ಕಳೆದ ಮೂರು ವರ್ಷಗಳಿಂದ ಕರುನಾಡಿನ ಪ್ರೀತಿಯ ನಟ ಶಿವಣ್ಣರಿಗೆ ತಮ್ಮ ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಅದೃಷ್ಟ ಕೈತಪ್ಪಿ ಹೋಗಿತ್ತು. ಈ ವರ್ಷ ಅವರ ಹಾಗೂ ಫ್ಯಾನ್ಸ್ ಆಸೆ ಈಡೇರುತ್ತಿದೆ. ಫ್ಯಾನ್ಸ್‌ ಜೊತೆ ಬರ್ತ್‌ಡೇ ಬಾಯ್ ಆಗಲು ಶಿವರಾಜ್‌ಕುಮಾರ್ ಸಹ ಉತ್ಸುಕತೆಯಿಂದ ಸಿದ್ಧರಾಗಿದ್ದಾರೆ.

ಶಿವರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಕ್ಷಣಗಣನೆ!

ಕನ್ನಡ ಚಿತ್ರರಂಗದ ಹಿರಿಯ ನಟ, 'ಕರುನಾಡ ಚಕ್ರವರ್ತಿ' ಖ್ಯಾತಿಯ ಡಾ ಶಿವರಾಜ್‌ಕುಮಾರ್ ಅವರ ಹುಟ್ಟುಹಬ್ಬಕ್ಕೆ (Shivarajkumar Birthday) ಕೌಂಟ್‌ಡೌನ್ ಶುರುವಾಗಿದೆ. 'ಶಿವೋತ್ಸವ'ದ ಸಂಭ್ರಮಾಚರಣೆಗೆ ಅಭಿಮಾನಿಗಳು ಸಿದ್ಧರಾಗಿದ್ದಾರೆ. 64ನೇ ವಸಂತಕ್ಕೆ (12 ಜುಲೈ) ಕಾಲಿಡ್ತಿರೋ ನಟ ಶಿವಣ್ಣ ಅವರು ತಮ್ಮ 'ಬರ್ತ್ ಡೇ'ಗೆ ಅಭಿಮಾನಿ ದೇವರುಗಳು ಹಾಗೂ ಕನ್ನಡಿಗರಿಗೆ ಪ್ರೀತಿಯ ಆಮಂತ್ರಣ ನೀಡಿದ್ದಾರೆ. ಅನಾರೋಗ್ಯದ ಕಾರಣಕ್ಕೆ ಕಳೆದ ಮೂರ ವರ್ಷದಿಂದ ಅಭಿಮಾನಿಗಳನ್ನ ಭೇಟಿ ಮಾಡದ ಶಿವರಾಜ್ ಕುಮಾರ್, ಈಗ ತಮ್ಮ ನಾಗಾವರದ ಶ್ರೀಮುತ್ತು ನಿವಾಸದಲ್ಲಿ ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.

ಹೌದು, ನಟ ಶಿವರಾಜ್‌ಕುಮಾರ್ ಅವರು 63ನೇ ವರ್ಷ ಮುಗಿಸಿ 64ರ ಹೊಸ್ತಿಲಿಗೆ ಕಾಲಿಟ್ಟಿದ್ದಾರೆ. ಅನಾರೋಗ್ಯ ಸಮಸ್ಯೆಯಿಂದಲೂ ಮುಕ್ತಿ ಪಡೆದು ಈಗ ಮತ್ತೆ ವೃತ್ತಿಜೀವನದಲ್ಲಿ ಸಾಕಷ್ಟು ಕ್ರಿಯಾಶೀಲರಾಗಿರುವ ನಟ ಶಿವರಾಜ್‌ಕುಮಾರ್ ಅವರು ಈ ಬಾರಿ ತಮ್ಮ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಲಿರುವುದು ವಿಶೇಷ. ಬಹುತೇಕರಿಗೆ ಗೊತ್ತಿರುವಂತೆ, ಕಳೆದ ಮೂರು ವರ್ಷಗಳಿಂದ ಕರುನಾಡಿನ ಪ್ರೀತಿಯ ನಟ ಶಿವಣ್ಣರಿಗೆ ತಮ್ಮ ಫ್ಯಾನ್ಸ್ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಅದೃಷ್ಟ ಕೈತಪ್ಪಿ ಹೋಗಿತ್ತು. ಈ ವರ್ಷ ಅವರ ಹಾಗೂ ಫ್ಯಾನ್ಸ್ ಆಸೆ ಈಡೇರುತ್ತಿದೆ. ಫ್ಯಾನ್ಸ್‌ ಜೊತೆ ಬರ್ತ್‌ಡೇ ಬಾಯ್ ಆಗಲು ಶಿವರಾಜ್‌ಕುಮಾರ್ ಸಹ ಉತ್ಸುಕತೆಯಿಂದ ಸಿದ್ಧರಾಗಿದ್ದಾರೆ.

64ನೇ ವರ್ಷದ ಹುಟ್ಟುಹಬ್ಬ

ನಾಳೆ, ಅಂದರೆ 12 ಜುಲೈ 2026ರಂದು (12 July) ತಮ್ಮ 64ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿರುವ ನಟ ಶಿವಣ್ಣ ಅವರಿಗೆ ಈಗಾಗಲೇ ಹುಟ್ಟುಹಬ್ಬಕ್ಕೆ ಶುಭಕೋರಿ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹಬ್ಬ ಮಾಡುತ್ತಿದ್ದಾರೆ. ಇಂದು ರಾತ್ರಿ ಹಾಗೂ ನಾಳೆ ತಮ್ಮ ಮೆಚ್ಚಿನ ನಟ ಶಿವಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುವ ಮೂಲಕ ಅಭಿಮಾನಿಗಳು ಸೋಷಿಯಲ್ ಮೀಡಿಯಾವನ್ನು ತುಂಬಿಸಿ ಇದನ್ನು 'ಕರುನಾಡ ಹಬ್ಬ' ಎಂಬಂತೆ ಆಚರಿಸಲಿದ್ದಾರೆ.

ಹುಟ್ಟುಹಬ್ಬದ ಸಂಭ್ರಮಾಚರಣೆ

ಅಂದಹಾಗೆ, ನಟ ಶಿವರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮ, ಕಾರ್ಯಕ್ರಮಗಳು, ಅಭಿಮಾನಿಗಳ ಸಂಭ್ರಮಾಚರಣೆಗಳು ಎಲ್ಲವನ್ನೂ ಅಪ್‌ಡೇಟ್ ಮಾಡಲಾಗುತ್ತದೆ, ಕಾಯುತ್ತಿರಿ.. ನೀವೂ ಈ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ ಎಂಜಾಯ್ ಮಾಡುತ್ತಿರಿ..