ಸೀತೆ ಪಾತ್ರಕ್ಕೆ 12 ಕೋಟಿ, ಕರೀನಾ ಏನು ಹೇಳಿದ್ದಾರೆ ನೋಡಿ!
ಕರೀನಾ ಕಪೂರ್ (Kareena Kapoor) ಪ್ರಸ್ತುತ ಲಾಲ್ ಸಿಂಗ್ ಚಡ್ಡಾ (Laal Singh Chaddha) ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ನಡುವೆ, ಅವರು ಜೂಮ್ ಟಿವಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ಸಿನಿಮಾವೊಂದರಲ್ಲಿ ಸೀತೆಯ ಪಾತ್ರ ಮಾಡಲು 12 ಕೋಟಿ ರೂಪಾಯಿ ಶುಲ್ಕ ಪಡೆದಿರುವ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಅಷ್ಟಕ್ಕೂ ಕರೀನಾ ಈ ಬಗ್ಗೆ ಏನು ಹೇಳಿದ್ದಾರೆ ನೋಡಿ.
ಅಂತಹ ಯಾವುದೇ ಪಾತ್ರವನ್ನು ನೀಡದ ಕಾರಣ ನಾನು ಯಾವುದೇ ವಿವರಣೆಯನ್ನು ನೀಡಬೇಕಾಗಿಲ್ಲ. ಇದೆಲ್ಲ ವದಂತಿಯಾಗಿದ್ದು, ಅಂತಹ ಯಾವುದೇ ಚಿತ್ರದ ಬಗ್ಗೆ ನನಗೆ ತಿಳಿದಿಲ್ಲ ಎಂದು ಕರೀನಾ ಕಪೂರ್ ಹೇಳಿದ್ದಾರೆ.
ಒಂದು ವರ್ಷದ ಹಿಂದೆ, ಅಂತಹ ಅನೇಕ ವರದಿಗಳು ಹೊರಬಂದವು, ಅದರಲ್ಲಿ ಕರೀನಾ ಸೀತೆಯ ಪಾತ್ರಕ್ಕಾಗಿ 12 ಕೋಟಿ ಶುಲ್ಕ ಕೇಳಿದ್ದರು ಎಂದು ಹೇಳಲಾಗಿತ್ತು. ಇದು ಚಿತ್ರರಂಗದಲ್ಲಿ ಸಂಭಾವನೆ ಸಮಾನತೆಯ ಚರ್ಚೆಯನ್ನೂ ಆರಂಭಿಸಿತ್ತು.
ಈ ದೊಡ್ಡ ಬಜೆಟ್ ಚಿತ್ರ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬ ಕಾರಣಕ್ಕಾಗಿ ಅವರು ಇಷ್ಟೊಂದು ಶುಲ್ಕವನ್ನು ಕೇಳಿದ್ದಾರೆ ಎಂದು ಅನೇಕ ವರದಿಗಳಲ್ಲಿ ಹೇಳಲಾಗಿದೆ. ಇದರಿಂದ ಅವರು ಸಾಕಷ್ಟು ಟೀಕೆಗಳಿಗೂ ಗುರಿಯಾಗಿದ್ದರು.
ಸಂದರ್ಶನವೊಂದರಲ್ಲಿ ಅವರು ಈ ಸಂಪೂರ್ಣ ವಿಷಯವನ್ನು ಕೇವಲ ವದಂತಿ ಎಂದಿದ್ದಾರೆ. ಅದು ತನಗೆ ತಿಳಿದಿಲ್ಲ ಎಂದು ಕರೀನಾ ಹೇಳಿದ್ದಾರೆ. ಕರೀನಾ ಕಳೆದ ವರ್ಷವೂ ಶುಲ್ಕ ಹೆಚ್ಚಿಸುವ ವಿಷಯಕ್ಕಾಗಿ ಟ್ರೋಲರ್‌ಗಳಿಗೆ ಗುರಿಯಾಗಿದ್ದರು ಮತ್ತು ಜನರು ದುರಾಸೆಯೆಂದು ದೂರಿದ್ದರು.
ನನಗೆ ಏನು ಬೇಕು ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಏಕೆಂದರೆ ಎಲ್ಲರನ್ನೂ ಗೌರವಿಸಬೇಕು ಎಂದು ನಾನು ಭಾವಿಸುತ್ತೇನೆ. ಇದು ಬೇಡಿಕೆಯ ವಿಷಯವಲ್ಲ ಆದರೆ ಇದು ಮಹಿಳೆಯರಿಗೆ ಗೌರವದ ವಿಷಯ. ವಿಷಯಗಳು ಬದಲಾಗಬೇಕು ಎಂದು ನಾನು ಭಾವಿಸುತ್ತೇನೆ ಎಂದು ನಂತರ ಈ ಸಂಭಾವನೆಯ ವಿಷಯವಾಗಿ ಅವರು ಹೇಳಿದರು.
ಕರೀನಾ ಕಪೂರ್ 2020ರ ಚಲನಚಿತ್ರ ಅಂಗ್ರೇಜಿ ಮೀಡಿಯಂನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ. ಈಗ ಎರಡು ವರ್ಷಗಳ ನಂತರ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಗಸ್ಟ್ 11 ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರದಲ್ಲಿ ಆಮೀರ್ ಖಾನ್ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಲಾಲ್ ಸಿಂಗ್ ಚಡ್ಡಾ ಚಿತ್ರವನ್ನು ಬಹಿಷ್ಕರಿಸಲಾಗುತ್ತಿದೆ. ಆದರೆ, ಕರೀನಾ ಕಪೂರ್ ಮತ್ತು ಆಮೀರ್ ಖಾನ್ ತಮ್ಮದೇ ಮಟ್ಟದಲ್ಲಿ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ.