ಬಾಲಿವುಡ್‌ನಲ್ಲಿ ಮತ್ತೊಂದು ಬ್ರೇಕಪ್; ದೂರಾದ ಟೈಗರ್ ಶ್ರಾಫ್-ದಿಶಾ ಜೋಡಿ?

ಬಾಲಿವುಡ್‌ನ ಕ್ಯೂಟ್ ಕಪಲ್ ಅಂತ ಕರೆಸಿಕೊಳ್ಳುತ್ತಿದ್ದ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ನಡುವೆ ಬ್ರೇಕಪ್ ಆಗಿದೆ ಎನ್ನುವ ಸುದ್ದಿ ಸಖತ್ ವೈರಲ್ ಆಗಿದೆ. ಸುಮಾರು 6 ವರ್ಷಗಳ ಕಾಲ ಇಬ್ಬರೂ ಪ್ರೀತಿಯಲ್ಲಿದ್ದರು. ಆದರೀಗ ಇಬ್ಬರು ಬೇರೆ ಆಗುವ ನಿರ್ಧಾರ ಮಾಡಿ ದೂರ ಆಗಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ನಲ್ಲಿ ಗುಲ್ಲಾಗಿದೆ.   

Have bollywood lovebirds Disha Patani and Tiger Shroff broke up sgk

ಸಿನಿಮಾರಂಗದಲ್ಲಿ ಲವ್, ಡೇಟಿಂಗ್, ಮದುವೆ, ಬ್ರೇಕಪ್ ಎಲ್ಲಾ ಕಾಮನ್. ಸಿನಿ ಸೆಲೆಬ್ರಿಟಿಗಳ ಈ ವಿಚಾರಗಳು ಆಗಾಗ ಸುದ್ದಿಯಲ್ಲಿರುತ್ತವೆ. ಆದರೆ ಈ ಬಗ್ಗೆ ಸೆಲೆಬ್ರಿಟಿಗಳು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಸಿನಿಮಾ ಜೊತೆಗೆ ವೈಯಕ್ತಿಕ ವಿಚಾರಗಳು ಆಗಾಗ ಸುದ್ದಿಯಾಗುತ್ತಿರುತ್ತೆ. ಇದೀಗ ಬಾಲಿವುಡ್‌ನಲ್ಲಿ ಮತ್ತೊಂದು ಬ್ರೇಕಪ್ ವಿಚಾರ ಸದ್ದು ಮಾಡುತ್ತಿದೆ. ಬಾಲಿವುಡ್‌ನ ಕ್ಯೂಟ್ ಕಪಲ್ ಅಂತ ಕರೆಸಿಕೊಳ್ಳುತ್ತಿದ್ದ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ನಡುವೆ ಬ್ರೇಕಪ್ ಆಗಿದೆ ಎನ್ನುವ ಸುದ್ದಿ ಸಖತ್ ವೈರಲ್ ಆಗಿದೆ. ಸದಾ ಜೊತೆಯಲ್ಲೇ ಕಾಣಿಸಿಕೊಳ್ಳುತ್ತಿದ್ದ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಯಾವತ್ತೂ ಡೇಟಿಂಗ್ ವಿಚಾರವನ್ನು ಅಧಿಕೃತ ಗೊಳಿಸಿರಲಿಲ್ಲ. ಹಾಗಂತ ಇಬ್ಬರ ನಡುವಿನ ಪ್ರೀತಿ ವಿಚಾರ ಗುಟ್ಟಾಗಿ ಉಳಿದಿರಲಿಲ್ಲ. ಸುಮಾರು 6 ವರ್ಷಗಳ ಕಾಲ ಇಬ್ಬರೂ ಪ್ರೀತಿಯಲ್ಲಿದ್ದರು. ಆದರೀಗ ಇಬ್ಬರು ಬೇರೆ ಆಗುವ ನಿರ್ಧಾರ ಮಾಡಿ ದೂರ ಆಗಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ನಲ್ಲಿ ಗುಲ್ಲಾಗಿದೆ.   

ಹಿಂದೂಸ್ತಾನ್ ಟೈಮ್ಸ್‌ ವರದಿ ಮಾಡಿರುವ ಪ್ರಕಾರ, ದಿಶಾ ಮತ್ತು ಟೈಗರ್  ಈಗ ಒಂಟಿಯಾಗಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಟೈಗರ್ ಮತ್ತು ದಿಶಾ ಈಗ ಒಟ್ಟಿಗೆ ಇಲ್ಲ. ಇಬ್ಬರು ದೂರ ಆಗಲು ಅವರ ನಡುವೆ ಏನಾಯಿತು ಎಂಬುದು ಸ್ಪಷ್ಟವಾಗಿಲ್ಲ, ಆದರೆ ಇಬ್ಬರೂ ಇದೀಗ ಒಂಟಿಯಾಗಿದ್ದಾರೆ ಎಂದು ವರದಿ ಮಾಡಿದ್ದಾರೆ.  ಬಾಘಿ 2 ತಾರೆಗಳು, ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಒಬ್ಬರನ್ನೊಬ್ಬರು ಹೈಪ್ ಮಾಡುತ್ತಿದ್ದರು. ಆದರೀಗ ತಮ್ಮ ಸಂಬಂಧದ ಬಗ್ಗೆ ಯಾವಾಗಲೂ ಮೌನವಾಗಿರುತ್ತಾರೆ. ಟೈಗರ್‌ ಆಪ್ತರು ಹೇಳುವ ಪ್ರಕಾರ ದಿಶಾ ಜೊತೆ ದೂರ ಆದ ಬಗ್ಗೆ ಯಾವುದೇ ಮಾತನಾಡುತ್ತಿಲ್ಲ ಎನ್ನಲಾಗಿದೆ.  ಈ ಬಗ್ಗೆ ಮಾತನಾಡಿದ ಟೈಗರ್ ಆಪ್ತ, 'ಕಳೆದ ಕೆಲವು ವಾರಗಳ ಹಿಂದೆ ಅಷ್ಟೆ ನಮಗೆ ಇಈ ಬಗ್ಗೆ ಗೊತ್ತಾಗಿದೆ. ಅವರು ನಿಜವಾಗಿಯೂ ನಮ್ಮಲ್ಲಿ ಯಾರೊಂದಿಗೂ ಅದರ ಬಗ್ಗೆ ಮಾತನಾಡಿಲ್ಲ. ಅವರು ಲಂಡನ್‌ ನಲ್ಲಿ ತಮ್ಮ ಪ್ರವಾಸ ಮತ್ತು ತನ್ನ ಕೆಲಸದ ಮೇಲೆ ಕೇಂದ್ರೀಕರಿಸಿದ್ದಾರೆ. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬ್ರೇಕಪ್ ನಿಂದ ಯಾವುದೇ ಪರಿಣಾಮ ಬೀರಿಲ್ಲ' ಎಂದಿದ್ದಾರೆ ಎಂದು ಆಂಗ್ಲ ವೆಬ್ ಸೈಟ್ ವರದಿ ಮಾಡಿದೆ.

ಬ್ರೇಕಪ್ ಬಳಿಕವೂ ದಿಶಾ ಮತ್ತು ಟೈಗರ್ ಇಬ್ಬರೂ ಪರಸ್ಪರ ಸ್ನೇಹಿತರಾಗಿ ಮುಂದುವರೆದಿದ್ದಾರೆ ಎಂದು ಮೂಲಗಳು ಹೇಳಿವೆ. ನಿಜಕ್ಕೂ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದಾರಾ ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. 

ಬಾರ್ಬಿ ಡಾಲ್ ಆಗಿ ಬದಲಾದ ಹಾಟ್ ಬ್ಯೂಟಿ ದಿಶಾ; ಮಿನಿ ಡ್ರೆಸ್ ಫೋಟೋ ವೈರಲ್

ಟೈಗರ್ ಶ್ರಾಫ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಇತ್ತೀಚಿ ಗಷ್ಟೆ ಟೈಗರ್,  ಸ್ಕ್ರೂ ಧೀಲಾ ಸಿವಿಮಾವನ್ನು ಅನೌನ್ಸ್ ಮಾಡಿದರು. ಧರ್ಮ ಪ್ರೊಡಕ್ಷನ್ಸ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. 3 ನಿಮಿಷಗಳ ಆಕ್ಷನ್ ವೀಡಿಯೊದೊಂದಿಗೆ ಹೊಸ ಸಿನಿಮಾ ಘೋಷಿಸಿದರು. ಇದನ್ನು ನೋಡಿದ ದಿಶಾ, ಟೈಗರ್‌ಗಾಗಿ ಉತ್ಸುಕರಾಗಿದ್ದರು ಮತ್ತು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದರು. ಅವಳು 'ಕಾಯಲು ಸಾಧ್ಯವಿಲ್ಲ. ಟೈಗರ್ ಯು ಆರ್  ಫೈರ್' ಎಂದು ಬರೆದುಕೊಂಡಿದ್ದರು. 

Bollywood Love Story: ದಿಶಾ ಪಟಾನಿ ಜೊತೆ ಟೈಗರ್ ಶ್ರಾಫ್ ಪ್ರೇಮ್ ಕಹಾನಿ!

ಇನ್ನು ದಿಶಾ ಪಟಾನಿ ಸದ್ಯ ಏಕ್ ವಿಲನ್ ರಿಟರ್ನ್ ಸಿನಿಮಾದ ರಿಲೀಸ್ ಗೆ ಕಾಯುತ್ತಿದ್ದಾರೆ. ಈಗಾಗಲೇ ಪ್ರಮೋಷನ್ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಈ ಸಿನಿಮಾದಲ್ಲಿ ಜಾನ್ ಅಬ್ರಹಾಂ, ಅರ್ಜುನ್ ಕಪೂರ್ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. 
 

Latest Videos
Follow Us:
Download App:
  • android
  • ios