- Home
- Entertainment
- Cine World
- ನಿಮ್ಮನೆಯವ್ರ ಜೊತೆ ವರ್ಜಿನಿಟಿ ಕಳ್ಕೊಂಡೆ ; ತಂದೆಯೋ, ಅಣ್ಣನೋ ಎಂದು ಕರಣ್ ಜೋಹರ್ ಮಾತಿಗೆ Jahnvi Kapoor ಕಂಗಾಲು
ನಿಮ್ಮನೆಯವ್ರ ಜೊತೆ ವರ್ಜಿನಿಟಿ ಕಳ್ಕೊಂಡೆ ; ತಂದೆಯೋ, ಅಣ್ಣನೋ ಎಂದು ಕರಣ್ ಜೋಹರ್ ಮಾತಿಗೆ Jahnvi Kapoor ಕಂಗಾಲು
karan johar Show: 'ಟೂ ಮಚ್ ವಿತ್ ಕಾಜೋಲ್ & ಟ್ವಿಂಕಲ್' ಶೋನಲ್ಲಿ ಕರಣ್ ಜೋಹರ್, ಜಾನ್ವಿ ಕಪೂರ್ ಭಾಗವಹಿಸಿದ್ದರು. ಈ ಶೋನಲ್ಲಿ ಕಾಜಲ್, ಟ್ವಿಂಕಲ್ ಖನ್ನಾ ಅವರು ಭಾವಹಿಸಿದ್ದರು. ಕೆಲ ವಿಚಾರಗಳು ಬಹಿರಂಗ ಆಗಿದೆ. ನಾನು ಜಾನ್ವಿ ಕಪೂರ್ ಕುಟುಂಬದ ಜೊತೆ ಇಂಟಿಮೇಟ್ ಆಗಿದ್ದೆ ಎಂದು ಹೇಳಿದ್ದಾರೆ.

ಕರಣ್ ಜೋಹರ್ 25 ವರ್ಷ ದೊಡ್ಡವರು
ಜಾನ್ವಿ ಕಪೂರ್‌ಗಿಂತ ಕರಣ್ ಜೋಹರ್ ಅವರು 25 ವರ್ಷ ದೊಡ್ಡವರು. ಈ ಕಾರ್ಯಕ್ರಮದಲ್ಲಿ ಕರಣ್ ಜೋಹರ್ ಆಡಿದ ಮಾತು ಜಾನ್ವಿ ಕಪೂರ್‌ಗೆ ಶಾಕ್ ನೀಡಿದೆ. ಆಮೇಲೆ ಕರಣ್ ಜೋಹರ್ ಅದಕ್ಕೆ ಸ್ಪಷ್ಟನೆಯನ್ನೂ ನೀಡಿದ್ದಾರೆ.
ಸತ್ಯ, ಸುಳ್ಳು ಹೇಳಬೇಕು
ಕಾಜೋಲ್ ಮತ್ತು ಟ್ವಿಂಕಲ್ ಖನ್ನಾ ಅವರ ಶೋನಲ್ಲಿ ಟ್ರೂತ್ & ಲೈ ಗೇಮ್ ಸೆಗ್ಮೆಂಟ್ ನಡೆಯುತ್ತಿತ್ತು. ಆಗ ಜಾನ್ವಿ ಕಪೂರ್, ಕರಣ್‌ಗೆ ಒಂದು ಸೆನ್ಸೆಶನಲ್ ವಿಷಯ ಹೇಳುವಂತೆ ಹೇಳಿದರು. ಆಗ ಕರಣ್ ಜೋಹರ್ ಆಡಿದ ಮಾತು ಎಲ್ಲರಿಗೂ ಶಾಕ್ ನೀಡಿದೆ. ಜಾನ್ವಿ ಕಪೂರ್ ಕುಟುಂಬದ ಸದಸ್ಯರೊಬ್ಬರ ಜೊತೆ ತಾನು ಇಂಟಿಮೇಟ್ ಆಗಿದ್ದೆ ಎಂದು ಹೇಳಿ ಶಾಕ್ ನೀಡಿದರು.
