ಬಾಡಿಗಾರ್ಡ್ ಮದ್ವೆಲಿ ಕಾರ್ತಿಕ್ ಆರ್ಯನ್; ಮದುಮಗನ ಕುತ್ತಿಗೆ ಹಿಡಿದು ಪೋಸ್ ನೀಡಿದ ಸ್ಟಾರ್, ಫ್ಯಾನ್ಸ್ ಹೇಳಿದ್ದೇನು?
ಬಾಡಿಗಾರ್ಡ್ ಮದ್ವೆಲಿ ಕಾರ್ತಿಕ್ ಆರ್ಯನ್ ಮಿಂಚಿದ್ದಾರೆ. ಮದುಮಗನ ಪಕ್ಕದಲ್ಲಿ ನಿಂತು ಪೋಸ್ ನೀಡಿದ ಸ್ಟಾರ್ ನೋಡಿ ಅಭಿಮಾನಿಗಳು ಫಿದಾ.
ಬಾಲಿವುಡ್ ಖ್ಯಾತ ನಟ ಕಾರ್ತಿಕ್ ಆರ್ಯನ್ ಸದ್ಯ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಭೂಲ್‌ಭುಲಯ್ಯ 2 ಸ್ಟಾರ್ ಮದುವೆ ಸಂಭ್ರಮದಲ್ಲಿದ್ದಾರೆ. ಹಾಗಂತ ಅವರ ಮದ್ವೆ ಆಲ್ಲ ತಮ್ಮ ಬಾಡಿಗಾರ್ಡ್ ಮದುವೆ.
ಸ್ಟಾರ್ ಕಲಾವಿದರಿಗೆ ಬಾಡಿಗಾರ್ಡ್ಸ್ ಎಷ್ಟು ಮುಖ್ಯವಾಗ್ತಾರೆ ಎನ್ನುವುದು ಅವರಿಗೆಯೇ ಗೊತ್ತಿರುತ್ತೆ. ಕಲಾವಿದರನ್ನು ಸುಕ್ಷಿತವಾಗಿ ಮನೆಗೆ ತಲುಪಿಸುವ ಸಂಪೂರ್ಣ ಜವಾಬ್ದಾರಿ ಅವರ ಮೇಲೆ ಇರುತ್ತೆ. ಹಾಗಾಗಿ ಸ್ಟಾರ್ಸ್ ತಮ್ಮ ಬಾಡಿಗಾರ್ಡ್ಸ್ ಅನ್ನು ತುಂಬಾ ಇಷ್ಟ ಪಡುತ್ತಾರೆ, ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ.
ಸ್ಟಾರ್ಸ್ ತಮ್ಮ ಬಾಡಿಗಾರ್ಡ್‌ಗೆ ಉತ್ತಮ ಸಂಬಳ ನೀಡುತ್ತಾರೆ. ಸಲ್ಮಾನ್ ಖಾನ್, ಶಾರುಖ್ ಖಾನ್ ಬಾಡ್ ಗಾರ್ಡ್ಸ್ ಲಕ್ಷಗಟ್ಟಲೇ ಸಂಬಳ ಪಡೆಯುತ್ತಾರೆ. ಕಾರ್ತಿಕ್ ಆರ್ಯನ್ ಕೂಡ ತನ್ನ ಗಾಡಿಗಾರ್ಡ್‌ನ್ನು ಉತ್ತಮ ಗೆಳೆಯನ ಹಾಗೆಯೇ ನೋಡಿಕೊಳ್ಳುತ್ತಾರೆ.
ಸದ್ಯ ಕಾರ್ತಿಕ್ ಆರ್ಯನ್ ತನ್ನ ಜೊತೆಯಲ್ಲೇ ಇರುವ, ತನ್ನನ್ನು ಸುರಕ್ಷಿತವಾಗಿ ನೋಡಿಕೊಳ್ಳುವ ಬಾಡಿಗಾರ್ಡ್ ಸಚಿನ್ ಮದುವೆ ಸಂಭ್ರಮದಲ್ಲಿ ಮಿಂಚುತ್ತಿದ್ದಾರೆ. ಬಾಡಿಗಾರ್ಡ್ ಮದ್ವೆಯಲ್ಲಿ ತುಂಬಾ ಸರಳವಾಗಿ ಎಲ್ಲರಾ ಜೊತೆಯೂ ಬೆರೆಯುತ್ತಾ ಫೋಟೋಗೆ ಪೋಸ್ ನೀಡುತ್ತಿರುವ ಕಾರ್ತಿಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ಕಾರ್ತಿಕ್ ಆರ್ಯನ್ ಸರಳತೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಾರ್ತಿಕ್ ಆರ್ಯನ್ ಎರಡು ಫೋಟೋಗಳನ್ನು ಶೇರ್ ಮಾಡಿ ಸಚಿನ್ ಮತ್ತು ಸುರೇಖಾ ಅವರಿಗೆ ವೈವಾಹಿಕ ಜೀವನದ ಶುಭಾಶಯಗಳು ಎಂದು ಹೇಳಿದ್ದಾರೆ. ಒಂದು ಫೋಟೋದಲ್ಲಿ ಕಾರ್ತಿಕ್ ಮದುಮಗ ಸಚಿನ್ ಕುತ್ತಿಗೆ ಒತ್ತಿ ಹಿಡಿಯುವ ಹಾಗೆ ಪೋಸ್ ನೀಡಿದ್ದಾರೆ.
ಕಾರ್ತಿಕ್ ಶೇರ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇತ್ತೀಚೆಗಷ್ಟೆ ಕಾರ್ತಿಕ್ ಆರ್ಯನ್ ಬಾಡಿಗಾರ್ಡ್ ಸಚಿನ್ ಹುಟ್ಟುಹಬ್ಬವನ್ನು ಆಚರಿಸಿದ್ದರು. ಇದೀಗ ಮದುವೆ ಸಂಭ್ರಮದಲ್ಲಿ ಮಿಂಚಿದ್ದಾರೆ.