- Home
- Entertainment
- Cine World
- ಬಾಲಿವುಡ್‌ನ ಬೆಚ್ಚಿಬೀಳಿಸುವ ಸೀಕ್ರೆಟ್ ಹೊರಹಾಕಿದ ಕನ್ನಡದ 'ವರದನಾಯಕ' ಬ್ಯೂಟಿ; ಟ್ರೋಲ್ ವಿರುದ್ಧ ಕಿಡಿಕಿಡಿ!
ಬಾಲಿವುಡ್‌ನ ಬೆಚ್ಚಿಬೀಳಿಸುವ ಸೀಕ್ರೆಟ್ ಹೊರಹಾಕಿದ ಕನ್ನಡದ 'ವರದನಾಯಕ' ಬ್ಯೂಟಿ; ಟ್ರೋಲ್ ವಿರುದ್ಧ ಕಿಡಿಕಿಡಿ!
ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಂಡ ಸಮೀರಾ, "ಒಬ್ಬ ನಟಿಯಾಗಿ ನಾನು ಯಾವಾಗಲೂ ಬೆಳ್ಳಗೆ ಕಾಣಿಸಿಕೊಳ್ಳಬೇಕು ಎಂಬ ಒತ್ತಡವಿತ್ತು. ವಿಚಿತ್ರ ಕಾರಣಕ್ಕಾಗಿ ಮೇಕಪ್ ಮ್ಯಾನ್‌ಗಳು ನನಗೆ ಯಾವಾಗಲೂ ಹೆಚ್ಚು ಬಿಳಿಯಾದ ಮೇಕಪ್ ಹಚ್ಚುತ್ತಿದ್ದರು. ಇಡೀ ದೇಹಕ್ಕೆ (Body Makeup) ಮೇಕಪ್ ಮಾಡಲಾಗುತ್ತಿತ್ತು.

ಮುಂಬೈ: ಚಿತ್ರರಂಗ ಅಂದರೇನೇ ಹಾಗೆ, ಅಲ್ಲಿ ಬಣ್ಣದ ಲೋಕದ ಹೊಳಪಿನ ಹಿಂದೆ ಅದೆಷ್ಟೋ ಕಹಿ ಸತ್ಯಗಳು ಅಡಗಿರುತ್ತವೆ. ಗ್ಲಾಮರ್ ಪ್ರಪಂಚದ ನಟಿಯರು ಯಾವಾಗಲೂ ಸುಂದರವಾಗಿ, ಬೆಳ್ಳಗೆ ಮತ್ತು ಸಪೂರವಾಗಿ ಕಾಣಿಸಿಕೊಳ್ಳಬೇಕು ಎಂಬ ಅಲಿಖಿತ ನಿಯಮವೊಂದು ಬಾಲಿವುಡ್‌ನಲ್ಲಿ ದಶಕಗಳಿಂದ ಮನೆಮಾಡಿದೆ. ಇದೀಗ ಈ "ವಿಷಕಾರಿ ಸೌಂದರ್ಯ ಮಾನದಂಡಗಳ" (Toxic Beauty Norms) ಬಗ್ಗೆ ನಟಿ ಸಮೀರಾ ರೆಡ್ಡಿ (Sameera Reddy) ಆಕ್ರೋಶ ಹೊರಹಾಕಿದ್ದಾರೆ.
ಬೆಳ್ಳಗೆ ಕಾಣಲು ಬಾಡಿ ಮೇಕಪ್!
ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಂಡ ಸಮೀರಾ, "ಒಬ್ಬ ನಟಿಯಾಗಿ ನಾನು ಯಾವಾಗಲೂ ಬೆಳ್ಳಗೆ ಕಾಣಿಸಿಕೊಳ್ಳಬೇಕು ಎಂಬ ಒತ್ತಡವಿತ್ತು. ಯಾವುದೋ ವಿಚಿತ್ರ ಕಾರಣಕ್ಕಾಗಿ ಮೇಕಪ್ ಮ್ಯಾನ್‌ಗಳು ನನಗೆ ಯಾವಾಗಲೂ ನನಗಿಂತ ಹೆಚ್ಚು ಬಿಳಿಯಾದ ಮೇಕಪ್ ಹಚ್ಚುತ್ತಿದ್ದರು.
ಮುಖ ಮಾತ್ರವಲ್ಲದೆ, ನನ್ನ ಇಡೀ ದೇಹಕ್ಕೆ (Body Makeup) ಮೇಕಪ್ ಮಾಡಲಾಗುತ್ತಿತ್ತು. ಇದು ನನಗೆ ತುಂಬಾ ಮುಜುಗರ ತರುತ್ತಿತ್ತು" ಎಂದು ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ, "ನಾನು ಎತ್ತರವಾಗಿದ್ದ ಕಾರಣ ನಾನು ತುಂಬಾ ದೊಡ್ಡವಳು ಎಂದು ಹೀಯಾಳಿಸುತ್ತಿದ್ದರು. ನನ್ನ ಪ್ರತಿಭೆ ಅಥವಾ ನಟನೆಯ ಬಗ್ಗೆ ಮಾತನಾಡುವ ಬದಲು, ಕೇವಲ ನನ್ನ ದೇಹದ ಅಳತೆ ಮತ್ತು ಬಣ್ಣದ ಬಗ್ಗೆಯೇ ಚರ್ಚೆಗಳಾಗುತ್ತಿದ್ದವು. ಅಂದು ಅದನ್ನು ವಿರೋಧಿಸುವ ಧೈರ್ಯ ನನಗಿರಲಿಲ್ಲ, ಆದರೆ ಇಂದು ಅದೆಲ್ಲವನ್ನೂ ನೆನಪಿಸಿಕೊಂಡರೆ ಅಸಹ್ಯವೆನಿಸುತ್ತದೆ" ಎಂದು ಅವರು ಬಾಲಿವುಡ್‌ನ ಕಿಡಿ ಕಾರಿದ್ದಾರೆ.
