- Home
- Entertainment
- Cine World
- Jr NTR: 25 ವರ್ಷಗಳ ನಂತರ ಜೂ.ಎನ್‌ಟಿಆರ್ ಸಿಎಂ ಆಗ್ತಾರಾ? ಅಪಘಾತದ ಬಗ್ಗೆ ಮಾತಾಡಿದ ತಾರಕ್
Jr NTR: 25 ವರ್ಷಗಳ ನಂತರ ಜೂ.ಎನ್‌ಟಿಆರ್ ಸಿಎಂ ಆಗ್ತಾರಾ? ಅಪಘಾತದ ಬಗ್ಗೆ ಮಾತಾಡಿದ ತಾರಕ್
25 ವರ್ಷಗಳ ನಂತರ ನೀವು ಯಾವ ಸ್ಥಾನದಲ್ಲಿ ಇರುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಜೂ.ಎನ್‌ಟಿಆರ್ ತಮಾಷೆಯಾಗಿ ಉತ್ತರಿಸಿದ್ದಾರೆ. ಜೊತೆಗೆ 2009ರಲ್ಲಿ ತಮಗಾದ ಅಪಘಾತವನ್ನೂ ತಾರಕ್ ನೆನಪಿಸಿಕೊಂಡಿದ್ದಾರೆ.

ಯಂಗ್ ಟೈಗರ್ ಎನ್‌ಟಿಆರ್
ಯಂಗ್ ಟೈಗರ್ ಎನ್‌ಟಿಆರ್ ಸದ್ಯ ಪ್ರಶಾಂತ್ ನೀಲ್ ನಿರ್ದೇಶನದ 'ಡ್ರ್ಯಾಗನ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮೇಲೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ನಿರೀಕ್ಷೆ ಇದೆ. ಇತ್ತೀಚೆಗೆ ತಾರಕ್ ಬೆಂಗಳೂರಿನ ಕಿಮ್ಸ್ ಆಸ್ಪತ್ರೆ ಉದ್ಘಾಟನೆಗೆ ಬಂದಿದ್ದರು. ಈ ವೇಳೆ ಅಭಿಮಾನಿಗಳು ಸಂಭ್ರಮಿಸಿದರು.
25 ವರ್ಷಗಳ ನಂತರ ತಾರಕ್ ಏನಾಗ್ತಾರೆ?
ಈ ಕಾರ್ಯಕ್ರಮದಲ್ಲಿ, ಖ್ಯಾತ ವೈದ್ಯ ಡಾ.ಗುರುವಾ ರೆಡ್ಡಿ ಅವರು '25 ವರ್ಷಗಳ ನಂತರ ಜೂನಿಯರ್ ಎನ್‌ಟಿಆರ್ ಏನಾಗಿರುತ್ತಾರೆ?' ಎಂದು ಕೇಳಿದರು. ಇದಕ್ಕೆ ತಮಾಷೆಯಾಗಿ ಉತ್ತರಿಸಿದ ತಾರಕ್, '25 ವರ್ಷಗಳ ನಂತರ ನನ್ನ ವಯಸ್ಸು 67 ಆಗಿರುತ್ತೆ' ಎಂದರು. ಆದರೆ, ಅಭಿಮಾನಿಗಳು 'ಸಿಎಂ, ಸಿಎಂ' ಎಂದು ಕೂಗಿದರು.
ನನ್ನ ಪ್ರಾಣ ಉಳಿಸಿದ್ದು ಅವರೇ
ಭವಿಷ್ಯದಲ್ಲಿ ತಾರಕ್ ರಾಜಕೀಯಕ್ಕೆ ಬರಬೇಕೆಂಬ ಆಸೆ ಅಭಿಮಾನಿಗಳಲ್ಲಿ ಬಲವಾಗಿದೆ. ಈ ಕಾರ್ಯಕ್ರಮದಲ್ಲಿ ಎನ್‌ಟಿಆರ್, 2009ರಲ್ಲಿ ತಮಗಾದ ಅಪಘಾತವನ್ನು ನೆನಪಿಸಿಕೊಂಡರು. 'ಆಗ ಡಾ.ಗುರುವಾ ರೆಡ್ಡಿ ಮತ್ತು ಡಾ.ಭಾಸ್ಕರ್ ಅವರಂತಹ ವೈದ್ಯರು ನನ್ನ ಪ್ರಾಣ ಉಳಿಸಿದರು. ಅವರಿಗೆ ನಾನು ಋಣಿಯಾಗಿರುತ್ತೇನೆ' ಎಂದು ಹೇಳಿದರು.
ಮಕ್ಕಳ ಡಾಕ್ಟರ್ ಆಗಬೇಕೆಂಬ ಆಸೆ
ಒಂದು ವೇಳೆ ನೀವು ಡಾಕ್ಟರ್ ಆಗಿದ್ದರೆ, ಯಾವ ವಿಭಾಗದಲ್ಲಿ ಪರಿಣಿತರಾಗುತ್ತಿದ್ದಿರಿ ಎಂದು ಕೇಳಿದ ಪ್ರಶ್ನೆಗೆ, 'ನನಗೆ ಚಿಕ್ಕ ಮಕ್ಕಳೆಂದರೆ ತುಂಬಾ ಇಷ್ಟ. ಹಾಗಾಗಿ ಮಕ್ಕಳ ತಜ್ಞ (ಪೀಡಿಯಾಟ್ರಿಶಿಯನ್) ಆಗುತ್ತಿದ್ದೆ' ಎಂದು ತಾರಕ್ ತಿಳಿಸಿದರು.
ಎನ್‌ಟಿಆರ್ ನಯಾ ಲುಕ್
ಈ ಕಾರ್ಯಕ್ರಮದಲ್ಲಿ ತಾರಕ್ ಅವರ ಹೊಸ ಗಡ್ಡದ ಲುಕ್ ಅಭಿಮಾನಿಗಳನ್ನು ಆಕರ್ಷಿಸಿತು. 'ಡ್ರ್ಯಾಗನ್' ಚಿತ್ರಕ್ಕಾಗಿಯೇ ತಾರಕ್ ಹೀಗೆ ಗಡ್ಡ ಬಿಟ್ಟಿದ್ದಾರೆ. ಅವರು ಸಖತ್ ಸಣ್ಣಗಾಗಿ, ಸಿಕ್ಸ್ ಪ್ಯಾಕ್‌ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

