ನಿಂಗ್ಯಾಕೆ ಸೆಲೆಬ್ರಿಟಿ ಸೆಕ್ಸ್ ಬಗ್ಗೆ ಕ್ಯೂರಿಯಾಸಿಟಿ? ಕರಣ್ ಜೋಹರ್ ಕಾಲೆಳೆದ ಆಮೀರ್ ಖಾನ್
ಸೆಲೆಬ್ರಿಟಿಗಳಿಗೆ ಸೆಕ್ಸ್ ಬಗ್ಗೆ ಪ್ರಶ್ನೆ ಮಾಡುವ ಕರಣ್ ಜೋಹರ್‌ಅನ್ನು ಅಮೀರ್ ಖಾನ್ ತರಾಟೆ ತೆಗೆದುಕೊಂಡರು.ಸೆಲೆಬ್ರಿಟಿ ಸೆಕ್ಸ್ ಲೈಫ್ ಬಗ್ಗೆ ಯಾಕೆ ಯಾವಾಗಲೂ ಯೋಚನೆ ಮಾಡತ್ತೀರಿ ಎಂದು ಆಮೀರ್ ಖಾನ್ ಕೇಳಿದ್ದಾರೆ.
ಬಾಲಿವುಡ್ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಅವರ ಜನಪ್ರಿಯ ಶೋ ಕಾಫಿ ವಿತ್ ಕರಣ್ ಈ ಬಾರಿಯೂ ಸಕಷ್ಟು ಕುತೂಹಲದಿಂದ ಕೂಡಿದೆ. ಈ ಬಾರಿ ಕಾಫಿ ವಿತ್ ಕರಣ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.ಮೊದಲ ಬಾರಿಗೆ ಒಟಿಟಿಯಲ್ಲಿ ಕಾಫಿ ವಿತ್ ಕರಣ್ ಶೋ ಪ್ರಸಾರವಾಗುತ್ತಿದೆ. ಅಂದಹಾಗೆ ಇದು 7ನೇ ಸೀಸನ್ ಆಗಿದೆ. ಈಗಾಗಲೇ ಕಾಫಿ ವಿತ್ ಕರಣ್ ಶೋನಲ್ಲಿ ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್, ರಣವೀರ್ ಸಿಂಗ್ ಮತ್ತು ಅಲಿಯಾ ಹಾಗೂ ಸಮಂತಾ ಮತ್ತು ಅಕ್ಷಯ್ ಕುಮಾರ್, ಅನನ್ಯಾ ಪಾಂಡೆ ಮತ್ತು ವಿಜಯ್ ದೇವರಕೊಂಡ ಎಪಿಸೋಡ್ ಗಳು ಪ್ರಸಾರವಾಗಿದೆ. ಈ ಬಾರಿಯ ಮತ್ತೊಂದು ವಿಶೇಷ ಎಂದರೆ ಸೌತ್ ಸೆಲೆಬ್ರಿಟಿಗಳು ಸಹ ಕರಣ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಆಮೀರ್ ಕಾನ್ ಮತ್ತು ಕರಿನಾ ಕಪೂರ್ ಸರದಿ. ಹೌದು ಲಾಲ್ ಸಿಂಗ್ ಚಡ್ಡಾ ಜೋಡಿ ಕಾಫಿ ವಿತ್ ಕರಣ್ ಶೋಗೆ ಎಂಟ್ರಿ ಕೊಟ್ಟಿದೆ. ಈಗಾಗಲೇ ಆಮೀರ್ ಮತ್ತು ಕರೀನಾ ಭಾಗಿಯಾಗಿರುವ ಶೋನ ಪ್ರೋಮೋ ರಿಲೀಸ್ ಆಗಿದೆ. ಆಮೀರ್ ಖಾನ್ ಮತ್ತು ಕರಿನಾ ಇಬ್ಬರು ಕರಣ್ ಜೋಹರ್ ಅವರನ್ನು ರೋಸ್ಟ್ ಮಾಡಿದ್ದಾರೆ. ಸೆಲೆಬ್ರಿಟಿಗಳಿಗೆ ಸೆಕ್ಸ್ ಬಗ್ಗೆ ಪ್ರಶ್ನೆ ಮಾಡುವ ಕರಣ್ ಜೋಹರ್‌ಅನ್ನು ಅಮೀರ್ ಖಾನ್ ತರಾಟೆ ತೆಗೆದುಕೊಂಡರು.ಸೆಲೆಬ್ರಿಟಿ ಸೆಕ್ಸ್ ಲೈಫ್ ಬಗ್ಗೆ ಯಾಕೆ ಯಾವಾಗಲೂ ಯೋಚನೆ ಮಾಡತ್ತೀರಿ ಎಂದು ಆಮೀರ್ ಖಾನ್ ಕೇಳಿದ್ದಾರೆ.
