Depressionನಲ್ಲಿದ್ದ ಯುವರಾಜ್ ಸಿಂಗ್ ಪತ್ನಿ ಹೇಜಲ್ ಕಿಚ್; ಯಾಕಪ್ಪ ಹೀಗೆ?
ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) ಪತ್ನಿ ಹೇಜಲ್ ಕೀಚ್ (Hazel Keech) 35 ವರ್ಷಕ್ಕೆ ಕಾಲಿಟ್ಟಿದ್ದಾರೆ. ಫೆಬ್ರವರಿ 28, 1987ರಂದು ಇಂಗ್ಲೆಂಡಿನಲ್ಲಿ ಜನಿಸಿದ ಹೇಜಲ್ ಕೀಚ್ ಬಾಲಿವುಡ್ನಲ್ಲಿ ತನ್ನ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಲಿಲ್ಲ. ಚಲನಚಿತ್ರಗಳಲ್ಲಿ ಸೈಡ್ ರೋಲ್ ಮತ್ತು ಐಟಂ ನಂಬರ್ಗಳನ್ನು ಮಾಡುವುದನ್ನು ಹೊರತುಪಡಿಸಿ, ಅವರಿಗೆ ಯಾವುದೇ ಪ್ರಮುಖ ಪಾತ್ರಗಳನ್ನೂ ನೀಡಲಿಲ್ಲ. ಅವರು 2016ರಲ್ಲಿ ಯುವರಾಜ್ ಸಿಂಗ್ ಅವರನ್ನು ವಿವಾಹವಾದರು ಮತ್ತು ಚಲನಚಿತ್ರ ಜಗತ್ತಿಗೆ ವಿದಾಯ ಹೇಳಿದರು. ಕೆಲವು ವರ್ಷಗಳ ಹಿಂದೆ, ಹೇಜಲ್ ತನ್ನ ಜೀವನಕ್ಕೆ ಸಂಬಂಧಿಸಿದ ಕೆಲವು ಆಘಾತಕಾರಿ ವಿಷಯವನ್ನು ಬಹಿರಂಗ ಪಡಿಸಿದ್ದರು. ಅವರು ತಮ್ಮ 22ನೇ ವಯಸ್ಸಿನಲ್ಲಿ ಖಿನ್ನತೆಗೆ ಗುರಿಯಾಗಿದ್ದರು ಮತ್ತು ಅದು ತನ್ನ ಜೀವನದ ಅತ್ಯಂತ ಕೆಟ್ಟ ಹಂತವಾಗಿತ್ತು ಎಂದು ಹೇಜಲ್ ಹೇಳಿಕೊಂಡಿದ್ದರು.
ಕೆಲವು ವರ್ಷಗಳ ಹಿಂದೆ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಹೇಜಲ್ ತಮ್ಮ ಖಿನ್ನತೆಯ (Depression) ಬಗ್ಗೆ ಬಹಿರಂಗಪಡಿಸಿದ್ದರು. ಪ್ರಯಾಣ ಬಹಳ ಉದ್ದವಾಗಿದೆ. ಆ ಸಮಯದಲ್ಲಿ ನಾನು ಖಿನ್ನತೆಗೆ ಒಳಗಾಗಿದ್ದೆ. ನಾನು ಸ್ಲಿಮ್ (Slim) ಆಗಿ ಕಾಣಬೇಕೆಂಬ ಹಂಬಲದಲ್ಲಿ ಇಡೀ ದಿನ ಹಸಿವಿನಿಂದ ಬಳಲುತ್ತಿದ್ದೆ. ತೆರೆದ ಕೂದಲಲ್ಲಿ ಜನರ ಮುಂದೆ ಫಿಟ್ ಆಗಿ ಕಾಣಿಸಬೇಕೆಂದು ಕೂದಲಿಗೆ ಬಣ್ಣ ಹಚ್ಚಿ ತೆರೆದುಕೊಳ್ಳುತ್ತಿದ್ದೆ ಎಂದು ಅವರು ಬರೆದು ಕೊಂಡಿದ್ದರು.
'ನಾನು ನಗುತ್ತಿದ್ದೆ ಮತ್ತು ಜನರೊಂದಿಗೆ ಮಾತನಾಡುತ್ತಿದ್ದೆ ಮತ್ತು ಅವರನ್ನು ಭೇಟಿಯಾಗುತ್ತಿದ್ದೆ. ಎಲ್ಲರ ಮುಂದೆ ಹಸಿವು ಮತ್ತಿತರ ಸಮಸ್ಯೆಗಳನ್ನು ಮರೆಮಾಚಿಕೊಂಡು ಸದಾ ಮುಖದಲ್ಲಿ ನಗುವನ್ನು ಇಟ್ಟುಕೊಳ್ಳುತ್ತಿದ್ದೆ. ಅಲ್ಲದೆ ನನ್ನೊಳಗೆ ಏನಾಗುತ್ತಿದೆ ಎಂದು ಯಾರಿಗೂ ಗೊತ್ತಾಗದಂತೆ ತಮಾಷೆ ಮಾಡುತ್ತಿದೆ. ನಾನು ಈ ರೀತಿ ಸಂತೋಷವಾಗಿರುತ್ತೇನೆ ಮತ್ತು ಆರೋಗ್ಯಕರ ಮತ್ತು ಶಾಂತಿಯುತ ಜೀವನವನ್ನು ನಡೆಸುತ್ತೇನೆ ಎಂದು ನಾನು ಮೊದಲು ಯೋಚಿಸಿರಲಿಲ್ಲ ಎಂದು ಹೇಳಿದ್ದರು ಹೇಜಲ್.
ಯುವರಾಜ್ ಸಿಂಗ್ (Yuvaraj Singh) ಮತ್ತು ಹೇಜೆಲ್ ಕೀಚ್ ಅವರ ಹೈ ಪ್ರೊಫೈಲ್ ವಿವಾಹವು (High Profile Wedding) ನವೆಂಬರ್ 30, 2016 ರಂದು ಜಲಂಧರ್ನ ಗುರುದ್ವಾರದಲ್ಲಿ ನಡೆಯಿತು. ಇದಾದ ಬಳಿಕ ಗೋವಾದಲ್ಲಿ ಹಿಂದೂ ಪದ್ಧತಿಯಂತೆ ಮದುವೆಯೂ ನಡೆದಿದೆ. ದೆಹಲಿಯಲ್ಲೂ ಎರಡು ಮದುವೆ ಕಾರ್ಯಕ್ರಮಗಳು ನಡೆದವು.
ಅಂದಹಾಗೆ, ಯುವರಾಜ್ ಸಿಂಗ್ ಹೇಜಲ್ ಅವರನ್ನು ಮೆಚ್ಚಿಸಲು ಬಹಳಷ್ಟು ಶ್ರಮ ಪಡಬೇಕಾಯಿತಂತೆ. ಯುವರಾಜ್ ಹೇಜಲ್ರನ್ನು ಕಾಫಿ ಡೇಟ್ (Coffee Dating) ಗೆ ಕರೆದುಕೊಂಡು ಹೋಗಲು ಮೂರು ವರ್ಷ ಕಾಯಬೇಕಾಯಿತು.
ಯುವರಾಜ್ ಹೇಜಲ್ಗೆ ಕಾಫಿ ಕೇಳಿದಾಗಲೆಲ್ಲಾ ಅವರು ಎಸ್ ಎಂದು ಹೇಳುತ್ತಿದ್ದರು. ಆದರೆ ಕಾಫಿ ಡೇಟ್ಗೆ ಹೋಗುವ ದಿನ ಹೇಜಲ್ ಫೋನ್ ಸ್ವಿಚ್ ಅಫ್ ಮಾಡಿರುತ್ತಿದ್ದರೆಂದು ಯುವರಾಜ್ ಸಂದರ್ಶನವೊಂದರಲ್ಲಿ ಹೇಳಿದ್ದರು.
ಇದರಿಂದ ಬೇಸರಗೊಂಡ ಯುವರಾಜ್ ಫೋನ್ನಿಂದ ಹೇಜಲ್ ನಂಬರ್ ಡಿಲೀಟ್ ಮಾಡಿದ್ದರು. ಯುವರಾಜ್ ಸಿಂಗ್ ಹೇಜಲ್ ಅವರ ಫೇಸ್ ಬುಕ್ ಫ್ರೆಂಡ್ ಆಗಲು ಕೂಡ ಸಾಕಷ್ಟು ಕಷ್ಟಪಡಬೇಕಾಯಿತು. ಮೂರು ತಿಂಗಳ ನಂತರ ಯುವರಾಜ್ ಸಿಂಗ್ ಅವರ ಫ್ರೆಂಡ್ ರಿಕ್ವೆಸ್ಟ್ ಅನ್ನು ಹ್ಯಾಜೆಲ್ ಒಪ್ಪಿಕೊಂಡಿದ್ದಾರೆ.
ಇದಾದ ನಂತರ ಮತ್ತೆ ಇಬ್ಬರ ಮಾತುಕತೆ ಶುರುವಾಯಿತು . ಕೆಲವು ಕಾಮನ್ ಫ್ರೆಂಡ್ಸ್ ಕಾರಣದಿಂದ ಅವರ ಮೊದಲ ಡೇಟ್ ಸಾಧ್ಯವಾಯಿತು. ನಂತರ ಇಬ್ಬರೂ ನಿರಂತರವಾಗಿ ಭೇಟಿಯಾಗಲು ಪ್ರಾರಂಭಿಸಿದರು. ಆದರೆ, ನಾನು ಯುವರಾಜ್ನನ್ನು ಇಷ್ಟಪಡಲು ಪ್ರಾರಂಭಿಸಿದ್ದೇನೆ ಎಂದು ನನಗೆ ತಿಳಿದಿರಲಿಲ್ಲ ಎಂದು ಹೇಜಲ್ ಹೇಳಿದ್ದಾರೆ.
ಹೇಜಲ್ ತನ್ನ ವೃತ್ತಿ ಜೀವನವನ್ನು (Career) ತಮಿಳು (Tamil Movie) ಚಿತ್ರ ಬದ್ಲಾದಿಂದ ಪ್ರಾರಂಭಿಸಿದರು. ಇದರ ನಂತರ ಅವರು ಬಾಡಿಗಾರ್ಡ್, ಮ್ಯಾಕ್ಸಿಮಮ್, ಹೀರ್ ಅಂಡ್ ಹೀರೋ, ಧರಮ್ ಸಂಕಟ್ ಮೇ, ಬ್ಯಾಂಕೆ ಕಿ ಕ್ರೇಜಿ ಬಾರಾತ್ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡರು. ಅವರು ಟಿವಿಯ ಕಾಮಿಡಿ ಸರ್ಕಸ್, ಜಲಕ್ ದಿಖ್ಲಾ ಜಾ 6, ಬಿಗ್ ಬಾಸ್ 7 ನಲ್ಲಿಯೂ ಕಾಣಿಸಿಕೊಂಡರು.