MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಸ್ಟಾರ್‌ ಕಿಡ್‌ ಆಗಿದ್ದರೂ ಕರಣ್ ಜೋಹರ್ ಬಾಲ್ಯದಲ್ಲಿ ಯಾಕೆ ಇಂಥ ಅವ್ಯವಸ್ಥೆ ಎದುರಿಸಬೇಕಾಯಿತು?

ಸ್ಟಾರ್‌ ಕಿಡ್‌ ಆಗಿದ್ದರೂ ಕರಣ್ ಜೋಹರ್ ಬಾಲ್ಯದಲ್ಲಿ ಯಾಕೆ ಇಂಥ ಅವ್ಯವಸ್ಥೆ ಎದುರಿಸಬೇಕಾಯಿತು?

ಬಾಲಿವುಡ್ ನಿರ್ದೇಶಕ-ನಿರ್ಮಾಪಕ ಕರಣ್ ಜೋಹರ್ (Karan Johar) ತಮ್ಮ ಚಾಟ್ ಶೋ ಕಾಫಿ ವಿತ್ ಕರಣ್ 7(Koffee With Karan)  ನೊಂದಿಗೆ ಪುನರಾಗಮನ ಮಾಡುತ್ತಿದ್ದಾರೆ. ಅವರ ಕಾರ್ಯಕ್ರಮ ಜುಲೈ 7 ರಿಂದ ಡಿಸ್ನಿಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗಲಿದೆ. ಇತ್ತೀಚೆಗಷ್ಟೇ ಕಾರ್ಯಕ್ರಮಕ್ಕೆ ಸಂಬಂಧಿಸಿದ ಕೆಲವು ಪ್ರೋಮೋಗಳೂ ಬಹಿರಂಗಗೊಂಡಿವೆ. ಈ ಪ್ರೋಮೋಗಳನ್ನು ನೋಡಿದಾಗ, ಅವರ ಕಾರ್ಯಕ್ರಮದ ಮೊದಲ ಅತಿಥಿಗಳು ರಣವೀರ್ಸಿಂಗ್ (Ranveer Singh)  ಮತ್ತು ಆಲಿಯಾ ಭಟ್ (Alia Bhatt)  ಎಂದು ಹೇಳಲಾಗುತ್ತಿದೆ, ಏಕೆಂದರೆ ಇಬ್ಬರೂ ಅವರ ಮುಂಬರುವ ಚಿತ್ರ ರಾಕಿ ಔರ್‌ ರಾಣಿ ಕಿ ಪ್ರೇಮ್‌ ಕಹಾನಿ ಕಾಣಿಸಿಕೊಳ್ಳಲಿದ್ದಾರೆ . ಸುಮಾರು 1450 ಕೋಟಿ ಆಸ್ತಿ ಹೊಂದಿರುವ 50 ವರ್ಷದ ಕರಣ್ ಅವರು ತಮ್ಮ ಚಿತ್ರದಲ್ಲಿ ಅವಕಾಶ ನೀಡುವ ಮೂಲಕ ಅನೇಕ ಹೊಸಬರಿಗೆ ವೃತ್ತಿಜೀವನವನ್ನು ಮಾಡಲು ಅವಕಾಶ ನೀಡಿದ್ದಾರೆ. ಹಲವು ಸ್ಟಾರ್ ಕಿಡ್ ಗಳ ಕೈ ಹಿಡಿದು ಅವರಿಗೆ ಹೊಸ ದಾರಿ ತೋರಿದ ಅವರು ತಾವೇ ಸ್ಟಾರ್ ಕಿಡ್ ಆಗಿದ್ದರೂ ಬಾಲ್ಯದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದಾರೆ. ಕರಣ್ ಜೋಹರ್ ಜೀವನಕ್ಕೆ ಸಂಬಂಧಿಸಿದ ಭಯಾನಕ ಸತ್ಯಗಳು ಇಲ್ಲಿವೆ.

2 Min read
Author : Rashmi Rao
Published : Jul 07 2022, 06:19 PM IST
Share this Photo Gallery
  • FB
  • TW
  • Linkdin
  • Whatsapp
110

ಕರಣ್ ಜೋಹರ್ ಚಿತ್ರರಂಗದ ಖ್ಯಾತ ನಿರ್ದೇಶಕ ಯಶ್ ಜೋಹರ್ ಅವರ ಮಗ. ಚಿಕ್ಕ ವಯಸ್ಸಿನಲ್ಲೇ ತಂದೆಯೊಂದಿಗೆ ಸಿನಿಮಾ ಸೆಟ್‌ಗೆ ಹೋಗಲು ಆರಂಭಿಸಿದ್ದರು. ಅವರು ಕುಚ್ ಕುಚ್ ಹೋತಾ ಹೈ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಅವರ ಮೊದಲ ಚಿತ್ರ ಬ್ಲಾಕ್ ಬಸ್ಟರ್ ಎಂದು ಸಾಬೀತಾಯಿತು.

210

ಕೆಲವು ವರ್ಷಗಳ ಹಿಂದೆ, ಕರಣ್ ಜೋಹರ್ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಬಾಲ್ಯದಲ್ಲಿ ಅವರ ಧ್ವನಿ ಮತ್ತು ಚಲನವಲನಗಳನ್ನು ಗೇಲಿ ಮಾಡುತ್ತಿದ್ದರು. ಇದರಿಂದಾಗಿ ಅವರು ಮನೆಯಿಂದ ಹೊರಗೆ ಹೋಗಲು ಹೆದರುತ್ತಿದ್ದರು ಎಂದು ಅವರು ಹೇಳಿದ್ದರು. 

310

ಅವರ ಧ್ವನಿ ಹುಡುಗಿಯರ ಧ್ವನಿಯಂತಿದೆ ಎಂದು ಅವರೇ ಹೇಳಿದ್ದಾರೆ. ಶಾಲೆಯಿಂದ ಹಿಡಿದು ಮನೆಯಿಂದ ಹೊರಗೆ ಆಟವಾಡುವವರೆಗೆ ಮಕ್ಕಳು ಗೇಲಿ ಮಾಡುವುದರಿಂದ ಬೇಸರಗೊಳ್ಳುತ್ತಿದ್ದೆ ಎಂದು ಕರಣ್ ಜೋಹರ್ ಹೇಳಿದ್ದರು.

410

ನಂತರ ಕುಟುಂಬ ಸದಸ್ಯರಿಗೆ ಸುಳ್ಳು ಹೇಳಿ ತನ್ನ ಧ್ವನಿಗೆ ಚಿಕಿತ್ಸೆಗಾಗಿ ವೈದ್ಯರ ಬಳಿ ಹೋಗಲಾರಂಭಿಸಿದರು. ಅವರು ಸುಮಾರು 3 ವರ್ಷಗಳ ಕಾಲ ತರಬೇತಿ ಪಡೆದರು, ಇದು ಅವರಿಗೆ ತುಂಬಾ ನೋವಿನ ವಿಷಯವಾಗಿತ್ತು. 

510

ಆದರೆ ಇಂದು  ಬಾಲಿವುಡ್‌ಗೆ ಬರುವ ಪ್ರತಿಯೊಬ್ಬ ನಟನೂ ಕರಣ್  ಜೋಹರ್‌ ತನ್ನ ಪ್ರೊಡಕ್ಷನ್ ಹೌಸ್‌ನ ಬ್ಯಾನರ್ ಅಡಿಯಲ್ಲಿ ಲಾಂಚ್‌ ಮಾಡಬೇಕೆಂದು ಬಯಸುತ್ತಾನೆ.

610
Image: PR Agency

Image: PR Agency

ಕರಣ್ ಜೋಹರ್ ಒಂದು ಚಿತ್ರವನ್ನು ನಿರ್ದೇಶಿಸಲು ಸುಮಾರು 2 ರಿಂದ 3 ಕೋಟಿ ಚಾರ್ಜ್ ಮಾಡುತ್ತಾರೆ. ಮಾಧ್ಯಮ ವರದಿಗಳ ಪ್ರಕಾರ, ಅವರು ತಿಂಗಳಿಗೆ 10 ಕೋಟಿ ಮತ್ತು ಒಂದು ವರ್ಷದಲ್ಲಿ ಸುಮಾರು 100 ಕೋಟಿ ಗಳಿಸುತ್ತಾರೆ.