ವರ್ಜಿನಿಟಿ ಕಳೆದುಕೊಂಡೆ
ಜಾನ್ವಿ ಕಪೂರ್ ಅವರು ಕರಣ್ ಜೋಹರ್‌ಗೆ, "ನಿಮ್ಮ ಬಗ್ಗೆ ಒಂದು ಸೆನ್ಸೇಶನಲ್ ಸತ್ಯ, ಒಂದು ಸುಳ್ಳನ್ನು ಹೇಳಿ. ಯಾವುದು ಸತ್ಯ, ಯಾವುದು ಸುಳ್ಳು ಅಂತ ನಾವು ಊಹಿಸುತ್ತೇವೆ" ಎಂದು ಹೇಳಿದರು. ಆಗ ಕರಣ್ ಅವರು, "ನಾನು 26ನೇ ವಯಸ್ಸಿನಲ್ಲಿ ನನ್ನ ವರ್ಜಿನಿಟಿ ಕಳೆದುಕೊಂಡೆ. ನಾನು ನಿಮ್ಮ ಕುಟುಂಬದ ಸದಸ್ಯರೊಬ್ಬರ ಜೊತೆ ಇಂಟಿಮೇಟ್ ಆಗಿದ್ದೆ" ಎಂದು ಹೇಳಿದ್ದಾರೆ. ಇದನ್ನು ಕೇಳಿ ಜಾನ್ವಿ ಕಪೂರ್ ಸರ್ಪ್ರೈಸ್ ಆಗಿದ್ದಾರೆ.
ಆ ಪಾರ್ಟಿಗೆ ತಡವಾಗಿ ಹೋಗಿದ್ದೆ
ಕರಣ್ ಅವರು, ತಾನು 26ನೇ ವಯಸ್ಸಿನಲ್ಲಿ ವರ್ಜಿನಿಟಿ ಕಳೆದುಕೊಂಡಿದ್ದು ಸತ್ಯ. ಆದರೆ ಜಾನ್ವಿ ಕುಟುಂಬದ ಸದಸ್ಯರೊಂದಿಗೆ ಇಂಟಿಮೇಟ್ ಆಗಿದ್ದು ಸುಳ್ಳು ಎಂದರು. ಕರಣ್ ಪ್ರಕಾರ, "ನಾನು ಆ ಪಾರ್ಟಿಗೆ ತಡವಾಗಿ ಹೋಗಿದ್ದೆ, ನಿಮ್ಮ ಕುಟುಂಬದ ಯಾರೊಂದಿಗೂ ಇಂಟಿಮೇಟ್ ಆಗಿಲ್ಲ. ಆದರೂ, ನನ್ನ ಮನಸ್ಸಿನಲ್ಲಿ ಅಂತಹ ಆಲೋಚನೆಗಳು ಹಲವು ಬಾರಿ ಬಂದಿವೆ” ಎಂದು ಹೇಳಿದ್ದಾರೆ.
ಕರಣ್ ಜೋಹರ್ ಅವರು, "ನನಗೆ ಫಿಸಿಕಲ್ ಚೀಟಿಂಗ್ ಡೀಲ್ ಬ್ರೇಕರ್ ಅನಿಸುವುದಿಲ್ಲ. ಕೆಲವೊಮ್ಮೆ ಶೀತ ಆಗುತ್ತದೆ" ಎಂದು ಮತ್ತೆ ಹೇಳಿದರು.
ಸಿನಿಮಾ ರಿಲೀಸ್ ಯಾವಾಗ?
ಜಾನ್ವಿ ಕಪೂರ್ ಕೊನೆಯದಾಗಿ ವರುಣ್ ಧವನ್ ಜೊತೆ 'ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ'ಯಲ್ಲಿ ಕಾಣಿಸಿಕೊಂಡಿದ್ದರು. ರಾಮ್ ಚರಣ್ ತೇಜ ಜೊತೆ 'ಪೆಡ್ಡಿ' ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾವು 2026ರಲ್ಲಿ ಬಿಡುಗಡೆಯಾಗಲಿದೆ. ಕರಣ್ ಜೋಹರ್ ನಿರ್ಮಾಪಕರಾಗಿ 'ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ' ನಂತರ 'ತೂ ಮೇರಿ ಮೈ ತೇರಾ, ಮೈ ತೇರಾ ತೋ ಮೇರಿ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದಾರೆ.