ಈ ದಿನ ಪ್ರೆಗ್ನೆನ್ಸಿ ಆನೌನ್ಸ್ ಮಾಡ್ತಾರಂತೆ ಕತ್ರಿನಾ ಕೈಫ್!
ಬಾಲಿವುಡ್‌ನ ಅಡೋರಬಲ್ ಕಪಲ್ ಕತ್ರಿನಾ ಕೈಫ್ (Katrina Kaif) ಮತ್ತು ವಿಕ್ಕಿ ಕೌಶಲ್ (Vicky Kaushal) ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿದ್ದಾರೆ ಎಂಬ ಊಹಾಪೋಹಗಳು ಹಲವು ದಿನಗಳಿಂದ ಹರಡಿಕೊಂಡಿವೆ. ವದಂತಿಗಳು ಬಹಳ ಸಮಯದಿಂದ ಸುತ್ತುತ್ತಿವೆ. ಅದರಲ್ಲೂ ವಿಶೇಷವಾಗಿ ಆಲಿಯಾ ಭಟ್ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಪ್ರೆಗ್ನೆಂಸಿಯ ವಿಷಯ ಘೋಷಿಸಿದಾಗಿನಿಂದ ತೀವ್ರತೆ ಪಡೆದುಕೊಂಡಿದೆ. ಈ ವಿಷಯದ ಬಗ್ಗೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರ ಅಧಿಕೃತ ಮಾತುಗಳನ್ನು ಕೇಳಲು ಎಲ್ಲರೂ ಕಾಯುತ್ತಿರುವಾಗ, 'ನಟಿಯ ನಿಕಟ ಮೂಲವೊಂದು ಏಷ್ಯಾನೆಟ್ ನ್ಯೂಸಬಲ್‌ಗೆ ಸುದ್ದಿಯನ್ನು ಖಚಿತಪಡಿಸಿದೆ
ಮೂಲಗಳ ಪ್ರಕಾರ ಕತ್ರಿನಾ ಕೈಫ್ ಗರ್ಭಿಣಿಯಾಗಿದ್ದು, ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ. 'ಕತ್ರಿನಾ ಕೈಫ್ ಗರ್ಭಿಣಿಯಾಗಿರುವುದು ದೃಢಪಟ್ಟಿದೆ. ಅವರು ಮತ್ತು ವಿಕ್ಕಿ ಕೌಶಲ್ ಒಟ್ಟಿಗೆ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಾಗಾದರೆ, ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಪ್ರೆಗ್ನೆಂಸಿ ಯಾವಾಗ ಘೋಷಿಸುತ್ತಾರೆ? ಇದಕ್ಕೆ ಮೂಲಗಳು, 'ಈ ಸುದ್ದಿಯನ್ನು ದಂಪತಿ ಕತ್ರೀನಾ ಕೈಫ್ ಅವರ ಹುಟ್ಟುಹಬ್ಬದಂದು ಹಂಚಿಕೊಳ್ಳುವ ಹೆಚ್ಚಿನ ಸಾಧ್ಯತೆಗಳಿವೆ' ಎಂದು ಹೇಳಿವೆ.
ಕತ್ರಿನಾ ಜುಲೈ 16, ಶನಿವಾರದಂದು ತನ್ನ 39 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ ಮತ್ತು ಆಗ ದಂಪತಿ ಅವರ ಅಭಿಮಾನಿಗಳೊಂದಿಗೆ ಒಳ್ಳೆಯ ಸುದ್ದಿಯನ್ನು ಹಂಚಿಕೊಳ್ಳುವ ಸಾಧ್ಯತೆಯಿದೆ.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಕತ್ರಿನಾ ಕೈಫ್ ಇತ್ತೀಚೆಗೆ ಅದನ್ನು ಬಳಸುತ್ತಿಲ್ಲ. ಕರಣ್ ಜೋಹರ್ ಅವರ ಹುಟ್ಟುಹಬ್ಬದ ನಂತರ, ಅವರು ಯಾವುದೇ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿಲ್ಲ. ಅಂದಿನಿಂದ, ಕತ್ರಿನಾ ಅವರ ಅಭಿಮಾನಿಗಳು ಮತ್ತು ಅನುಯಾಯಿಗಳು ಆಕೆಯ ತಾಯಾಗಲಿರುವ ಬಗ್ಗೆ ಊಹಾಪೋಹಗಳನ್ನು ಮಾಡುತ್ತಿದ್ದಾರೆ.
ಈ ನಡುವೆ , ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಶುಕ್ರವಾರ ಬೆಳಿಗ್ಗೆ ನಗರದಿಂದ ಹೊರಟರು. ಕತ್ರೀನಾ ಅವರ ಹುಟ್ಟುಹಬ್ಬ ಆಚರಿಸಲು ತೆರಳುವಾಗ ಇಬ್ಬರೂ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.
ಕತ್ರಿನಾ ಕೈಫ್ ಮುಂದಿನ 'ಫೋನ್ ಭೂತ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಅದರ ಮೋಷನ್ ಪೋಸ್ಟರ್ ಶುಕ್ರವಾರ ಬಿಡುಗಡೆಯಾಗಿದೆ. ಇದರಲ್ಲಿ ಅವರು ನಟರಾದ ಇಶಾನ್ ಖಟ್ಟರ್ ಮತ್ತು ಸಿದ್ಧಾಂತ್ ಚತುರ್ವೇದಿ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಕತ್ರಿನಾ ಅವರು ಸಲ್ಮಾನ್ ಖಾನ್ ಎದುರು ಟೈಗರ್ 3, ವಿಜಯ್ ಸೇತುಪತಿ ಅವರೊಂದಿಗೆ ಮೆರ್ರಿ ಕ್ರಿಸ್ಮಸ್ ಮತ್ತು ಪ್ರಿಯಾಂಕಾ ಚೋಪ್ರಾ ಮತ್ತು ಆಲಿಯಾ ಭಟ್ ಅವರೊಂದಿಗೆ ಜೀ ಲೆ ಜಾರಾ ಅವರ ಸಿನಿಮಾದಲ್ಲಿ ಕೂಡ ಇದ್ದಾರೆ.
ವಿಕ್ಕಿ ಮತ್ತು ಕತ್ರಿನಾ ಡಿಸೆಂಬರ್ 9, 2021 ರಂದು ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ರಣಥಂಬೋರ್‌ನಲ್ಲಿ ವಿವಾಹವಾದರು. ಮೂರು ದಿನಗಳ ಅವಧಿಯಲ್ಲಿ ನಡೆಯಿತು ಮತ್ತು ಅವರ ಕುಟುಂಬಗಳು ಮತ್ತು ಆಪ್ತರು ಭಾಗವಹಿಸಿದ್ದರು. ಅವರು ಇತ್ತೀಚೆಗೆ ಜುಲೈ 9 ರಂದು ತಮ್ಮ ಮದುವೆಯ ಏಳು ತಿಂಗಳುಗಳನ್ನು ಪೂರ್ಣಗೊಳಿಸಿದರು.