ಸೈಜ್ ಜೀರೋ- ಎರಡು ಮಕ್ಕಳ ತಾಯಿ: ಬಾಲಿವುಡ್‌ನ ಬ್ರಾಂಡ್ ಕರೀನಾ ಕಪೂರ್ ಜರ್ನಿ!
ಬಾಲಿವುಡ್‌ನ ಗ್ಲಾಮರ್ಸ್ ಹಾಗೂ ಟ್ಯಾಲೆಂಟೆಡ್ ನಟಿ ಕರೀನಾ ಕಪೂರ್ (Kareena Kapoor) ಇಂದು ತನ್ನ 42 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಸೆಪ್ಟೆಂಬರ್ 21, 1980 ರಂದು ಮುಂಬೈನಲ್ಲಿ ಜನಿಸಿದ ಕರೀನಾ ಬಾಲಿವುಡ್‌ನ ಅತಿದೊಡ್ಡ ಕುಟುಂಬ ಕಪೂರ್ ಕುಟುಂಬಕ್ಕೆ ಸೇರಿದವರು. ಅದೇ ಸಮಯದಲ್ಲಿ, ಅವಳು ಪಟೌಡಿ ಕುಟುಂಬದ ಸೊಸೆ. ಸುಮಾರು 22 ವರ್ಷಗಳಿಂದ ಬಾಲಿವುಡ್ ಉದ್ಯಮದಲ್ಲಿರುವ ಕರೀನಾ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲ ತಮ್ಮದೇ ಆದ ಛಾಪು ಮೂಡಿಸಿ ಜನರ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ.
ಕರೀನಾ ಕಪೂರ್. ಬಾಲಿವುಡ್ ಬೇಬೋ ಎಂದೇ ಖ್ಯಾತ. ಚಿತ್ರರಂಗದ ಹಿನ್ನೆಳೆಯುಳ್ಳ ಕುಟುಂಬದಿಂದ ಬಂದವರು. ಕಪೂರ್ ಕುಟುಂಬದ ಕುಡಿ. ಬಾಲಿವುಡ್‌ನಲ್ಲಿ ನೆಲೆಯೂರಲು ಕಷ್ಟವೇನೂ ಆಗಲಿಲ್ಲ ಆಮೇಲೆ ಕೈ ಹಿಡಿದಿದ್ದು ಪಟೌಡಿ ಕುಟುಂಬದ ವಂಶಸ್ಥ ಸೈಫ್ ಖಾನ್ ಅವರದ್ದು. ಇದೀಗ ಎರಡು ಮಕ್ಕಳು ತಾಯಿ. ಲಾಲ್ ಸಿಂಗ್ ಛಡ್ಡಾ ನಂತರ ಬೇರೆ ಚಿತ್ರಗಳಲ್ಲೇನೂ ನಟಿಸುತ್ತಿಲ್ಲ. ಪ್ರಮೋಷನ್, ಜಾಹೀರಾತು ಹಾಗೂ ಪಾರ್ಟಿಗಳಲ್ಲಿ ಬ್ಯುಸಿಯಾಗಿರುತ್ತಾರೆ.
ಕರೀನಾ ಕಪೂರ್ ಖಾನ್ ಕೇವಲ ನಟಿಯಷ್ಟೇ ಆಗಿ ಉಳಿದಿಲ್ಲ. ಟ್ರೆಂಡ್ ಸೆಟ್ಟರ್, ಬ್ರಾಂಡ್, ಯೋಗ (Yoga) ಹಾಗೂ ಫಿಟ್‌ನೆಸ್ ಫ್ರಿಕ್ (Fitness Freek), ಪತ್ನಿ, ತಾಯಿ ಹೀಗೆ ಎಲ್ಲಾ ರೋಲ್‌ಗಳನ್ನು ಅತಿ ಯಶಸ್ವಿಯಾಗಿ ನಿಭಾಯಿಸುವವರು ಕರೀನಾ..
ಬೆಬೊ ಅವರ ಪರ್ಸನಲ್ ಲೈಫ್ (Personal Life) ಇರಲಿ ಅಥವಾ ಕೆರಿಯರ್‌ನಲ್ಲಿರಲ್ಲಿ ವಹಿಸಿದ ಪ್ರತಿಯೊಂದು ಪಾತ್ರದಲ್ಲೂ ಸ್ಪೂರ್ತಿದಾಯಕ. ಸೈಜ್ ಜೀರೋ ಸಾಧಿಸಿದ ಸಮಯದಿಂದ ಹಿಡಿದು ಎರಡು ಮಕ್ಕಳ ತಾಯಿಯವರೆಗೆ ಕರೀನಾ ಬಹಳ ದೂರ ಸಾಗಿದ್ದಾರೆ.
