ಕಾರಿನೊಳಗೆ ಭಯಭೀತರಾಗಿ ಕಾಣಿಸಿಕೊಂಡ ದೇವಗನ್ ಪುತ್ರಿ ನೈಸಾ
ನಟಿ ಕಾಜೋಲ್ (Kajol) ಅವರ ಪುತ್ರಿ ನೈಸಾ ದೇವಗನ್ (Nysa Devgn) ಶುಕ್ರವಾರ ರಾತ್ರಿ ಬಾಂದ್ರಾದ ಬಾಸ್ಟಿಯನ್ ರೆಸ್ಟೋರೆಂಟ್ ಹೊರಗೆ ಕಾಣಿಸಿಕೊಂಡಿದ್ದಾರೆ. ಈ ವೇಳೆ ನ್ಯಾಸಾ ಕಪ್ಪು ಬಿಳಿ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೆ, ರೆಸ್ಟೊರೆಂಟ್‌ನ ಹೊರಗೆ ಜನಸಂದಣಿಯನ್ನು ಕಂಡು ನ್ಯಾಸಾ ತುಂಬಾ ಹೊತ್ತು ಭಯದಿಂದ ತನ್ನ ಕಾರಿನಲ್ಲೇ ಕುಳಿತುಕೊಂಡಿದ್ದು ಕಂಡು ಬಂದಿದೆ. ನ್ಯಾಸಾಳ ಮುಖದಲ್ಲಿನ ಭಾವಗಳು ಅವರು ಯಾವುದೋ ಭಯದಲ್ಲಿದ್ದಾರೆ ಎಂದು ಸ್ಪಷ್ಟವಾಗಿ ಹೇಳುತ್ತಿದ್ದವು.
ಸ್ವಲ್ಪ ಸಮಯದ ನಂತರ ನ್ಯಾಸಾ ರೆಸ್ಟೋರೆಂಟ್‌ನಿಂದ ಹೊರಬಂದಾಗ, ಅಲ್ಲಿದ್ದ ಜನರು ಅವಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ವಿನಂತಿಸುತ್ತಿದ್ದರು.ರೆಸ್ಟೋರೆಂಟ್‌ನ ಹೊರಗೆ ನಿಂತಿದ್ದ ವ್ಯಕ್ತಿಯೊಬ್ಬರು ನೈಸಾ ದೇವಗನ್ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದರು. ಆದರೆ ನ್ಯಾಸಾ ತಲೆ ಬಾಗಿಸಿ ಹೊರ ನಡೆದರು.
ಈ ವೇಳೆ ನ್ಯಾಸಾ ಅವರ ಸ್ಥಿತಿ ನೋಡಿ ಅಲ್ಲಿ ಜನರು ಯಾವ ವಿಷಯದ ಬಗ್ಗೆ ಭಯಪಟ್ಟಿದ್ದರು ಎಂದು ಆಶ್ಚರ್ಯ ಪಡುತ್ತಿದ್ದಾರೆ. ಅವರ ಮುಖದಲ್ಲಿ ಒಂದು ಚೂರು ನಗು ಇರಲಿಲ್ಲ. ಜನಸಂದಣಿಯನ್ನು ಕಂಡು ನ್ಯಾಸಾ ಭಯಗೊಂಡಿರಬೇಕು ಎಂದು ಊಹಿಸಲಾಗಿದೆ.
ಡಿಸೆಂಬರ್ 28, 2021 ರ ರಾತ್ರಿ, ನೈಸಾ ದೇವಗನ್ ಮುಂಬೈನ ರೆಸ್ಟೋರೆಂಟ್‌ನ ಹೊರಗೆ ಫ್ರೆಂಡ್ ಜೊತ ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ, ಅವರ ಜೊತೆಗಿದ್ದ ವ್ಯಕ್ತಿ, ಮುಖಕ್ಕೆ ಮುಖವಾಡವನ್ನು ಮಾಸ್ಕ್ ಧರಿಸಿದ್ದ ಕಾರಣ ಗುರುತಿಸಲಾಗಲಿಲ್ಲ.
ಈ ಡಿನ್ನರ್ ಡೇಟ್ ವೇಳೆ ಕಾಜೋಲ್ ಮಗಳು ನ್ಯಾಸಾ ದೇವಗನ್ ಮಿಡಿ ಡ್ರೆಸ್ ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರು. ನ್ಯಾಸಾ ಅವರ ವಿಡಿಯೋ ನೋಡಿ ಜನ ನಾನಾ ಕಾಮೆಂಟ್ ಮಾಡಿದ್ದಾರೆ. ನ್ಯಾಸಾ ಜೊತೆ ಕಾಣಿಸಿಕೊಂಡಿದ್ದ ನಿಗೂಢ ಹುಡುಗ ಗೋವಿಂದನ ಮಗನಂತೆ ಕಾಣುತ್ತಾನೆ ಎಂದ ಒಬ್ಬರು ಹೇಳಿದ್ದರು.
