- Home
- Entertainment
- Cine World
- 'ಟ್ರೀಟ್‌ಮೆಂಟ್‌ಗೇ ಟೈಮ್ ಇಲ್ಲ, ಇನ್ನು ಡೇಟಿಂಗ್?'.. ಆ ನಟನ ಜೊತೆಗೆ 'ಏನೂ' ಇಲ್ಲ ಎಂದ ಮೃಣಾಲ್ ಠಾಕೂರ್!
'ಟ್ರೀಟ್‌ಮೆಂಟ್‌ಗೇ ಟೈಮ್ ಇಲ್ಲ, ಇನ್ನು ಡೇಟಿಂಗ್?'.. ಆ ನಟನ ಜೊತೆಗೆ 'ಏನೂ' ಇಲ್ಲ ಎಂದ ಮೃಣಾಲ್ ಠಾಕೂರ್!
'ಸನ್ ಆಫ್ ಸರ್ದಾರ್ 2' ಪ್ರೀಮಿಯರ್‌ನಲ್ಲಿ ಧನುಷ್ ಮತ್ತು ಮೃಣಾಲ್ ಭೇಟಿಯಾದ ವಿಡಿಯೋ ವೈರಲ್ ಆಗಿತ್ತು. ಅಷ್ಟೇ ಅಲ್ಲ, ಧನುಷ್ ಅವರ 'ತೇರೆ ಇಷ್ಕ್ ಮೇ' ಚಿತ್ರದ ಪಾರ್ಟಿಯಲ್ಲೂ ಮೃಣಾಲ್ ಮಿಂಚಿದ್ದರು. ಇದರಿಂದ 'ಅವರಿಬ್ಬರ ನಡುವೆ ಏನೋ ನಡೆಯುತ್ತಿದೆ" ಎಂದು ಸುದ್ದಿ ಹಬ್ಬಿತ್ತು.

ಧನುಷ್ ಜೊತೆ ಮದುವೆ ಗಾಸಿಪ್‌ಗೆ ಮೃಣಾಲ್ ಠಾಕೂರ್ 'ಖಡಕ್' ಆನ್ಸರ್: "ಟ್ರೀಟ್‌ಮೆಂಟ್‌ಗೇ ಟೈಮ್ ಇಲ್ಲ, ಇನ್ನು ಡೇಟಿಂಗ್ ಎಲ್ಲಿಂದ ಬಂತು?"
ಬಾಲಿವುಡ್‌ನಿಂದ ಟಾಲಿವುಡ್‌ವರೆಗೆ ತಮ್ಮ ಅಭಿನಯದ ಮೂಲಕ ಪಡ್ಡೆಹೈಕಳ ನಿದ್ದೆ ಗೆಡಿಸಿರುವ 'ಸಿತಾರಾಮಂ' ಬೆಡಗಿ ಮೃಣಾಲ್ ಠಾಕೂರ್ (Mrunal Thakur) ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ಸುದ್ದಿಯಾಗಿರುವುದು ತಮ್ಮ ಸಿನಿಮಾಗಳಿಗಾಗಿ ಅಲ್ಲ, ಬದಲಾಗಿ ತಮ್ಮ 'ಸಿಕ್ರೇಟ್' ಡೇಟಿಂಗ್ ವದಂತಿಗಳಿಗಾಗಿ!
ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಒಂದು ಸುದ್ದಿ ಭಾರಿ ಸದ್ದು ಮಾಡುತ್ತಿತ್ತು – ಅದೇನೆಂದರೆ ಮೃಣಾಲ್ ಮತ್ತು ತಮಿಳಿನ ಸ್ಟಾರ್ ನಟ ಧನುಷ್ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬುದು!
ಕಿಚ್ಚು ಹಚ್ಚಿದ ಆ ಒಂದು ವಿಡಿಯೋ!
ಈ ಗಾಸಿಪ್‌ಗೆ ಪುಷ್ಟಿ ನೀಡುವಂತೆ ಕಳೆದ ವರ್ಷ 'ಸನ್ ಆಫ್ ಸರ್ದಾರ್ 2' ಪ್ರೀಮಿಯರ್‌ನಲ್ಲಿ ಧನುಷ್ ಮತ್ತು ಮೃಣಾಲ್ ಭೇಟಿಯಾದ ವಿಡಿಯೋ ವೈರಲ್ ಆಗಿತ್ತು. ಅಷ್ಟೇ ಅಲ್ಲ, ಧನುಷ್ ಅವರ 'ತೇರೆ ಇಷ್ಕ್ ಮೇ' ಚಿತ್ರದ ಪಾರ್ಟಿಯಲ್ಲೂ ಮೃಣಾಲ್ ಮಿಂಚಿದ್ದರು. ಇದನ್ನು ನೋಡಿದ ನೆಟ್ಟಿಗರು "ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ" ಎಂದು ಸುಳ್ಳು ಸುದ್ದಿಯ ಬೆಂಕಿಗೆ ತುಪ್ಪ ಸುರಿದಿದ್ದರು. ಆದರೆ ಈಗ ಈ ಎಲ್ಲಾ ಗಾಳಿ ಮಾತುಗಳಿಗೆ ಮೃಣಾಲ್ ಪಕ್ಕಾ 'ಕ್ಲೈಮ್ಯಾಕ್ಸ್' ಕೊಟ್ಟಿದ್ದಾರೆ.
"ನನಗೆ ಡೇಟಿಂಗ್ ಮಾಡಲು ಸಮಯವೇ ಇಲ್ಲ!"
ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಮನಬಿಚ್ಚಿ ಮಾತನಾಡಿರುವ ಮೃಣಾಲ್, "ನನ್ನ ವೈಯಕ್ತಿಕ ಜೀವನ ಹೆಡ್‌ಲೈನ್ ಆಗುವುದು ನನಗಿಷ್ಟವಿಲ್ಲ. ನಾನು ಮಾಡುವ ಕೆಲಸದಿಂದ ಜನರು ನನ್ನನ್ನು ಗುರುತಿಸಲಿ ಎಂದು ಬಯಸುತ್ತೇನೆ. ನಿಜ ಹೇಳಬೇಕೆಂದರೆ, ನನಗೆ ಡೇಟಿಂಗ್ ಮಾಡಲು ಈಗ ಸಮಯವೇ ಇಲ್ಲ" ಎಂದು ಸೀದಾ ಸಾದಾ ಉತ್ತರ ನೀಡಿದ್ದಾರೆ.
ಲಿಗಮೆಂಟ್ ಇಂಜುರಿ ಮತ್ತು ಮೃಣಾಲ್ ಸಂಕಷ್ಟ:
ಮೃಣಾಲ್ ಅವರು ಕೇವಲ ಡೇಟಿಂಗ್ ಬಗ್ಗೆ ಮಾತ್ರವಲ್ಲದೆ ತಮ್ಮ ಆರೋಗ್ಯದ ಬಗ್ಗೆಯೂ ಒಂದು ಶಾಕಿಂಗ್ ವಿಷಯ ಹಂಚಿಕೊಂಡಿದ್ದಾರೆ. "ನನ್ನ ಕಾಲಿನ ಲಿಗಮೆಂಟ್ ಹರಿದಿದೆ (Ligament tear). ಎಕ್ಸ್-ರೇ ಮಾಡಿಸಿದ ಮೇಲೆ ಇದು ಗೊತ್ತಾಯಿತು. ಅದಕ್ಕೆ ಈಗ ತಕ್ಷಣ ಚಿಕಿತ್ಸೆ ಪಡೆಯುವ ಅಗತ್ಯವಿದೆ. ಆದರೆ ಆ ಟ್ರೀಟ್‌ಮೆಂಟ್ ತೆಗೆದುಕೊಳ್ಳುವುದಕ್ಕೂ ನನಗೆ ಸಮಯ ಸಿಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ನಾನು ಯಾರ ಜೊತೆ ಡೇಟಿಂಗ್ ಮಾಡಲು ಸಾಧ್ಯ?" ಎಂದು ಪ್ರಶ್ನಿಸುವ ಮೂಲಕ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ.
ಪಿಆರ್ ಟೀಮ್ ಮೇಲೆ ಬೇಸರ:
ಸಾಮಾನ್ಯವಾಗಿ ಸಿನಿಮಾ ಬಿಡುಗಡೆಯ ಸಮಯದಲ್ಲಿ ಇಂತಹ ವದಂತಿಗಳು ಹರಡಿದಾಗ, ಜನರು ಇದು ಪಬ್ಲಿಸಿಟಿ ಸ್ಟಂಟ್ ಎಂದು ಭಾವಿಸುತ್ತಾರೆ. ಈ ಬಗ್ಗೆ ಮೃಣಾಲ್ ಬೇಸರ ವ್ಯಕ್ತಪಡಿಸಿದ್ದಾರೆ. "ನನ್ನ ಸಿನಿಮಾ ರಿಲೀಸ್ ಆಗುವಾಗ ಇಂತಹ ಸುದ್ದಿಗಳು ಬಂದರೆ ನನ್ನ ಕಷ್ಟವೆಲ್ಲಾ ಮರೆಯಾಗಿ ಹೋಗುತ್ತದೆ. ಜನರು ಇದೆಲ್ಲಾ ನನ್ನ ಪಿಆರ್ (PR) ತಂಡದ ಕೆಲಸ ಅಂದುಕೊಳ್ಳುತ್ತಾರೆ. ಆದರೆ ಇಂತಹ ಗಾಳಿ ಸುದ್ದಿಗಳಿಂದ ನನ್ನನ್ನು ರಕ್ಷಿಸಿಕೊಳ್ಳಲು ಈಗ ನಾನು ಪ್ರತ್ಯೇಕ ತಂಡವನ್ನೇ ಇಟ್ಟುಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ" ಎಂದಿದ್ದಾರೆ.
"ಪ್ರೀತಿಯಾದರೆ ನಾನೇ ಹೇಳ್ತೀನಿ!"
ತಮ್ಮ ಪಾರದರ್ಶಕ ಸ್ವಭಾವದ ಬಗ್ಗೆ ಹೇಳುತ್ತಾ, "ನನ್ನ ಗೆಳೆಯರು ನನಗೆ ಒಂದು ಸಣ್ಣ ಹೂವು ಕೊಟ್ಟರೂ ನಾನು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮದಿಂದ ಪೋಸ್ಟ್ ಮಾಡುತ್ತೇನೆ. ಹಾಗಿರುವಾಗ ನನಗೆ ಯಾರ ಮೇಲಾದರೂ ಪ್ರೀತಿಯಾದರೆ, ಅದನ್ನು ನಾನು ಮುಚ್ಚಿಡುತ್ತೇನೆಯೇ? ಖಂಡಿತವಾಗಿಯೂ ನಾನೇ ಎಲ್ಲರಿಗೂ ತಿಳಿಸುತ್ತೇನೆ" ಎಂದು ಮೃಣಾಲ್ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.
ಒಟ್ಟಿನಲ್ಲಿ, ಕೆಲಸದ ಒತ್ತಡ ಮತ್ತು ಕಾಲಿನ ನೋವಿನ ನಡುವೆಯೂ ಮೃಣಾಲ್ ಠಾಕೂರ್ ತಮ್ಮ ವೃತ್ತಿಜೀವನದತ್ತ ಗಮನ ಹರಿಸುತ್ತಿದ್ದಾರೆ. ಸದ್ಯಕ್ಕೆ ಅವರ ಜೀವನದಲ್ಲಿ ಸಿನಿಮಾವೇ ಸರ್ವಸ್ವ, 'ಲವ್ ಅಂಡ್ ಡೇಟಿಂಗ್'ಗೆ ಅಲ್ಲಿ ಜಾಗವಿಲ್ಲ ಎಂಬುದು ಸ್ಪಷ್ಟವಾಗಿದೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

