ಮಲಯಾಳಂನ ಈ ಸ್ಟಾರ್ ನಟನ ಕಾರ್ ನಂ 1122 ಹಿಂದೆ ಇದೆ ಇಂಟ್ರೆಸ್ಟಿಂಗ್ ಸ್ಟೋರಿ
ನಟ ಜಯಸೂರ್ಯ ಪ್ರಸ್ತುತ ಬಳಸುತ್ತಿರುವ ಮರ್ಸಿಡಿಸ್-ಬೆನ್ಜ್ ಬಿ-ಕ್ಲಾಸ್ ಮತ್ತು ಜಾಗ್ವಾರ್ ಎಕ್ಸ್‌ಎಫ್ ಕಾರುಗಳ ನೋಂದಣಿ ಸಂಖ್ಯೆ 1122. ಈ ನಂಬರ್ ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ.

ಸಿನಿಮಾ ತಾರೆಯರ (film actors) ಕಾರುಗಳ ಸುತ್ತಲಿನ ಕಥೆಗಳು ಕೆಲವೊಂದು ವಿಸ್ಮಯಕಾರಿಯಾಗಿದ್ರೆ, ಇನ್ನೂ ಕೆಲವು ಹಾಸ್ಯಾಸ್ಪದವಾಗಿದೆ. ಮಮ್ಮುಟ್ಟಿ ಅವರ ಎಲ್ಲಾ ಕಾರುಗಳ ನೋಂದಣಿ ಸಂಖ್ಯೆ (registration number of car) 369. ಮೋಹನ್ ಲಾಲ್ ಅವರ ಲ್ಯಾಂಡ್ ಕ್ರೂಸರ್‌ನ ನಂಬರ್ 2255, ಮತ್ತು ದಿವಂಗತ ನಟ ಕಲಾಭವನ್ ಮಣಿ ಅವರ ಬಹುತೇಕ ಎಲ್ಲಾ ಕಾರುಗಳ ಸಂಖ್ಯೆ 100 ಆಗಿತ್ತು . ಈ ನಟರು ವಿಶೇಷ ಸಂಖ್ಯೆಯನ್ನು ತಮ್ಮ ವಿವಿಧ ವಸ್ತುಗಳಲ್ಲೂ ಉಪಯೋಗಿಸುತ್ತಾರೆ. ನಿಮಗೆ ಗೊತ್ತಾ? ಮಮ್ಮುಟ್ಟಿ ಅವರ ಸೂಟ್‌ಕೇಸ್‌ನ ನಂಬರ್ ಲಾಕ್ ಕೂಡ 369 ಆಗಿತ್ತು.
'ರಾಜವಿಂತೆ ಮಗನ್' ಚಿತ್ರದಲ್ಲಿ, ಮೋಹನ್ ಲಾಲ್ (Mohan Lal) ಮಾತನಾಡುತ್ತಾ 'ನನ್ನ ಫೋನ್ ಸಂಖ್ಯೆ 2255' ಎಂದು ಹೇಳುತ್ತಾನೆ. ಮೋಹನ್ ಲಾಲ್ ಅವರ ಲ್ಯಾಂಡ್ ಕ್ರೂಸರ್ ಎಸ್‌ಯುವಿಯ ನಂಬರ್ KL-07-CJ-2255 ಆಗಿತ್ತು. ಹೀಗೆ ಪ್ರತಿಯೊಬ್ಬ ನಟರು ಕೂಡ ಒಂದೊಂದು ನಂಬರ್ ಜೊತೆ ವಿಶೇಷ ಕನೆಕ್ಷನ್ ಹೊಂದಿರುತ್ತಾರೆ. ಕಲಾಭವನ್ ಮಣಿ ಅವರ ಎಲ್ಲಾ ಕಾರುಗಳಿಗೆ ನೋಂದಣಿ ಸಂಖ್ಯೆ 100 ಆಗಿದ್ದರ ಹಿಂದೆ ಆಟೋ ಒಂದರ ಸಂಖ್ಯೆ ಇದೆ ಎನ್ನಲಾಗುತ್ತೆ. ಇದೇ ರೀತಿಯಾಗಿ, ಸ್ಟಾರ್ ನಟ ಜಯಸೂರ್ಯ ಅವರ ಕಾರು ಸಂಖ್ಯೆ 1122 ಆಗಿದ್ದು, ಇದರ ಹಿಂದೆ ಕೂಡ ಇಂಟ್ರೆಸ್ಟಿಂಗ್ ಆಗಿರುವ ಕಥೆ ಇದೆ.
