ಬಚ್ಚನ್‌ನಿಂದ ಕಪೂರ್‌ವರೆಗೆ: ಬಾಲಿವುಡ್‌ನ 5 ಅತ್ಯಂತ ಜನಪ್ರಿಯ ಕುಟುಂಬಗಳು!
ಬಾಲಿವುಡ್‌ನಲ್ಲಿ ಹಲವು ಕುಟುಂಬಗಳು ಪ್ರಸಿದ್ಧ ಕುಟುಂಬಗಳಿವೆ ಮತ್ತು ಅವರು ತೆಲೆಮಾರುಗಳಿಂದ ಪರಸ್ಪರ ಬೆಂಬಲಿಸುವ ರೀತಿಯಿಂದ ಜನಮನದಲ್ಲಿದ್ದಾರೆ. ಇವು ಬಾಲಿವುಡ್ ಚಲನಚಿತ್ರೋದ್ಯಮಕ್ಕೆ ಪ್ರಸಿದ್ಧ ನಟರು, ನಿರ್ಮಾಪಕರು ಮತ್ತು ನಿರ್ದೇಶಕರನ್ನು ಪ್ರೇಕ್ಷಕರಿಗೆ ನೀಡಿದೆ ಮತ್ತು ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ. ಬಾಲಿವುಡ್‌ನ ಕೆಲವು ಜನಪ್ರಿಯ ಕುಟುಂಬಗಳ ಪಟ್ಟಿ ಇಲ್ಲಿದೆ.
ಕಪೂರ್ ಕುಟುಂಬ:
ಕಪೂರ್‌ಗಳು ಬಾಲಿವುಡ್‌ನ ಅತ್ಯಂತ ಹಳೆಯ ಕುಟುಂಬ. ಅವರ ಅಡ್ಡ ಹೆಸರು ಮತ್ತು ಫ್ಯಾಮಿಲಿ ಗೆಟ್‌ಟುಗೆದರ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ಪೃಥ್ವಿರಾಜ್ 1927 ರಲ್ಲಿ ಉದ್ಯಮದ ಭಾಗವಾದರು ಮತ್ತು ಅವರ ಮಕ್ಕಳಾದ ರಾಜ್ ಕಪೂರ್, ಶಮ್ಮಿ ಕಪೂರ್ ಮತ್ತು ಶಶಿ ಕಪೂರ್ ಇಲ್ಲಿಯವರೆಗಿನ ಅತ್ಯಂತ ಪ್ರಸಿದ್ಧ ನಟರಾಗಿದ್ದಾರೆ. ರಾಜ್ ಕಪೂರ್ ಅವರ ಮಕ್ಕಳಾದ ರಣಧೀರ್ ಕಪೂರ್ ಮತ್ತು ರಿಷಿ ಕಪೂರ್ ಅನೇಕ ಚಲನಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ಪಡೆದು ಯಶಸ್ವಿ ನಟರಾದರು. ನೀತು ಕಪೂರ್ ಜೊತೆ ರಿಷಿ ಕಪೂರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರಣಧೀರ್ ಕಪೂರ್ ಅವರ ಪುತ್ರಿಯರಾದ ಕರಿಷ್ಮಾ ಮತ್ತು ಕರೀನಾ ಕಪೂರ್ ಹೆಸರಾಂತ ಬಾಲಿವುಡ್ ನಟಿಯರು. ಏತನ್ಮಧ್ಯೆ, ರಿಷಿ ಕಪೂರ್ ಅವರ ಮಗ ರಣಬೀರ್ ಕಪೂರ್ ಅಪಾರ ಅಭಿಮಾನಿಗಳನ್ನು ಹೊಂದಿರುವ ಪ್ರಸಿದ್ಧ ನಟರಲ್ಲಿ ಒಬ್ಬರು.
ಖಾನ್ ಕುಟುಂಬ:
ಸಲೀಂ ಖಾನ್ ಅವರು ನಟ, ನಿರ್ಮಾಪಕ ಮತ್ತು ಚಿತ್ರಕಥೆಗಾರರಾಗಿ ಭಾರತೀಯ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ. ಅವರ ಮಕ್ಕಳಾದ ಸಲ್ಮಾನ್ ಖಾನ್, ಅರ್ಬಾಜ್ ಖಾನ್ ಮತ್ತು ಸೊಹೈಲ್ ಖಾನ್ ಕೂಡ ಹಿಂದಿ ಚಿತ್ರರಂಗದಲ್ಲಿ ಹೆಸರಾಂತ ನಟರಾದರು. ಸಲೀಂ ಅವರ ಎರಡನೇ ಪತ್ನಿ ಹೆಲೆನ್ ಕೂಡ ಜನಪ್ರಿಯ ನಟಿ.
ಬಚ್ಚನ್ ಕುಟುಂಬ:
ಲೆಜೆಂಡರಿ ನಟ ಅಮಿತಾಭ್ ಬಚ್ಚನ್ ಅವರು 1969 ರಿಂದ ಭಾರತೀಯ ಚಲನಚಿತ್ರೋದ್ಯಮದ ಭಾಗವಾಗಿದ್ದಾರೆ ಮತ್ತು ಅಭಿಮಾನಿಗಳ ಹೃದಯ ಆಳುತ್ತಿದ್ದಾರೆ. ಅವರು ಜಯಾ ಭಾದುರಿ ಅವರನ್ನು ವಿವಾಹವಾದರು, ಅವರು ಆಗ ಪ್ರಸಿದ್ಧ ನಟಿಯಾಗಿದ್ದರು. ಅವರ ಪುತ್ರ ಅಭಿಷೇಕ್ ಬಚ್ಚನ್ ಅವರು ಚಲನಚಿತ್ರೋದ್ಯಮದಲ್ಲಿ ಜನಪ್ರಿಯ ಹೆಸರಾಗಿದ್ದು, ಮಿಸ್ ವರ್ಲ್ಡ್ 1994 ಮತ್ತು ನಟಿ ಐಶ್ವರ್ಯಾ ರೈ ಅವರೊಂದಿಗೆ ಮದುವೆಯಾಗಿದ್ದಾರೆ.
Families Of Bollywood
ಪಟೌಡಿ ಕುಟುಂಬ:
ಸೈಫ್ ಅಲಿ ಖಾನ್ ರಾಜಮನೆತನಕ್ಕೆ ಸೇರಿದವರು ಮತ್ತು ಅವರ ತಾಯಿ ಭಾರತೀಯ ನಟಿ ಶರ್ಮಿಳಾ ಟ್ಯಾಗೋರ್ ಮತ್ತು ತಂದೆ ಕ್ರಿಕೆಟಿಗ ಮನ್ಸೂರ್ ಅಲಿ ಖಾನ್ ಪಟೌಡಿ ಅವರೊಂದಿಗಿನ ಶರ್ಮೀಳಾರ ಪ್ರೇಮಕಥೆ ಸಖತ್ ಫೇಮಸ್. ಅವರ ಮಗಳು ಸೋಹಾ ಅಲಿ ಖಾನ್ ಕೂಡ ಬಾಲಿವುಡ್ ನಟಿ ಮತ್ತು ಕುನಾಲ್ ಖೆಮ್ಮು ಅವರನ್ನು ವಿವಾಹವಾಗಿದ್ದಾರೆ. ಸೈಫ್ ಅಮೃತಾ ಸಿಂಗ್ ಅವರನ್ನು ವಿವಾಹವಾದರು. ನಂತರ ಕರೀನಾ ಕಪೂರ್ ಅವರೊಂದಿಗೆ ಮದುವೆಯಾಗಿದ್ದಾರೆ. ಸೈಫ್ ಅವರ ಮಗಳು ಸಾರಾ ಅಲಿ ಖಾನ್ ಈಗ ಪ್ರಸಿದ್ಧ ನಟಿ ಮತ್ತು ಅವರ ಪುತ್ರರಾದ ತೈಮೂರ್ ಮತ್ತು ಜೆಹ್ ಪಾಪರಾಜಿಗಳ ನೆಚ್ಚಿನವರಾಗಿದ್ದಾರೆ.
ಬೋನಿ ಕಪೂರ್ ಕುಟುಂಬ:
ಈ ಕಪೂರ್ ಕುಟುಂಬವು ಹಲವು ವರ್ಷಗಳಿಂದ ಹಿಂದಿ ಚಿತ್ರರಂಗದ ಭಾಗ. ಖ್ಯಾತ ನಿರ್ಮಾಪಕ ಸುರಿಂದರ್ ಕಪೂರ್ ಅವರ ಮಕ್ಕಳಾದ ಬೋನಿ ಕಪೂರ್, ಅನಿಲ್ ಕಪೂರ್ ಮತ್ತು ಸಂಜಯ್ ಕಪೂರ್ ಉದ್ಯಮದಲ್ಲಿ ದೊಡ್ಡ ಹೆಸರು. ಬೋನಿ ಅವರ ಪತ್ನಿ ದಿವಂಗತ ಶ್ರೀದೇವಿ, ಅವರು ತಮ್ಮ ಅದ್ಭುತ ನಟನಾ ಕೌಶಲ್ಯದಿಂದ ಲಕ್ಷಾಂತರ ಹೃದಯಗಳನ್ನು ಗೆದ್ದರು ಮತ್ತು ಅವರ ಮಗಳು ಜಾನ್ವಿ ಕಪೂರ್ ಸಹ ಅನೇಕ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಏತನ್ಮಧ್ಯೆ, ಬೋನಿ ಅವರ ಮಗ ಅರ್ಜುನ್ ಕಪೂರ್ ಕೂಡ ಪ್ರಸಿದ್ಧ ನಟ.ಅನಿಲ್ ಅವರ ಮಗಳು ಸೋನಮ್ ಕಪೂರ್ ಕೂಡ ಪ್ರಮುಖ ಹಿಟ್‌ಗಳನ್ನು ನೀಡಿದ್ದಾರೆ.