ಟಾಕ್ಸಿಕ್ ಸಿನಿಮಾ ಅಗಸ್ಟ್ 26ಕ್ಕೆ ಬರುತ್ತೆ. ಆದ್ರೆ ಈ ಸಿನಿಮಾಗೆ ಸೆನ್ಸಾರ್ ಏನಾಗುತ್ತೆ ಅನ್ನೋ ಕುತೂಹಲವೂ ಇದೆ. ಯಾಕಂದ್ರೆ ವೈಲೆನ್ಸ್ ಜೊತೆ ವೈಬ್ರೇಷನ್ ತರೋ ರೊಮ್ಯಾನ್ಸ್ಈ ಸಿನಿಮಾದಲ್ಲಿದೆ. ಈ ಝಲಕ್ಗಳನ್ನೆಲ್ಲಾ ನೋಡಿದ್ರೆ ಟಾಕ್ಸಿಕ್ಗೆ ಎ ಸರ್ಟಿಫಿಕೆಟ್ ಸಿಕ್ಕಿದ್ರು ಆಶ್ಚರ್ಯವಿಲ್ಲ.
ರಾಕಿಂಗ್ ಸ್ಟಾರ್ ಯಶ್(Yash) ಹಾಗು ಬಾಲಿವುಡ್ ಬ್ಯೂಟಿ ಕಿಯಾರ ಅಡ್ವಾನಿ (Kiara Advani) ಈಗ ಟಾಕ್ ಆಫ್ದಿ ಟೌನ್.. ಇದಕ್ಕೆ ಕಾರಣ ಈ ಇಬ್ಬರೂ 'ಟಾಕ್ಸಿಕ್'ನಲ್ಲಿ 'ತಬಾಹಿ..' ಅಂತ ತಬ್ಬಿ ಮುದ್ದಾಡಿಕೊಂಡಿರೋದು. ಆದ್ರೆ ಇವರಿಬ್ಬರು ಈಗ ಭಾರತೀಯ ಚಿತ್ರರಂಗದ ನಂಬರ್ ಒನ್ ಹೀರೋ, ಹೀರೋಯಿನ್ ಅನ್ನೋದು ನಿಮಗೆ ಗೊತ್ತಾ..? ಅದನ್ನ ಆ ಬಾಲಿವುಡ್ ನಟ ಬಾಯಿಬಿಟ್ಟು ಹೇಳಿದ್ದಾರೆ...
ತಬಾಹಿ ಅಂತ ತಬ್ಬಿ ಮುದ್ದಾಡಿಕೊಂಡ ಯಶ್-ಕಿಯಾರ ಪ್ರಣಯ ಮೋಡಿ.. ಇವರೇ ನಂಬರ್-01 ಜೋಡಿ
ಶಾಹಿದ್ ಕಪೂರ್ಬಾಯ್ ಬಿಟ್ಟ ಸತ್ಯ.. ಸಿನಿ ಜಗತ್ತಿನಾದ್ಯಂತ ಸದ್ದು.!
ಹೌದು, ಟಾಕ್ಸಿಕ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಕಿಯಾರ ಅಡ್ವಾನಿಯ ಶೃಂಗಾರ ಜ್ವಾಲೆ ಸಿಡಿದಿದೆ. ಈ ಜ್ವಾಲೆಗೆ ಸಾಮಾಜಿಕ ಜಾಲತಾಣವೇ ಕೊಚ್ಚಿಕೊಂಡು ಹೋಗುತ್ತಿದೆ. ಇಬ್ಬರ ಸಿಡಿಲಬ್ಬರದ ರೊಮ್ಯಾನ್ಸ್ ನೋಡಿ ಇಡೀ ಸಿನಿ ಜಗತ್ತು ದಂಗಾಗಿದೆ.. 'ಟಾಕ್ಸಿಕ್'ನಲ್ಲಿ ಯಶ್ ಇನ್ನೇನೇನು ಮಾಡಿದ್ದಾರೋ ಅನ್ನೋ ಕಲುತೂಹಲ ಬೆಟ್ಟವಾಗಿದೆ.
ಯಶ್ ಹಾಗು ಕಿಯಾರ ರೊಮ್ಯಾಂಟಿಕ್ ಕೆಮಿಸ್ಟ್ರಿ ಹೇಗಿದೆ ಅಂದ್ರೆ ಬೆಂಕಿ + ಬಿರುಗಾಳಿ ಮಿಕ್ಸ್ ಆದಂತಿದೆ. ಟಾಕ್ಸಿಕ್ ನ ತಬಾಹಿಯಲ್ಲಿ ಧಗಧಗಿಸಿರೋ ಇವರಿಬ್ಬರ ಶೃಂಗಾರ ಇವರಿಬ್ಬರೇ ಇಂಡಸ್ಟ್ರಿಯ ನಂಬರ್ಒನ್ ಜೋಡಿ ಅನ್ನೋ ಹಾಗೆ ಮಾಡಿದೆ.
ಟಾಕ್ಸಿಕ್ನಲ್ಲಿ ನಮ್ಮ ರಾಕಿಂಗ್ ಸ್ಟಾರ್ ಯಶ್ ಜೊತೆ ಬಾಲಿವುಡ್ ಬ್ಯೂಟಿ ಕಿಯಾರಾ ಅದ್ವಾನಿ ಸಖತ್ ಫ್ರೆಶ್ ಜೋಡಿ. ಇಬ್ಬರ ಆನ್-ಸ್ಕ್ರೀನ್ ಕೆಮಿಸ್ಟ್ರಿ ಹೆಂಗಿದೆ ಅಂದ್ರೆ, ನೋಡೋಕೆ ಎರಡು ಕಣ್ಣು ಸಾಲಲ್ಲ. ಪ್ರೀತಿ ಅಂದ್ರೆ ಬರೀ ರೋಮ್ಯಾನ್ಸ್ ಅಷ್ಟೇ ಅಲ್ಲ, ಅದೊಂದು ತೀವ್ರವಾದ ಹುಚ್ಚು, ಕಂಪ್ಲೀಟ್ ಶರಣಾಗತಿ ಅನ್ನೋದನ್ನ ಇವರಿಬ್ಬರೂ ತಮ್ಮ ಕಣ್ಣುಗಳಲ್ಲೇ ಎಕ್ಸ್‌ಪ್ರೆಸ್ ಮಾಡಿದ್ದಾರೆ. ಇಂಥಃ ಯಶ್ ಹಾಗು ಕಿಯಾರ ಭಾರತೀಯ ಚಿತ್ರ ಜಗತ್ತಿನ ನಂಬರ್ ಒನ್ ಹೀರೋ ಹೀರೋಯಿನ್ ಅಂದ್ರೆ ನೀವು ನಂಬಲೇ ಬೇಕು.. ಯಾಕಂದ್ರೆ ಇವರಿಬ್ಬರ ರೆಕಾರ್ಡ್ ಹಾಗಿದೆ.
ಸೈಲೆಂಟ್ಆಗೇ ಹಿಟ್ ಸಿನಿಮಾ ಕೊಡುತ್ತಿದ್ದಾರೆ ಕಿಯಾರ..!
ಟಾಕ್ಸಿಕ್ನಲ್ಲಿ ನಾಧಿಯಾ ಅನ್ನೋ ರೋಲ್ ಮಾಡುತ್ತಿರೋ ಕಿಯಾರ ಹಾಟೆಸ್ಟ್ ಆಗಿ ಕಾಣಿಸ್ತಾ ಇದ್ದಾರೆ. ಈ ಹಾಟಿ ಸೈಲೆಂಟ್ಆಗಿ ಹಿಟ್ ಸಿನಿಮಾಗಳನ್ನ ಕೊಡುತ್ತಿದ್ದಾರೆ. ಈ ಹಿಂದೆ ಕಿಯಾರ ನಟಿಸಿದ ವಾರ್-2, ಗೇಮ್ ಚೇಂಚರ್, ಸತ್ಯಪ್ರೇಮ್ ಕಿ ಕಥಾ, ಭೂಲ್ ಭೂಲಯ್ಯ-2 ಸಿನಿಮಾಗಳು ಹಿಟ್ ಆಗಿವೆ. ಹೀಗಾಗಿ ಕಿಯಾರ ಬಾಲಿವುಡ್ನ ಟಾಪ್ ಹೀರೋಯಿನ್ ಅಂತ ಶಾಹಿದ್ಬಾಯ್ ಬಿಟ್ಟಿದ್ದಾರೆ.
