಸದ ಮುಂದೆ ಅಂತಹ ಒಂದು ಘಟನೆ ನಡೆದಿದೆ. ಇಬ್ಬರು ಮಹಿಳಾ ಅಭಿಮಾನಿಗಳು ಅವರ ನಿವಾಸದ ಹೊರಗೆ ಕಾಣಿಸಿಕೊಂಡರು. ಅಲ್ಲಿ ಅವರು 'ಫ್ರೆಡ್ಡಿ' ನಟನನ್ನು ಒಮ್ಮೆ ನೋಡಲು ನಿರಂತರವಾಗಿ ಅವರ ಹೆಸರನ್ನು ಕಿರುಚುವುದು ಕಂಡುಬಂದಿದೆ. ಕಾರ್ತಿಕ್ ಆರ್ಯನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಪ್ರೀತಿಗಾಗಿ ನಾನು ಬದುಕುತ್ತೇನೆ. ಇದು ನನ್ನ ಡ್ರೈವ್. ಇದೇ ಸರ್ವಸ್ವ. ನನ್ನ ಎಲ್ಲಾ ಅಭಿಮಾನಿಗಳಿಗೆ, ಅತ್ಯಂತ ಪ್ರಾಮಾಣಿಕವಾಗಿ, ನಿಮ್ಮೆಲ್ಲರನ್ನು ಹೊಂದಲು ನಾನು ನಿಜಕ್ಕೂ ಆಶಿರ್ವದಿಸಲ್ಪಟ್ಟಿದ್ದೇನೆ. ನಿಮಗೆ ಎಂದಿಗೂ ಧನ್ಯವಾದ ಹೇಳಲು ಸಾಧ್ಯವಿಲ್ಲ ಆದರೆ ಪ್ರಯತ್ನಿಸುತ್ತಲೇ ಇರುತ್ತೇನೆ ಎಂದಿದ್ದಾರೆ.

 

ಕಾರ್ತಿಕ್ ಆರ್ಯನ್ ಅವರು ನೆಟ್‌ಫ್ಲಿಕ್ಸ್ ಸಿನಿಮಾ 'ಧಮಾಕಾ'ದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಅಲ್ಲಿ ಅವರು ಸುದ್ದಿ ನಿರೂಪಕನ ಪಾತ್ರವನ್ನು ಚಿತ್ರಿಸಿದ್ದಾರೆ. 'ಮೈ ಹೂನ್ ಅರ್ಜುನ್ ಪಾಠಕ್ ಔರ್ ಆಪ್ ದೇಖ್ ರಹೇ ಹೈ ಭರೋಸಾ 24x7 ಚಿತ್ರದ ಅವರ ಸಾಲು. ಜೋ ಭೀ ಕಹುಂಗಾ ಸಚ್ ಕಹುಂಗಾ' ಎಷ್ಟು ಜನಪ್ರಿಯವಾಯಿತು ಎಂದರೆ ಜನರು ಅದರಲ್ಲಿ Instagram ರೀಲ್‌ಗಳನ್ನು ಮಾಡಲು ಪ್ರಾರಂಭಿಸಿದರು. 'ಸೋನು ಕೆ ಟಿಟು ಕಿ ಸ್ವೀಟಿ' ನಟ ಅವರು ತಮ್ಮ ಈ ಸಂಭಾಷಣೆಯ ಮುದ್ದಾದ ಪುಟ್ಟ ಅಭಿಮಾನಿಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕಾರ್ತಿಕ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳುವಾಗ, ಯುರೋಪ್‌ನಿಂದ # ಅರ್ಜುನ್‌ಪಥಕ್‌ನ ಮೋಹಕವಾದ ಆವೃತ್ತಿ, ವಿಶ್ವಾದ್ಯಂತ ಪ್ರೀತಿಗೆ ಧನ್ಯವಾದಗಳು ಎಂದು ಬರೆದಿದ್ದರು.

ಅವರ ಮುಂಬರುವ ಸಿನಿಮಾಗಳ ಬಗ್ಗೆ ಹೇಳುವುದಾದರೆ ಕಾರ್ತಿಕ್ ಮುಂದಿನ ದಿನಗಳಲ್ಲಿ 'ಭೂಲ್ ಭುಲೈಯಾ 2', 'ಫ್ರೆಡ್ಡಿ', 'ಶೆಹಜಾದಾ', 'ಕ್ಯಾಪ್ಟನ್ ಇಂಡಿಯಾ', ಸಮೀರ್ ವಿಧ್ವಾನ್ಸ್' ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ದೋಸ್ತಾನ 2ನಿಂದ ಹರಬಿದ್ದ ನಟ

ಪ್ರೊಫೆಷನ್ ನಡತೆ ಸರಿ ಇಲ್ಲ ಎಂದು ಬಾಲಿವುಡ್‌ನ ಯುವ ನಟ ಕಾರ್ತಿಕ್ ಆರ್ಯನ್ ಅವರನ್ನು ದೋಸ್ತಾನ 2 ಸಿನಿಮಾದಿಂದ ಕಿಕ್ಔಟ್ ಮಾಡಿದ್ದಾರೆ ಟಾಪ್ ನಿರ್ಮಾಪಕ ಕರಣ್ ಜೋಹರ್. ಕಾರ್ತಿಕ್ ಅವರು ಸ್ಕ್ರಿಪ್ಟ್ ಮಧ್ಯೆ ಮೂಗು ತೂರಿಸುವುದು ಮತ್ತು ಔದ್ಯೋಕಿವಲ್ಲದ ವರ್ತನೆ ತೋರಿಸುವುದು ಅವರು ತಂಡದಿಂದ ಹೊರಬೀಳೋಖೆ ಕಾರಣ ಎನ್ನಲಾಗುತ್ತಿದೆ. ಏನೇ ಇದ್ದರು ಧರ್ಮ ಪ್ರೊಡಕ್ಷನ್ ಮತ್ತು ಕರಣ್‌ ಜೋಹರ್‌ಗೆ ಕೋಟಿಗಳಲ್ಲಿ ನಷ್ಟವಾಗಿರುವುದು ಹೌದು.

ಕಾರ್ತಿಕ್ ಸಿನಿಮಾದಿಂದ ಹೊರಗೆ ಹೋಗಿ ಬರೋಬ್ಬರಿ 20 ಕೋಟಿ ರೂ. ನರ್ಷವಾಗಿದೆ. ಜೋಹರ್ ಅವರ ಸಿನಿಮಾಗಳ ಬೃಹತ್ ಪ್ರಮಾಣದ ಬಜೆಟ್ ಗಮನಿಸಿದರೆ 20 ಕೋಟಿ ಅಷ್ಟು ದೊಡ್ಡ ಮೊತ್ತವೇನಲ್ಲ. ಆದರೂ ಕಾರ್ತಿಕ್ ನಿರ್ಗಮನದಿಂದ ಉಂಟಾದ ನಷ್ಟವು ‘ದೋಸ್ತಾನಾ 2’ ಸಿನಿಮಾ ಬಜೆಟ್ ಮೇಲೆ ಪರಿಣಾಮ ಬೀರಲಿದೆ.

Latest Videos
Follow Us:
Download App:
  • android
  • ios