ಎವರ್‌ಗ್ರೀನ್ ಹೀರೋಯಿನ್ ರೇಖಾ ನಟಿಯಾಗುವ ಕನಸನ್ನುಫ್ರೆಂಡ್ಸ್ ಗೇಲಿ ಮಾಡಿದ್ದರಂತೆ!
ಬಾಲಿವುಡ್ ನಟಿ ರೇಖಾ ತಮ್ಮ ಬ್ಯೂಟಿ ಹಾಗೂ ಅದ್ಭುತ ನಟನೆಯ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕ ಜನರನ್ನು ರಂಜಿಸಿರುವ ರೇಖಾ ಅತ್ಯಂತ ಸುಂದರ ನಟಿಯರಲ್ಲಿ ಒಬ್ಬರು. ಥ್ರೋಬ್ಯಾಕ್ ಸಂದರ್ಶನದಲ್ಲಿ, ರೇಖಾರ ಶಾಲಾ ಸ್ನೇಹಿತರು ಅವರು ದೊಡ್ಡ ಚಲನಚಿತ್ರ ತಾರೆಯಾಗಬೇಕೆಂದು ಬಯಸಿದಾಗ ಅವರನ್ನು ಗೇಲಿ ಮಾಡಿದ್ದರು ಎಂದು ಬಹಿರಂಗಪಡಿಸಿದರು.
ಹಿರಿಯ ನಟಿ ರೇಖಾರ ಅಸಾಧಾರಣ ಪ್ರತಿಭೆ ಮತ್ತು ಸೌಂದರ್ಯಕ್ಕೆ ಮನ ಸೋಲದವರೇ ಇಲ್ಲ ಎನ್ನಬಹುದು. ಹಲವಾರು ಸಿನಿಮಾ ಮಾಡಿರುವ ರೇಖಾ ಬಾಲಿವುಡ್‌ನ ಟೈಮ್‌ಲೆಸ್ ಬ್ಯೂಟಿ ಎಂದೇ ಪರಿಗಣಿಸಲಾಗುತ್ತದೆ.
ರೇಖಾ ಅವರ ಫ್ರೆಂಡ್ಸ್‌ಗೆ ತಾನು ದೊಡ್ಡ ಸಿನಿಮಾ ಸ್ಟಾರ್ ಆಗಬೇಕು ಎಂದಾಗ ಗೇಲಿ ಮಾಡುತ್ತಿದ್ದರಂತೆ. ಆದರೆ ರೇಖಾರ ಸಾವನ್ ಭಡೋನ್ ಸಿನಿಮಾ ದೊಡ್ಡ ಯಶಸ್ಸು ಗಳಿಸಿದಾಗ, ಸ್ನೇಹಿತರು ಮುಜುಗರಕ್ಕೊಳಗಾದರು ಎಂದು ಬಹಿರಂಗಪಡಿಸಿದರು.
ಲಿಸಿಮಿ ಗ್ರೆವಾಲ್ ಅವರೊಂದಿಗಿನ ಸಂದರ್ಶನದಲ್ಲಿ, ರೇಖಾ ಸಾವನ್ ಭಡೋನ್‌ನ ಯಶಸ್ಸಿನ ಪರಿಣಾಮ ಮತ್ತು ಅವರನ್ನು ನೋಡುತ್ತಿದ್ದ ಪ್ರತಿಯೊಬ್ಬರ ದೃಷ್ಟಿಕೋನವೂ ಹೇಗೆ ಬದಲಾಯಿತು ಎಂಬುದನ್ನು ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
ಅವರು ಪಡೆಯುತ್ತಿರುವ ಎಲ್ಲಾ ಪ್ರಾಮುಖ್ಯತೆಗಳಿಂದ ತೃಪ್ತಿ ಹೊಂದಿದ್ದಾರೆ. ಆಕೆಯ ಸಹೋದರಿಯರು ಮತ್ತು ತಾಯಿ ಕೂಡ ಸಂತೋಷಗೊಂಡರು. ಅವರು ಮನೆಗಳು ಮತ್ತು ಕಾರುಗಳನ್ನು ಖರೀದಿಸಲು ಸಾಧ್ಯವಾಯಿತು ಎಂದು ರೇಖಾ ಹೇಳಿದರು.
ಆದರೆ ಕನ್ನಡಿಯಲ್ಲಿ ನಿನ್ನ ಮುಖ ನೋಡಿದ್ದೀಯಾ ಎಂದು ಮೊದಲು ಅವರನ್ನು ಅಪಹಾಸ್ಯ ಮಾಡುತ್ತಿದ್ದ ಅವರ ಶಾಲಾ ಸ್ನೇಹಿತರು ಅಸೂಯೆ ಪಟ್ಟರು ಎಂದು ರೇಖಾ ಇಂಟರ್‌ವ್ಯೂವ್‌ನಲ್ಲಿ ಹೇಳಿದರು. ವಿಶ್ವಾಸವೊಂದಿದ್ದರೆ ಜೀವವನದಲ್ಲಿ ಅಸಾಧ್ಯವಾದದ್ದನ್ನು ಸಾಧಿಸಬಹುದು ಎನ್ನಬಹುದು.
ತನ್ನ ಸಿನಿಮಾ ದೊಡ್ಡ ಹಿಟ್ ಆದ ನಂತರ ಸ್ನೇಹಿತರು ಮುಜುಗರಕ್ಕೊಳಗಾದರು ಎಂದರು ರೇಖಾ
ರೇಖಾ ಅನೇಕ ಮಹತ್ವದ ಪಾತ್ರಗಳನ್ನು ಮಾಡಿದ್ದಾರೆ. ವಯಸ್ಸಾಗಿದರೂ ಕೂಡ ಇನ್ನೂ ಯಂಗ್ ಮತ್ತು ಫಿಟ್ ಆಗಿರುವ ರೇಖಾ ತುಂಬಾ ಸುಂದರವಾಗಿ ಕಾಣುತ್ತಾರೆ.
ಇತ್ತೀಚಿನ ವರ್ಷಗಳಲ್ಲಿ ಕೆಲವೇ ಸಿನಿಮಾಗಳಲ್ಲಿ ನಟಿಸಿರುವ ರೇಖಾ ಕೊಯಿ ಮಿಲ್ ಗಯಾದಲ್ಲಿ ಹೃತಿಕ್ ರೋಷನ್ ಅವರ ತಾಯಿಯಾಗಿ ಮತ್ತು ನಂತರ ಕ್ರಿಶ್‌ನಲ್ಲಿ ಅವರ ಸೂಪರ್ ನಾನಿ ಪಾತ್ರ ಮಾಡಿದರು ಮತ್ತು ಶಮಿತಾಬ್‌ನಲ್ಲಿ ಸಣ್ಣ ಪಾತ್ರವನ್ನು ನಿರ್ವಹಿಸಿದರು.