ತೈಮೂರ್ ಜೊತೆ ಸ್ವಿಟ್ಜರ್ಲೆಂಡ್‌ನಲ್ಲಿ ಸ್ಕೀಯಿಂಗ್ ಎಂಜಾಯ್ ಮಾಡಿದ ಕರೀನಾ ಕಪೂರ್
ಪ್ರಸ್ತುತ ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ (Kareena Kapoor Khan) ಸ್ವಿಟ್ಜರ್ಲೆಂಡ್‌ನಲ್ಲಿ (Switzerland) ತಮ್ಮ ಫ್ಯಾಮಿಲಿ ಜೊತೆ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ. ಈ ಸಮಯದ ಹಲವು ಫೋಟೋಗಳನ್ನು ಕರೀನಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಸ್ಟೋರಿಗಳಲ್ಲಿ ಹಂಚಿಕೊಂಡಿದ್ದಾರೆ.

ಹೊಸ ವರ್ಷದ ಆಚರಣೆಗಾಗಿ ಕರೀನಾ ಕಪೂರ್ ಈ ಬಾರಿ ಮತ್ತೆ ಸ್ವಿಟ್ಜರ್ಲೆಂಡ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲಿನ ಜಿಸ್ಟಾಡ್ (Gstaad) ರೆಸಾರ್ಟ್ ಟೌನ್‌ನಲ್ಲಿ ಫ್ಯಾಮಿಲಿ ಜೊತೆ ವಿಹಾರವನ್ನು ಎಂಜಾಯ್ ಮಾಡುತ್ತಿದ್ದಾರೆ ನಟಿ.
ಕರೀನಾ ಕಪೂರ್ ಜಿಸ್ಟಾಡ್ ರೆಸಾರ್ಟ್ ಟೌನ್ ವೆಕೇಷನ್ ಸಮಯದ ಎರಡು ಪೋಟೋಗಳನ್ನು Instagram ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ಅವರು ಪೋಸ್ಟ್ ಮಾಡಿರುವ ಮೊದಲ ಫೋಟೋದಲ್ಲಿ ಕರೀನಾ ತಮ್ಮ ಮಗ ತೈಮೂರ್ ಅಲಿ ಖಾನ್ ಜೊತೆ ಇದ್ದಾರೆ. ಈ ಫೊಟೋವು ಅವರಿಬ್ಬರು ಸ್ಕೀಯಿಂಗ್‌ಗೆ ಹೋಗುವ ಮೊದಲು ತೆಗೆದಿರುವ ಮಿರರ್ ಸೆಲ್ಫಿ.
ತೈಮೂರ್ ಜೊತೆ ಅವರ ಫೋಟೋ ಹಂಚಿಕೊಂಡ ನಟಿ, 'ನಾನು ಈ ಲುಕ್‌ಗಾಗಿ ಇಲ್ಲಿದ್ದೇನೆ' ಎಂದು ಬರೆದಿದ್ದಾರೆ. ಕರೀನಾ ಬಿಳಿ ಚಳಿಗಾಲದ ಜಾಕೆಟ್ ಧರಿಸಿದರೆ, ತೈಮೂರ್ ಹಳದಿ ಜಾಕೆಟ್‌ನಲ್ಲಿ ಕನ್ನಡಕ ಮತ್ತು ಹೆಲ್ಮೆಟ್ ಧರಿಸಿ ಸೆಲ್ಫಿಗೆ ಪೋಸ್ ನೀಡಿದ್ದಾನೆ.
ಎರಡನೇ ಫೊಟೋದಲ್ಲಿ ಕರೀನಾ ಪತಿ ಸೈಫ್ ಅಲಿ ಖಾನ್ ಅವರು ರೆಸ್ಟೋರೆಂಟ್‌ನಲ್ಲಿ ಫಂಡ್ಯೂ ಡಿಶ್ ಸರ್ವ್ ಮಾಡಿಕೊಳ್ಳಲು ಪ್ರಯತ್ನಿಸಿತ್ತಿರುವಂತೆ ಕಾಣುತ್ತಿದೆ.
ನಂತರ ಕರೀನಾ ಹಂಚಿಕೊಂಡ ರೆಸ್ಟೋರೆಂಟ್‌ನಲ್ಲಿರುವ ಪೋಟೋದಲ್ಲಿ ಸೈಫ್ ಬಿಳಿ ಟಿ-ಶರ್ಟ್ ಮತ್ತು ನೀಲಿ ಡೆನಿಮ್ ಧರಿಸಿದ್ದಾರೆ ಮತ್ತು ಫಂಡ್ಯು ಖಾದ್ಯವನ್ನು ಸ್ವತಃ ಬಡಿಸುತ್ತಿರುವುದನ್ನು ಕಾಣಬಹುದು.
ವರದಿಗಳ ಪ್ರಕಾರ, ಕರೀನಾ ಮತ್ತು ಸೈಫ್ 2012 ರಲ್ಲಿ ವಿವಾಹವಾದಾಗಿನಿಂದ ಸ್ವಿಸ್ ಆಲ್ಫ್ಸ್‌ನಲ್ಲಿರುವ ಜಿಸ್ಟಾಡ್‌ಗೆ ಹೊಸ ವರ್ಷವನ್ನು ಆಚರಿಸಲು ಭೇಟಿ ನೀಡುತ್ತಿದ್ದಾರೆ. ಆದರೆ ಮೂರು ವರ್ಷಗಳಲ್ಲಿ ಸೆಲೆಬ್ರಿಟಿ ದಂಪತಿ ಇಲ್ಲಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲು.
ಮಂಗಳವಾರ ತನ್ನ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಹಾರ್ಟ್ ಎಮೋಜಿ ಮತ್ತು ಸ್ವಿಸ್ ಫ್ಲ್ಯಾಗ್ ಎಮೋಜಿ ಜೊತೆ ಅಗ್ಗಿಸ್ಟಿಕೆ ಫೋಟೋವನ್ನು ಕರೀನಾ ಪೋಸ್ಟ್ ಮಾಡಿದ್ದಾರೆ. ಮತ್ತು ಆ ಪೋಟೋಗೆ ನಿಮಗಾಗಿ ಮೂರು ವರ್ಷ ಕಾಯುತ್ತಿದ್ದೆ' ಎಂದು ಕ್ಯಾಪ್ಷನ್ ನೀಡಿದ್ದರು.
ಕರೀನಾ ಕೊನೆಯದಾಗಿ ಆಮೀರ್ ಖಾನ್ ಜೊತೆ 2022 ರಲ್ಲಿ ರಿಲೀಸ್ ಆದ ಸೂಪರ್ ಫ್ಲಾಪ್ ಚಿತ್ರ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ಕಾಣಿಸಿಕೊಂಡರು, ಅವರು ಮುಂದೆ ಸುಜೋಯ್ ಘೋಷ್ ಅವರ ದಿ ಡಿವೋಷನ್ ಆಫ್ ಸಸ್ಪೆಕ್ಟ್ ಎಕ್ಸ್ ನಲ್ಲಿ ವಿಜಯ್ ವರ್ಮಾ ಮತ್ತು ಜೈದೀಪ್ ಅಹ್ಲಾವತ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಒಮೆರ್ಟಾ ನಿರ್ದೇಶಕ ಹನ್ಸಲ್ ಮೆಹ್ತಾ ನಿರ್ದೇಶಿಸಲಿರುವ ಮುಂಬರುವ ಥ್ರಿಲ್ಲರ್ ಚಿತ್ರದಲ್ಲೂ ಕರೀನಾ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.