ತಾಯ್ತನ ಮತ್ತು ಮಾನಸಿಕ ಸಂಘರ್ಷ
ಸಿನಿಮಾದಿಂದ ದೂರ ಸರಿದ ನಂತರ ಸಮೀರಾ ರೆಡ್ಡಿ ಸೋಷಿಯಲ್ ಮೀಡಿಯಾದಲ್ಲಿ 'ಮೆಸ್ಸಿ ಮಾಮಾ' (Messy Mama) ಎಂದೇ ಖ್ಯಾತಿ ಪಡೆದಿದ್ದಾರೆ. ತಾಯ್ತನದ ನಂತರ ಎದುರಾಗುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳ ಬಗ್ಗೆ ಅವರು ಮುಕ್ತವಾಗಿ ಮಾತನಾಡುತ್ತಾರೆ. "ಮೊದಲ ಮಗುವಿನ ನಂತರ ನನ್ನ ತೂಕ ಹೆಚ್ಚಾದಾಗ ನಾನು ತುಂಬಾ ಒಂಟಿಯಾದೆ.
ಜನರು ನನ್ನನ್ನು ಜಡ್ಜ್ ಮಾಡುತ್ತಿದ್ದರು, ಇದರಿಂದ ನನ್ನ ಆತ್ಮವಿಶ್ವಾಸ ಕುಸಿದುಹೋಗಿತ್ತು. ಆದರೆ ಎರಡನೇ ಮಗು ನೈರಾ ಜನಿಸಿದಾಗ, ನಾನು ಇನ್ಯಾರೂ ಇಂತಹ ನೋವು ಅನುಭವಿಸಬಾರದು ಎಂದು ನಿರ್ಧರಿಸಿದೆ" ಎನ್ನುತ್ತಾರೆ ಸಮೀರಾ.
ಟ್ರೋಲ್‌ಗಳಿಗೆ ಡೋಂಟ್ ಕೇರ್!
ಸಮೀರಾ ಅವರು ತಮ್ಮ ನೆರೆತ ಕೂದಲು (Grey Hair) ಮತ್ತು ಬೆಳ್ಳಗಿಲ್ಲದ ನೈಸರ್ಗಿಕ ಚರ್ಮದ ಫೋಟೋಗಳನ್ನು ಹಂಚಿಕೊಂಡಾಗ ಸಾಕಷ್ಟು ಟ್ರೋಲ್ ಮಾಡಲಾಗಿತ್ತು. "ನೀವು ತಾಯಿಯಾಗಿದ್ದೀರಿ, ದಪ್ಪಗಾಗಿದ್ದೀರಿ, ನಿಮ್ಮ ಸಿನಿ ಜರ್ನಿ ಮುಗಿದಿದೆ ಎಂದು ಜನ ಹೇಳಿದರು. ಆದರೆ ನಾನು ಅದನ್ನೇ ಸವಾಲಾಗಿ ಸ್ವೀಕರಿಸಿದೆ. ನನ್ನ ಆನ್‌ಲೈನ್ ಸಮುದಾಯದಲ್ಲಿ ಮಹಿಳೆಯರಿಗೆ ಸುರಕ್ಷಿತ ಭಾವನೆ ಮೂಡಿಸುವುದು ನನ್ನ ಗುರಿ. ಈಗ ನನಗೆ ಟ್ರೋಲ್‌ಗಳ ಬಗ್ಗೆ ಭಯವಿಲ್ಲ" ಎಂದು ಅವರು ಖಡಕ್ ಆಗಿ ಉತ್ತರಿಸಿದ್ದಾರೆ.
ಆಧುನಿಕ ಪೋಷಕತ್ವದ ಬಗ್ಗೆ ಸಮೀರಾ ಕಿವಿಮಾತು
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುನ್ನ ಮಾತನಾಡಿದ ಅವರು, ಇಂದಿನ ಪೋಷಕರು ಮಕ್ಕಳ ಶಾಲೆಯ ಅಂಕಗಳಿಗಿಂತ ಹೆಚ್ಚಾಗಿ ಅವರ ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಎಂದಿದ್ದಾರೆ. ಲಿಂಗ ಸಮಾನತೆ, ಬೌಲಿಂಗ್ (Bullying) ಮತ್ತು ಸೋಷಿಯಲ್ ಮೀಡಿಯಾ ಟ್ರೋಲಿಂಗ್ ಬಗ್ಗೆ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಅರಿವು ಮೂಡಿಸುವುದು ಇಂದಿನ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವಿಶೇಷವೆಂದರೆ, ಸಮೀರಾ ರೆಡ್ಡಿ ಅವರು ಕೊನೆಯದಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿದ್ದು ಕನ್ನಡದ 'ವರದನಾಯಕ' ಚಿತ್ರದಲ್ಲಿ. ಕಿಚ್ಚ ಸುದೀಪ್ ಮತ್ತು ಚಿರಂಜೀವಿ ಸರ್ಜಾ ಅಭಿನಯದ ಈ ಚಿತ್ರದಲ್ಲಿ ಸಮೀರಾ ಪ್ರಮುಖ ಪಾತ್ರ ಮಾಡಿದ್ದರು. ಸದ್ಯ ಸಿನಿಮಾದಿಂದ ದೂರವಿದ್ದರೂ, ಮಹಿಳೆಯರಿಗೆ ಸ್ಫೂರ್ತಿಯಾಗಿ ಸಮೀರಾ ರೆಡ್ಡಿ ಸದಾ ಸುದ್ದಿಯಲ್ಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

