ಎಲ್ಲ ಕಳ್ಕೊಂಡು ಒಂಟಿಯಾಗಿರೋ ಶಕೀಲಾ ಕನ್ನಡದ ನಂತರ ತೆಲಗು ಬಿಗ್ ಬಾಸ್ ಸ್ಪರ್ಧಿ!
ಕನ್ನಡ ಬಿಗ್ ಬಾಸ್ ಸೀಸನ್ 2ರಲ್ಲಿ ಮಿಂಚಿದ್ದ ದಕ್ಷಿಣ ಭಾರತದ ನಟಿ ಶಕೀಲಾ ಇದೀಗ ಮತ್ತೆ ಬಿಗ್ ಬಾಸ್ ಮೂಲಕ ಸದ್ದು ಮಾಡ್ತಿದ್ದಾರೆ. ಈ ಬಾರಿ ಕನ್ನಡ ಬಿಗ್ ಬಾಸ್ ಅಲ್ಲ, ಬದಲಾಗಿ ತೆಲುಗು ಬುಗ್ ಬಾಸ್.
ಕನ್ನಡದಲ್ಲಿ ಬಿಗ್ ಬಾಸ್ (Kannada Bigg Boss) ಆರಂಭವಾಗುವ ಸೂಚನೆ ಸಿಕ್ಕಿದೆ. ಯಾರ್ಯಾರು ಸ್ಪರ್ಧಿಗಳಾಗಬಹುದು ಎನ್ನುವ ಕುತೂಹಲ, ಜೊತೆಗೆ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯೂ ಈಗಾಗಲೇ ಬಿಡುಗಡೆಯಾಗಿದೆ. ಇದೀಗ ಮಲಯಾಲಂನ ಬಿ ಗ್ರೇಡ್ ಸಿನಿಮಾಗಳ ಮೂಲಕ ಖ್ಯಾತರಾಗಿದ್ದ ನಟಿ ಶಕೀಲಾ ಬಿಗ್ ಬಾಸ್ ಗೆ ಎಂಟ್ರಿಯಾಗಿದ್ದಾರಂತೆ.
ಏನು ಶಕೀಲಾ (Shakeela) ಬಿಗ್ ಬಾಸ್ ಗೆ ಬಂದಿದ್ದಾರಾ? ಅವರು ಈಗಾಗಲೇ ಕನ್ನಡ ಬಿಗ್ ಬಾಸ್ ಸೀಸನ್ 2ರಲ್ಲಿ ಭಾಗವಹಿಸಿದ್ರಲ್ವಾ? ಎಂದು ನೀವು ಕೇಳಬಹುದು. ಆದರೆ ಅವರು ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದು ನಿಜ, ಆದರೆ ಈ ಬಾರಿ ತೆಲುಗು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಮಲಯಾಲಂ ಚಿತ್ರರಂಗದಲ್ಲಿ (Malayalam Actress) ಒಂದು ಕಾಲದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡವರು ಶಕೀಲಾ. ವಯಸ್ಕರ ಸಿನಿಮಾ (Adult Movie) ಮೂಲಕ ಸಖತ್ ಜನಪ್ರಿಯತೆ ಪಡೆದಿದ್ದರು. ಆದರೆ ನಂತರ ಮಲಯಾಳಂ ಚಿತ್ರರಂಗದಿಂದಲೇ ದೂರವಿದ್ದು, ಸದ್ಯ ಕಳೆದ ಹಲವು ವರ್ಷಗಳಿಂದ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ವಿವಿಧ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ.
ಇದೀಗ ಶಕೀಲಾ ತೆಲುಗು ಬಿಗ್ ಬಾಸ್ ಗೆ (Telugu Bigg Boss) ಎಂಟ್ರಿ ಕೊಟ್ಟಿದ್ದಾರೆ. ನಟ ನಾಗಾರ್ಜುನ್ ನಡೆಸಿಕೊಡುವ ಬಿಗ್ ಬಾಸ್ ತೆಲುಗು ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಶಕೀಲಾ ಭಾಗವಹಿಸಿದ್ದಾರೆ. ತೆಲುಗು ಬಿಗ್ ಬಾಸ್ ನಟಿಗೆ ಜನಪ್ರಿಯತೆ ಕೊಡುವುದೇ ಅನ್ನೋದನ್ನು ಕಾದು ನೋಡಬೇಕು.
2014ರಲ್ಲಿ 'ಬಿಗ್ ಬಾಸ್ ಕನ್ನಡ' ಸೀಸನ್ 2 ರಲ್ಲಿ ಶಕೀಲಾ ಸ್ಪರ್ಧಿಯಾಗಿ ಆಗಮಿಸಿದ್ದರು. ಆ ಸಂದರ್ಭದಲ್ಲಿ ಅಕುಲ್ ಬಾಲಾಜಿ, ಸೃಜನ್ ಲೋಕೇಶ್ ಮೊದಲಾದವರ ಜೊತೆ ಸ್ಪರ್ಧಿಸಿದ್ದರು. ಆದರೆ 27ನೇ ದಿನಕ್ಕೆ ಶಕೀಲಾ ಮನೆಯಿಂದ ಆಚೆ ಬಂದಿದ್ದರು. ತೆಲುಗು ಬಿಗ್ ಬಾಸ್ ನಲ್ಲಿ ಇನ್ನೆಷ್ಟು ದಿನ ಉಳಿಯಲಿದ್ದಾರೆ ನೋಡಬೇಕು.
