Chokerನಿಂದ Wide Leg Jeansವರೆಗೆ, 90 ರ ದಶಕದ ಫ್ಯಾಶನ್ ಮತ್ತೆ ಟ್ರೆಂಡ್!
ಫ್ಯಾಷನ್ (Fashion) ನಿರಂತರವಾಗಿ ಬದಲಾಗುತ್ತಲೇ ಇರುತ್ತದೆ. ಹೊಸದು ಹಳೆಯದಾಗುವ ಹಾಗೇ ಆಗಾಗ ಹಳೆ ಫ್ಯಾಷನ್‌ಗಳು ಮತ್ತೆ ಬೆಳಕಿಗೆ ಬಂದು ಮಾರುಕಟ್ಟೆಯಲ್ಲಿ ಟ್ರೆಂಡ್ ಆಗುವುದು ಸಾಮಾನ್ಯವಾಗಿದೆ. ಆದೇ ರೀತಿ ದಶಕದ ಕೆಲವು ಹಿಂದಿನ ಫ್ಯಾಶನ್‌ಗಳು ಈಗ ಮತ್ತೆ ಟ್ರೆಂಡ್ ಆಗಿವೆ. ಇತ್ತೀಚಿನ ದಿನಗಳಲ್ಲಿ ಕ್ರಾಪ್ ಟಾಪ್ (Crop Top), ವೈಡ್ ಲೆಗ್ ಜೀನ್ಸ್ (Wide leg jeans), ಕುತ್ತಿಗೆಗೆ ಚೋಕರ್ (Choker) ಎಲ್ಲವು ಸಖತ್ ಚಾಲ್ತಿಯಲ್ಲಿರುವ ಫ್ಯಾಷನ್' ಆದರೆ ಈ ಎಲ್ಲಾ ಫ್ಯಾಶನ್ ಸ್ಟೈಲ್‌ಗಳು 90 ರ ದಶಕದಿಂದ ನಕಲು ಮಾಡಲ್ಪಟ್ಟಿದೆ. ಹೌದು, 90ರ ದಶಕದ ಬಾಲಿವುಡ್ ನಾಯಕಿಯರನ್ನು ನೋಡಿದರೆ ಇಂದಿನ ದಿನಗಳಲ್ಲಿ ದೀಪಿಕಾ (Deepika Padukone), ಕರೀನಾ (Kareena Kapoor) ಅದೇ ರೀತಿಯ ಬಟ್ಟೆ ತೋಡುತ್ತಾರೆ ಮತ್ತು ಫ್ಯಾಶನ್ ಸ್ಟೈಲ್‌ಗಳನ್ನು ಅನುಸರಿಸುತ್ತಿರುವುದು ಕಂಡುಬಂದಿದೆ.
90 ರ ದಶಕದಲ್ಲಿ, ಜೀನತ್ ಅಮಾನ್‌ನಿಂದ ಹಿಡಿದು ಅನೇಕ ಪ್ರಸಿದ್ಧ ಬಾಲಿವುಡ್ ನಟಿಯರವರೆಗೂ ಕುತ್ತಿಗೆಗೆ ಚೋಕರ್ ಧರಿಸುತ್ತಿದ್ದರು. ಅಗಲವಾದ ಕಪ್ಪು ಬಣ್ಣದ ಪಟ್ಟಿಯು ಲುಕ್ ಅನ್ನು ಹೆಚ್ಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಚೋಕರ್ ಮತ್ತೆ ಪ್ರವೃತ್ತಿಯಲ್ಲಿದೆ.
ಹಿಂದಿನ ಕಾಲದ ಹೀರೋಯಿನ್‌ಗಳು ಉದ್ದನೆಯ ಮುಂಭಾಗದ ಸ್ಲಿಟ್‌ಗಳನ್ನು ಹೊಂದಿದ ವೆಲ್ವೆಟ್ ಗೌನ್‌ಗಳನ್ನು ಧರಿಸುವುದನ್ನು ನೀವು ನೋಡಿರಬೇಕು, ಅದು ತುಂಬಾ ಸ್ಟೈಲಿಶ್ ಆಗಿ ಕಾಣುತ್ತದೆ. ಇಂದಿನ ದಿನಗಳಲ್ಲಿ ವೆಲ್ವೆಟ್ ಮತ್ತೆ ಫ್ಯಾಷನ್‌ನಲ್ಲಿದೆ ಮತ್ತು ಯಾವುದೇ ಮದುವೆಯ ಪಾರ್ಟಿಗೆ ವೆಲ್ವೆಟ್‌ಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಪ್ರಸ್ತುತ ವೆಲ್ವೆಟ್ ಲೆಹೆಂಗಾದಿಂದ ಡ್ರೆಸ್ ವರೆಗೆ ಹುಡುಗಿಯರ ನೆಚ್ಚಿನ ಆಯ್ಕೆಯಾಗಿದೆ.
ಕಪ್ಪು ಉಡುಪಿನ ಮೇಲೆ ಬಿಳಿ ಬಣ್ಣದ ಚುಕ್ಕೆಗಳನ್ನು ಹೊಂದಿರುವ ಉಡುಪುಗಳನ್ನು 90 ರ ದಶಕದ ನಾಯಕಿಯರು ಧರಿಸಿದ್ದರು. ಈ ಸ್ಟೈಲ್ ಸ್ವಲ್ಪ ಸಮಯದವರೆಗೆ ಖಂಡಿತವಾಗಿಯೂ ಹಳೆಯದಾಗಿತ್ತು. ಆದರೆ ಪೋಲ್ಕಾ ಡಾಟ್‌ಗಳ ಟ್ರೆಂಡ್ ಮತ್ತೆ ಬಂದಿದೆ.ಪೋಲ್ಕಾ-ಡಾಟ್ ಡ್ರೆಸ್, ಸೀರೆ, ಟಾಪ್ಸ್ ಮತ್ತು ಜಂಪ್‌ಸೂಟ್‌ಗಳವರೆಗೆ ಎಲ್ಲಾ ಇಂದು ಮತ್ತೆ ಫ್ಯಾಷನ್ ಆಗಿದೆ.
ಢಂಗರಿ ಅತ್ಯಂತ ಕೂಲ್ ಮತ್ತು ಕಂಫರ್ಟಬಲ್ ಔಟ್‌ಫಿಟ್ ಎಂದು ಪರಿಗಣಿಸಲಾಗುತ್ತದೆ. 90ರ ದಶಕದ ನಾಯಕಿಯರು ಇದನ್ನು ಹೆಚ್ಚಾಗಿ ಧರಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಡಂಗರಿಯ ಫ್ಯಾಷನ್ ಸಾಕಷ್ಟು ಇದೆ. ಜನರು ಇದನ್ನು ಹಲವು ವಿಧಗಳಲ್ಲಿ ಧರಿಸುತ್ತಾರೆ. ಜೀನ್ಸ್‌ನಲ್ಲಿ ಮಾತ್ರವಲ್ಲದೆ ಅದರ ಸ್ಕರ್ಟ್ ಮತ್ತು ಶಾರ್ಟ್ಸ್ ಕೂಡ ತುಂಬಾ ಟ್ರೆಂಡ್‌ನಲ್ಲಿವೆ.
ಸ್ಲಿಮ್ ಫಿಟ್ ಮತ್ತು ಸ್ಟ್ರೈಟ್ ಕಟ್ ಜೀನ್ಸ್‌ನ ಫ್ಯಾಷನ್ ಸಾಕಷ್ಟು ಹಳೆಯದಾಗಿದೆ ಮತ್ತು ಬೆಲ್ ಬಾಟಮ್ ಪ್ಯಾಂಟ್ ಅಥವಾ ವೈಡ್ ಲೆಗ್ ಪ್ಯಾಂಟ್ ಎಂದು ಕರೆಯುವ 90 ರ ಫ್ಯಾಷನ್ ಈಗ ಮತ್ತೆ ಟ್ರೆಂಡ್‌ನಲ್ಲಿದೆ. ಇತ್ತೀಚಿನ ದಿನಗಳಲ್ಲಿ ದೀಪಿಕಾ ಪಡುಕೋಣೆಯಿಂದ ಹಿಡಿದು ಕರೀನಾ ಕಪೂರ್, ಆಲಿಯಾ ಭಟ್ ಮತ್ತು ಸಾಮಾನ್ಯ ಹುಡುಗಿಯರು ಸಹ ವೈಡ್ ಲೆಗ್ ಜೀನ್ಸ್ ಧರಿಸಲು ಬಯಸುತ್ತಾರೆ.
ವೈಡ್ ಲೆಗ್ ಜೀನ್ಸ್ ನಂತೆ ಪಲಾಝೋ ಕೂಡ 90ರ ದಶಕದ ಫ್ಯಾಷನ್ ಆಗಿದ್ದು, ಈಗಿನ ದಿನಗಳಲ್ಲಿ ಮದುವೆ ಸಮಾರಂಭವಾಗಲಿ, ಆಫೀಸ್ ಗೆ ಹೋಗುವುದಿರಲಿ ಅಥವಾ ಕಂಫರ್ಟಬಲ್ ಡ್ರೆಸ್ ಧರಿಸುವುದಿರಲಿ ಹುಡುಗಿಯರ ಮೊದಲ ಆಯ್ಕೆ ಕುರ್ತಾ, ಪಲಾಝೋ.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಹುಡುಗಿಯರು ಕ್ರಾಪ್ ಟಾಪ್ ಧರಿಸಲು ಇಷ್ಟಪಡುತ್ತಾರೆ. ಇದು ಸ್ಕರ್ಟ್, ಜೀನ್ಸ್, ಪಲಾಝೋ ಮುಂತಾದ ಯಾವುದೇ ಉಡುಗೆಯೊಂದಿಗೆ ಹೋಗುತ್ತದೆ. ಆದರೆ ಈ ಫ್ಯಾಷನ್ ಇಂದಿನದಲ್ಲ 90 ರ ದಶಕದ್ದು.
90ರ ದಶಕದ ನಾಯಕಿ ಸಾಧನಾ ಅವರ ಹೆಸರಿರುವ ಹೇರ್ ಕಟ್ ಸಾಧನಾ ಕಟ್ ಇಂದು ಮತ್ತೆ ಫ್ಯಾಷನ್‌ನಲ್ಲಿದೆ. ವಾಸ್ತವವಾಗಿ ಸಾಧನಾ ಕಟ್ ಯಾವಾಗಲೂ ಟ್ರೆಂಡ್‌ನಲ್ಲಿದೆ. ಮಕ್ಕಳು ಮಾತ್ರವಲ್ಲದೆ ಹಿರಿಯರು ಕೂಡ ಈ ಹೇರ್ ಕಟ್ ಇಷ್ಟಪಡುತ್ತಾರೆ. ಅಷ್ಟೇ ಅಲ್ಲ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ದಿಶಾ ಪಟಾನಿ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಎಲ್ಲರೂ ಈ ಲುಕ್ ಟ್ರೈ ಮಾಡಿದ್ದಾರೆ.