Ranbir Kapoor ಅವರ ಎಕ್ಸ್ ಗರ್ಲ್‌ಫ್ರೆಂಡ್ಸ್ ಹಿಂದಿಕ್ಕಿ ಮೊದಲ ಸ್ಥಾನದಲ್ಲಿ ಆಲಿಯಾ!
ಪ್ರತಿ ವರ್ಷ ಓರ್ಮ್ಯಾಕ್ಸ್ ಮೀಡಿಯಾ ಬಾಲಿವುಡ್ ನಟಿಯರ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ ಮತ್ತು ಈ ವರ್ಷ ದೀಪಿಕಾ ಪಡುಕೋಣೆ (Deppika Padukone), ಕತ್ರಿನಾ ಕೈಫ್ (Katrina Kaif), ಕೃತಿ ಸನೋನ್ (Kriti Sanon) , ಕಿಯಾರಾ ಅಡ್ವಾಣಿ (Kiara Advani) ಮತ್ತು ಇತರ ಅನೇಕ ನಟಿಯರನ್ನು ಬಿಟ್ಟು ಗಂಗೂಬಾಯಿ ಕಥಿಯಾವಾಡಿ ತಾರೆ ಆಲಿಯಾ (Alia Bahtt) ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದಾರೆ. ಎಲ್ಲಾ ಇತರ ನಟಿಯರನ್ನು ಸೋಲಿಸಿ ಆಲಿಯಾ ನಂಬರ್ ಒನ್ ಜನಪ್ರಿಯ ಮಹಿಳಾ ತಾರೆಯಾಗಿದ್ದಾರೆ.
ರಣಬೀರ್ ಕಪೂರ್ ಪ್ರಸ್ತುತ ಗರ್ಲ್‌ಪ್ರೆಂಡ್ ಆಲಿಯಾ ಭಟ್ ಸುದ್ದಿಯಲ್ಲಿದ್ದಾರೆ. ಆಲಿಯಾ ಭಟ್ ತಮ್ಮ ಪ್ರಿಯಕರನ ಮಾಜಿ ಗೆಳತಿಯರನ್ನು ಸೋಲಿಸಿದ್ದಾರೆ. ರಣಬೀರ್ ಕಪೂರ್ ಅವರ ಮಾಜಿ ಗೆಳತಿಯರಾದ ದೀಪಿಕಾ ಪಡುಕೋಣೆ ಕತ್ರಿನಾ
ಕೈಫ್ ಅವರನ್ನು ಸೋಲಿಸಿ ಆಲಿಯಾ ನಂಬರ್ ಒನ್ ಜನಪ್ರಿಯ ಮಹಿಳಾ ತಾರೆಯಾಗಿದ್ದಾರೆ.
ಇದು ನಿಸ್ಸಂದೇಹವಾಗಿ ಆಲಿಯಾ ಭಟ್ ಅವರ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಉತ್ತಮ ಸುದ್ದಿಯಾಗಿದೆ. ಓರ್ಮ್ಯಾಕ್ಸ್ ಮೀಡಿಯಾದ ಟಾಪ್ 10 ಅತ್ಯಂತ ಜನಪ್ರಿಯ ಮಹಿಳಾ ತಾರೆಯರ ಪಟ್ಟಿಯಲ್ಲಿ ಆಲಿಯಾ ಮೊದಲ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗಂಗೂಬಾಯಿ ಕಥಿಯಾವಾಡಿ ಸಿನಿಮಾ ಮುಂಬರುವ ಬಾಲಿವುಡ್ ಬಿಡುಗಡೆಗಾಗಿದೆ. ಕೆಲವು ದಿನಗಳ ಹಿಂದೆ ಇದರ ಟ್ರೈಲರ್ ಬಿಡುಗಡೆಯಾಗಿದ್ದು ಆಲಿಯಾರ ಅಭಿನಯಕ್ಕೆ ಸಖತ್
ಮೆಚ್ಚುಗೆ ಸಿಕ್ಕಿದೆ.
ಆಲಿಯಾ ಭಟ್ ಪ್ರಸ್ತುತ ಆಕಾಶದಲ್ಲಿ ತೇಲುತ್ತಿದ್ದಾರೆ. ಅವರ ಆಕೌಂಟ್‌ನಲ್ಲಿ ಕೆಲವು ದೊಡ್ಡ ಪ್ರಾಜೆಕ್ಟ್‌ಗಳಿವೆ. ಇವುಗಳಲ್ಲಿ ಬಾಯ್‌ಫ್ರೆಂಡ್ ರಣಬೀರ್ ಕಪೂರ್ ಜೊತೆ ನಟಿಸಿರುವ ಬ್ರಹ್ಮಾಸ್ತ್ರ ಮತ್ತು ಸೌತ್ ಸೂಪರ್‌ಸ್ಟಾರ್‌ಗಳ ಜೊತೆ ನಟಿಸಿರುವ ಆರ್‌ಆರ್‌ಆರ್ ಸಿನಿಮಾಗಳು ಸೇರಿವೆ.
URI ಸ್ಟಾರ್ ವಿಕ್ಕಿ ಕೌಶಲ್ ಅವರನ್ನು ಇತ್ತೀಚೆಗೆ ವಿವಾಹವಾದ ನವವಿವಾಹಿತ ಕತ್ರಿನಾ ಕೈಫ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಶೀಘ್ರದಲ್ಲೇ ಟೈಗರ್ 3, ಮೆರ್ರಿ ಕ್ರಿಸ್‌ಮಸ್ ಮತ್ತು ಜೋಯಾ ಅಖ್ತರ್ ಜೀ ಲೆ ಜರಾಗಾಗಿ ಕೆಲಸ ಮಾಡಲು ಪ್ರಾರಂಭಿಸುತ್ತಾರೆ.
ದೀಪಿಕಾ ಪಡುಕೋಣೆ ಮೂರನೇ ಸ್ಥಾನ ಪಡೆದಿದ್ದಾರೆ. ಪ್ರಸ್ತುತ, ದೀಪಿಕಾ ತಮ್ಮ ಇತ್ತೀಚಿನ ಬಿಡುಗಡೆ 'ಗೆಹ್ರಾಯಿಯಾ' ಸಿನಿಮಾದ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಚಿತ್ರದ ಪ್ರಚಾರದ ವೇಳೆ ಆಕೆಯ ಔಟ್‌ಫಿಟ್‌ಗಳು ಆನ್‌ಲೈನ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.
ಕೃತಿ ಸನೋನ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ನಂತರದ ಐದು ಮತ್ತು ಆರನೇ ಸ್ಥಾನವನ್ನು ಕ್ರಮವಾಗಿ ಶ್ರದ್ಧಾ ಕಪೂರ್ ಮತ್ತು ಕಿಯಾರಾ ಅಡ್ವಾಣಿ ಪಡೆದಿದ್ದಾರೆ. ಆಮೀರ್ ಖಾನ್ ಜೊತೆ ತಮ್ಮ ಮುಂದಿನ ಸಿನಿಮಾದ ಬಿಡುಗಡೆಗೆ ರೆಡಿಯಾಗಿರುವ ಕರೀನಾ ಕಪೂರ್ 7ನೇ ಸ್ಥಾನದಲ್ಲಿದ್ದಾರೆ.
ಕಳೆದ ತಿಂಗಳು ಬಾಡಿಗೆಯ ಮೂಲಕ ಮಗಳನ್ನು ಸ್ವಾಗತಿಸಿದ್ದ ಪ್ರಿಯಾಂಕಾ ಚೋಪ್ರಾ 8ನೇ ಸ್ಥಾನದಲ್ಲಿದ್ದರೆ, ನಂತರ ದಿಶಾ ಪಟಾನಿ ಇದ್ದಾರೆ ಮತ್ತು 10ನೇ ಸ್ಥಾನದಲ್ಲಿ ಚಕಾಚಕ್ ಗರ್ಲ್ ಸಾರಾ ಅಲಿ ಖಾನ್ ಇದ್ದಾರೆ.