ಶಕೀಲಾ ರಿಯಲ್ ಲೈಫ್ ಬಗ್ಗೆ ಹೇಳೋದಾದರೆ, ಸಿನಿಮಾರಂಗದಲ್ಲಿ ಜನಪ್ರಿಯತೆ, ನೇಮ್, ಫೇಮ್ ಎಲ್ಲಾ ಪಡೆದಿದ್ದ ನಟಿ ರಿಯಲ್ ಲೈಫಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದರು. ಬಂಧು, ಬಳಗ, ಸ್ನೇಹಿತರು ಎಲ್ಲರೂ ಆಕೆಯನ್ನು ದೂರ ಮಾಡಿದರಂತೆ. ಇದೀಗ ಮದುವೆಯಾಗದೆ ಒಬ್ಬಂಟಿಯಾಗಿ ಬದುಕು ಸಾಗಿಸುತ್ತಿದ್ದಾರೆ ನಟಿ.
ನನ್ನ ಜೀವನಕ್ಕೆ ನಾನೇ ಪಿಲ್ಲರ್ ಎನ್ನುವ ಶಕೀಲಾ. 10ನೇ ತರಗತಿ ಫೇಲ್ ಆಗಿ, ಅಂದಿನಿಂದಲೇ ದುಡಿಯಲು ಪ್ರಾರಂಭಿಸಿದರಂತೆ. ಯಾರ ಬಳಿಯೂ ಸಹಾಯಕ್ಕೆ ಇದುವರೆಗೆ ಕೈಚಾಚಿಲ್ಲವಂತೆ. ನೂರಾರು ಸಿನಿಮಾ ಮಾಡಿದರೂ ಸದ್ಯ ಹೆಚ್ಚು ಹಣ ಕೈಯಲಿಲ್ಲ, ಬಂಗಲೆಯೂ ಇಲ್ಲದೇ ಚಿಕ್ಕ ಮನೆಯಲ್ಲಿ ಒಬ್ಬಂಟಿಯಾಗಿ ಕಾಲ ಕಳೆಯುತ್ತಾರೆ ಶಕೀಲಾ. ನನ್ನ ಬದುಕಿಗೆ ನಾನೇ ರಾಣಿ ಎನ್ನುತ್ತಾರೆ.
ಮಲಯಾಲಂ ಚಿತ್ರರಂಗದಲ್ಲಿ ತುಂಬಾನೆ ಜನಪ್ರಿಯತೆ ಪಡೆದಿದ್ದ ನಟಿ ಕೊನೆಗೆ ರಾಜಕೀಯ ಸಂಚಿಗೆ ಬಲಿಯಾಗಬೇಕಾಯಿತು. ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದ ನಟಿಯ ಚಿತ್ರಗಳನ್ನೇ ಕೆಲವರು ತಡೆಯುವಂತೆ ಮಾಡಿದರಂತೆ. ಈಕೆಯ 40 ಚಿತ್ರಗಳಿಗೆ ಸೆನ್ಸಾರ್ (sensor) ಸರ್ಟಿಫಿಕೇಟ್ ಆಗಲೇ ಇಲ್ಲವಂತೆ. ತನ್ನಿಂದಾಗಿ ತನ್ನನ್ನು ನಂಬಿದ ನಿರ್ಮಾಪಕರಿಗೆ ನಷ್ಟವಾಗಬಾರದೆಂದು ಮಲಯಾಳಂ ಸಿನಿಮಾವನ್ನೆ ಬಿಟ್ಟು ಬಂದರು ಶಕೀಲಾ.
ತಾವು ಮಾಡುತ್ತಿದ್ದ ವಯಸ್ಕರ ಅಥವಾ ಬೀಗ್ರೇಡ್ ಸಿನಿಮಾಗಳ (B grade cinema) ಬಗ್ಗೆ ಶಕೀಲಾ ಯಾವತ್ತೂ ರಿಗ್ರೆಟ್ ಮಾಡಿಕೊಂಡಿಲ್ಲ. ಶಕೀಲಾ ಯಾರೂ ಅಂತ ಗೊತ್ತಾಗಿದ್ದೇ ಆ ರೀತಿಯ ಸಿನಿಮಾಗಳ ಮೂಲಕ. ಇಂದು ಎಲ್ಲರೂ ನನ್ನನ್ನು ಗುರುತಿಸುತ್ತಾರೆ, ಸಂದರ್ಶನ ಮಾಡುತ್ತಾರೆ, ನನ್ನ ಬಗ್ಗೆ ಬರೆಯುತ್ತಾರೆ ಅಂದರೆ ಅದೇ ಸಿನಿಮಾ ಕಾರಣ. ಹೀಗಾಗಿ ನನಗೆ ಆ ಸಿನಿಮಾಗಳ ಬಗ್ಗೆ ಯಾವ ರಿಗ್ರೆಟ್ ಇಲ್ಲ ಎಂದು ಮನಸಾರೆ ಒಪ್ಪಿಕೊಳ್ತಾರೆ ಶಕೀಲಾ.