ಕೊಟ್ಟಾಯಂ ನಜೀರ್ ತಂಡದಲ್ಲಿ ಮಿಮಿಕ್ರಿ ಪ್ರದರ್ಶನ ನೀಡುತ್ತಿದ್ದಾಗ ಜಯಸೂರ್ಯ (Jaya Surya) ಸಾರಿಗೆ ಬಸ್‌ನಲ್ಲಿ ನಿಯಮಿತವಾಗಿ ಪ್ರಯಾಣಿಸುತ್ತಿದ್ದರು. ರಾತ್ರಿ ಶೋ ಬಳಿಕ, ಜಯಸೂರ್ಯ ಸುಮಾರು ಎರಡು ವರ್ಷಗಳ ಕಾಲ ಕೊಟ್ಟಾಯಂ ಬಸ್ ನಿಲ್ದಾಣದಲ್ಲಿ ಮಲಗಿ, ಬೆಳಗಿನ ಜಾವ ತಮ್ಮ ಊರು ಎರ್ನಾಕುಲಂಗೆ ಪ್ರಯಾಣಿಸುತ್ತಿದ್ದರು. ಈ ಸಾರಿಗೆ ಬಸ್‌ನ (KSRTC Bus Number) ಸಂಖ್ಯೆ 1122 ಆಗಿತ್ತು. ಇದು ಜಯಸೂರ್ಯ ಪ್ರಸ್ತುತ ಬಳಸುತ್ತಿರುವ ಮರ್ಸಿಡಿಸ್-ಬೆನ್ಜ್ ಬಿ-ಕ್ಲಾಸ್ ಮತ್ತು ಜಾಗ್ವಾರ್ ಎಕ್ಸ್‌ಎಫ್ ಕಾರುಗಳ ಸಂಖ್ಯೆ ಕೂಡ ಆಗಿದೆ. ಕೆಲವು ವರ್ಷಗಳ ಹಿಂದೆ ಒಂದು ವೇದಿಕೆಯಲ್ಲಿ ಜಯಸೂರ್ಯ ಸ್ವತಃ ಈ ಬಗ್ಗೆ ತಿಳಿಸಿದ್ದರು. ಆದರೆ ಈ ವೀಡಿಯೊ ಮತ್ತೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಕಳೆದ ವರ್ಷ ಜಯಸೂರ್ಯ ಖರೀದಿಸಿದ ಲೆಕ್ಸಸ್ ES 300H ಹೈಬ್ರಿಡ್ ಸೆಡಾನ್ ಕಾರಿನಲ್ಲೂ ಈ ಸಂಖ್ಯೆ ಇದೆ. ಚಲನಚಿತ್ರ ನಟ, ನಿರ್ಮಾಪಕ, ಹಿನ್ನೆಲೆ ಗಾಯಕ ಮತ್ತು ವಿತರಕರಾಗಿ ತಮ್ಮ ಜನಪ್ರಿಯತೆ ಪಡೆದಿರುವ ನಟ ಜಯಸೂರ್ಯ ಅವರ ವಾಹನ ಸಂಗ್ರಹದಲ್ಲಿ 2018 ರಲ್ಲಿ ಅವರು ಖರೀದಿಸಿದ್ದ ಮರ್ಸಿಡಿಸ್-ಬೆನ್ಜ್ ಐಷಾರಾಮಿ SUV GLC ಕೂಡ ಇದೆ. ಆಧು 2 ಸಿನಿಮಾ ಭರ್ಜರಿ ಯಶಸ್ಸನ್ನು ಕಂಡಾಗ ಜಯಸೂರ್ಯ ಕೆಂಪು ಬಣ್ಣದ ಮರ್ಸಿಡಿಸ್-ಬೆನ್ಜ್ GLC ಅನ್ನು ಖರೀದಿಸಿದ್ದರು.