ರಾತ್ರೋ ರಾತ್ರಿ ಶಕೀಲಾ ಮೃತಪಟ್ಟಿದ್ದಾರೆ, ಆಕೆಯ ಅನಾರೋಗ್ಯವೇ ಸಾವಿಗೆ ಕಾರಣ ಅಂತೆಲ್ಲ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡತೊಡಗಿದವರು. ಬಹಳ ಮಂದಿ ಶಕೀಲಾ ಸಾವಿಗೆ ಸಂತಾಪ ಸೂಚಿಸಿದರು. ಶಕೀಲಾ ಅವರ ಮನೆಗೆ ಸಾಕಷ್ಟು ಪೋನ್ ಕರೆಗಳು ಬರಲಾರಂಭಿಸಿದವು.
ಶಕೀಲಾ!
ಹೀಗಂದ್ರೆ ಇವತ್ತಿಗೂ ಎಲ್ಲ ವಯಸ್ಸಿನ ಗಂಡಸರ ಕಿವಿ ನೆಟ್ಟಗಾಗುತ್ತದೆ. ಒಂದು ಕಾಲದಲ್ಲಿ ಎಲ್ಲ ವಯಸ್ಸಿನ ಗಂಡಸರ ನಿದ್ದೆಗೆಡಿಸಿದ್ದರು ಶಕೀಲಾ. ಆದರೆ ಕೆಲವು ದಿನಗಳ ಹಿಂದೆ ಶಕೀಲಾ ಇನ್ನಿಲ್ಲ ಅನ್ನೋ ಸುದ್ದಿ ವಾಯವೇಗದಲ್ಲಿ ಹಬ್ಬಿತು. ಮನಸ್ಸಲ್ಲೇ ಶಕೀಲಾ ಅವರನ್ನು ಆರಾಧಿಸುತ್ತಿದ್ದವರು, ಅವರ ಸಿನಿಮಾಗಳನ್ನು ಕದ್ದು ಮುಚ್ಚಿ ನೋಡುತ್ತಿದ್ದವರು ಎಲ್ಲರಿಗೂ ಒಳಗೊಳಗೇ ಬೇಸರ, ನೋವು. ಮಲಯಾಳಂ ಚಿತ್ರರಂಗದ ಜನರೂ ಈ ಸುದ್ದಿಯಿಂದ ವಿಚಲಿತರಾದರು. ಇದಕ್ಕೆ ಕಾರಣವಿದೆ. ಒಂದು ಕಾಲದಲ್ಲಿ ಬೀದಿಗೆ ಬೀಳುವ ಸ್ಥಿತಿಯಲ್ಲಿದ್ದ ನಿರ್ದೇಶನರನ್ನು ತನ್ನ ಒಂದೇ ಸಿನಿಮಾದ ಮೂಲಕ ಕೋಟ್ಯಾಧಿಪತಿಯಾಗುವಂತೆ ಮಾಡಿದವರು ಶಕೀಲಾ. ಅವರ ಅಂದಿನ ಚಿತ್ರಗಳು ಸ್ಟಾರ್ ಸಿನಿಮಾವನ್ನೂ ಹಿಂದಿಕ್ಕಿ ಕೋಟಿ ಕೋಟಿ ಕಲೆಕ್ಷನ್ ಮಾಡಿದ್ದು ಮಲಯಾಳಂ ಚಿತ್ರರಂಗದ ಮೆಮೊರಿಯಿಂದ ಡಿಲೀಟ್ ಆಗಿಲ್ಲ. ಅಷ್ಟು ಬೇಗ ಅದೆಲ್ಲ ಮರೆಯಾಗೋದೂ ಇಲ್ಲ.