2008 ರಲ್ಲಿ, ತಶಾನ್ ಚಲನಚಿತ್ರದ ಸಮಯದಲ್ಲಿ ಕರೀನಾ ಕಪೂರ್ ಪರ್ಫೆಕ್ಟ್ ಫಿಗರ್‌ಗಾಗಿ ಮತ್ತು ಸ್ಲಿಮ್ ಸ್ಕೀನ್ನಿ ಲುಕ್‌ಗಾಗಿ 20 ಕಿಲೋಗಳನ್ನು ಕಳೆದುಕೊಂಡರು. 68 ಕೆಜಿದಿಂದ 48 ಕೆಜಿಗೆ ಇಳಿದರು.
ಕರೀನಾ ಕಪೂರ್ ಜೀವನದಲ್ಲಿ ಸ್ಟೀರಿಯೊಟೈಪ್‌ಗಳಿಗೆ ಸ್ಥಳವಿಲ್ಲ. ಈ ಎಲ್ಲಾ ವರ್ಷಗಳಲ್ಲಿ, ಅವರು ಜೀವನದಲ್ಲಿ ಪ್ರತಿಯೊಂದು ಪಾತ್ರವನ್ನು ವಹಿಸಿಕೊಂಡಿದ್ದಾರೆ ಮತ್ತು ಅದರಲ್ಲಿ ಅತ್ಯುತ್ತಮವಾದದ್ದನ್ನು ನೀಡಿದ್ದಾರೆ.
ಮೊದಲ ಪ್ರೆಗ್ನೆಂಸಿಯಲ್ಲಿ ನಟಿ ಕೆಲಸದಿಂದ ವಿರಾಮ ತೆಗೆದುಕೊಳ್ಳಲು ನಿರಾಕರಿಸಿದರು. ಸಂದರ್ಶನಗಳನ್ನು ನೀಡುವುದರಿಂದ ಹಿಡಿದು ಶೂಟಿಂಗ್‌ಗೆ ಹೋಗುವುದು ಮತ್ತು ಇವೆಂಟ್‌ಗಳಲ್ಲಿ ಕಾಣಿಸಿಕೊಳ್ಳುವವರೆಗೆ, ಎಲ್ಲವನ್ನೂ ಮಾಡಿದರು ಮತ್ತು ಅವರ ಎರಡನೇ ಗರ್ಭಾವಸ್ಥೆಯಲ್ಲೂ ಏನೂ ಬದಲಾಗಿರಲಿಲ್ಲ.
ಅವರ ಪ್ರೆಗ್ನೆಂಸಿ ಬೈಬಲ್ ಎಂಬ ತನ್ನ ಪುಸ್ತಕದಲ್ಲಿ, ತನ್ನ ಎರಡೂ ಗರ್ಭಧಾರಣೆಯ ಸಮಯದಲ್ಲಿನ ತೂಕದ ಬರೆದಿದ್ದಾರೆ. ಇದಲ್ಲದೆ ಅವರು ಮಾತೃತ್ವ ಫ್ಯಾಷನ್ (Motherhood Fashion), ಗರ್ಭಧಾರಣೆಯ ಬಯಕೆಗಳ ಬಗ್ಗೆ ಮತ್ತು ಸೆಲೆಬ್ರಿಟಿ ನ್ಯೂಟ್ರಿಷನಿಸ್ಟ್ ರುಜುಟಾ ದಿವೇಕರ್ ಅವರ ಬೆಂಬಲದೊಂದಿಗೆ ಹೇಗೆ ಚೆನ್ನಾಗಿ ತಿನ್ನುತ್ತಿದ್ದರು ಎಂಬುದರ ಬಗ್ಗೆಯೂ ಮಾತನಾಡಿದರು.
ಹೆಚ್ಚುವರಿ ತೂಕವನ್ನು ಕರಿಗಿಸಲು ಕರೀನಾ ಯೋಗ ಮತ್ತು ಪೈಲೇಟ್ಸ್ ಮಾಡುವ 42 ವರ್ಷದ ಕರೀನಾ ಕಪೂರ್ ಬಾಲಿವುಡ್‌ನ ಫಿಟ್‌ನೆಸ್ ಫ್ರೀಕ್ ನಟಿಯರಲ್ಲಿ ಒಬ್ಬರು. ಇಬ್ಬರ ಮಕ್ಕಳ ತಾಯಿಯಾದರೂ ಮತ್ತು ಬಾಲಿವುಡ್‌ನಲ್ಲಿ ಮತ್ತು ಅಭಿಮಾನಿಗಳ ಹೃದಯದಲ್ಲಿ ತನ್ನ ವಿಶೇಷ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.