MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಬಿಗ್‌ಬಾಸ್‌ನಲ್ಲಿ ಅತೀ ಹೆಚ್ಚು ದುಡ್ಡು ಪಡೆಯೋ ಸ್ಪರ್ಧಿ ಇವ್ರೇ; ಜಸ್ಟ್ ಒಂದೇ ವಾರಕ್ಕೆ 12 ಲಕ್ಷ ರೂ. ಸಂಭಾವನೆ!

ಬಿಗ್‌ಬಾಸ್‌ನಲ್ಲಿ ಅತೀ ಹೆಚ್ಚು ದುಡ್ಡು ಪಡೆಯೋ ಸ್ಪರ್ಧಿ ಇವ್ರೇ; ಜಸ್ಟ್ ಒಂದೇ ವಾರಕ್ಕೆ 12 ಲಕ್ಷ ರೂ. ಸಂಭಾವನೆ!

ಬಿಗ್‌ಬಾಸ್‌ ರಿಯಾಲಿಟಿ ಶೋ ಪ್ರತಿಬಾರಿಯೂ ಸಾಕಷ್ಟು ಸದ್ದು ಮಾಡುತ್ತದೆ. ಸ್ಪರ್ಧಿಗಳ ಆಯ್ಕೆ, ಟಾಸ್ಕ್‌, ಸಂಭಾವನೆ ಎಲ್ಲರ ಗಮನ ಸೆಳೆಯುತ್ತದೆ. ಈ ಬಾರಿಯ ಬಿಗ್‌ಬಾಸ್‌ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೀತಿರೋದು ಯಾರು ನಿಮ್ಗೊತ್ತಾ? ಅತೀ ಹೆಚ್ಚು  ಸಂಭಾವನೆ ಪಡೆಯುವ ಸ್ಪರ್ಧಿ ವಾರಕ್ಕೆ 12 ಲಕ್ಷ ರೂಪಾಯಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ

2 Min read
Author : Vinutha Perla
Published : Oct 18 2023, 12:30 PM IST
Share this Photo Gallery
  • FB
  • TW
  • Linkdin
  • Whatsapp
19

ಬಿಗ್‌ಬಾಸ್‌ ರಿಯಾಲಿಟಿ ಶೋ ಪ್ರತಿಬಾರಿಯೂ ಸಾಕಷ್ಟು ಸದ್ದು ಮಾಡುತ್ತದೆ. ಸ್ಪರ್ಧಿಗಳ ಆಯ್ಕೆ, ಟಾಸ್ಕ್‌, ಸಂಭಾವನೆ ಎಲ್ಲರ ಗಮನ ಸೆಳೆಯುತ್ತದೆ. ಈ ಬಾರಿಯ ಬಿಗ್‌ಬಾಸ್‌ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೀತಿರೋದು ಯಾರು ನಿಮ್ಗೊತ್ತಾ? ಅತೀ ಹೆಚ್ಚು  ಸಂಭಾವನೆ ಪಡೆಯುವ ಸ್ಪರ್ಧಿ ವಾರಕ್ಕೆ 12 ಲಕ್ಷ ರೂಪಾಯಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. 
 

29


ಸಲ್ಮಾನ್ ಖಾನ್ ಬಿಗ್ ಬಾಸ್ ಹೊಸ ಸೀಸನ್ ಅನ್ನು ಹೋಸ್ಟ್ ಮಾಡಲು ಮರಳಿದ್ದಾರೆ. ಅಕ್ಟೋಬರ್ 15ರಂದು, ಬಿಗ್‌ಬಾಸ್‌ ರಿಯಾಲಿಟಿ ಶೋಗೆ 17 ಹೊಸ ಸ್ಪರ್ಧಿಗಳನ್ನು ಸ್ವಾಗತಿಸಿದರು. ಈ ಬಾರಿ, ಹಲವಾರು ಸೆಲೆಬ್ರಿಟಿ ಜೋಡಿಗಳು ಮತ್ತು  ಯೂಟ್ಯೂಬರ್‌ಗಳು ಕಾರ್ಯಕ್ರಮಕ್ಕೆ ಪ್ರವೇಶಿಸಿದ್ದಾರೆ.

39

ಈ ಬಾರಿ ಬಿಗ್‌ಬಾಸ್ ಹಿಂದಿ ಆವೃತ್ತಿಯಲ್ಲಿ ಅತೀ ಹೆಚ್ಚು  ಸಂಭಾವನೆ ಪಡೆಯುವ ಸ್ಪರ್ಧಿ ವಾರಕ್ಕೆ 12 ಲಕ್ಷ ರೂಪಾಯಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಅವರು ಬೇರೆ ಯಾರೂ ಅಲ್ಲ ಕಿರುತೆರೆ ನಟಿ ಅಂಕಿತಾ ಲೋಖಂಡೆ. ಈ ಹಿಂದೆ ನಟಿ ಬಿಗ್‌ಬಾಸ್‌ಗಾಗಿಯೂ 200ಕ್ಕೂ ಹೆಚ್ಚು ಬಟ್ಟೆಗಳನ್ನು ಖರೀದಿಸಿ ಸುದ್ದಿಯಾಗಿದ್ದರು. ದೊಡ್ಮನೆಯಲ್ಲಿ ಬಟ್ಟೆ ರಿಪೀಟ್ ಮಾಡುವುದಿಲ್ಲವೆಂದು ಹೇಳಿಕೊಂಡಿದ್ದರು.

