- Home
- Entertainment
- Cine World
- Celebrity Kids Photos: ವಯಸ್ಸಿಗೆ ಬಂದ ಮಕ್ಕಳ ಮುಂದೆ ಮತ್ತೆ ತಂದೆಯಾದ ಖ್ಯಾತ ಸೆಲೆಬ್ರಿಟಿಗಳಿವರು
Celebrity Kids Photos: ವಯಸ್ಸಿಗೆ ಬಂದ ಮಕ್ಕಳ ಮುಂದೆ ಮತ್ತೆ ತಂದೆಯಾದ ಖ್ಯಾತ ಸೆಲೆಬ್ರಿಟಿಗಳಿವರು
ಭಾರತೀಯ ಚಿತ್ರರಂಗದಲ್ಲಿ ಕೆಲ ಸೆಲೆಬ್ರಿಟಿಗಳು ಒಂದು ಅಥವಾ ಎರಡು, ಮೂರು ಮದುವೆಯಾಗಿದ್ದಾರೆ. ಕೆಲ ಸೆಲೆಬ್ರಿಟಿಗಳ ಮಕ್ಕಳು ಮದುವೆ ವಯಸ್ಸಿಗೆ ಬಂದಮೇಲೂ ಕೂಡ ಮಕ್ಕಳನ್ನು ಮಾಡಿಕೊಂಡ ಉದಾಹರಣೆಯಿದೆ. ಹಾಗಾದರೆ ಅವರು ಯಾರು? ಯಾರು?

ಅರ್ಬಾಜ್ ಖಾನ್
ನಟ ಅರ್ಬಾಜ್ ಖಾನ್ ಅವರು ಇಂದು ಎರಡನೇ ಮಗುವಿಗೆ ತಂದೆಯಾಗಿದ್ದಾರೆ. ಮೊದಲ ಪತ್ನಿ ಮಲೈಕಾ ಅರೋರಿಂದ ಅವರಿಗೆ ಅರ್ಹಾನ್ ಎಂಬ ಮಗನಿದ್ದಾನೆ, ಆತನಿಗೆ ಈಗ 22 ವರ್ಷ ವಯಸ್ಸು.
ಶಾರುಖ್ ಖಾನ್
ನಟ ಶಾರುಖ್ ಖಾನ್ ಹಾಗೂ ಗೌರಿ ಖಾನ್ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಗೆ ಆರ್ಯನ್ ಖಾನ್, ಸುಹಾನಾ ಖಾನ್, ಇಬ್ರಾಹಿಂ ಖಾನ್ ಎಂಬ ಮೂವರು ಮಕ್ಕಳಿದ್ದಾರೆ. ಗೌರಿ ಖಾನ್ ಅವರು ಆರ್ಯನ್, ಸುಹಾನಾಗೆ ಜನ್ಮ ನೀಡಿದ್ದರು. ಅದಾದ ಬಳಿಕ ಸರೋಗಸಿ ಮೂಲಕ ಇಬ್ರಾಹಿಂ ಖಾನ್ ಜನಿಸಿದ್ದರು. ಆರ್ಯನ್ ಖಾನ್‌ಗೂ ಇಬ್ರಾಹಿಂ ಖಾನ್‌ಗೂ 16 ವರ್ಷದ ವಯಸ್ಸಿನ ಅಂತರವಿದೆ.
ಆಮಿರ್ ಖಾನ್
ಆಮಿರ್ ಖಾನ್ ಅವರು ರೀನಾ ದತ್ತರನ್ನು ಮದುವೆಯಾದರು. ಇವರಿಗೆ ಇರಾ ಖಾನ್, ಜುನೈದ್ ಖಾನ್ ಎಂಬ ಮಕ್ಕಳಿದ್ದಾರೆ. ಆಮೇಲೆ ಅವರು ಕಿರಣ್ ರಾವ್ ಅವರನ್ನು ಮದುವೆಯಾದರು. ಅವರಿಬ್ಬರಿಗೆ ಆಜಾದ್ ಎಂಬ ಮಗನಿದ್ದಾನೆ. ಜುನೈದ್ ಖಾನ್, ಆಜಾದ್ ನಡುವೆ 18 ವರ್ಷಗಳ ವಯಸ್ಸಿನ ಅಂತರವಿದೆ.
ಮಹೇಶ್ ಭಟ್
ಖ್ಯಾತ ನಿರ್ದೇಶಕ ಮಹೇಶ್ ಭಟ್ ಅವರು ಕಿರಣ್ ಭಟ್‌ರನ್ನು ಮದುವೆಯಾದರು. ಇವರಿಗೆ ಪೂಜಾ ಭಟ್, ರಾಹುಲ್ ಭಟ್ ಎಂಬ ಮಕ್ಕಳಿದ್ದಾರೆ. ಆ ಬಳಿಕ ಮಹೇಶ್ ಅವರು ಸೋನಿ ಎಂಬುವವರನ್ನು ಮದುವೆಯಾದರು. ಸೋನಿ, ಮಹೇಶ್ ಭಟ್‌ಗೆ ಶಹೀನ್ ಭಟ್, ಆಲಿಯಾ ಭಟ್ ಎಂಬ ಮಕ್ಕಳಿದ್ದಾರೆ. ಪೂಜಾ ಭಟ್ ಹಾಗೂ ಆಲಿಯಾ ಭಟ್ ಮಧ್ಯೆ 21 ವರ್ಷಗಳ ವಯಸ್ಸಿನ ಅಂತರವಿದೆ.
ಬೋನಿ ಕಪೂರ್
ನಿರ್ಮಾಪಕ ಬೋನಿ ಕಪೂರ್ ಅವರು ಮೊದಲು ಮೋನಾ ಶೌರಿ ಕಪೂರ್ ಜೊತೆ ಮದುವೆಯಾದರು. ಇವರಿಗೆ ಅರ್ಜುನ್ ಕಪೂರ್, ಅನ್ಶುಲಾ ಕಪೂರ್ ಎಂಬ ಮಕ್ಕಳಿದ್ದಾರೆ. ಆಮೇಲೆ ನಟಿ ಶ್ರೀದೇವಿಯನ್ನು ಮದುವೆಯಾದರು. ಶ್ರೀದೇವಿ ಹಾಗೂ ಬೋನಿಗೆ ಜಾನ್ವಿ ಕಪೂರ್, ಖುಷಿ ಕಪೂರ್ ಎಂಬ ಮಕ್ಕಳಿದ್ದಾರೆ. ಅರ್ಜುನ್ ಹಾಗೂ ಜಾನ್ವಿ ಮಧ್ಯೆ 12 ವರ್ಷಗಳ ವಯಸ್ಸಿನ ಅಂತರವಿದೆ.
ಸೈಫ್ ಅಲಿ ಖಾನ್
ನಟ ಸೈಫ್ ಅಲಿ ಖಾನ್ ಅವರು ನಾಲ್ಕು ಮಕ್ಕಳ ತಂದೆ. ಮೊದಲು ನಟಿ ಅಮೃತಾ ಸಿಂಗ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಸಾರಾ ಅಲಿ ಖಾನ್, ಇಬ್ರಾಹಿಂ ಅಲಿ ಖಾನ್ ಎಂಬ ಮಕ್ಕಳಿದ್ದರು. ಅದಾದ ಬಳಿಕ ಅಮೃತಾಗೆ ಡಿವೋರ್ಸ್ ಕೊಟ್ಟು ನಟಿ ಕರೀನಾ ಕಪೂರ್ ಅವರನ್ನು ಮದುವೆಯಾದರು. ಕರೀನಾ ಹಾಗೂ ಸೈಫ್‌ಗೆ ಇಬ್ಬರು ಗಂಡು ಮಕ್ಕಳು. ಸಾರಾ ಅಲಿ ಖಾನ್ ಹಾಗೂ ಕರೀನಾರ ಮೊದಲ ಮಗ ತೈಮೂರ್ ಮಧ್ಯೆ 23 ವರ್ಷದ ವಯಸ್ಸಿನ ಅಂತರವಿದೆ.
ನೀಲಿಮಾ ಅಜೀಮ್
ನೀಲಿಮಾ ಅಜೀಮ್ ಹಾಗೂ ನಟ ಪಂಕಜ್ ಕಪೂರ್ ಅವರು ಮದುವೆಯಾಗಿದ್ದರು. ಇವರಿಗೆ ಶಾಹೀದ್ ಕಪೂರ್ ಎಂಬ ಮಗನಿದ್ದಾನೆ. ಆ ಬಳಿಕ ಇವರಿಬ್ಬರು ಡಿವೋರ್ಸ್ ಪಡೆದರು. ನೀಲಿಮಾ ಅವರು ರಾಜೇಶ್ ಕಟ್ಟರ್ ಜೊತೆ ಮದುವೆಯಾಗಿದ್ದು, ಅವರಿಗೆ ಇಶಾನ್ ಕಟ್ಟರ್ ಎಂಬ ಮಗ ಹುಟ್ಟಿದ್ದಾರೆ. ಇತ್ತ ಪಂಕಜ್ ಕಪೂರ್ ಕೂಡ ಸುಪ್ರಿಯಾ ಪಾಠಕ್ ಅವರನ್ನು ಮದುವೆಯಾಗಿದ್ದು, ಅವರಿಗೂ ಇಬ್ಬರು ಮಕ್ಕಳಿದ್ದಾರೆ. ಶಾಹೀದ್ ಕಪೂರ್ ಹಾಗೂ ಇಶಾನ್ ಮಧ್ಯೆ 12 ವರ್ಷ ವಯಸ್ಸಿನ ಅಂತರವಿದೆ.