'ನಾನಿವತ್ತು ಕ್ರಿಕೆಟ್ ಪಿಚ್‌ ಥರ ಕಾಣ್ತಿಲ್ವಾ? ಎಂದ Janhvi Kapoor, 'ಡಬ್ಬಲ್‌ ಮೀನಿಂಗು ಮೇಡಮ್‌..' ಅನ್ನೋದಾ ನೆಟ್ಟಿಗರು!

ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಹಾಗೂ ರಾಜ್‌ಕುಮಾರ್‌ ರಾವ್‌ ಅಭಿನಯದ ಮಿಸ್ಟರ್‌ & ಮಿಸೆಸ್‌ ಮಾಹಿ ಸಿನಿಮಾದ ಪ್ರಮೋಷನ್‌ ಜೋರಾಗಿ ನಡೆಯುತ್ತಿದೆ. ಶುಕ್ರವಾರ ಈ ಸಿನಿಮಾ ತೆರೆಗೆ ಬರಲಿದೆ.

Janhvi Kapoor Green Saree Look says Cricket Pitch Fans Reaction san

ಟಿ ಜಾಹ್ನವಿ ಕಪೂರ್‌ ಫುಲ್‌ ಬ್ಯುಸಿಯಾಗಿದ್ದಾರೆ. ಅವರ ನಟನೆಯ ಮಿಸ್ಟರ್‌ & ಮಿಸೆಸ್‌ ಮಾಹಿ ಇದೇ ವಾರ ಅಂದರೆ, ಮೇ 31ಕ್ಕೆ ಬಿಡುಗಡೆಯಾಗಲು ಸಿದ್ಧವಾಗಿದೆ. ಈ ಸಿನಿಮಾದಲ್ಲಿ ರಾಜ್‌ಕುಮಾರ್‌ ರಾವ್‌, ಜಾಹ್ನವಿಗೆ ಜೋಡಿಯಾಗಿದ್ದಾರೆ. ಇನ್ನು ಜಾಹ್ನವಿ ಕೂಡ ಬಹಳ ವಿಶಿಷ್ಟವಾಗಿ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಕ್ರಿಕೆಟ್‌ನ ಸ್ಟೈಲ್‌ಗೆ ಅನುಗುಣವಾಗುವಂತೆ ಅವರು ತಮ್ಮ ವಸ್ತ್ರವಿನ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ಕ್ರಿಕೆಟ್‌ ಟ್ರೆಂಡ್‌ನ ಕಸ್ಟಮ್‌ ಡ್ರೆಸ್‌ನಲ್ಲಿ ಮಿಂಚಿದ್ದರು. ಕ್ರಿಕೆಟ್‌ ಚೆಂಡಿನಂತೆ ಅವರು ಮಾಡಿಕೊಂಡಿದ್ದ ಡ್ರೆಸಿಂಗ್‌ ಸಾಕಷ್ಟು ವೈರಲ್‌ ಕೂಡ ಆಗಿತ್ತು. ಚುನಾವಣೆಯ ವೇಳೆ ಮಿಸ್ಟರ್‌ & ಮಿಸೆಸ್‌ ಮಾಹಿ ಸಿನಿಮಾದ ಹಾಡಿನ ಸಾಲುಗಳನ್ನು ಪ್ರಿಂಟ್‌ ಮಾಡಲಾಗಿದ್ದ ಡ್ರೆಸ್‌ನಲ್ಲಿ ಅವರು ಮಿಂಚಿದ್ದರು. ಇತ್ತೀಚೆಗೆ ಅವರು ಫ್ಯಾಶನಿಷ್ಟ್‌  ಮನೀಷ್ ಮಲ್ಹೋತ್ರಾ ಅವರ ಸೀಕ್ವಿನ್ ಗ್ರೀನ್ ಕಸ್ಟಮ್ ಸೀರೆಯಲ್ಲಿ ಮಿಂಚಿದ್ದರು. ಅವರ ಮೆಥಡ್‌ ಡ್ರೆಸಿಂಗ್‌ಗೆ ಈ ಬಾರಿಯೂ ಪಾಪರಾಜಿಗಳು ಮುಗಿಬಿದ್ದಿದ್ದರು. ಎಂದಿನಂತೆ ಅವರು ಮೇಡಮ್‌ ಈ ಸೀರೆಯ ವಿಶೇಷತೆ ಏನು ಅಂತಾ ಪ್ರಶ್ನೆ ಮಾಡಿದ್ದಾರೆ.

