- Home
- Entertainment
- Cine World
- ಕಾರ್ತಿಕ್ ಆರ್ಯನ್ ಲವ್‌ಲೈಫ್ ಮತ್ತೆ ಸುದ್ದಿಯಲ್ಲಿ; ಹೊಸ ಗರ್ಲ್‌ಫ್ರೆಂಡ್ ಯಾರು ಗೊತ್ತಾ?
ಕಾರ್ತಿಕ್ ಆರ್ಯನ್ ಲವ್‌ಲೈಫ್ ಮತ್ತೆ ಸುದ್ದಿಯಲ್ಲಿ; ಹೊಸ ಗರ್ಲ್‌ಫ್ರೆಂಡ್ ಯಾರು ಗೊತ್ತಾ?
ಕಾರ್ತಿಕ್ ಆರ್ಯನ್ (Kartik Aryan) ಲವ್‌ಲೈಫ್ ತಮ್ಮ ಪ್ರೇಮ ಜೀವನದ ಬಗ್ಗೆ ಚರ್ಚೆಯಲ್ಲಿದ್ದಾರೆ. ವರದಿಗಳ ಪ್ರಕಾರ, ಈ ಬಾರಿ ಅವರ ಹೃದಯವು ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ಕುಟುಂಬಗಳಲ್ಲಿ ಒಂದಾದ ರೋಷನ್ ಕುಟುಂಬದ ಹುಡುಗಿಗೆ ಸೋತಿದೆ. ಕಾರ್ತಿಕ್ ಹೃತಿಕ್ ರೋಷನ್ (Hritik Roshan) ಅವರ ಕಸಿನ್ ಪಶ್ಮಿನಾ ರೋಷನ್ (Pashmina Roshan) ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಅಧಿಕೃತವಾಗಿ ದೃಢಪಟ್ಟಿಲ್ಲವಾದರೂ ಮಾಧ್ಯಮಗಳಲ್ಲಿ ಜೋರಾಗಿ ಚರ್ಚೆಯಾಗುತ್ತಿದೆ.

ಮನರಂಜನಾ ಸುದ್ದಿ ವೆಬ್‌ಸೈಟ್‌ನ ಸುದ್ದಿ ಪ್ರಕಾರ, ಕಾರ್ತಿಕ್ ಆರ್ಯನ್ ಇತ್ತೀಚಿನ ದಿನಗಳಲ್ಲಿ ಶೂಟಿಂಗ್‌ನಿಂದ ಫ್ರೀ ಆದಾಗಲೆಲ್ಲಾ ಅವರು ಪಶ್ಮಿನಾ ರೋಷನ್ ಜೊತೆ ಹೆಚ್ಚು ಹೆಚ್ಚು ಸಮಯ ಕಳೆಯುತ್ತಾರೆ.
ಎಲ್ಲಕ್ಕಿಂತ ಹೆಚ್ಚಾಗಿ ಒಬ್ಬರಿಗೊಬ್ಬರು ಗುಣಮಟ್ಟದ ಸಮಯ ಕಳೆಯಲು ಮತ್ತು ಪರಸ್ಪರರ ಮನೆಗೆ ಭೇಟಿ ನೀಡಲು ಆದ್ಯತೆ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ, ಈ ಸಮಯದಲ್ಲಿ ಮಾಧ್ಯಮಗಳು ಕಣ್ಣಿಗೆ ಬೀಳದಂತೆ ಸಂಪೂರ್ಣ ಕಾಳಜಿ ವಹಿಸುತ್ತಿದ್ದಾರೆ. ದೀಪಾವಳಿಯ ದಿನದಂದು ಕಾರ್ತಿಕ್ ಆರ್ಯನ್ ಪಶ್ಮಿನಾರನ್ನು ಜುಹುವಿನ ನ್ಯೂ ಮೆಕ್ಲಾರೆನ್‌ಗೆ ಕರೆದೊಯ್ದರು ಎಂದು ಆಪ್ತ ಮೂಲಗಳನ್ನು ಉಲ್ಲೇಖಿಸಿ ವರದಿ ಹೇಳಿದೆ. ಜಿಯೋ ವರ್ಲ್ಡ್ ಡ್ರೈವ್ ಅವರ ನೆಚ್ಚಿನ ತಡರಾತ್ರಿಯ ತಾಣವಾಗಿದೆ ಎಂದು ವರದಿಯಾಗಿದೆ. ಆದರೆ, ಇದುವರೆಗೂ ಕಾರ್ತಿಕ್ ಅಥವಾ ಪಶ್ಮಿನಾ ಈ ಪ್ರಕರಣವನ್ನು ಒಪ್ಪಿಕೊಂಡಿಲ್ಲ.
ಪಶ್ಮಿನಾ ರೋಷನ್ ಹೃತಿಕ್ ರೋಷನ್ ಅವರ ಚಿಕ್ಕಪ್ಪ ಮತ್ತು ಬಾಲಿವುಡ್‌ನ ಪ್ರಸಿದ್ಧ ಸಂಗೀತಗಾರ ರಾಜೇಶ್ ರೋಷನ್ ಅವರ ಮಗಳು. ಅವರು ರಂಗಭೂಮಿ ಕಲಾವಿದೆ.
ಹಿರಿಯ ನೃತ್ಯ ನಿರ್ದೇಶಕಿ ಸರೋಜ್ ಖಾನ್ ಅವರಿಂದ ನೃತ್ಯ ಕಲಿತಿರುವ ಪಶ್ಮಿನಾ ಅವರು ಯಾವಾಗಲೂ ನಟಿಯಾಗಬೇಕೆಂದು ಬಯಸಿದ್ದರು. ಈ ಮಾಹಿತಿಯನ್ನು ಅವರ ತಂದೆ ರಾಜೇಶ್ ರೋಷನ್ ಸಂವಾದದಲ್ಲಿ ತಿಳಿಸಿದ್ದಾರೆ.
ಶಾಹಿದ್ ಕಪೂರ್ ಅಭಿನಯದ 'ಇಷ್ಕ್ ವಿಷ್ಕ್' ಚಿತ್ರದ ಮುಂದುವರಿದ ಭಾಗವಾದ 'ಇಷ್ಕ್ ವಿಷ್ಕ್ ರಿಬೌಂಡ್' ಮೂಲಕ ಮುಂದಿನ ವರ್ಷ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ರೋಹಿತ್ ಸರಾಫ್, ಜಿಬ್ರಾನ್ ಖಾನ್ ಮತ್ತು ನೈಲಾ ಗ್ರೆವಾಲ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರೆ.
'ಇದು ಅವಳು 9 ನೇ ತರಗತಿ ವಿದ್ಯಾರ್ಥಿಯಾಗಿದ್ದಾಗ ಪ್ರಾರಂಭವಾಯಿತು, ಅವಳು ಶಾಲೆಯಲ್ಲಿ ನಾಟಕ ಮಾಡುತ್ತಿದ್ದಳು. ನಾನು ಕಲಾತ್ಮಕವಾಗಿ ಮತ್ತು
ಭಾವನಾತ್ಮಕವಾಗಿ ಪ್ರಭಾವಿತನಾಗಿದ್ದೆ. ಅವಳು ನಟಿಯಾಗುವ ಸಾಮರ್ಥ್ಯವನ್ನು ಹೊಂದಿದ್ದಾಳೆ ಎಂದು ನಾವು ಭಾವಿಸಿದ್ದೇವೆ' ಎಂದು ಪಶ್ಮಿನಾ ಅವರ ತಂದೆ ರಾಜೇಶ್ ರೋಷನ್ ಮಗಳ ನಟನಾ ಕೌಶಲ್ಯದ ಬಗ್ಗೆ ಹೇಳಿದರು.
ಕಾರ್ತಿಕ್ ಆರ್ಯನ್ ಅವರು ಈ ಹಿಂದೆ ನಟಿ ಸಾರಾ ಅಲಿ ಖಾನ್ ಅವರೊಂದಿಗೆ ಸಂಬಂಧ ಹೊಂದಿದ್ದರು ‘ಲವ್ ಆಜ್ ಕಲ್’ ಚಿತ್ರೀಕರಣದ ವೇಳೆ ಅವರಿಬ್ಬರ ಆತ್ಮೀಯತೆ ಬೆಳೆದು ಈ ಚಿತ್ರ ಬಿಡುಗಡೆಯಾದ ಬಳಿಕ ಬೇರ್ಪಟ್ಟಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.