- Home
- Entertainment
- Cine World
- ರಾಜಮೌಳಿಗೆ ಕೋಪ ಬಂದ್ರೆ ಏನ್ ಮಾಡ್ತಾರೆ? ಜಕ್ಕಣ್ಣನ ಏಕೈಕ ಕೆಟ್ಟ ಅಭ್ಯಾಸ ಬಿಚ್ಚಿಟ್ಟ ಎನ್‌ಟಿಆರ್, ರಾಮ್ ಚರಣ್!
ರಾಜಮೌಳಿಗೆ ಕೋಪ ಬಂದ್ರೆ ಏನ್ ಮಾಡ್ತಾರೆ? ಜಕ್ಕಣ್ಣನ ಏಕೈಕ ಕೆಟ್ಟ ಅಭ್ಯಾಸ ಬಿಚ್ಚಿಟ್ಟ ಎನ್‌ಟಿಆರ್, ರಾಮ್ ಚರಣ್!
ತೆಲುಗು ಚಿತ್ರರಂಗವನ್ನು ಆಸ್ಕರ್ ಮಟ್ಟಕ್ಕೆ ಕೊಂಡೊಯ್ದ ನಿರ್ದೇಶಕ ರಾಜಮೌಳಿ. ಟಾಲಿವುಡ್ ಸಿನಿಮಾದ ಬ್ರಾಂಡ್ ಅಂಬಾಸಿಡರ್ ಆಗಿರುವ ಜಕ್ಕಣ್ಣನಿಗೆ ಒಂದು ಸಣ್ಣ ಕೆಟ್ಟ ಅಭ್ಯಾಸವಿದೆಯಂತೆ. ಅವರಿಗೆ ಕೋಪ ಬಂದಾಗ ಅದು ಹೊರಬರುತ್ತದೆಯಂತೆ. ಅಷ್ಟಕ್ಕೂ ಅದೇನು ಗೊತ್ತಾ..?

ಭಾರತೀಯ ಚಿತ್ರರಂಗ ಅಂದರೆ ಟಾಲಿವುಡ್
ವಿಶ್ವ ಸಿನಿಮಾ ಭೂಪಟದಲ್ಲಿ ಟಾಲಿವುಡ್‌ಗೆ ಅಗ್ರಸ್ಥಾನ ತಂದುಕೊಟ್ಟ ನಿರ್ದೇಶಕ ರಾಜಮೌಳಿ. ಒಂದು ಕಾಲದಲ್ಲಿ ತೆಲುಗು ಚಿತ್ರಗಳನ್ನು ಕೀಳಾಗಿ ನೋಡಲಾಗುತ್ತಿತ್ತು. ಈಗ ಭಾರತೀಯ ಚಿತ್ರರಂಗ ಅಂದರೆ ಟಾಲಿವುಡ್ ಎನ್ನುವಂತೆ ಮಾಡಿದ್ದಾರೆ.
ಒಂದೇ ಒಂದು ಫ್ಲಾಪ್ ಇಲ್ಲ
ರಾಜಮೌಳಿ ಚಿತ್ರರಂಗಕ್ಕೆ ಬಂದು ಸುಮಾರು 30 ವರ್ಷಗಳಾಗಿವೆ. ಇಲ್ಲಿಯವರೆಗೆ ಅವರ ವೃತ್ತಿಜೀವನದಲ್ಲಿ ಒಂದೇ ಒಂದು ಫ್ಲಾಪ್ ಇಲ್ಲ. ತೆಲುಗು ಚಿತ್ರರಂಗಕ್ಕೆ ಮೊದಲ ಆಸ್ಕರ್ ತಂದುಕೊಟ್ಟ ಕೀರ್ತಿ ಜಕ್ಕಣ್ಣನಿಗೆ ಸಲ್ಲುತ್ತದೆ.
ತುಂಬಾ ಸರಳವಾಗಿರಲು ಇಷ್ಟಪಡುವ ರಾಜಮೌಳಿ
ರಾಜಮೌಳಿ ಎಷ್ಟೇ ದೊಡ್ಡ ನಿರ್ದೇಶಕರಾದರೂ ತುಂಬಾ ಸರಳವಾಗಿರಲು ಇಷ್ಟಪಡುತ್ತಾರೆ. ಎಲ್ಲರ ಮುಂದೆ ವಿನಯದಿಂದ ಇರುತ್ತಾರೆ. ಜಕ್ಕಣ್ಣನಿಗೆ ಅಪರೂಪಕ್ಕೆ ಕೋಪ ಬರುತ್ತದಂತೆ. ಅಂದುಕೊಂಡ ಕೆಲಸ ಸರಿಯಾಗಿ ಆಗದಿದ್ದರೆ ಕೋಪಗೊಳ್ಳುತ್ತಾರೆ.
ಕೈಯಲ್ಲಿದ್ದ ಮೈಕ್ ಎಸೆಯುತ್ತಾರೆ
ರಾಜಮೌಳಿಗೆ ಕೋಪ ಬಂದರೆ ಏನು ಮಾಡುತ್ತಾರೆ ಎಂಬುದನ್ನು ಎನ್‌ಟಿಆರ್ ಮತ್ತು ರಾಮ್ ಚರಣ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಕೋಪ ಬಂದರೆ ಕೈಯಲ್ಲಿದ್ದ ಮೈಕ್ ಎಸೆಯುತ್ತಾರೆ, ಜೊತೆಗೆ ಒಂದು ಬೈಗುಳ ಬರುತ್ತದೆ ಎಂದು ಎನ್‌ಟಿಆರ್ ಹೇಳಿದ್ದರು.
ವಾರಣಾಸಿ ಶೀರ್ಷಿಕೆ ಘೋಷಣೆ
ರಾಜಮೌಳಿ ಸದ್ಯ ಮಹೇಶ್ ಬಾಬು ಜೊತೆ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗೆ 'ವಾರಣಾಸಿ' ಶೀರ್ಷಿಕೆ ಘೋಷಿಸಲಾಗಿದೆ. 1500 ಕೋಟಿ ಬಜೆಟ್‌ನ ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

