ರಣಬೀರ್ ಕಪೂರ್ ಗಾಸಿಪರ್? ಆಲಿಯಾ ಭಟ್ ಈ ಬಗ್ಗೆ ಹೇಳಿದ್ದಿಷ್ಟು!
ಬಾಲಿವುಡ್ ನಟಿ ಆಲಿಯಾ ಭಟ್ (Alia Bhatt) ಪ್ರಸ್ತುತ ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ನಿರ್ದೇಶನದ ಗಂಗೂಬಾಯಿ ಕಥಿಯಾವಾಡಿ (Gangubai Kathiawadi) ಚಿತ್ರದ ಪ್ರಚಾರದಲ್ಲಿದ್ದಾರೆ. ಅವರು ಬರ್ಲಿನ್ ಫಿಲ್ಮ್ ಫೆಸ್ಟಿವಲ್‌ಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಅವರ ಈ ಚಲನಚಿತ್ರವು ಪ್ರಥಮ ಪ್ರದರ್ಶನಗೊಳ್ಳುತ್ತದೆ. ಭಾರತದಲ್ಲಿ, ಚಲನಚಿತ್ರವು ಫೆಬ್ರವರಿ 25, 2022 ರಂದು ಬಿಡುಗಡೆಯಾಗಲಿದೆ. ರಣಬೀರ್ (Ranbir Kapoor) ಗಾಸಿಪರ್ ಹೌದಾ ಅಲ್ಲವೋ ಎಂಬ ಬಗ್ಗೆ ಆಲಿಯಾ ಭಟ್ ಸಂದರ್ಶನವೊಂದರಲ್ಲಿ ಹೇಳಿದ್ದೇನು ಗೊತ್ತಾ?
ಇತ್ತೀಚಿನ ಸಂದರ್ಶನವೊಂದರಲ್ಲಿ, ಆಲಿಯಾ ಭಟ್ ರಣಬೀರ್ ಕಪೂರ್ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ' ನಟಿ ತಾನು ಈಗಾಗಲೇ ರಣಬೀರ್ ಅವರನ್ನು ಮದುವೆಯಾಗಿದ್ದೇನೆ ಎಂದು ಹೇಳಿದರು. '
ವಾಸ್ತವವಾಗಿ, ನನ್ನ ತಲೆಯಲ್ಲಿ, ನಾನು ರಣಬೀರ್ ಅವರನ್ನು ಮದುವೆಯಾಗಿದ್ದೇನೆ' ಎಂದು ಆಲಿಯಾ ಹೇಳಿದ್ದಾರೆ.
ತನ್ನ ಗೆಳೆಯ ರಣಬೀರ್ ಕಪೂರ್ ಅವರನ್ನು ಗಾಸಿಪರ್ ಎಂದು ಕರೆಯುವ ಆರೋಪವನ್ನೂ ಆಲಿಯಾ ತಳ್ಳಿ ಹಾಕಿದ್ದಾರೆ. ಕಾಫಿ ವಿತ್ ಕರಣ್ ಶೋ (Coffee with Karan Show)ನಲ್ಲಿ ಸೋನಂ ಕಪೂರ್ (Sonam Kapoor), ಕರೀನಾ ಕಪೂರ್ (Kareena Kapoor), ದೀಪಿಕಾ ಪಡುಕೋಣೆ ಮತ್ತು ಅನೇಕ ಸೆಲೆಬ್ರಿಟಿಗಳು ರಣಬೀರ್ ಅವರನ್ನು ಗಾಸಿಪ್ ಮಾಂಗರ್ ಎಂದು ಕರೆದಿದ್ದಾರೆ.
ಆದರೆ, ರಣಬೀರ್ ಗಾಸಿಪ್ (Gossip) ಮಾಡುವುದಿಲ್ಲ ಮತ್ತು ಅವರಿಗೆ ಕೆಟ್ಟ ಖ್ಯಾತಿ ಇದೆ ಎಂದು ಆಲಿಯಾ ಹೇಳಿಕೊಂಡಿದ್ದಾರೆ. ಆರ್‌ಜೆ ಸಿದ್ಧಾರ್ಥ್ ಕಣ್ಣನ್ ಅವರೊಂದಿಗೆ ಮಾತನಾಡುವಾಗ, ಆಲಿಯಾ ರಣಬೀರ್ ಗಾಸಿಪರ್ ಅಲ್ಲ ಎಂದು ಹೇಳಿದರು,
'ರಣಬೀರ್ ಯಾರ ಬಗ್ಗೆಯೂ ಒಂದು ಕೆಟ್ಟ ಮಾತು ಹೇಳುವುದನ್ನು ನಾನು ಕೇಳಿಲ್ಲ. ನಾನು ಅವನ ಈ ಗುಣವನ್ನು ಹೆಚ್ಚು ಪ್ರೀತಿಸುತ್ತೇನೆ. ಅವನು ಯಾರನ್ನಾದರೂ ಟೀಕಿಸುತ್ತಿದ್ದರೂ, ಅವನು (ಅದರ ಬಗ್ಗೆ ಜಾಗರೂಕನಾಗಿರುತ್ತಾನೆ). ಅವನು ಒಳ್ಳೆಯದನ್ನು ಮಾತ್ರ ನಂಬುತ್ತಾನೆ, ಇಲ್ಲದಿದ್ದರೆ ಅದನ್ನು ಹೇಳಿವುದಿಲ್ಲ. ಇದು ಅದ್ಭುತವಾದ ಗುಣ,' ಎಂದಿದ್ದಾರೆ ಆಲಿಯಾ.
'ಅವನು ಗಾಸಿಪ್‌ಗಳನ್ನು ಇಷ್ಟಪಡುವುದಿಲ್ಲ, ರಣಬೀರ್‌ನಿಂದಾಗಿ ನಾನು ಗಾಸಿಪ್ ಮಾಡುವುದು ಕಡಿಮೆಯಾಗಿದೆ. ಯಾರ ಬಗ್ಗೆಯೂ ಗಾಸಿಪ್ ಮಾಡಬೇಡ ಎಂದು ಅವನು ಹೇಳುತ್ತಾನೆ. ಅವನು ಗಾಸಿಪರ್ ಎಂದು ಕೆಟ್ಟ ಹೆಸರು ಪಡೆದಿದ್ದಾನೆ, ಅವನು ಗಾಸಿಪರ್ ಅಲ್ಲ. ಅವನು ಗಾಸಿಪ್ ಮಾಡುವುದಿಲ್ಲ' ಎಂದಿದ್ದಾರೆ ಆಲಿಯಾ.
ಕೆಲವು ತಿಂಗಳ ಹಿಂದೆ, ಕರಣ್ ಜೋಹರ್ ಕಪಿಲ್ ಶರ್ಮಾ ಶೋಗೆ ಬಂದಾಗ, ರಣಬೀರ್ ಕಪೂರ್ ಬಗ್ಗೆ ಮಾತನಾಡಿದ್ದರು. 'ನಾವು ಸುದ್ದಿಯನ್ನು ಪ್ರಸಾರ ಮಾಡಬೇಕಾದರೆ, ನಾವು ಅದನ್ನು ರಣಬೀರ್‌ಗೆ ನೀಡಬೇಕು. ಅವರು ಅದನ್ನು ಎರಡು ದಿನಗಳಲ್ಲಿ ಪತ್ರಿಕೆಗಳಲ್ಲಿ ಪ್ರಕಟಿಸುತ್ತಾರೆ,' ಎಂದು ಹೇಳಿದ್ದ ಕರಣ್ ಜೋಹರ್.
ನೋ ಫಿಲ್ಟರ್ ನೇಹಾದಲ್ಲಿ, ಸೋನಮ್ ಕಪೂರ್ ರಣಬೀರ್ ಗಾಸಿಪರ್ ಎಂದು ಕರೆದರು, 'ರಣಬೀರ್ ಕಪೂರ್, ಅವನು ಗಾಸಿಪ್ ಮಾಡುವುದನ್ನು ಇಷ್ಟ ಪಡುತ್ತಾನೆ. ಗಾಸಿಪ್ ಮಾಡುವುದನ್ನು ಅವನಷ್ಟು ಇಷ್ಟಪಡುವವರು ನನಗೆ ತಿಳಿದಿಲ್ಲ. ಅವನು ತುಂಬಾ ಸೀದಾ. ಆದರೆ ಅವನು ಗಾಸಿಪ್ ಮಾಡಲು ಇಷ್ಟಪಡುತ್ತಾನೆ ಎಂದಿದ್ದರು ಸೋನಮ್.