ಧನುಷ್, ಶ್ರೀಲೀಲಾ ಹಾಗೂ ಸಾಯಿ ಪಲ್ಲವಿ ಅಭಿನಯದ OM ಸಿನಿಮಾ ಇವತ್ತು ರಿಲೀಸ್ ಆಗಿದೆ. ಅಂತೆಯೇ ಇವತ್ತು ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಣೆಗೆ ತೆರಳಿದ್ದ ಚಿತ್ರದ ನಟಿ ಶ್ರೀಲೀಲಾಗೆ ಬಿಗ್ ಶಾಕ್ ಆಗಿದೆ.

ಚೆನ್ನೈ: ತಮಿಳು ಸ್ಟಾರ್ ಧನುಷ್ ಅವರ OM (ಓಂ) ಸಿನಿಮಾ ಇವತ್ತು ರಿಲೀಸ್ ಆಗಿದ್ದು, ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಅದೇ ಖುಷಿಯಲ್ಲಿ ಸಿನಿಮಾದ ಹೀರೋಯಿನ್ ಶ್ರೀಲೀಲಾ, ಥಿಯೇಟರ್‍‌ಗೆ ಬಂದು ಲಾಕ್ ಆದ ಘಟನೆ ಚೆನ್ನೈನಲ್ಲಿ ನಡೆದಿದೆ.

ಅಸಲಿಗೆ ಆಗಿದ್ದೇನು?

ತಮ್ಮ ಅಭಿನಿಯದ 'ಓಂ' ಸಿನಿಮಾ ಇವತ್ತು ರಿಲೀಸ್ ಆಗಿದೆ. ಚಿತ್ರದ ಮೊದಲ ಶೋವನ್ನು ಅಭಿಮಾನಿಗಳ ನೋಡಲು ಚೆನ್ನೈ ಕಮಲಾ ಚಿತ್ರಮಂದಿರಕ್ಕೆ ಎಂಟ್ರಿ ಆಗಿದ್ದರು. ಚಿತ್ರ ವೀಕ್ಷಣೆ ವೇಳೆ ಶ್ರೀಲೀಲಾ ಅವರು ಥಿಯೇಟರ್‍‌ಗೆ ಬಂದ ಎಲ್ಲಾ ಅಭಿಮಾನಿಗಳಿಗೆ ಸ್ವಾಗತ ನೀಡಿದರು. ನಂತರ ಸಿನಿಮಾ ಸಂಬಂಧ ವಿಶೇಷ ಅನಿಸಿಕೆಗಳನ್ನು ಹಂಚಿಕೊಂಡರು. ಈ ವೇಳೆ ತಮ್ಮ ನೆಚ್ಚಿನ ನಟಿಯನ್ನು ನೋಡಿದ ಅಭಿಮಾನಿಗಳು ಫುಲ್ ಹ್ಯಾಪಿ ಆದರು.

ಸಿನಿಮಾ ಮುಗಿಸಿ ಥಿಯೇಟರ್‍‌ನಿಂದ ಹೊರ ಬರುತ್ತಿದ್ದಂತೆಯೇ ಪರಿಸ್ಥಿತಿ ಬದಲಾಗಿದೆ. ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ದೊಡ್ಡ ಅಭಿಮಾನಿಗಳ ಬಳಗ ಥಿಯೇಟರ್ ಮುಂದೆ ಅವರನ್ನು ಲಾಕ್ ಮಾಡಿ, ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿ ಬಿದ್ದಿದ್ದಾರೆ. ಅಷ್ಟೇ ಅಲ್ಲ, ಕೆಲವರು ಫೋಟೋ ಕ್ಲಿಕ್ಕಿಸಿಕೊಳ್ಳಲು ಆಗದೇ ಹತಾಶರಾಗಿ ನೂಕು ನುಗ್ಗಲು ಉಂಟು ಮಾಡಿದ್ದಾರೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಆಗಿದೆ. ಇದರಿಂದ ಪೊಲೀಸ್ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಜನಸಂದಣಿಯನ್ನ ನಿಯಂತ್ರಿಸಿ ನಟಿಯನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಲು ಹರಸಾಹಸ ಪಟ್ಟರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲಾತಣಗಳಲ್ಲಿ ವೈರಲ್ ಆಗಿದೆ.

ಈ ಎಲ್ಲಾ ಗಲಾಟೆ, ಗದ್ದಲಗಳು ಮುಗಿದ ಬಳಿಕ ಮಾತನ್ನಾಡಿರುವ ನಟಿ ಶ್ರೀಲೀಲಾ.. ಸಿನಿಮಾ ನೋಡಿ ನಾನು ಮತ್ತಷ್ಟು ಎಕ್ಸೈಟ್ ಆಗಿದ್ದೇನೆ. ಈ ಸಿನಿಮಾ ನನಗೆ ಅದ್ಭುತ ಅನುಭವ ನೀಡಿದೆ. ಅದಕ್ಕಾಗಿ ನಾನು ಧನ್ಯವಾದ ತಿಳಿಸುತ್ತೇನೆ. ಪ್ರತಿಯೊಬ್ಬರೂ ಈ ಸಿನಿಮಾವನ್ನು ನೋಡಬೇಕು. ಇವತ್ತು ನನ್ನ ಒಂದು ಕನಸು ನನಸಾಗಿದೆ. ಚಿತ್ರದಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ವಿಶೇಷವಾದ ಜೀವ ತುಂಬಲಾಗಿದೆ. ಹೀಗಾಗಿ ನಾನು ಸಿನಿಮಾ ಬಗ್ಗೆ ಹೆಚ್ಚು ಮಾತನ್ನಾಡೋದಿಲ್ಲ. ಎಲ್ಲರೂ ಸಿನಿಮಾ ನೋಡಿ ವಿಮರ್ಶೆ ಮಾಡಬೇಕು ಎಂದು ಹೇಳಿದರು.

ಓಂ ಸಿನಿಮಾ ತಾರಗಣ

ಇನ್ನು ಸಿನಿಮಾದ ತಾರಗಣದ ಬಗ್ಗೆ ಹೇಳೋದಾದರೆ.. ಧನುಷ್, ಸಾಯಿ ಪಲ್ಲವಿ, ಮಮ್ಮುಟ್ಟಿ, ನಾಸಿರುದ್ದೀನ್, ಶ್ರೀ ಲೀಲಾ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ವಿಶ್ವದಾದ್ಯಂತ ರಿಲೀಸ್ ಆಗಿರುವ ಈ ಸಿನಿಮಾಗೆ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನ ಮಾಡಿದ್ದಾರೆ. ಸಂಘಟಿತ ಅಪರಾಧ ಜಾಲ ಮತ್ತು ಕೆಂಪು ಚಂದನ ಕಳ್ಳಸಾಗಣೆ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಪಡೆಯ ಕಾರ್ಯಾಚರಣೆಯ ಸುತ್ತ ಈ ಚಿತ್ರ ಸಾಗುತ್ತದೆ. ಮೊದಲ ಪ್ರದರ್ಶನದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಧನುಷ್ ಮತ್ತು ಮಮ್ಮುಟ್ಟಿ ಅಭಿನಯ ಹಾಗೂ ಆಕ್ಷನ್ ದೃಶ್ಯಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. 170 ರಿಂದ 200 ಕೋಟಿಯ ಬಜೆಟ್‌ನ ಚಿತ್ರ ಇದಾಗಿದೆ.

View post on Instagram