ನಿಮಗೆ ಗೊತ್ತಾಯ್ತಾ ಇವತ್ತು ನಾನು ಹಾಕಿರೋ ಡ್ರೆಸ್‌ ಏನು ಅಂತಾ ಎಂದೂ ಅವರೂ ಕೂಡ ಕ್ಯಾಮೆರಾಮೆನ್‌ಗಳಿಗೆ ಪ್ರಶ್ನೆ ಮಾಡಿದ್ದಾರೆ. ಬಳಿಕ ಉತ್ತರಿಸುತ್ತಾ, ಇದು ಕ್ರಿಕೆಟ್‌ ಪಿಚ್‌ ಅನ್ನೋದು ನಿಮಗೆ ಗೊತ್ತಾಯ್ತಾ ಎಂದು ಹೇಳಿದ್ದಾರೆ.  ಆ ಬಳಿಕ ತಮ್ಮ ಬ್ಲೌಸ್‌ ಅಂಚುಗಳನ್ನು ತೋರಿಸುತ್ತಾ ಇದು ಕ್ರೀಸ್‌ಲೈನ್‌ ಎಂದು ಹೇಳಿದ್ದಾರೆ. ಇದನ್ನು ಇನ್ಸ್‌ಟಂಟ್‌ ಬಾಲಿವುಡ್‌ ಇನ್ಸ್‌ಟಾಗ್ರಾಮ್‌ ಪೇಜ್‌  ಅಪ್‌ಲೋಡ್‌ ಮಾಡಿದ್ದು, ಇದನ್ನು ನೋಡಿದ ಹೆಚ್ಚಿನವರು , ಅಯ್ಯೋ.. ಡಬ್ಬಲ್‌ ಮೀನಿಂಗು ಮೇಡಮ್‌..' ಎಂದು ಕಾಮೆಂಟ್‌ ಮಾಡಿದ್ದಾರೆ.

ಇನ್ನು ಈ ವಿಡಿಯೋಗೆ ಸಾಕಷ್ಟು ಮಂದಿ ಕ್ರಿಕೆಟ್‌ ರೀತಿಯಲ್ಲೇ ಕಾಮೆಂಟ್‌ ಮಾಡಿದ್ದಾರೆ, 'ನಾನು ಓಪನಿಂಗ್‌ ಮಾಡ್ತೇನೆ..' ಎಂದು ಒಬ್ಬರು ಬರೆದಿದ್ದಾರೆ. 'ನಾನು ಸ್ಟ್ರೈಕ್‌ ತಗೋತೇನೆ, ನಾನ್‌ ಸ್ಟ್ರೈಕ್‌ನಲ್ಲಿ ನಾನು ಇರ್ತೆನೆ. 10 ಓವರ್‌ ನೀನು ಆಡು, 10 ಓವರ್‌ ನಾನು ಆಡ್ತೇನೆ, ಪವರ್ ಪ್ಲೇಯಲ್ಲಿ ಇಬ್ಬರೂ ಆಟವಾಡೋಣ ಎಂದು ಕಾಮೆಂಟ್‌ ಮಾಡಿದ್ದಾರೆ.

ವೋಟಿಂಗ್​ ದಿನವೂ ಚಿತ್ರದ ಪ್ರಮೋಷನ್​: ಜಾಹ್ನವಿ ಡ್ರೆಸ್​ನಲ್ಲೇ ಸಿನಿಮಾ ಹಾಡು!

ನೀವೇನೆ ಮಾಡ್ಕೊಳ್ಳಿ ವಿಕೆಟ್‌ ಕೀಪಿಂಗ್‌ ಅಂತೂ ನಾನ್‌ ಮಾಡ್ತೇನೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಬ್ಯಾಟಿಂಗ್‌ಗೆ ವಿರಾಟ್‌ ಅಥವಾ ಫಾಪ್‌ ಯಾರ್‌ ಬಂದ್ರೆ ಒಳ್ಳೇದು ಎಂದು ಪ್ರಶ್ನೆ ಮಾಡಿದ್ದಾರೆ. 'ನೀವು ನಮ್ಮ ಜನರಿಗೆ ಬಹಳ ಅಮಾಯಕರ ರೀತಿ ಕಾಣ್ತಿದ್ದೀರಿ..' ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. ತುಂಬಾ ಹಸಿರು ತುಂಬಿದ ಪಿಚ್‌ ರೀತಿ ಕಾಣ್ತಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ. ಈ ಪಿಚ್‌ನಲ್ಲಿ ಒಂದು ಮ್ಯಾಚ್‌ ಆಡಿದ್ರೆ ಹೇಗೆ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಬೆನ್ನ ಹಿಂದೆ ಬಾಲ್ ತೋರಿಸಿದ ಜಾಹ್ನವಿ ಕಪೂರ್, ಥೂ ನೆಟ್ಟಿಗರು ಹಿಂಗಾ ಕಮೆಂಟ್ ಮಾಡೋದು?

 

Latest Videos
Follow Us:
Download App:
  • android
  • ios