ಹೊಚ್ಚ ಹೊಸ ಲಾವಾ ಬ್ಲೇಜ್ ಪ್ರೋ ಬಿಡುಗಡೆ, ಕಾರ್ತಿಕ್ ಆರ್ಯನ್ ಪ್ರಚಾರ ರಾಯಭಾರಿಯಾಗಿ ನೇಮಕ!
ಭಾರತದ ಮೊಬೈಲ್ ಉತ್ಪಾದನಾ ಕಂಪನಿ ಲಾವಾ ಇದೀಗ ಹೊಚ್ಚ ಹೊಸ ಲಾವಾ ಬ್ಲೇಜ್ ಪ್ರೋ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಇದೇ ವೇಳೆ ಬಾಲಿವುಡ್ ಸ್ಟಾರ್ ಕಾರ್ತಿಕ್ ಆರ್ಯನ್ ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಲಾಗಿದೆ.
ಮುಂಬೈ(ಸೆ.20): ದೇಶಿ ಮಾರುಕಟ್ಟೆಗೆ ಸ್ಮಾರ್ಟ್‌ಫೋನ್ ಲಾವಾ ಬ್ಲೇಜ್ ಪ್ರೊ (Lava Blaze Pro) ಲಾಂಚ್ ಮಾಡಿದೆ. ಇದೇ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್‌ಗಳ ಪ್ರಚಾರಕ್ಕೆ ಯುವ ಸೂಪರ್‌ಸ್ಟಾರ್ ಕಾರ್ತಿಕ್ ಆರ್ಯನ್ ಅವರನ್ನು ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಂಡಿದೆ. ಲಕ್ಷಾಂತರ ಜನರಿಗೆ ಸ್ಫೂರ್ತಿಯ ಸೆಲೆಯಾಗಿರುವ ಕಾರ್ತಿಕ್ ಆರ್ಯನ್, ಸ್ವಂತ ಬಲದ ಮೇಲೆ ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವ ರೂಪಿಸಿಕೊಂಡ ಬಾಲಿವುಡ್‌ನ ಜನಪ್ರಿಯ ನಟ. ಶಕ್ತಿ, ಚೈತನ್ಯ ಮತ್ತು ಬಹುಮುಖ ಪ್ರತಿಭೆಯುಳ್ಳವರು. ಪ್ರಗತಿಶೀಲ ಕಾರ್ಯಯೋಜನೆಗಳ ಜೊತೆಗೆ ಕಾರ್ತಿಕ್ ಆರ್ಯನ್ ಅವರ ಹೊಸತನದ ಹಾಗೂ ಚೈತನ್ಯಶೀಲ ವ್ಯಕ್ತಿತ್ವವು ಲಾವಾದ ಧ್ಯೇಯಗಳನ್ನು ಸೂಕ್ತವಾಗಿ ಅನುರಣಿಸುತ್ತದೆ. ಕಾರ್ತಿಕ್ ಆರ್ಯನ್ ಮತ್ತು ತನ್ನ ಸ್ಮಾರ್ಟ್‌ಫೋನ್‌ಗಳ ಶ್ರೇಣಿಯನ್ನು ಒಳಗೊಂಡ ಪೂರ್ಣ ಪ್ರಮಾಣದ ಪ್ರಚಾರ ಅಭಿಯಾನವನ್ನು ಲಾವಾ ಶೀಘ್ರದಲ್ಲಿಯೇ ಆರಂಭಿಸಲಿದೆ. ನೂತನ ಲಾವಾ ಬ್ಲೇಜ್ ಫೋನ್ ಬೆಲೆ ರೂ 10,499. ಬ್ಲೇಜ್ ಪ್ರೊ ನಾಲ್ಕು ವಿಭಿನ್ನ ಬಗೆಯ ಬಣ್ಣಗಳಲ್ಲಿ – ಗ್ಲಾಸ್ ಗ್ರೀನ್, ಗ್ಲಾಸ್ ಆರೆಂಜ್, ಗ್ಲಾಸ್ ಬ್ಲೂ, ಗ್ಲಾಸ್ ಗೋಲ್ಡ್ – ದೊರೆಯಲಿದೆ. ಫ್ಲಿಪ್‌ಕಾರ್ಟ್, ಲಾವಾ ಇ-ಸ್ಟೋರ್ ಮತ್ತು ರಿಟೇಲ್ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಿದೆ.
ಸ್ಮಾರ್ಟ್‌ಫೋನ್(Smartphone) ತಯಾರಿಕೆಯ ಆರಂಭದಿಂದ ಅಂತಿಮ ಹಂತದವರೆಗಿನ ಪ್ರಕ್ರಿಯೆಗಳನ್ನು ಸಂಪೂರ್ಣ ದೇಶೀಯವಾಗಿ ಪೂರ್ಣಗೊಳಿಸುವ ಸ್ಥಳೀಯ ಕಂಪನಿಯಾಗಿ ಬೆಳೆದಿರುವ ಸ್ವದೇಶಿ ಬ್ರ್ಯಾಂಡ್ ಲಾವಾದ(Lava) ಜೊತೆ ಕೆಲಸ ಮಾಡಲು ನನಗೆ ಅಪಾರ ಸಂತೋಷವಾಗುತ್ತಿದೆ. ದೇಶದ ಯುವ ಜನರನ್ನು ಆಕರ್ಷಿಸಿ ಅವರ ಮೆಚ್ಚುಗೆಗೆ ಪಾತ್ರವಾಗುವ ತಂತ್ರಜ್ಞಾನಗಳನ್ನು ಲಾವಾ ಯಾವ ಬಗೆಯಲ್ಲಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ ಎಂಬುದನ್ನು ನಾನು ಉತ್ಸಾಹದಿಂದ ಎದುರು ನೋಡುತ್ತಿರುವೆ. ಲಾವಾ ಬ್ರ್ಯಾಂಡ್ ಜೊತೆಗಿನ ನನ್ನ ಸಹಯೋಗವು #ಹೆಮ್ಮೆಯ ಭಾರತೀಯ ಎಂಬ ಧೋರಣೆ ಪಾಲಿಸುವುದನ್ನು ಆಧರಿಸಿದೆ ಮತ್ತು ಇದು ವಿಶಿಷ್ಟ ಬಗೆಯ ಪ್ರತಿಪಾದನೆಯೊಂದಿಗೆ ಪ್ರತ್ಯೇಕವಾಗಿಯೂ ಇರಲಿದೆ ಎಂದು ಕಾರ್ತಿಕ್ ಆರ್ಯನ್ ಹೇಳಿದ್ದಾರೆ.
ಲಾವಾ ಟ್ರಿಪಲ್ ಕ್ಯಾಮೆರಾದೊಂದಿಗೆ ಬ್ಲೇಜ್ ಸ್ಮಾರ್ಟ್‌ಫೋನ್ ಲಾಂಚ್, ಬೆಲೆ ಅಗ್ಗ
‘ಪ್ರಚಾರ ರಾಯಭಾರಿ ಪ್ರಸ್ತಾವಕ್ಕೆ ಕಾರ್ತಿಕ್ ಆರ್ಯನ್(Kartik Aaryan) ಅವರು ಒಪ್ಪಿಕೊಂಡಿರುವುದು ಲಾವಾಗೆ ಪರಿಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಉಭಯತರು ತಾವು ಪ್ರತಿನಿಧಿಸುವ ಉದ್ದಿಮೆಗಳ ಮಾನದಂಡಗಳಿಗೆ ಸವಾಲು ಒಡ್ಡುತ್ತಿರುವುದರ ಜೊತೆಗೆ ಹೊಸ ನಿರೀಕ್ಷೆಗಳನ್ನೂ ಸೃಷ್ಟಿಸುತ್ತಿದ್ದಾರೆ. ಕಾರ್ತಿಕ್ ಅವರ ಶ್ರೇಷ್ಠ ಬಗೆಯ ನಟನೆಯು ಅವರಿಗೆ ಅವರದ್ದೇ ಆದ ಅಭಿಮಾನಿ ಹಿಂಬಾಲಕರ ದೊಡ್ಡ ಬಳಗವನ್ನೇ ಸೃಷ್ಟಿಸಿದೆ. ಲಾವಾದ ಅತ್ಯಾಕರ್ಷಕ ಹೊಸ ಮೊಬೈಲ್‌ಗಳೂ(Mobile) ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಹೊಸ ಮಾನದಂಡಗಳನ್ನು ಸೃಷ್ಟಿಸುತ್ತಿವೆ. ಸ್ಮಾರ್ಟ್‌ಫೋನ್ ಗ್ರಾಹಕರಿಗೆ ಅತ್ಯುತ್ತಮವಾದ ಭಾರತೀಯ ಪರ್ಯಾಯ ಒದಗಿಸುವ ಉದ್ದೇಶವನ್ನು ನಾವು ಹೊಂದಿದ್ದೇವೆ. ನಮ್ಮೊಂದಿಗೆ ಇರುವ ಕಾರ್ತಿಕ್ ಅವರ ತಾರಾಪಟ್ಟ ಮತ್ತು ಜನಾಕರ್ಷಕ ವ್ಯಕ್ತಿತ್ವದ ನೆರವಿನಿಂದ ನಾವು ನಮ್ಮ ಉದ್ದೇಶವನ್ನು ತ್ವರಿತ ಗತಿಯಲ್ಲಿ ಸಾಧಿಸಲಿದ್ದೇವೆ ಎಂಬ ದೃಢ ವಿಶ್ವಾಸ ನಮಗೆ ಇದೆ’ ಎಂದು ಲಾವಾದ ಮಾರುಕಟ್ಟೆ, ಮಾರಾಟ ಮತ್ತು ವಿತರಣಾ ಕಾರ್ಯತಂತ್ರದ ಮುಖ್ಯಸ್ಥ ಮುಗ್ಧ್ ರಜಿತ್ ಹೇಳಿದ್ದಾರೆ.
ಗುಣಮಟ್ಟ ಮತ್ತು ಹೊಸ ಆವಿಷ್ಕಾರಗಳ ಮೇಲೆ ಹೆಚ್ಚು ಗಮನಹರಿಸುವುದರೊಂದಿಗೆ, ಲಾವಾದ ಸ್ಮಾರ್ಟ್‌ಫೋನ್‌ಗಳನ್ನು ಸರಣಿಯೋಪಾದಿ ದೃಢ ಸ್ವರೂಪದ ಸಂಶೋಧನೆಯ ನಂತರ ಅಭಿವೃದ್ಧಿಪಡಿಸಲಾಗಿದೆ. ಗ್ರಾಹಕರ ಅನುಭವವನ್ನು ಗಮನಾರ್ಹವಾಗಿ ಹೆಚ್ಚಿಸಲು ಅವರ ಸ್ಮಾರ್ಟ್‌ಫೋನ್‌ಗಳಲ್ಲಿ ಅತ್ಯಾಧುನಿಕ ವೈಶಿಷ್ಟ್ಯಗಳು ಇರುವ ಮಾರ್ಗೋಪಾಯಗಳನ್ನು ಲಾವಾ ನಿರಂತರವಾಗಿ ಶೋಧಿಸುತ್ತಿದೆ. ಕಾರ್ತಿಕ್ ಆರ್ಯನ್ ಅವರನ್ನು ಲಾವಾದ ಪ್ರಚಾರ ರಾಯಭಾರಿಯನ್ನಾಗಿ ನೇಮಕ ಮಾಡಿಕೊಳ್ಳುವ ಮೂಲಕ ತನ್ನ ಗ್ರಾಹಕರ ಸಂಖ್ಯೆಯನ್ನು ಗಮನಾರ್ಹವಾಗಿ ಹೆಚ್ಚಿಸುವ ಗುರಿಯನ್ನು ಲಾವಾ ಹಾಕಿಕೊಂಡಿದೆ. ಅದರಲ್ಲೂ ವಿಶೇಷವಾಗಿ ಹೊಸ ತಲೆಮಾರಿನ ಯುವ ಜನರನ್ನು ತನ್ನ ಸ್ಮಾರ್ಟ್‌ಫೋನ್‌ಗಳತ್ತ ಸೆಳೆಯಲು ಲಾವಾ ಉದ್ದೇಶಿಸಿದೆ.
Lava Z3: 5000mAh ಬ್ಯಾಟರಿಯೊಂದಿಗೆ ಅತೀ ಅಗ್ಗದ ಸ್ಮಾರ್ಟ್‌ಫೋನ್ ಲಾಂಚ್: ಏನೆಲ್ಲಾ ವಿಶೇಷತೆಗಳಿವೆ?
ಲಾವಾ ಬ್ಲೇಜ್ ಪ್ರೊ ಬಗ್ಗೆ:
ಮಾರುಕಟ್ಟೆಗೆ ಹೊಸದಾಗಿ ಬಿಡುಗಡೆಯಾಗುತ್ತಿರುವ ಸ್ಮಾರ್ಟ್‌ಫೋನ್ ಬ್ಲೇಜ್ ಪ್ರೊ (Lava Blaze Pro)ದ ಹಿಂಭಾಗವನ್ನು ಫ್ರಾಸ್ಟೆಡ್ ಗ್ಲಾಸ್‌ನೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದು ಉನ್ನತ ಕ್ಯಾಮೆರಾ ಗುಣಮಟ್ಟದೊಂದಿಗೆ ಬರುತ್ತದೆ. ನಿರ್ದಿಷ್ಟವಾಗಿ ಗ್ರಾಹಕರ ಅನುಭವವನ್ನು ಉನ್ನತೀಕರಿಸಲು ಇದನ್ನು ವಿಶೇಷ ಬಗೆಯಲ್ಲಿ ವಿನ್ಯಾಸಗೊಳಿಸಲಾಗಿದೆ. ಶ್ರೇಷ್ಠಬಗೆಯ ಛಾಯಾಗ್ರಹಣದ ಅನುಭವಕ್ಕಾಗಿ ಬ್ಲೇಜ್ ಪ್ರೊ, 6X ಜೂಮ್ ಮತ್ತು 50ಎಂಪಿ ಟ್ರಿಪಲ್ ಹಿಂಬದಿಯ ಕ್ಯಾಮೆರಾದೊಂದಿಗೆ ಬರುತ್ತದೆ. ಛಾಯಾಚಿತ್ರ, ವಿಡಿಯೊ ಮತ್ತು ದೊಡ್ಡ ಗಾತ್ರದ ಕಡತಗಳನ್ನು ಸಂಗ್ರಹಿಸಲು ಆಂಡ್ರಾಯ್ಡ್ 12, 4 ಜಿಬಿ ರ‍್ಯಾಮ್+ 64 ಜಿಬಿ ರೋಂ ಒಳಗೊಂಡಿದೆ. ಉತ್ತಮ ಗುಣಮಟ್ಟದ ಛಾಯಾಗ್ರಹಣ ಅನುಭವ ಮತ್ತು ಸೆಲ್ಫಿಗಳಿಗಾಗಿ ಮುಂಭಾಗದ 8 ಎಂಪಿ ಕ್ಯಾಮೆರಾ, ಬಾಟಮ್ ಫೈರಿಂಗ್ ಸ್ಪೀಕರ್, ಟೈಪ್ ಸಿ ಚಾರ್ಜಿಂಗ್, ಸುರಕ್ಷತೆ ಹೆಚ್ಚಿಸಲು ಸೈಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನಂತಹ ವೈಶಿಷ್ಟ್ಯಗಳನ್ನು ಬ್ಲೇಜ್ ಪ್ರೊ ಒಳಗೊಂಡಿದೆ. ಹೆಚ್ಚಿನ ಸುರಕ್ಷತೆ ಮತ್ತು ಸರಿಸಾಟಿ ಇಲ್ಲದ ಕಾರ್ಯಕ್ಷಮತೆಗಾಗಿ ಬ್ಲೇಜ್ ಪ್ರೊ, ಮೀಡಿಯಾ ಟೆಕ್ಸ್‌ಹೆಲಿಯೊ ಜಿ37 ಚಿಪ್‌ಸೆಟ್, ದೀರ್ಘಾವಧಿಯ ಬಳಕೆಗಾಗಿ ದೊಡ್ಡ 5000 ಎಂಎಎಚ್ ಬ್ಯಾಟರಿ ಮತ್ತು ಕಡಿಮೆ ಸಮಯದಲ್ಲಿ ಫೋನ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 10ಡಬ್ಲ್ಯು ಟೈಪ್-ಸಿ ಫಾಸ್ಟ್ ಚಾರ್ಜರ್ ಒಳಗೊಂಡಿದೆ. ಇದು ಸರಿಸಾಟಿಯಿಲ್ಲದ ವೀಕ್ಷಣೆಯ ಅನುಭವಕ್ಕಾಗಿ 6.5" 20:9 ನಾಚ್ ಎಚ್‌ಡಿ ಡಿಸ್‌ಪ್ಲೇ ಸಹ ಹೊಂದಿದೆ.
ಮಾರುಕಟ್ಟೆಗೆ ಬ್ಲೇಜ್ ಪ್ರೊ ಸ್ಮಾರ್ಟ್‌ಫೋನ್ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿರುವ ಲಾವಾದ ಉತ್ಪನ್ನ ವಿಭಾಗದ ಮುಖ್ಯಸ್ಥ ತೇಜಿಂದರ್ ಸಿಂಗ್, ‘ದೇಶದಲ್ಲಿ ಸ್ಮಾರ್ಟ್‌ಫೋನ್ ಮಾರುಕಟ್ಟೆ ತ್ವರಿತವಾಗಿ ವಿಸ್ತರಿಸಿರುವುದರಿಂದ ಗ್ರಾಹಕರ ನಿರೀಕ್ಷೆಗಳು ಹೆಚ್ಚಾಗುತ್ತಿವೆ. ಗ್ರಾಹಕರು ಹೊಸ, ಹೊಸ ಅನುಭವಗಳ ಹುಡುಕಾಟದಲ್ಲಿ ಇದ್ದಾರೆ. ಲಾವಾ ಇತ್ತೀಚೆಗೆ ಪ್ರಾರಂಭಿಸಿರುವ ಬ್ಲೇಜ್ ಸರಣಿಗೆ ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ನಮ್ಮ ಬಳಕೆದಾರರ ನಿರಂತರ ಬೆಂಬಲದೊಂದಿಗೆ ಈ ಸ್ಮಾರ್ಟ್‌ಫೋನ್‌ಗಳ ವಿಭಾಗ ವಿಸ್ತರಿಸುವುದನ್ನು ಮುಂದುವರಿಸಲು ಇದು ನಮಗೆ ಅನುವು ಮಾಡಿಕೊಟ್ಟಿದೆ. ಲಾವಾ ಬ್ಲೇಜ್ ಪ್ರೊ ನಿರ್ದಿಷ್ಟವಾಗಿ ಹೆಚ್ಚಿನ ಕಾರ್ಯಕ್ಷಮತೆ, ಉತ್ತಮ ಕ್ಯಾಮೆರಾ ಗುಣಮಟ್ಟ ಮತ್ತು ಶ್ರೇಷ್ಠ ದರ್ಜೆಯ ಪ್ರೀಮಿಯಂ ಭಾವನೆಯನ್ನು ಬಯಸುತ್ತಿರುವ ಗ್ರಾಹಕರಿಗಾಗಿಯೇ ವಿಶೇವಾಗಿ ವಿನ್ಯಾಸಗೊಳಿಸಲಾಗಿದೆ’ ಎಂದು ಹೇಳಿದ್ದಾರೆ.
ಮಾರಾಟ ನಂತರದ ಉತ್ತಮ ಅನುಭವಕ್ಕಾಗಿ, ಗ್ರಾಹಕರಿಗೆ ಇದೇ ಮೊದಲ ಬಾರಿಗೆ 'ಮನೆಯಲ್ಲಿಯೇ ಉಚಿತ ಸೇವೆ' ಆರಂಭಿಸಲಾಗಿದೆ. ಈ ಸೌಲಭ್ಯದಡಿ ಗ್ರಾಹಕರ ಮನೆ ಬಾಗಿಲಿಗೆ ಸೇವೆ ಒದಗಿಸಲಾಗುತ್ತದೆ. ವಾರಂಟಿ ಅವಧಿಯೊಳಗೆ ಸ್ಮಾರ್ಟ್‌ಫೋನ್ ಪರದೆಗೆ ಆಗುವ ಯಾವುದೇ ಬಗೆಯ ಹಾನಿಯ ವಿರುದ್ಧ ರಕ್ಷಣೆ ಒದಗಿಸಲು, ಲಾವಾ ಉಚಿತ ಸ್ಕ್ರೀನ್ ರಿಪ್ಲೇಸ್‌ಮೆಂಟ್ ಸೌಲಭ್ಯವನ್ನು ಸಹ ಒದಗಿಸಲಿದೆ.
ಗ್ರಾಹಕರ ಅನುಭವವನ್ನು ಪರಿಗಣನೆಗೆ ತೆಗೆದುಕೊಂಡು, ಲಾವಾ ಹೊಸತನದ ಪೂರ್ವ-ಮಾರಾಟದ ಅನುಭವವನ್ನು ಸಹ ಮನೆಬಾಗಿಲಲ್ಲಿ (Demo at home) ನೀಡಲಿದೆ. ಇದು ಗ್ರಾಹಕರಿಗೆ ಮನೆಯಲ್ಲಿ ಅಥವಾ ಅವರ ಅನುಕೂಲಕ್ಕಾಗಿ ಯಾವುದೇ ಸ್ಥಳದಲ್ಲಿರುವಾಗ ಬ್ಲೇಜ್ ಪ್ರೊ ಅನ್ನು ಸ್ವತಃ ಬಳಸಿ ನೋಡಲು ಅನುವು ಮಾಡಿಕೊಡಲಿದೆ. ಗ್ರಾಹಕರು ಲಾವಾದ ಅಧಿಕೃತ ಅಂತರ್ಜಾಲ ತಾಣಕ್ಕೆ ಭೇಟಿ ನೀಡುವ ಮೂಲಕ ಮತ್ತು ಅಧಿಕೃತ ವಾಟ್ಸ್‌ಆ್ಯಪ್ ಸಂಖ್ಯೆಗೆ (9289065050 – “DEMO” ) ಸಂದೇಶ ಕಳುಹಿಸಿ ಮೇಲೆ ತಿಳಿಸಿದ ಸೇವೆಗಳನ್ನು ಪಡೆಯಬಹುದು.