ಧರ್ಮೇಂದ್ರ ವರಿಸೋ ಮುನ್ನ ಹೇಮಾ ಮಾಲಿನಿ ಈ ವ್ಯಕ್ತಿ ಜೊತೆ ಹಸೆಮಣೆ ಏರಬೇಕಿತ್ತು!
ಧರ್ಮ ಬದಲಿಸಿ ಧರ್ಮೇಂದ್ರ ಬಾಲಿವುಡ್ ಎವರ್‌ಗ್ರೀನ್ ನಟಿ ಹೇಮಾ ಮಾಲಿನಿಯನ್ನು ವರಿಸಿದ್ದು ಎಲ್ಲರಿಗೂ ಗೊತ್ತಿದೆ. ಆದರೆ, ಧರ್ಮೇಂದ್ರರನ್ನು ಹೇಮಾ ಮಾಲಿನಿ ಮದುವೆಯಾಗುವ ಮುನ್ನ ಜಿತೇಂದ್ರ ಜೊತೆ ನಟಿಯ ಮದ್ವೆ ನಿಕ್ಕಿಯಾಗಿತ್ತು. ಮನೆಯವರಿಗೆ ಆಶಯದಂತೆ ಈ ಜೋಡಿ ಹಸೆಮಣೆ ಏರಲು ಸಿದ್ಧವಾಗಿತ್ತು. ಆದರೆ, ಸಿನಿಮೀಯ ರೀತಿಯಲ್ಲಿಯೇ ಧರ್ಮೆಂದ್ರ ಜೊತೆ ಹೇಮಾ ಹಸೆಮಣೆ ಏರಿದರು.
ಅಭಿಮಾನಿಗಳು ಅಧಿದೇವತೆ
ಬಾಲಿವುಡ್‌ನ 'ಡ್ರೀಮ್ ಗರ್ಲ್' ಹೇಮಾ ಮಾಲಿನಿ ಇಂದಿಗೂ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. 70 ಮತ್ತು 80ರ ದಶಕದಲ್ಲಿ, ಹೇಮಾ ಮಾಲಿನಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದರು. ಅವರು ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ, ಜೀತೇಂದ್ರ ಮತ್ತು ಸಂಜೀವ್ ಕುಮಾರ್ ಕೂಡ ಅವರ ಮೇಲಿನ ಪ್ರೀತಿ ವ್ಯಕ್ತಪಡಿಸಿದ್ದರು.
ಹೇಮಾ-ಜೀತೇಂದ್ರ ಮದುವೆ
ಹೇಮಾ ಮಾಲಿನಿ ಮತ್ತು ಜೀತೇಂದ್ರ ಮದುವೆಯಾಗುವ ಹಂತಕ್ಕೆ ಬಂದಿದ್ದರು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಆದರೆ ಹೇಮಾ ಧರ್ಮೇಂದ್ರ ಅವರನ್ನು ಪ್ರೀತಿಸುತ್ತಿದ್ದರು ಮತ್ತು ಅವರನ್ನೇ ಮದುವೆಯಾಗಲು ಬಯಸಿದ್ದರು. ಆದಾಗ್ಯೂ, ಜಿತೇಂದ್ರ ಹಾಗೂ ಹೇಮಾ ಮಾಲಿನಿ ಕುಟುಂಬಗಳು ಈ ಜೋಡಿ ಮದುವೆಗೆ ಒತ್ತಡ ಹೇರುತ್ತಿದ್ದವು. ನಂತರ ಇಬ್ಬರೂ ಮದುವೆಗೆ ಒಪ್ಪಿಕೊಂಡರು.
ಚೆನ್ನೈನಲ್ಲಿ ಜೀತೇಂದ್ರ-ಹೇಮಾ ಮದುವೆ
ಜೀತೇಂದ್ರ ಮತ್ತು ಹೇಮಾ ಮಾಲಿನಿ ಅವರ ಕುಟುಂಬಗಳು ಚೆನ್ನೈಗೆ ಬಂದಿದ್ದವು. ಅವರ ರಹಸ್ಯ ವಿವಾಹಕ್ಕೆ ಸಿದ್ಧತೆಗಳು ನಡೆಯುತ್ತಿದ್ದವು. ಆದರೆ ಧರ್ಮೇಂದ್ರರಿಗೆ ಈ ವಿಷಯ ತಿಳಿದು ಅವರೂ ಚೆನ್ನೈಗೆ ತಲುಪಿದರು. ನಂತರ ಜೀತೇಂದ್ರ ಪತ್ನಿಯಾಗಿರುವ ಶೋಭಾ ಕಪೂರ್ ಕೂಡ ಚೆನ್ನೈಗೆ ಬಂದರು. ಹೇಮಾ ಮಾಲಿನಿ ಮತ್ತು ಜಿತೇಂದ್ರ ಮದುವೆಯಾಗಲಿಲ್ಲ. ಹೇಮಾ ಮಾಲಿನಿ ಅವರ 'ಹೇಮಾ ಮಾಲಿನಿ: ಬಿಯಾಂಡ್ ದಿ ಡ್ರೀಮ್ ಗರ್ಲ್' ಪುಸ್ತಕದಲ್ಲಿ ಇದನ್ನು ಉಲ್ಲೇಖಿಸಲಾಗಿದೆ.
ಹೇಮಾಗೆ ಧರ್ಮೇಂದ್ರ ಮೇಲಿತ್ತು ಮನಸ್ಸು
ಹೇಮಾ ಮಾಲಿನಿ ಅವರ ತಾಯಿಗೆ ಜೀತೇಂದ್ರ ಅಳಿಯನಾಗಿ ಇಷ್ಟವಾಗಿದ್ದರು ಮತ್ತು ತಮ್ಮ ಮಗಳನ್ನು ಅವರಿಗೆ ಮದುವೆ ಮಾಡಿಕೊಡಲು ಬಯಸಿದ್ದರು. ಆದರೆ ಹೇಮಾ ಮಾಲಿನಿ ಈ ಬಂಧಕ್ಕೆ ಸಿದ್ಧರಿರಲಿಲ್ಲ ಏಕೆಂದರೆ ಅವರು ಯಾವಾಗಲೂ ಧರ್ಮೇಂದ್ರರನ್ನು ಮದುವೆಯಾಗಲು ಬಯಸಿದ್ದರು.
ಇಸ್ಲಾಂಗೆ ಮತಾಂತರವಾದ ಧರ್ಮೇಂದ್ರ
ಜೀತೇಂದ್ರ ಜೊತೆಗಿನ ಸಂಬಂಧದ ಬಗ್ಗೆ ಹೇಮಾ ಮಾಲಿನಿ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದರು. ಧರ್ಮೇಂದ್ರ ಆಗಲೇ ಮದುವೆಯಾಗಿದ್ದರಿಂದ ಮತ್ತು ಅವರ ಮೊದಲ ಪತ್ನಿ ಪ್ರಕಾಶ್ ಕೌರ್ ವಿಚ್ಛೇದನ ನೀಡಲು ಸಿದ್ಧರಿಲ್ಲದ. ಅದಕ್ಕೆ ಹೇಮಾ ಮಾಲಿನಿಯನ್ನು ಮದುವೆಯಾಗಲು ಇಸ್ಲಾಂಗೆ ಮತಾಂತರಗೊಂಡರು.
ಧರ್ಮೇಂದ್ರ-ಹೇಮಾ ಮಾಲಿನಿ ಮದುವೆ
ಸಿನಿಮೀಯ ಶೈಲಿಯಲ್ಲಿಯೇ ಬಂದ ಧರ್ಮೇಂದ್ರ, ಜೀತೇಂದ್ರ-ಹೇಮಾ ಮಾಲಿನಿ ಮದುವೆಯನ್ನು ನಿಲ್ಲಿಸಿದರಂತೆ. ಹೇಮಾ ಮಾಲಿನಿ ಅವರ ತಂದೆ ಧರ್ಮೇಂದ್ರರನ್ನು ಒಲ ಬಾರದಂತೆ ತಡೆದಿದ್ದರೂ, ಮದ್ವೆ ನಿಂತು ಹೋಯಿತು. ಹೇಮಾ ಮಾಲಿನಿಯನ್ನು ಜಿತೇಂದ್ರರನ್ನು ಮದ್ವೆಯಾಗದಂತೆ ಒಪ್ಪಿಸಿದರು. ನಂತರ ಧರ್ಮೇಂದ್ರ-ಹೇಮಾ ಮಾಲಿನಿ ಮೇ 1980ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.