ಇನ್ನು ಯಶ್.. ಕೆಜಿಎಫ್ ಎರಡರಲ್ಲೂ ಹಿಟ್ ಕೊಟ್ಟು ನಂಬರ್-01 ಪಟ್ಟಕ್ಕೇರಿದ ಯಶ್ಇವತ್ತು ಭಾರತದ ನಂಬರ್ಒನ್ ಸ್ಟಾರ್.. ಇದನ್ನ ಇಡೀ ಭಾರತೀಯ ಸಿನಿ ಜಗತ್ತೇ ಒಪ್ಪಿಕೊಂಡಿದೆ. ಇದನ್ನೇ ನಟ ಶಾಹಿದ್ ಕಪೂರ್ಕೂಡ ಹೇಳಿದ್ದಾರೆ.
ಟಾಕ್ಸಿಕ್ ನಲ್ಲಿ ನಂಬರ್-01 ಹೀರೋ, ಹೀರೋಯಿನ್..!
ಟಾಕ್ಸಿಕ್ ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ ಪ್ಯಾನ್ ವರ್ಲ್ಡ್ಚಿತ್ರ. ಈ ಸಿನಿಮಾದಲ್ಲಿ ಈಗ ಭಾರತದ ನಂಬರ್ ಒನ್ ಹೀರೋ ಯಶ್, ಹಾಗು ನಂಬರ್ ಒನ್ ಹೀರೋಯಿನ್ ಕಿಯಾರ ಅಡ್ವಾನಿ ಜೊತೆಯಾಗಿದ್ದಾರೆ. ಇಬ್ಬರ ಕೆಮಿಸ್ಟ್ರಿಕ್ ಕಿಕ್ ಕೊಡ್ತಾ ಇದೆ. ಇಬ್ಬರ ಪ್ರಣಯದ ಮೋಡಿಗೆ ಚಿತ್ರರಸಿಕರು ಥ್ರಿಲ್ ಆಗುತ್ತಿದ್ದಾರೆ.
ಸೆನ್ಸಾರ್ ಅಂಗಳದಲ್ಲಿ ಟಾಕ್ಸಿಕ್.. ಏನಾಗುತ್ತೆ ಭವಿಷ್ಯ..!
ಟಾಕ್ಸಿಕ್ ಸಿನಿಮಾ ಅಗಸ್ಟ್ 26ಕ್ಕೆ ಬರುತ್ತೆ. ಆದ್ರೆ ಈ ಸಿನಿಮಾಗೆ ಸೆನ್ಸಾರ್ ಏನಾಗುತ್ತೆ ಅನ್ನೋ ಕುತೂಹಲವೂ ಇದೆ. ಯಾಕಂದ್ರೆ ವೈಲೆನ್ಸ್ ಜೊತೆ ವೈಬ್ರೇಷನ್ ತರೋ ರೊಮ್ಯಾನ್ಸ್ ಈ ಸಿನಿಮಾದಲ್ಲಿದೆ. ಈ ಝಲಕ್ಗಳನ್ನೆಲ್ಲಾ ನೋಡಿದ್ರೆ ಟಾಕ್ಸಿಕ್ಗೆ ಎ ಸರ್ಟಿಫಿಕೆಟ್ ಸಿಕ್ಕಿದ್ರು ಆಶ್ಚರ್ಯವಿಲ್ಲ. ಆದ್ರೆ ಈ ಬಗ್ಗೆ ಯಶ್ ಹೆಚ್ಚು ತಲೆ ಕೆಡಿಸಿಕೊಳ್ಳಲ್ಲ ಅನ್ನಿಸುತ್ತೆ. ಯಾಕಂದ್ರೆ. ಈ ಹಿಂದೆ ಬಂದ ಧುರಂದರ್, ಅನಿಮಲ್, ಪುಷ್ಪ-2 ಸಿನಿಮಾಗಳಿಗೂ ಎ ಸರ್ಟಿಫಿಕೇಟ್ಸಿಕ್ಕಿದೆ. ಆದ್ರೂ ಆ ಸಿನಿಮಾಳು ಬಾಕ್ಸಾಫೀಸ್ ಗೆದ್ದಿವೆ. ಜನ ಮೆಚ್ಚುಗೆ ಪಡೆದಿವೆ. ಈಗ ಟಾಕ್ಸಿಕ್ ಕೂಡ ಅದೇ ರೆಕಾರ್ಡ್ ಬರೆಯೋದು ಖಚಿತ ಎನ್ನಲಾಗುತ್ತಿದೆ..!
‘ಸಿನಿಮಾ ಹಂಗಾಮ’ ವಿಡಿಯೋ ನೋಡಿ..