710

ಕರಣ್ ಜೋಹರ್ ಅವರು 2010 ರಲ್ಲಿ  ಮುಂಬೈನ ಕಾರ್ಟರ್ ರಸ್ತೆಯಲ್ಲಿ ಐಷಾರಾಮಿ ಸಮುದ್ರಕ್ಕೆ ಎದುರಾಗಿರುವ ಡ್ಯುಪ್ಲೆಕ್ಸ್ ಹೌಸ್‌ ಖರೀದಿಸಿದ್ದಾರೆ. 8000 ಚದರ ಅಡಿಗಳಷ್ಟು ವಿಸ್ತಾರವಾಗಿರುವ ಈ ಡ್ಯೂಪ್ಲೆಕ್ಸ್‌ನ ಬೆಲೆ ಸುಮಾರು 32 ಕೋಟಿ ರೂ. 

810

ಇದಲ್ಲದೇ ಮಲಬಾರ್ ಹಿಲ್ ನಲ್ಲಿ ಸುಮಾರು 20 ಕೋಟಿ ಮೌಲ್ಯದ ಮನೆಯೂ ಇದೆ. ಕರಣ್ ಜೋಹರ್ ಅವರ ಗ್ಯಾರೇಜ್‌ನಲ್ಲಿ ಹಲವು ಐಷಾರಾಮಿ ಕಾರುಗಳನ್ನು ನಿಲ್ಲಿಸಲಾಗಿದೆ. ಅವರ ಈ ಕಾರುಗಳ ಬೆಲೆ ಕೋಟಿಗಟ್ಟಲೆ.
 

910

2017 ರಲ್ಲಿ, ಕರಣ್ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳ ತಂದೆಯಾದರು, ಅವರ ಹೆಸರು ಯಶ್ ಮತ್ತು ರೂಹಿ. ಸಿಂಗಲ್‌ ಫಾದರ್‌ ಕರಣ್‌ ಜೋಹರ್‌ ತಮ್ಮ ಮಕ್ಕಳನ್ನು ಸಾಕುತ್ತಿದ್ದಾರೆ.

1010

ಅವರ ಚಿತ್ರಗಳಾದ ರಾಕಿ ಔರ್‌ ರಾಣಿ ಕಿ ಪ್ರೇಮ್‌ಕಹಾನಿ, ಬ್ರಹ್ಮಾಸ್ತ್ರ, ಲಿಗರ್, ಗೋವಿಂದ ಮೇರಾ ನಾಮ್, ಯೋದ್ಧ, ದೋಸ್ತಾನಾ 2 ಮತ್ತು ಬೇಹಡಕ್ ಮುಂಬರುವ ಸಮಯದಲ್ಲಿ ಬಿಡುಗಡೆಯಾಗಲಿವೆ. ಈ ಪೈಕಿ ಹಲವು ಚಿತ್ರಗಳ ಚಿತ್ರೀಕರಣ ಇನ್ನೂ ನಡೆಯುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

RR
Rashmi Rao
ಕರಣ್ ಜೋಹರ್

Latest Videos
Recommended Stories
Recommended image1
ತೆರೆ ಮೇಲೆ ಮುದ್ದಾದ ಸಂಸಾರ, ರಿಯಲ್‌ ಆಗಿ ಮದುವೆಗೂ ಮುನ್ನವೇ ಸಹಜೀವನ: ಲಿವ್‌ ಇನ್‌ನಲ್ಲಿದ್ದ ಸೆಲೆಬ್ರಿಟಿಗಳು
Recommended image2
ದಿ ಕೇರಳ ಸ್ಟೋರಿ 2 ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ
Recommended image3
ಬೇರೆಯವರ ಪತಿಯ ಮೇಲೆ ಬಿತ್ತು ಈ ಸ್ಟಾರ್​ ನಟಿಯರ ಕಣ್ಣು: ಟಾಪ್​ ಲಿಸ್ಟ್​ನಲ್ಲಿ ಯಾರಿದ್ದಾರೆ ನೋಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved