ಕರೀನಾ ಕಪೂರ್ ತಾಯಿ ಬಬಿತಾಗೆ ಮಗಳ ಕೆರಿಯರ್‌ಗಿಂತ ಹಟವೇ ಮುಖ್ಯವಾಗಿತ್ತು!
ಬಾಲಿವುಡ್‌ನ ಗ್ರೀಕ್ ಗಾಡ್ ಹೃತಿಕ್ ರೋಷನ್‌ಗೆ 47ರ ಸಂಭ್ರಮ. ಜನವರಿ 10, 1974ರಂದು ಮುಂಬೈನಲ್ಲಿ ಜನಿಸಿದ ಹೃತಿಕ್ ರೋಷನ್ ತಂದೆ ರಾಕೇಶ್ ರೋಶನ್ ನಿರ್ದೇಶನದ 'ಕಹೋ ನಾ ಪ್ಯಾರ್ ಹೈ' ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಅಮಿಶಾ ಪಟೇಲ್ ಹೃತಿಕ್‌ರಿಗೆ ನಾಯಕಿಯಾಗಿದ್ದಾರೆ. ಸೂಪರ್ ಹಿಟ್ ಆದ ಈ ಸಿನಿಮಾದಿಂದ ರಾತ್ರೋರಾತ್ರಿ ಅಮಿಶಾ ಪಟೇಲ್ ಮತ್ತು ಹೃತಿಕ್ ಸೂಪರ್ ಸ್ಟಾರ್ ಆಗಿದ್ದರು. ಕರೀನಾ ಕಪೂರ್ ತಾಯಿ ಬಬಿತಾ ಹಟ ಹಿಡಿಯದಿದ್ದರೆ, ಈ ಸೂಪರ್‌ಹಿಟ್ ಚಿತ್ರದ ನಾಯಕಿ ಅಮಿಶಾ ಆಗಿರುತ್ತಿರಲ್ಲಿಲ್ಲ. ಏಕೆಂದರೆ ಮೊದಲು ಕರೀನಾ ಕಪೂರ್ ಈ ಸಿನಿಮಾದ ಹಿರೋಯಿನ್ ಆಗಿ ಆಯ್ಕೆಯಾಗಿದ್ದರು. ಅಷ್ಟಕ್ಕೂ ಆಗಿದ್ದೇನು?
'ಕಹೋ ನಾ ಪ್ಯಾರ್ ಹೈ' ಚಿತ್ರಕ್ಕೆ ಮೊದಲು ಕರೀನಾ ಕಪೂರ್ ಸಹಿ ಹಾಕಿದರು. ಅಷ್ಟೇ ಅಲ್ಲ, ಸಿನಿಮಾದ ಕೆಲವು ದೃಶ್ಯಗಳ ಶೂಟಿಂಗ್‌ನಲ್ಲಿ ಸಹ ಪಾಲ್ಗೊಂಡಿದ್ದರು. ಆದರೆ ಅವರ ತಾಯಿ ಬಬಿತಾ ಅವರ ಹಟದ ಕಾರಣದಿಂದಾಗಿ, ಕರೀನಾ ಚಿತ್ರವನ್ನು ಮಧ್ಯದಲ್ಲಿ ಬಿಡಬೇಕಾಯಿತು.
ಮುಹೂರ್ತ ನಂತರ, ರಾಕೇಶ್ ರೋಶನ್ ವರ್ಸೋವಾದ ಕಾನ್ವೆಂಟ್ ವಿಲ್ಲಾದಲ್ಲಿ 'ಕಹೋ ನಾ ಪ್ಯಾರ್ ಹೈ' ಚಿತ್ರದ ಚಿತ್ರೀಕರಣ ಪ್ರಾರಂಭಿಸಿದರು.
ಚಿತ್ರದ ಮೊದಲ ದಿನದಂದು ಕರೀನಾ ನೃತ್ಯವನ್ನು ಚಿತ್ರೀಕರಿಸಬೇಕಿತ್ತು. ಅವರ ಜೊತೆ ತಾಯಿ ಬಬಿತಾ ಮತ್ತು ಸಹೋದರಿ ಕರಿಷ್ಮಾ ಕೂಡ ಹಾಜರಿದ್ದರು.
ಕರೀನಾ ಅವರು ಮೊದಲ ಬಾರಿಗೆ ಕ್ಯಾಮೆರಾವನ್ನು ಎದುರಿಸುತ್ತಿದ್ದರಿಂದ ನೃತ್ಯ ನಿರ್ದೇಶಕರು ಕರೀನಾರಿಗೆ ಸುಲಭವಾದ ಸ್ಟೆಪ್ಸ್ ನೀಡಿದರು. ಮೊದಲ ದಿನ ಮುಗಿದಾಗ ಕರೀನಾ ಕೆಲವು ಡ್ಯಾನ್ಸ್ ಸ್ಟೆಪ್ಸ್ ಅಂತಿಮಗೊಳಿಸಿದರು. ಮರುದಿನ, ಕರೀನಾಳ ತಾಯಿ ಬಬಿತಾ ರಾಕೇಶ್ ರೋಶನ್ ಅವರಿಗೆ ಕಾಲ್ ಮಾಡಿ' ಕರೀನಾಳಿಗೆ ಮೊದಲ ದಿನದ ಡ್ಯಾನ್ಸ್ ಕಂಫರ್ಟಬಲ್ ಆಗಿಲ್ಲ. ನೀವು ಹಾಡು ಬದಲು ಆರಂಭದಲ್ಲಿ ಆ್ಯಕ್ಟಿಂಗ್ ಸೀನ್ ಮಾಡಬೇಕಿತ್ತು ಎಂದು ಹೇಳಿದ್ದರು.
ಹಾಡಿನ ಶೂಟಿಂಗ್‌ಗಾಗಿ ಇಡೀ ಸೆಟ್ ಸಿದ್ಧಪಡಿಸಿದ್ದರಿಂದ ರಾಕೇಶ್ ರೋಷನ್ ಅವರು ಬಬಿತಾ ಅವರ ಮಾತುಗಳನ್ನು ಕೇಳಿ ಆಘಾತಕ್ಕೊಳಗಾದರು. ಕರೀನಾ ಉತ್ತಮ ಕೆಲಸ ಮಾಡುತ್ತಿದ್ದಾಳೆ ಮತ್ತು ಆಕೆಯ ನೃತ್ಯದಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಅವರು ಬಬಿತಾಗೆ ವಿವರಿಸಿದರು.
ರಾಕೇಶ್ ರೋಷನ್ ಅವರ ಮಾತು ಬಬಿತಾ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ ಮತ್ತು ಕರೀನಾಗಾಗಿ ಮೊದಲ ಹಾಡನ್ನು ಶೂಟ್ ಮಾಡಬೇಡಿ. ಚಿತ್ರದ ದೃಶ್ಯಗಳನ್ನು ಚಿತ್ರೀಕರಿಸಬೇಕು. ನಿಮಗೆ ಅದನ್ನು ಮಾಡಲು ಸಾಧ್ಯವಾಗದಿದ್ದರೆ ನಾನು ಈ ಚಿತ್ರವನ್ನು ಕರೀನಾಗೆ ಮಾಡಲು ಬಿಡುವುದಿಲ್ಲ ಎಂದು ಅವರು ಫೋನ್ ಇಡುವ ಮೊದಲು ಕೋಪದಿಂದ ಹೇಳಿದರು.
ಇದರ ನಂತರ ರಾಕೇಶ್ ರೋಷನ್ ತನ್ನ ಸ್ನೇಹಿತ ಮತ್ತು ಕರೀನಾಳ ತಂದೆ ರಣಧೀರ್ ಕಪೂರ್ ಮೂಲಕ ಬಬಿತಾಗೆ ಮನವರಿಕೆ ಮಾಡಿಕೊಟ್ಟರು, ಆದರೆ ಆದೂ ಅವರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ರಾಕೇಶ್ ರೋಷನ್ ಅವರನ್ನು ಅನ್‌ಪ್ರೊಫೆಷನಲ್ ನಿರ್ದೇಶಕರೆಂದರು ಬಬಿತಾ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.
ನಂತರ ಸಂದರ್ಶನವೊಂದರಲ್ಲಿ, ಸ್ವಂತಃ ರಾಕೇಶ್ ರೋಶನ್ ಈಗ ಕರೀನಾ 'ಕಹೋ ನಾ ಪ್ಯಾರ್ ಹೈ' ನಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಹೇಳಿದ್ದರು. ಆದರೆ ಕರೀನಾಳ ತಂದೆ ರಣಧೀರ್ ಕಪೂರ್ ಅವರ ಆಪ್ತರಾಗಿದ್ದರಿಂದ ಕರೀನಾ ಅವರನ್ನು ಚಿತ್ರದಿಂದ ಹೊರಗೆ ಕರೆದೊಯ್ಯಲು ರಾಕೇಶ್ ರೋಷನ್ ಸ್ಪಷ್ಟ ಕಾರಣವನ್ನು ನೀಡಲಿಲ್ಲ.
'ಕರೀನಾಗೆ ಸಹಾಯ ಮಾಡುವ ಬದಲು ಮಗಳ ವೃತ್ತಿ ಜೀವನವನ್ನು ಹಾಳು ಮಾಡಲು ಮುಂದಾಗಿದ್ದಾಳೆ. ಕರೀನಾ ಹೊಸ ನಟಿ, ನಿರ್ದೇಶಕರು ಅವಳನ್ನು ಹೇಗೆ ನಡೆಸಿಕೊಳ್ಳಬೇಕೆಂದು ಚೆನ್ನಾಗಿ ತಿಳಿದಿದ್ದಾರೆ. ಕರೀಶ್ಮಾ ಕಪೂರ್ ಸಹೋದರಿ ಆಗಿರುವುದರಿಂದ ಕರೀನಾಳಿಗೆ ಸ್ಪೆಷಲ್ ಆಗಿ ಟ್ರೀಟ್ ಮಾಡಲು ಸಾಧ್ಯವಿಲ್ಲ' ಎಂದು ಸಂದರ್ಶನವೊಂದರಲ್ಲಿ ಬಬಿತಾಳನ್ನು ಆರೋಪಿಸಿ ರಾಕೇಶ್ ಹೇಳಿದರು.
'ಹೊಸ ನಟಿಯ ತಾಯಿಯಂತೆ ಬಬಿತಾ ನನ್ನೊಂದಿಗೆ ಮೃದುವಾಗಿ ಮಾತನಾಡಬೇಕಿತ್ತು. ಆದರೆ ಅವರ ಬೇಡಿಕೆ ವಿಭಿನ್ನವಾಗಿತ್ತು'. ರಾಕೇಶ್ ರೋಷನ್ ಅವರು ಬಬಿತಾ ಅವರ ಕಾರಣದಿಂದಾಗಿ ಸಾಕಷ್ಟು ತೊಂದರೆ ಅನುಭವಿಸಿದರು. ಇದರ ಹೊರತಾಗಿಯೂ, ಅವರು ತಮ್ಮ ಸ್ನೇಹಿತ ರಣಧೀರ್‌ಗೆ ಮತ್ತೊಮ್ಮೆ ಅದರ ಬಗ್ಗೆ ಯೋಚಿಸಲು ಅವಕಾಶ ನೀಡಿದರು. ಆದರೆ ಬಬಿತಾ ತಮ್ಮ ಹಟ ಬಿಡಲಿಲ್ಲ ಮತ್ತು ಅಂತಿಮವಾಗಿ ರಾಕೇಶ್ ಈ ಚಿತ್ರಕ್ಕಾಗಿ ಅಮಿಶಾ ಪಟೇಲ್‌ರನ್ನು ಸೈನ್ ಪಡೆದರು.
ಸ್ಕ್ರಿಪ್ಟ್ ದುರ್ಬಲವಾಗಿರುವುದರಿಂದ ಕರೀನಾ ಚಿತ್ರವನ್ನು ತೊರೆದಿದ್ದಾರೆ ಎಂದು ಬಬಿತಾ ನಂತರ ಸ್ಪಷ್ಟಪಡಿಸಿದರು. ಬಬಿತಾ ನಿರ್ದೇಶಕ ಜೆ.ಪಿ. ದತ್ತಾರ 'ಆಖ್ರಿ ಮೊಘಲ್' ಚಿತ್ರಕಥೆಯನ್ನು ಇಷ್ಟಪಟ್ಟರು ಮತ್ತು ಕರೀನಾ ಅವರ ಚಿತ್ರಕ್ಕೆ ಸಹಿ ಹಾಕಿದರು. ಆದರೆ ಕೆಲವು ಕಾರಣಗಳಿಂದಾಗಿ ಈ ಚಿತ್ರ ಮಾಡಲು ಸಾಧ್ಯವಾಗಲಿಲ್ಲ.
ನಂತರ 2001ರಲ್ಲಿ ಸುಭಾಷ್ ಘೈರ 'ಯಾದೇ' ಚಿತ್ರದಲ್ಲಿ ಕರೀನಾ ಮತ್ತು ಹೃತಿಕ್ ಒಟ್ಟಿಗೆ ಕಾಣಿಸಿಕೊಂಡರು. ಆದರೆ ಆ ಸಿನಿಮಾ ಫ್ಲಾಪ್ಯಿ ಆಯಿತು. ನಂತರ ಈ ಜೋಡಿ ನಟಿಸಿದ ಕರಣ್ ಜೋಹರ್ ಅವರ 'ಕಭಿ ಖುಷಿ ಕಭಿ ಘಮ್' ಚಿತ್ರ ಸೂಪರ್‌ಹಿಟ್ ಆಗಿತ್ತು. ಆದರ ನಂತರ ಇಬ್ಬರೂ 'ಮುಜ್ಸೆ ದೋಸ್ತಿ ಕರೋಗೆ' (2002) ಮತ್ತು 'ಮೇನ್ ಪ್ರೇಮ್ ಕಿ ದಿವಾನಿ ಹೂ' (2003) ಸಿನಿಮಾಗಳಲ್ಲಿಯೂ ಜೋಡಿಯಾಗಿದ್ದರು.