ಗಂಡು ಮಗುವಿಗೆ ಅಪ್ಪನಾದ ಯುವರಾಜ್ ಸಿಂಗ್2016ರಲ್ಲಿ ನಟಿ ಹಜೆಲ್ ಕೀಚ್ ಅವರನ್ನು ವಿವಾಹವಾಗಿದ್ದ ಯುವರಾಜ್ಸಾಮಾಜಿಕ ಜಾಲತಾಣದ ಮೂಲಕ ಸುದ್ದಿ ತಿಳಿಸಿದ ಯುವಿ 

ಬೆಂಗಳೂರು (ಜ. 25): ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) ಅವರ ಪತ್ನಿ ಹಜೆಲ್ ಕೀಚ್ (Hazel Keech) ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಗಂಡು ಮಗುವಿನ ಜನನದ ವಿಚಾರವನ್ನು ಯುವರಾಜ್ ಸಿಂಗ್ ಸಾಮಾಜಿಕ ಜಾಲತಾಣದ ಮೂಲಕ ಪ್ರಕಟಿಸಿದರು. 2016ರಲ್ಲಿ ಯುವರಾಜ್ ಸಿಂಗ್, ಬಾಲಿವುಡ್ ನಟಿಯಾಗಿದ್ದ ಹಜೆಲ್ ಕೀಚ್ ಅವರನ್ನು ವಿವಾಹವಾಗಿದ್ದರು.

“ನಮ್ಮ ಎಲ್ಲಾ ಅಭಿಮಾನಿಗಳು, ಕುಟುಂಬ ಮತ್ತು ಸ್ನೇಹಿತರಿಗೆ, ದೇವರು ನಮಗೆ ಗಂಡು ಮಗುವನ್ನು ಆಶೀರ್ವದಿಸಿದ್ದಾನೆ ಎಂದು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ. ಈ ಆಶೀರ್ವಾದಕ್ಕಾಗಿ ನಾವು ದೇವರಿಗೆ ಧನ್ಯವಾದ ಹೇಳುತ್ತೇವೆ. ನನ್ನ ಕುಟುಂಬದ ಚಿಕ್ಕವನನ್ನು ಜಗತ್ತಿಗೆ ಸ್ವಾಗತಿಸುವಾಗ ನೀವು ನಮ್ಮ ಗೌಪ್ಯತೆಯನ್ನು ಗೌರವಿಸಬೇಕೆಂದು ಬಯಸುತ್ತೇವೆ ”ಎಂದು ಅವರು ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಯುವರಾಜ್ ಸಿಂಗ್ ಹಾಗೂ ಹಜೆಲ್ ಕೀಚ್ ಇಬ್ಬರೂ ಪೋಸ್ಟ್ ಮಾಡಿದ್ದಾರೆ.

ಯುವರಾಜ್ ಸಿಂಗ್ ಅವರು ಅಕ್ಟೋಬರ್ 2000 ಇಸವಿಯಲ್ಲಿ ಕೀನ್ಯಾ ವಿರುದ್ಧ ಏಕದಿನ ಪಂದ್ಯ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ಭಾರತದ ಪರವಾಗಿ 304 ಏಕದಿನ, 40 ಟೆಸ್ಟ್ ಹಾಗೂ 58 ಟಿ20 ಪಂದ್ಯವನ್ನು ಯುವರಾಜ್ ಸಿಂಗ್ ಆಗಿದ್ದರೆ, ಅದಲ್ಲದೆ, 2007ರ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲಿ ಪ್ರಧಾನ ಪಾತ್ರ ನಿಭಾಯಿಸಿದ ಆಟಗಾರರಾಗಿದ್ದಾರೆ.

Add Asianetnews Kannada as a Preferred SourcegooglePreferred
Scroll to load tweet…

19 ವರ್ಷಗಳ ಕಾಲ ಭಾರತೀಯ ಕ್ರಿಕೆಟ್‌ಗೆ ಸೇವೆ ಸಲ್ಲಿಸಿದ ನಂತರ ಅವರು 2019ರ ಜೂನ್ 10 ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಘೋಷಿಸಿದರು.