ಬಾಲಿವುಡ್ ಸೆಲೆಬ್ರಿಟಿ ಮದ್ವೆಯ ಮುದ್ದಾದ ಕ್ಷಣ ಸೆರೆಹಿಡಿಯೋ ಫೋಟೋಗ್ರಾಫರ್, ಬೆಂಗಳೂರಿನ ಹುಡುಗ!
ಸಖತ್ ಅದ್ಧೂರಿಯಾಗಿ ನಡೆಯೋ ಬಾಲಿವುಡ್ ಸೆಲೆಬ್ರಿಟಿಗಳ ಮದುವೆ ಮೊಮೆಂಟ್‌ನ್ನು ಸಹ ಅಷ್ಟೇ ಸಖತ್ತಾಗಿ ಸೆರೆ ಹಿಡಿಯುವುದು ಅಗತ್ಯ. ಹೀಗಾಗಿ ನುರಿತ ಫೋಟೋಗ್ರಾಫರ್‌ಗಳನ್ನು ನಿಯೋಜಿಸಲಾಗುತ್ತದೆ. ಹಾಗೆಯೇ ಬಾಲಿವುಡ್ ಸೆಲೆಬ್ರಿಟಿಗಳ ನೆಚ್ಚಿನ ಪೋಟೋಗ್ರಾಫರ್ ಬೆಂಗಳೂರು ಮೂಲದ ವ್ಯಕ್ತಿ ಅನ್ನೋದು ನಿಮ್ಗೆ ಗೊತ್ತಿದ್ಯಾ?
ಭಾರತದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ಮದುವೆ ಹೆಚ್ಚು ಸುದ್ದಿಯಾಗುತ್ತಲೇ ಇರುತ್ತದೆ. ಎಂಗೇಜ್‌ಮೆಂಟ್, ಮಂಟಪ ಡೆಕೊರೇಶನ್, ಡ್ರೆಸ್ ಎಲ್ಲವೂ ಲಕ್ಸುರಿಯಸ್ ಆಗಿದ್ದು, ಜನಸಾಮಾನ್ಯರು ನಿಬ್ಬೆರಗಾಗುವಂತೆ ಮಾಡುತ್ತದೆ. ಬಹುತೇಕ ಸೆಲೆಬ್ರಿಟಿಗಳ ಮದುವೆಯಲ್ಲಿ ಮೊಬೈಲ್ ಕ್ಯಾಮರಾಗೆ ನಿಷೇಧ ಹೇರಲಾಗಿರುತ್ತದೆ. ಕೇವಲ ಫೋಟೋಗ್ರಾಫರ್ ಕ್ಲಿಕ್ಕಿಸಿದ ಪೋಟೋಗಳನ್ನು ನಂತರ ಕಪಲ್ಸ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಾರೆ.
ಸಖತ್ ಅದ್ಧೂರಿಯಾಗಿ ನಡೆಯೋ ಬಾಲಿವುಡ್ ಸೆಲೆಬ್ರಿಟಿಗಳ ಮದುವೆ ಮೊಮೆಂಟ್‌ನ್ನು ಸಹ ಅಷ್ಟೇ ಸಖತ್ತಾಗಿ ಸೆರೆ ಹಿಡಿಯುವುದು ಅಗತ್ಯ. ಹೀಗಾಗಿ ನುರಿತ ಫೋಟೋಗ್ರಾಫರ್‌ಗಳನ್ನು ನಿಯೋಜಿಸಲಾಗುತ್ತದೆ. ಹಾಗೆಯೇ ಬಾಲಿವುಡ್ ಸೆಲೆಬ್ರಿಟಿಗಳ ನೆಚ್ಚಿನ ಪೋಟೋಗ್ರಾಫರ್ ಬೆಂಗಳೂರು ಮೂಲದ ವ್ಯಕ್ತಿ ಅನ್ನೋದು ನಿಮ್ಗೆ ಗೊತ್ತಿದ್ಯಾ?
ಹೌದು, ಬೆಂಗಳೂರು ಮೂಲದ ವೆಡ್ಡಿಂಗ್ ಫೋಟೋಗ್ರಫಿ ಮತ್ತು ಫಿಲ್ಮ್ ಕಂಪನಿಯ ಸಂಸ್ಥಾಪಕ ಸಿದ್ಧಾರ್ಥ್ ಶರ್ಮಾ, ಹೌಸ್ ಆಫ್ ದಿ ಕ್ಲೌಡ್ಸ್ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳ ವಿವಾಹದ ಛಾಯಾಗ್ರಾಹಕರಾಗಿದ್ದಾರೆ. ಇತ್ತೀಚೆಗೆ, ಪರಿಣಿತಿ ಚೋಪ್ರಾ ಮತ್ತು ಎಎಪಿ ರಾಘವ್ ಚಡ್ಡಾ ಅವರ ಮದುವೆಯ ಫೋಟೋಗಳನ್ನು ಇವರೇ ಸೆರೆ ಹಿಡಿದಿದ್ದರು.
ಅಷ್ಟೇ ಅಲ್ಲ ಟಾಪ್ ಸೆಲೆಬ್ರಿಟಿಗಳಾದ ರಣಬೀರ್-ಆಲಿಯಾ, ಕಿಯಾರಾ ಅಡ್ವಾಣಿ-ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಹೆಚ್ಚಿನವರ ಈ ಸುಂದರವಾದ ಮದುವೆಯ ಚಿತ್ರಗಳನ್ನು ಕ್ಲಿಕ್ಕಿಸಿದವರು ಇದೇ ಬೆಂಗಳೂರು ಮೂಲದ ವೆಡ್ಡಿಂಗ್ ಫೋಟೋಗ್ರಫಿ ಮತ್ತು ಫಿಲ್ಮ್ ಕಂಪನಿಯ ಸಂಸ್ಥಾಪಕ ಸಿದ್ಧಾರ್ಥ್ ಶರ್ಮಾ
2016ರಿಂದ, ಶರ್ಮಾ ಮತ್ತು ಅವರ ಸಿಬ್ಬಂದಿ 250ಕ್ಕೂ ಹೆಚ್ಚು ಮದುವೆಗಳ ಪೋಟೋಗಳನ್ನು ಕ್ಲಿಕ್ಕಿಸಿದ್ದಾರೆ. ಕಂಟೆಂಟ್ ರಚನೆಕಾರರಾದ ಅಲನ್ನಾ ಪಾಂಡೆ ಮತ್ತು ಐವರ್ ಮೆಕ್‌ಕ್ರೇ ಅವರ ಇತ್ತೀಚಿನ ವಿವಾಹವನ್ನು ಹೌಸ್ ಆನ್ ದಿ ಕ್ಲೌಡ್ಸ್ ಸೆರೆಹಿಡಿದಿದೆ.
ಸಂದರ್ಶನವೊಂದರಲ್ಲಿ ಸಿದ್ಧಾರ್ಥ್ ಶರ್ಮಾ, ತಾನು ವೃತ್ತಿಯಲ್ಲಿ ಇಂಜಿನಿಯರ್ ಎಂದು ಬಹಿರಂಗಪಡಿಸಿದರು. ಅವರು 2012ರ ವರೆಗೆ US ನಲ್ಲಿ IT ವಲಯದಲ್ಲಿ ಕೆಲಸ ಮಾಡಿದರು. ದೀರ್ಘಕಾಲದವರೆಗೆ ಸ್ವಂತ ಕ್ಯಾಮೆರಾವನ್ನು ಹೊಂದಿರಲಿಲ್ಲ. ಹೊಸದಾಗಿ ಕ್ಯಾಮರಾ ಖರೀದಿಸಿದಾಗ 2014ರಲ್ಲಿ, ಭಾರತಕ್ಕೆ ಬಂದ ಸಮಯದಲ್ಲಿ, ಯುಎಸ್‌ನ ಅವರ ಸ್ನೇಹಿತ ಅವರು ಕ್ಯಾಮೆರಾವನ್ನು ಹೊಂದಿದ್ದಾರೆ ಎಂಬ ಕಾರಣಕ್ಕಾಗಿ ಮದುವೆಯ ಫೋಟೋಶೂಟ್ ಮಾಡಲು ಕೇಳಿದರು.
ಆದರೆ ಸಿದ್ಧಾರ್ಥ್ ಶರ್ಮಾ ಈ ಮದುವೆಯನ್ನು ಚಿತ್ರೀಕರಿಸಿದಾಗ, ಆಗಿನ್ನೂ ಅದನ್ನು ವೃತ್ತಿಯಾಗಿ ಆಯ್ಕೆ ಮಾಡಿರಲ್ಲಿಲ್ಲ. ಅಂತಿಮವಾಗಿ, 2015 ರಲ್ಲಿ, ತನ್ನ ಸ್ನೇಹಿತರಿಗಾಗಿ ಒಂದೆರಡು ಫೋಟೋಶೂಟ್‌ಗಳನ್ನು ಮಾಡಿದ ನಂತರ ಮತ್ತು ಆ ಚಿತ್ರಗಳನ್ನು ಇಂಟರ್ನೆಟ್‌ನಲ್ಲಿ ಅಪ್‌ಲೋಡ್ ಮಾಡಿದರು. ಮದುವೆಯ ಚಿತ್ರೀಕರಣಕ್ಕಾಗಿ ಮೊದಲ ಬಾರಿಗೆ ಸಂಭಾವನೆಯನ್ನು ಪಡೆದುಕೊಂಡರು.
ಬಾಲಿವುಡ್ ನಿರ್ದೇಶಕ ಲುವ್ ರಂಜನ್ (ತು ಜೂಥಿ ಮೈನ್ ಮಕ್ಕರ್ ಖ್ಯಾತಿಯ) ಅಲಿಶಾ ವೈದ್ ಅವರನ್ನು ವಿವಾಹವಾದಾಗ ಶರ್ಮಾ ಅವರ ಮೊದಲ ಸೆಲೆಬ್ರಿಟಿ ವಿವಾಹವಾಗಿತ್ತು. ತದನಂತರ ರಣಬೀರ್ ಮತ್ತು ಆಲಿಯಾ ಮದುವೆಯನ್ನು ಸೆರೆಹಿಡಿದರು.