ನ್ಯಾಸಾ ದೇವಗನ್ ತಂದೆ ಅಜಯ್ ದೇವಗನ್ ಅವರಿಗೆ ತುಂಬಾ ಹತ್ತಿರವಾಗಿದ್ದಾರೆ. ನ್ಯಾಸಾ ಸಿಂಗಾಪುರದಲ್ಲಿ ಓದುತ್ತಿದ್ದಾರೆ. ಓದಿನಲ್ಲಿ ಚುರುಕಾಗಿರುವ ದೇವಗನ್ ಪುತ್ರಿ ಉತ್ತಮ ಈಜುಗಾರ್ತಿಯೂ ಹೌದು. ಸಂದರ್ಶನವೊಂದರಲ್ಲಿ, ನ್ಯಾಸಾ ತುಂಬಾ ಬುದ್ಧಿವಂತೆ, ತುಂಬಾ ಯೋಚಿಸುತ್ತಾಳೆ ಮತ್ತು ವಿಷಯಗಳನ್ನು ವಿಶ್ಲೇಷಿಸುತ್ತಾಳೆ ಎಂದು ಅಜಯ್ ಹೇಳಿದ್ದರು. ಅಜಯ್ ದೇವಗನ್ ಆಗಾಗ್ಗೆ ತನ್ನ ಮಗಳನ್ನು ಹೊಗಳುತ್ತಾರೆ ಮತ್ತು ಬೆಂಬಲಿಸುತ್ತಾರೆ.
ನ್ಯಾಸಾ ಬಾಲಿವುಡ್‌ಗೆ ಪ್ರವೇಶಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ಅಜಯ್ ಕೆಲವು ತಿಂಗಳ ಹಿಂದೆ ಪ್ರತಿಕ್ರಿಯಿಸಿದ್ದರು. ಇಲ್ಲ, ಅವಳು ಚಲನಚಿತ್ರಗಳ ಬಗ್ಗೆ ಮಾತನಾಡುವುದಿಲ್ಲ. ಅವಳು ಸಿಂಗಾಪುರದಲ್ಲಿ ಓದುತ್ತಿದ್ದಾಳೆ ಮತ್ತು ತುಂಬಾ ಸಂತೋಷವಾಗಿದ್ದಾಳೆ. ಸದ್ಯ ಅವಳಿಗೆ ಸಿನಿಮಾದ ಕಡೆ ಒಲವಿಲ್ಲ ಎಂದು ತಂದೆ ಮಗಳ ಬಗ್ಗೆ ಹೇಳಿದ್ದರು.
ತಾಯಿ ಕಾಜೋಲ್ ಜೊತೆ ಕೂಡ ನ್ಯಾಸಾ ಉತ್ತಮ ಬಾಂಧವ್ಯ ಹೊಂದಿದ್ದಾರೆ. ನ್ಯಾಸಾ ಪ್ರಕಾರ, ಅವರು ಚಲನಚಿತ್ರಗಳಲ್ಲಿ ನಟಿಸಲು ಬಯಸುವುದಿಲ್ಲ. ಜಗತ್ಪ್ರಸಿದ್ಧ ಶೇಫ್ ಆಗಕೆಂಬುದು ಅವರ ಕನಸಂತೆ. ಕಾಜೋಲ್ ತನ್ನ ಮಕ್ಕಳನ್ನು ತುಂಬಾ ಪ್ರೊಟೇಕ್ಟಿವ್ ಆಗಿದ್ದಾರೆ ಸಂದರ್ಶನವೊಂದರಲ್ಲಿ ಕಾಜೋಲ್ ಈ ಬಗ್ಗೆ ಹೇಳಿದ್ದರು ಮತ್ತು ಯಾರಾದರೂ ತನ್ನ ಮಕ್ಕಳ ಮೇಲೆ ಕಣ್ಣಿಡಲು ಪ್ರಯತ್ನಿಸಿದರೆ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದಿದ್ದರು.
ಕೆಲವು ದಿನಗಳ ಹಿಂದೆ ನ್ಯಾಸಾ ದೇವಗನ್ ಅವರ ಡ್ಯಾನ್ಸ್ ವಿಡಿಯೋ ವೈರಲ್ ಆಗಿತ್ತು. ಇದರಲ್ಲಿ ಅವರು ತಮ್ಮ ತಾಯಿ ಕಾಜೋಲ್ ಅವರ ಹಾಡು ಬೋಲೆ ಚೂಡಿಯನ್‌ಗೆ ಪ್ರದರ್ಶನ ನೀಡಿದರು. ಈ ವೀಡಿಯೊ ನ್ಯಾಸಾ ಅವರ ಶಾಲೆಯ ಕಾರ್ಯಕ್ರಮದಿಂದ ಬಂದಿದೆ.