49

ಅಂಕಿತಾ ಲೋಖಂಡೆ ಕಿರುತೆರೆಯಲ್ಲಿ ಮಾತ್ರವಲ್ಲದೆ ಚಿತ್ರರಂಗದಲ್ಲಿಯೂ ತಮ್ಮ ಛಾಪು ಮೂಡಿಸುತ್ತಿರುವ ಜನಪ್ರಿಯ ನಟಿ. ವಾರಕ್ಕೆ 12 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿರುವ ಮೂಲಕ ಶೋನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಪರ್ಧಿಯೆಂದು ಗುರುತಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಉದ್ಯಮಿಯಾಗಿರುವ ತಮ್ಮ ಪತಿ ವಿಕ್ಕಿ ಜೈನ್ ಅವರೊಂದಿಗೆ ನಟಿ ಶೋನಲ್ಲಿ ಭಾಗವಹಿಸಿದ್ದಾರೆ. 

59

ಅಂಕಿತಾ ಲೋಖಂಡೆ ಫೇಮಸ್ ಸೀರಿಯಲ್‌ 'ಪವಿತ್ರ ರಿಷ್ತಾ'ದಿಂದ ಖ್ಯಾತಿ ಗಳಿಸಿದರು. ಇದರಲ್ಲಿ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಸಹ ನಟಿಸಿದ್ದರು. ಈ ಸಂದರ್ಭದಲ್ಲಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ನಂತರ ಸುಶಾಂತ್ ತನ್ನ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಲು ಬಯಸಿದ್ದರಿಂದ ಇಬ್ಬರೂ ಬೇರ್ಪಟ್ಟರು.

69

ನಟಿ ಮಣಿಕರ್ಣಿಕಾದಲ್ಲಿ ಕಂಗನಾ ರಣಾವತ್‌ ಜೊತೆಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಚಿತ್ರವು ದೊಡ್ಡ ಯಶಸ್ಸನ್ನು ಕಂಡಿತು ಮತ್ತು ವಿಶ್ವಾದ್ಯಂತ 142 ಕೋಟಿ ರೂ. ಗಳಿಸಿತು.

79

ನಟಿ ನಂತರ ಟೈಗರ್ ಶ್ರಾಫ್, ಶ್ರದ್ಧಾ ಕಪೂರ್ ಮತ್ತು ರಿತೇಶ್ ದೇಶಮುಖ್ ನಟಿಸಿದ ಬಾಘಿ 3 ಲ್ಲಿ ನಟಿಸಿದರು. ಈ ಚಿತ್ರವೂ ಹಿಟ್ ಆಗಿದ್ದು, ವಿಶ್ವಾದ್ಯಂತ 137 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. 

89

ಈಗ ಬಿಗ್‌ಬಾಸ್ ಪ್ರವೇಶಿಸಿರುವ ಅಂಕಿತಾ ಲೋಖಂಡೆ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವುದು ಅಂಕಿತಾ ಲೋಖಂಡೆಯಾದರೆ, ಮುನಾವರ್ ಫರುಕಿ ಎರಡನೇ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಪರ್ಧಿಯಾಗಿದ್ದಾರೆ. ಅವರು ವಾರಕ್ಕೆ 7-8 ಲಕ್ಷ ರೂಪಾಯಿಗಳನ್ನು ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

99

ಬಿಗ್ ಬಾಸ್ 17 ದಿಲ್, ದಿಮಾಗ್ ಔರ್ ದಮ್ ಎಂಬ ಹೊಸ ಥೀಮ್ ಅನ್ನು ಹೊಂದಿದೆ ಮತ್ತು ಸಲ್ಮಾನ್ ಖಾನ್ ಪ್ರೋಮೋ ಒಂದರಲ್ಲಿ ಆಟವು ಎಲ್ಲರಿಗೂ ಒಂದೇ ಆಗಿರುವುದಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಈ ಕಾರ್ಯಕ್ರಮವು ಸೋಮವಾರದಿಂದ ಶುಕ್ರವಾರದವರೆಗೆ ಜಿಯೋ ಸಿನಿಮಾ ಮತ್ತು ಕಲರ್ಸ್ ಟಿವಿಯಲ್ಲಿ ಸ್ಟ್ರೀಮ್ ಆಗಲಿದೆ.  17 ಸ್ಪರ್ಧಿಗಳು ಮನೆಯಲ್ಲಿ ಟ್ರೋಫಿಯನ್ನು ಗೆಲ್ಲಲು ಹೋರಾಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

VP
Vinutha Perla

Latest Videos
Recommended Stories
Recommended image1
26ಕ್ಕೆ ರಶ್ಮಿಕಾ-ವಿಜಯ್‌ ವಿವಾಹ : ಉದಯಪುರಕ್ಕೆ ಆಗಮನ
Recommended image2
ಆಪ್ತರಿಗೆ ವಿರೋಶ್ ಜೋಡಿಯ ಪಾರ್ಟಿ; ಮಹೆಂದಿ, ಹಳದಿ , ಸಂಗೀತ್ ಸೆರೆಮನಿ ದಿನಾಂಕ ಬಹಿರಂಗ
Recommended image3
'ಸ್ಪೀಕರ್​ ಆನ್​ ಇದೆ, ಎಲ್ಲರೂ ಇದ್ದಾರೆ': ಭಾವಿ ಪತಿಗೆ ಹಿಂಟ್​ ಕೊಟ್ಟು ಪೇಚಿನಲ್ಲಿ​ Rashmika Mandanna- ವಿಡಿಯೋ ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved