ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅಭಿನಯದ ಬಹುನಿರೀಕ್ಷಿತ 'ರಾಮಾಯಣ' ಚಿತ್ರವನ್ನು ದಂಗಲ್ ಖ್ಯಾತಿಯ ನಿತೇಶ್ ತಿವಾರಿ ನಿರ್ದೇಶಿಸುತ್ತಿದ್ದಾರೆ. ೪೦೦೦ ಕೋಟಿ ಬಜೆಟ್ನ ಈ ಚಿತ್ರವು ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ದುಬಾರಿ ಸಿನಿಮಾವಾಗಿದ್ದು, ಎ.ಆರ್. ರೆಹಮಾನ್ ಮತ್ತು ಹ್ಯಾನ್ಸ್ ಜಿಮ್ಮರ್ ಸಂಗೀತ ನೀಡುತ್ತಿದ್ದಾರೆ. ಲಿಪ್ ಸಿಂಕ್ ಸುಧಾರಿಸಲು ಮಾತ್ರ ಎಐ ತಂತ್ರಜ್ಞಾನವನ್ನು ಬಳಸಲಾಗಿದೆ.
ಪ್ರಸ್ತುತ, ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ಚಿತ್ರ ರಾಮಾಯಣ. ಅದರಲ್ಲಿಎರಡು ಮಾತಿಲ್ಲ. ನಮಿತ್ ಮಲ್ಹೋತ್ರಾ ಮತ್ತು ಯಶ್ ನಿರ್ಮಿಸಿದ "ರಾಮಾಯಣ"ದಲ್ಲಿ ರಣಬೀರ್ ಕಪೂರ್ ಭಗವಾನ್ ರಾಮನಾಗಿ ಮತ್ತು ಸಾಯಿ ಪಲ್ಲವಿ ತಾಯಿ ಸೀತೆಯ ಪಾತ್ರದಲ್ಲಿ ನಟಿಸಿದ್ದಾರೆ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರವು ವ್ಯಾಪಕವಾಗಿ ಚರ್ಚಿಸಲ್ಪಡುತ್ತಿದೆ. ರಾಮಾಯಣದ ನಿರ್ದೇಶಕರ ಕುರಿತು ತಿಳಿಯೋಣ ಬನ್ನಿ.
2000 ಕೋಟಿಯ ಸರದಾರ!
ಆಮೀರ್ ಖಾನ್ ಅಭಿನಯದ 'ದಂಗಲ್' (2016) ಚಿತ್ರ ನಿರ್ದೇಶಿಸಿದವರು ಇವರೇ. ಈ ಸಿನಿಮಾ ಜಾಗತಿಕವಾಗಿ ₹2000 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ, ಇಂದಿಗೂ ಅತಿ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾ ಎಂಬ ದಾಖಲೆ ಹೊಂದಿದೆ. ನಿರ್ದೇಶಕರಾಗಿ ಇದು ನಿತೇಶ್ ತಿವಾರಿ ಅವರ 7ನೇ ಚಿತ್ರ. ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ವೆಚ್ಚದಾಯಕ ಹಾಗೂ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಆಗಿ ಇದು ಮೂಡಿಬರುತ್ತಿದೆ. ಕೇವಲ ಮಾಸ್ ಅಷ್ಟೇ ಅಲ್ಲದೆ ಕಂಟೆಂಟ್ ಆಧಾರಿತ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಹೆಗ್ಗಳಿಕೆ ಇವರದ್ದಾಗಿದೆ.
ಪ್ರಶಸ್ತಿಗಳ ಸುರಿಮಳೆ!
ದಂಗಲ್, ಚಿಲ್ಲರ್ ಪಾರ್ಟಿ (ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ), ಭೂತ್ನಾಥ್ ರಿಟರ್ನ್ಸ್, ಚಿಚ್ಚೋರೆ (ಸುಶಾಂತ್ ಸಿಂಗ್ ರಜಪೂತ್ ನಟನೆಯ ಸೂಪರ್ ಹಿಟ್ ಸಿನಿಮಾ), ಬವಾಲ್ ಹೀಗೆ ಸಾಲು, ಸಾಲು ಹಿಟ್ ಸಿನೆಮಾಗಳನ್ನು ಕೊಟ್ಟಿದ್ದಾರೆ. ಇದೇ ನಿಟ್ಟಿನಲ್ಲಿ ರಾಮಾಯಣದ ಮೇಲೆ ಹೆಚ್ಚಿನ ನೀರೀಕ್ಷೆ ಇದೆ.
ಯಾಕೆ ಈ ಸಿನಿಮಾ ಮೇಲೆ ಭಾರಿ ನಿರೀಕ್ಷೆ?
ದಂಗಲ್' ಮತ್ತು 'ಚಿಚ್ಚೋರೆ'ಯಂತಹ ಸಿನಿಮಾಗಳಲ್ಲಿ ಭಾವನಾತ್ಮಕ ಕಥೆಗಳನ್ನು ಅದ್ಭುತವಾಗಿ ತೆರೆಗೆ ತಂದಿದ್ದ ನಿತೇಶ್, ಈಗ ಭಾರತದ ಅತಿ ದೊಡ್ಡ ಮಹಾಕಾವ್ಯ 'ರಾಮಾಯಣ'ವನ್ನು ಯಾವ ರೀತಿ ವಿಷ್ಯುಯಲ್ ವಂಡರ್ ಆಗಿ ತೋರಿಸಲಿದ್ದಾರೆ ಎಂಬ ಕುತೂಹಲ ಇಡೀ ಇಂಡಸ್ಟ್ರಿಯಲ್ಲಿದೆ. ಚಿತ್ರರಂಗಕ್ಕೆ ಬರುವ ಮುನ್ನ ನಿತೇಶ್ ಅವರು ಸಾಫ್ಟ್ವೇರ್ ಮತ್ತು ಜಾಹೀರಾತು ಕ್ಷೇತ್ರದಲ್ಲಿ ಪ್ರಸಿದ್ಧ ಕಾಪಿರೈಟರ್ ಆಗಿ ಕೆಲಸ ಮಾಡಿದ್ದರು. ಆ ಕ್ರಿಯೇಟಿವಿಟಿಯೇ ಈಗ ಅವರನ್ನು ಬಾಲಿವುಡ್ನ ಟಾಪ್ ನಿರ್ದೇಶಕರ ಸಾಲಿನಲ್ಲಿದ್ದಾರೆ.
ಅತ್ಯಂತ ದುಬಾರಿ ಸಿನಿಮಾ!
ಈ ಚಿತ್ರವನ್ನು ಎರಡು ಭಾಗಗಳಾಗಿ 'ರಾಮಾಯಣ ಪಾರ್ಟ್ 1' ಮತ್ತು ಪಾರ್ಟ್ 2 ಅತಿ ಪ್ರಮಾಣದಲ್ಲಿ ನಿರ್ಮಿಸಲಾಗುತ್ತಿದ್ದು, ಒಟ್ಟು ಬಜೆಟ್ ಬರೋಬ್ಬರಿ ₹4,000 ಕೋಟಿ ಎಂದು ಅಂದಾಜಿಸಲಾಗಿದೆ. ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ವೆಚ್ಚದಾಯಕ ಸಿನಿಮಾವಾಗಿದೆ. ಈ ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ರಾಮನಾಗಿ, ಸೌತ್ ಕ್ವೀನ್ ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಸ್ಯಾಂಡಲ್ವುಡ್ನ ಹೆಮ್ಮೆ ರಾಕಿಂಗ್ ಸ್ಟಾರ್ ಯಶ್ ರಾವಣನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಜೊತೆಗೆ, ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಮತ್ತು ಹಾಲಿವುಡ್ನ ಲೆಜೆಂಡರಿ ಹ್ಯಾನ್ಸ್ ಜಿಮ್ಮರ್ ಒಟ್ಟಿಗೆ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.
ಎಐ ತಂತ್ರಜ್ಞಾನದ ಸ್ಮಾರ್ಟ್ ಬಳಕೆ!
ಸಿನಿಮಾದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಲಾಗಿದೆ ಎಂಬ ಚರ್ಚೆಗೆ ಇತ್ತೀಚೆಗಷ್ಟೇ ನಿರ್ದೇಶಕ ನಿತೇಶ್ ತಿವಾರಿ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ನಟರ ಧ್ವನಿ ಅಥವಾ ಡಬ್ಬಿಂಗ್ಗೆ ಎಐ ಬಳಸಿಲ್ಲ, ಬದಲಿಗೆ ಸಿನಿಮಾ ವಿವಿಧ ಭಾಷೆಗಳಿಗೆ ಡಬ್ ಆದಾಗ ಪ್ರೇಕ್ಷಕರಿಗೆ ಸಹಜವಾಗಿ ಕಾಣಲಿ ಎಂಬ ಕಾರಣಕ್ಕೆ ಕೇವಲ 'ಲಿಪ್ ಸಿಂಕ್' ಸುಧಾರಿಸಲು ಮಾತ್ರ ಎಐ ತಂತ್ರಜ್ಞಾನವನ್ನು ಸ್ಮಾರ್ಟ್ ಆಗಿ ಬಳಸಲಾಗಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ.






