ನಟಿ ತ್ರಿಷಾರಿಂದ ದಳಪತಿ ಕುಟುಂಬದಲ್ಲಿ ಬಿರುಕು? ಜೆಟ್‌ಲ್ಲಿ ಜೊತೆಯಾಗಿ ಪಯಣಿಸುತ್ತಿದ್ದಂತೆ ಹೊಸ ಆರೋಪ
ಟಾಲಿವುಡ್ ಹಾಗೂ ಕಾಲಿವುಡ್‌ನಲ್ಲಿ ದಶಕಗಳಿಂದಲೂ ನಾಯಕಿ ಪಾತ್ರಗಳನ್ನು ಮಾಡುತ್ತಾ ಭದ್ರ ನೆಲೆ ಕಂಡಿರುವ ನಟಿ ತ್ರಿಷಾ ಕೃಷ್ಣನ್ ಅವರು ತೆಲುಗಿನ ವರ್ಷಂ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಬಂದವರು, ಪ್ರಭಾಸ್, ಮಹೇಶ್, ಪವನ್, ಚಿರಂಜೀವಿ, ವೆಂಕಟೇಶ್, ನಾಗಾರ್ಜುನ ಮುಂತಾದ ಎಲ್ಲಾ ಟಾಪ್ ಹೀರೋಗಳ ಜೊತೆ ತ್ರಿಷಾ ಸಿನಿಮಾಗಳನ್ನು ಮಾಡಿದ್ದು, ಸಿನಿಮಾ ರಂಗದಲ್ಲಿ ಮತ್ತೆಂದು ಅವರು ಹಿಂದಿರುಗಿ ನೋಡಿಲ್ಲ, ಇಂತಹ ತ್ರಿಷಾ ಅವರು ಸಿನಿಮಾವಲ್ಲದೇ ಬೇರೆಯದೇ ಕಾರಣಕ್ಕೆ ಸುದ್ದಿಯಾಗಿದ್ದಾರೆ.
ದಶಕಗಳಿಂದ ತ್ರಿಷಾ ಸ್ಟಾರ್ ನಾಯಕಿ. ತೆಲುಗಿನಲ್ಲಿ ವರ್ಷಂ ಚಿತ್ರದ ಮೂಲಕ ಸ್ಟಾರ್ ಆದ ತ್ರಿಷಾ, ನಂತರ ಹಿಂತಿರುಗಿ ನೋಡಲಿಲ್ಲ. ಪ್ರಭಾಸ್, ಮಹೇಶ್, ಪವನ್, ಚಿರಂಜೀವಿ, ವೆಂಕಟೇಶ್, ನಾಗಾರ್ಜುನ ಮುಂತಾದ ಎಲ್ಲಾ ಟಾಪ್ ಹೀರೋಗಳ ಜೊತೆ ತ್ರಿಷಾ ಸಿನಿಮಾಗಳನ್ನು ಮಾಡಿದ್ದಾರೆ. ತಮಿಳಿನಲ್ಲೂ ತ್ರಿಷಾ ಟಾಪ್ ನಾಯಕಿ. ನಲವತ್ತರ ವಯಸ್ಸಿನಲ್ಲೂ ತ್ರಿಷಾ ನಾಯಕಿಯಾಗಿ ಅವಕಾಶಗಳನ್ನು ಪಡೆಯುತ್ತಿದ್ದಾರೆ.
ಕೆರಿಯರ್ ಆರಂಭದಿಂದಲೂ ತ್ರಿಷಾ ಬಗ್ಗೆ ಒಂದಲ್ಲ ಒಂದು ಗಾಸಿಪ್‌ಗಳು ಬರುತ್ತಲೇ ಇವೆ. ಇತ್ತೀಚೆಗೆ ಅವರ ಬಗ್ಗೆ ಸಂಚಲನ ಸೃಷ್ಟಿಸುವ ಗಾಸಿಪ್‌ಗಳು ವೈರಲ್ ಆಗುತ್ತಿವೆ. ಮದುವೆಯಾದ ಸ್ಟಾರ್ ಹೀರೋ ಜೊತೆ ತ್ರಿಷಾ ಸಂಬಂಧ ಹೊಂದಿದ್ದಾರೆ ಎಂಬ ರೀತಿ ಪ್ರಚಾರ ಕೆಲಕಾಲದಿಂದ ನಡೆಯುತ್ತಿದೆ. ಆದರೆ ಇವು ಕೇವಲ ಗಾಸಿಪ್‌ಗಳು. ಆದರೆ ಈ ಗಾಸಿಪ್‌ಗಳಿಗೆ ಪುಷ್ಟಿ ನೀಡುವಂತೆ ಕೆಲವು ಘಟನೆಗಳು ನಡೆಯುತ್ತಿವೆ. ಆ ಹೀರೋ ಬೇರೆ ಯಾರೂ ಅಲ್ಲ, ದಳಪತಿ ವಿಜಯ್.
ತ್ರಿಷಾ ಮತ್ತು ವಿಜಯ್ ಒಟ್ಟಿಗೆ ಗಿಲ್ಲಿ, ತಿರುಪ್ಪಾಚಿ, ಲಿಯೋ ಮುಂತಾದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಇದರಿಂದ ಇವರಿಬ್ಬರ ನಡುವೆ ಉತ್ತಮ ಗೆಳೆತನವಿದೆ. ಆಗಾಗ್ಗೆ ತ್ರಿಷಾ ವಿಜಯ್ ಮೇಲಿನ ಅಭಿಮಾನವನ್ನು ತೋರಿಸುತ್ತಲೇ ಇರುತ್ತಾರೆ. ಇತ್ತೀಚೆಗೆ ಇವರ ಸಾಮೀಪ್ಯ ಹೆಚ್ಚಾಗಿದೆ ಇಬ್ಬರು ಬಹಳ ಆಪ್ತರಾಗಿದ್ದಾರೆ ಎಂದು ತಮಿಳು ಚಿತ್ರರಂಗದಲ್ಲಿ ಗಾಸಿಪ್‌ಗಳು ಕೇಳಿ ಬರುತ್ತಿವೆ. ತ್ರಿಷಾ ಕಾರಣದಿಂದ ವಿಜಯ್ ವೈಯಕ್ತಿಕ ಜೀವನದಲ್ಲೂ ಸಮಸ್ಯೆಗಳು ಬಂದಿವೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ವಿಜಯ್ ಮತ್ತು ಅವರ ಪತ್ನಿ ಸಂಗೀತಾ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿವೆ ಎಂಬ ಊಹಾಪೋಹಾಗಳು ಕೇಳಿ ಬಂದಿವೆ.
ಇದಕ್ಕೆ ಪುಷ್ಠಿ ನೀಡುವಂತೆ ಇತ್ತೀಚೆಗೆ ದಳಪತಿ ವಿಜಯ್ ಗೋವಾದಲ್ಲಿ ಕೀರ್ತಿ ಸುರೇಶ್ ಮದುವೆಗೆ ಹಾಜರಾಗಿದ್ದರು. ಈ ಮದುವೆಗೆ ವಿಜಯ್ ಒಬ್ಬರೇ ಹೋಗಿಲ್ಲ. ವಿಜಯ್ ಮತ್ತು ತ್ರಿಷಾ ಇಬ್ಬರೂ ವಿಜಯ್ ಅವರ ಖಾಸಗಿ ಜೆಟ್‌ನಲ್ಲಿ ಗೋವಾಕ್ಕೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದ ವಿಮಾನ ನಿಲ್ದಾಣದ ದೃಶ್ಯಗಳು ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗುತ್ತಿವೆ. ಇವರಿಬ್ಬರ ನಡುವೆ ಏನೂ ಇಲ್ಲದಿದ್ದರೆ ಖಾಸಗಿ ಜೆಟ್‌ನಲ್ಲಿ ಹೋಗಬೇಕಾದ ಅಗತ್ಯವೇನಿತ್ತು ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ವಿಜಯ್ ಪತ್ನಿ ಸಂಗೀತಾಗೆ ನ್ಯಾಯ ಸಿಗಬೇಕು ಎಂದು ತ್ರಿಷಾ ವಿರುದ್ಧ ಕೆಲವರು ಟ್ರೋಲ್ ಮಾಡುತ್ತಿದ್ದಾರೆ.
ಈ ಗಾಸಿಪ್‌ಗಳು ಎಲ್ಲಿಗೆ ಹೋಗಿ ನಿಲ್ಲುತ್ತವೆ ಎಂದು ನೋಡಬೇಕು. ತ್ರಿಷಾ ಲಿಯೋ ಚಿತ್ರದಲ್ಲಿ ವಿಜಯ್ ಜೊತೆ ನಟಿಸಿದ್ದಾರೆ. ನಂತರ ವಿಜಯ್ ನಟಿಸಿದ ದಿ ಗೋಟ್ ಚಿತ್ರದಲ್ಲಿ ತ್ರಿಷಾ ಒಂದು ವಿಶೇಷ ಹಾಡನ್ನು ಮಾಡಿದ್ದಾರೆ. ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ವಿಜಯ್ ಮತ್ತು ತ್ರಿಷಾ ನಡುವಿನ ಬಾಂಧವ್ಯ ಹೆಚ್ಚುತ್ತಿದೆ ಎಂಬುದು ಸಂಚಲನ ಮೂಡಿಸಿದೆ. ವಿಜಯ್ ರಾಜಕೀಯಕ್ಕೆ ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ ಇಂತಹ ಗಾಸಿಪ್‌ಗಳು ಯಾವ ದಿಕ್ಕಿನಲ್ಲಿ ಸಾಗುತ್ತವೆ ಎಂದು ನೋಡಬೇಕು.