ಮದುವೆಯಾದ ಪುರುಷರ ಪ್ರೇಮಜಾಲದಲ್ಲಿ ಬಿದ್ದೆದ್ದ ಬಾಲಿವುಡ್ ತಾರೆಯರಿವರು
ಪ್ರಿಯಾಂಕಾ ಚೋಪ್ರಾ ಮತ್ತು ಕಂಗನಾ ರಣಾವತ್ ಸೇರಿದಂತೆ ಏಳು ಬಾಲಿವುಡ್ ನಟಿಯರು ಮದುವೆಯಾದ ಪುರುಷ ಪ್ರೇಮಕ್ಕೆ ಮರುಳಾಗಿದ್ದರು.
ಪ್ರಿಯಾಂಕಾ ಚೋಪ್ರಾ ಮತ್ತು ಕಂಗನಾ ರಣಾವತ್ ಸೇರಿದಂತೆ ಏಳು ಬಾಲಿವುಡ್ ನಟಿಯರು ಮದುವೆಯಾದ ಪುರುಷ ಪ್ರೇಮಕ್ಕೆ ಮರುಳಾಗಿದ್ದರು.
ಶ್ರೀದೇವಿ
ಶ್ರೀದೇವಿ ಮತ್ತು ಬೋನಿ ಕಪೂರ್ ಅವರ ಲವ್ ಸ್ಟೋರಿ ಆ ಕಾಲದಲ್ಲಿ ಸಖತ್ ಸುದ್ದಿಯಾಗಿತ್ತು. ಬೋನಿ ತಮ್ಮ ಮೊದಲ ಪತ್ನಿ ಮೋನಾಗೆ ವಿಚ್ಛೇದನ ನೀಡಿ ಆಗಾಗಲೇ ಗರ್ಭಿಣಿಯಾಗಿದ್ದ ಶ್ರೀದೇವಿಯನ್ನು ಮದುವೆಯಾದರು.
ರಾಣಿ ಮುಖರ್ಜಿ
ರಾಣಿ ಮುಖರ್ಜಿ ಮತ್ತು ಆದಿತ್ಯ ಚೋಪ್ರಾ ಅವರ ಪ್ರೇಮಕಥೆ ಬಾಲಿವುಡ್‌ನಲ್ಲಿ ಎಲ್ಲರಿಗೂ ತಿಳಿದಿದೆ. ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಆದಿತ್ಯ ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡಿ ರಾಣಿಯನ್ನು ಮದುವೆಯಾದರು.
ಮಹಿಮಾ ಚೌಧರಿ
ಮಹಿಮಾ ಚೌಧರಿ ಉದ್ಯಮಿ ಬಾಬಿ ಮುಖರ್ಜಿ ಅವರೊಂದಿಗೆ ರಹಸ್ಯ ಪ್ರೇಮ ಸಂಬಂಧ ಹೊಂದಿದ್ದರು. ಅವರ ಸಂಬಂಧ ಗುಟ್ಟಾಗಿತ್ತು.
ಹೇಮಾ ಮಾಲಿನಿ
ಆಗಲೇ ಮದುವೆಯಾಗಿ ಮಕ್ಕಳಿದ್ದ ಧರ್ಮೇಂದ್ರ ಪ್ರಕಾಶ್ ಕೌರ್ ಅವರ ಪ್ರೇಮದ ಬಲೆಗೆ ಬಿದ್ದಿದ್ದರು ಬಾಲಿವುಡ್‌ನ ಕನಸಿನ ಕನ್ಯೆ ಹೇಮಾ ಮಾಲಿನಿ. ಹೇಮಾಳನ್ನು ಮದುವೆಯಾಗಲು ಧರ್ಮೇಂದ್ರ ಇಸ್ಲಾಂಗೆ ಮತಾಂತರಗೊಂಡಿದ್ದರು.
ಕಂಗನಾ ರಣಾವತ್
ಕ್ರಿಶ್ ಸಿನಿಮಾ ಸೆಟ್‌ನಲ್ಲಿ ನಟ ಹೃತಿಕ್ ರೋಷನ್ ಅವರನ್ನು ಕಂಗನಾ ರಣಾವತ್ ಪ್ರೀತಿಸುತ್ತಿದ್ದರು. ಎಂಬ ಗಾಸಿಪ್ ಹಬ್ಬಿತ್ತು. ಆದರೆ ಕಂಗನಾ ನಂತರ ಆ ಆರೋಪ ನಿರಾಕರಿಸಿದರು.
ಪ್ರಿಯಾಂಕಾ ಚೋಪ್ರಾ
ಪ್ರಿಯಾಂಕಾ ಚೋಪ್ರಾ ಮತ್ತು ಶಾರುಖ್ ಖಾನ್ ಅವರ ನಿಕಟತೆಯ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದವು. ಗೌರಿ ಖಾನ್ ಇದಕ್ಕೆ ಬ್ರೇಕ್ ಹಾಕಿದರು ಎಂಬ ಗಾಸಿಪ್‌ಗಳಿದ್ದವು.