ಕರಣ್ ಜೋಹರ್, ನಟಿ ಕರಿನಾಗೆ ಮಗುವನ್ನು ಪಡೆದ ಬಳಿಕ ಕ್ವಾಲಿಟಿ ಸೆಕ್ಸ್ ಬಗ್ಗೆ ಪ್ರಶ್ನೆ ಮಾಡಿದರು. ಇದಕ್ಕೆ ಕರೀನಾ ನಿಮಗೂ ಅವಲಿ ಮಕ್ಕಳಿದ್ದಾರೆ ಅಂದಮೇಲೆನಿಮಗೂ ತಿಳಿದಿದೆ ಎಂದರು. ಕರೀನಾ ಮಾತಿಗೆ ಕರಣ್, ನನ್ನ ತಾಯಿ ಈ ಶೋ ನೋಡುತ್ತಿರುತ್ತಾರೆ ಹಾಗಾಗಿ ಈ ಬಗ್ಗೆ ಮಾತನಾಡಲ್ಲ ಎಂದರು. ತಕ್ಷಣ ಆಮೀರ್ ಖಾನ್, 'ಬೇರೆಯವರ ಸೆಕ್ಸ್ ಲೈಫ್ ಬಗ್ಗೆ ಮಾತನಾಡುವುದರ ಬಗ್ಗೆ ಏನು ಆಗಲ್ವಾ? ಏನಿವು ಪ್ರಶ್ನೆಗಳು' ಎಂದು ಕರಣ್ ಜೋಹರ್ ಕಾಲೆಳೆದರು.
ಕಾರಲ್ಲಿ ಸೆಕ್ಸ್ ಮಾಡಿದ್ದಾರಾ ವಿಜಯ್ ದೇವರಕೊಂಡ? ಕರಣ್ ಮುಂದೆ ಸೆಕ್ಸ್ ಲೈಫ್ ತೆರೆದಿಟ್ಟ ಅರ್ಜುನ್ ರೆಡ್ಡಿ ಸ್ಟಾರ್
ಅದೇ ಸಮಯದಲ್ಲಿ ಕರಿನಾ ಕಪೂರ್, ಅಕ್ಷಯ್ ಕುಮಾರ್ ಹೇಗೆ 30 ದಿನಗಳಲ್ಲಿ ಸಿನಿಮಾದ ಚಿತ್ರೀಕರಣ ಮುಗಿಸುತ್ತಾರೆ, ಆದರೆ ಆಮೀರ್ ಖಾನ್ 100-200 ದಿನಗಳನ್ನು ತೆಗೆದಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.ಆಮೀರ್ ಖಾನ್ ಮತ್ತು ಕರಿನಾ ಕಪೂರ್ ಭಾಗಿಯಾಗಿರುವ ಈ ಶೋ ಗುರುವಾರ ಪ್ರಸಾರವಾಗಲಿದೆ. ಡೆಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಈ ಶೋ ಸ್ಟ್ರೀಮಿಂಗ್ ಆಗಲಿದೆ.
ಡಿವೋರ್ಸ್ ಬಳಿಕ ತುಂಬಾ ಕಷ್ಟವಾಯ್ತು; ನಾಗಚೈತನ್ಯರಿಂದ ದೂರಾದ ಬಗ್ಗೆ ಸಮಂತಾ ಮಾತು
ಸೆಕ್ಸ್ ಬಗ್ಗೆ ದೇವರಕೊಂಡಗೆ ಪ್ರಶ್ನೆ
ಅಂದಹಾಗೆ ಕರಣ್ ಜೋಹರ್ ಇತ್ತೀಚಿಗಷ್ಟೆ ಈ ಶೋನಲ್ಲಿ ಭಾಗಿಯಾಗಿದ್ದ ವಿಜಯ್ ದೇವರಕೊಂಡಗೂ ಸೆಕ್ಸ್ ಬಗ್ಗೆ ಮಾಡಿದ್ದರು. ಕೊನೆಯ ಬಾರಿ ಸೆಕ್ಸ್ ಮಾಡಿದ್ದು ಯಾವಾಗ ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ವಿಜಯ್ ದೇವರಕೊಂಡ ನಗುತ್ತಾ 'ಸಾಕು ಸಾಕು ನಿಲ್ಲಿಸಿ..' ಎಂದು ಹೇಳಿ ಕರಣ್ ಬಾಯಿ ಮುಚ್ಚಿಸಿದ್ದರು. ಬಳಿಕ ಕರಣ್ ಜೋಹರ್ ಸಾರ್ವಜನಿಕ ಸ್ಥಳದಲ್ಲಿ ಸೆಕ್ಸ್ ಮಾಡಿದ ಬಗ್ಗೆ ಪ್ರಶ್ನೆ ಮಾಡಿದ್ದರು. ವಿಜಯ್ ದೇವರಕೊಂಡ 'ಇದನ್ನು ಕಾರಿನಲ್ಲಿ ಮಾಡಿದ್ದೇನೆ' ಎಂದು ಧೈರ್ಯವಾಗಿ ಹೇಳಿದರು. ಅಲ್ಲೇ ಕುಳಿತಿದ್ದ ಅನನ್ಯ ಮತ್ತು ಕರಣ್ ಇಬ್ಬರು ಕಣ್ಣು ಮಿಟುಕಿಸಿ ಅನೇಕ ಬಾರಿ ಮಾಡಿದ್ದಾರೆ ಎನ್ನುವುದನ್ನು ರಿವೀಲ್ ಮಾಡಿದರು.