ಆದರೆ ಶಕೀಲಾಗೆ ಇದ್ದ ವಿರೋಧಿಗಳೇನೂ ಕಡಿಮೆ ಸಂಖ್ಯೆಯವರಲ್ಲ. ಆಕೆಯ ಯಶಸ್ಸೇ ಆಕೆಯ ಶತ್ರುಗಳ, ಹಿತ ಶತ್ರುಗಳ ಸಂಖ್ಯೆ ಹೆಚ್ಚುವಂತೆ ಮಾಡಿತು. ಇದೀಗ ಆಕೆ ಇಂಥಾ ಸಿನಿಮಾಗಳಿಂದ ಆಚೆ ಬಂದಿದ್ದರೂ ಅವರ ಶತ್ರುತ್ವ ಕಡಿಮೆಯಾದ ಹಾಗಿಲ್ಲ. ಇಲ್ಲವಾದರೆ ಅವರು ಶಕೀಲಾ ಮೃತಪಟ್ಟಿದ್ದಾರೆ ಅನ್ನೋ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟು ಮಜಾ ನೋಡುತ್ತಿರಲಿಲ್ಲ.
ಕೋಟಿಗಟ್ಟಲೆ ಹಣವಿಲ್ಲ, ಬಂಗಲೆ ಇಲ್ಲ, ಚಿಕ್ಕ ಮನೆ, ಒಂಟಿ ಜೀವನ: ಲೈಫ್ ಬಗ್ಗೆ ಶಕೀಲಾ ಮಾತು
ರಾತ್ರೋ ರಾತ್ರಿ ಶಕೀಲಾ ಮೃತಪಟ್ಟಿದ್ದಾರೆ, ಆಕೆಯ ಅನಾರೋಗ್ಯವೇ ಸಾವಿಗೆ ಕಾರಣ ಅಂತೆಲ್ಲ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡತೊಡಗಿದವರು. ಬಹಳ ಮಂದಿ ಶಕೀಲಾ ಸಾವಿಗೆ ಸಂತಾಪ ಸೂಚಿಸಿದರು. ಶಕೀಲಾ ಅವರ ಮನೆಗೆ ಸಾಕಷ್ಟು ಪೋನ್ ಕರೆಗಳು ಬರಲಾರಂಭಿಸಿದವು. ಎಲ್ಲರೂ ಶಕೀಲಾ ಸಾವಿನ ಬಗ್ಗೆ ವಿಚಾರಿಸುವವರೇ. ಯಾಕೋ ಇದು ಕಂಟ್ರೋಲ್ ಮೀರುತ್ತಿದೆ ಅಂತ ಅನಿಸಿದ್ದೇ ಶಕೀಲಾ ಒಂದು ಮೆಸೇಜ್ ಹರಿಯಬಿಟ್ಟರು. 'ನಾನು ಸತ್ತಿದ್ದೇನೆ, ನನಗೆ ಅನಾರೋಗ್ಯವಿದೆ ಅನ್ನೋ ಗಾಳಿ ಸುದ್ದಿ ಹಬ್ಬಿದ್ದು, ನನ್ನ ಗಮನಕ್ಕೂ ಬಂದಿದೆ. ದಯವಿಟ್ಟು ನನ್ನ ಅಭಿಮಾನಿಗಳು ಅದನ್ನೆಲ್ಲ ನಂಬಬಾರದು. ನಾನು ಬದುಕಿದ್ದೇನೆ, ಅಷ್ಟೇ ಅಲ್ಲ, ಆರೋಗ್ಯವಾಗಿಯೂ ಇದ್ದೇನೆ. ಕೇರಳದ ಸಾಕಷ್ಟು ಜನರು ನನ್ನ ಆರೋಗ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅನೇಕರು ಫೋನ್ ಮೂಲಕ ನನ್ನ ಕ್ಷೇಮ ವಿಚಾರಿಸಿದ್ದಾರೆ. ನನ್ನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅನೇಕ ಕರೆಗಳು ಬಂದವು. ಜನರ ಈ ಪ್ರೀತಿಗೆ ನನ್ನ ಮನಸ್ಸು ತುಂಬಿ ಬಂದಿದೆ. ನಿಮ್ಮ ಕಾಳಜಿ, ಪ್ರೀತಿಗೆ ನಾನು ಎಷ್ಟು ಕೃತಜ್ಞತೆ ಅರ್ಪಿಸಿದರೂ ಕಡಿಮೆಯೇ' ಎಂದು ಶಕೀಲಾ ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

ಶಕೀಲಾ ಅವರ ಈ ಸ್ಪಷ್ಟೀಕರಣ ಅವರ ಅಭಿಮಾನಿಗಳ ಮುಖದಲ್ಲಿ ನಿರುಮ್ಮಳತೆ ತರಿಸಿದೆ. ಇಂಥಾ ಸುದ್ದಿಗಳಿಂದ ಅವರ ಆಯುಸ್ಸು ಹೆಚ್ಚುತ್ತದೆ ಎಂಬ ನಂಬಿಕೆಯಲ್ಲಿ ಜನ ಸಂದೇಶ ಹರಿಯಬಿಡುತ್ತಿದ್ದಾರೆ.
21 ಜನ ಪ್ರಿಯತಮರ ಜೊತೆ ಏನ್ ಮಾಡ್ತಿದ್ಲು ಶಕೀಲಾ?
ದನ್ನೆಲ್ಲ ಗಮನಿಸಿದರೆ ಕೇರಳ ರಾಜ್ಯದ ಅಥವಾ ದೇಶದ ಜನರಲ್ಲಿ ಶಕೀಲಾ ಅವರ ಬಗೆಗಿನ ಅಭಿಮಾನ ಇನ್ನೂ ಮಾಸಿಲ್ಲ ಎಂಬುದು ಸ್ಪಷ್ಟ. ಇಂದಿಗೂ ಅವರ ಹಳೆಯ ವಯಸ್ಕರ ಚಿತ್ರಗಳನ್ನು ನೋಡಿ ಮೈಬಿಸಿ ಹೆಚ್ಚಿಸಿಕೊಳ್ಳುವವರಿಗೇನೂ ಕಡಿಮೆಯಿಲ್ಲ. ಶಕೀಲಾ ಅವರ ಜೀವನದ ಕಥೆಯೂ ಸಿನಿಮಾವಾಗಿದೆ. ಇಂದ್ರಜಿತ್ ಲಂಕೇಶ್ ಶಕೀಲಾ ಬದುಕನ್ನಾಧರಿಸಿದ ಚಿತ್ರ ಮಾಡಿದ್ದು ಅದು ಪಾನ್ ಇಂಡಿಯಾ ಸಿನಿಮಾವಾಗಿತ್ತು. ಬಾಲಿವುಡ್ ನಟಿ ರಿಚಾ ಚಡ್ಡಾ ಈ ಚಿತ್ರದಲ್ಲಿ ಶಕೀಲಾ ಅವರ ಪಾತ್ರವನ್ನು ಮಾಡಿದ್ದರು. ಆದರೆ ಈ ಸಿನಿಮಾ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಐಎಂಡಿಬಿಯಲ್ಲಿ 10ರಲ್ಲಿ ಕೇವಲ 3.2 ರೇಟಿಂಗ್ ಪಡೆಯುವುದಕ್ಕೆ ಮಾತ್ರ ಸಾಧ್ಯವಾಯಿತು. ಮೇಕಿಂಗ್‌ನಲ್ಲಿರುವ ಇದಕ್ಕೆ ಕಾರಣಗಳು ಹಲವು ಎಂದು ಸಿನಿಮಾ ವಿಶ್ಲೇಷಕರು ಪಟ್ಟಿ ಮಾಡುತ್ತಾರೆ. ಆದರೆ ಶಕೀಲಾ ಅವರು ತಮ್ಮ ಜೀವನ ಕಥೆಯನ್ನು ಪುಸ್ತಕ ಮಾಡಿದ್ದು, ಇದು ಎಲ್ಲೆಡೆ ಸಂಚಲನ ಸೃಷ್ಟಿಸಿತ್ತು.
