MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ರಿಲೀಸ್‌ ನಂತ್ರ ಬಡವರಿಗಾಗಿ ಕೆಲಸ, ನಿಮಗೆ ಹೆಮ್ಮೆ ತರುತ್ತೇನೆ ಎಂದ ಆರ್ಯನ್

ರಿಲೀಸ್‌ ನಂತ್ರ ಬಡವರಿಗಾಗಿ ಕೆಲಸ, ನಿಮಗೆ ಹೆಮ್ಮೆ ತರುತ್ತೇನೆ ಎಂದ ಆರ್ಯನ್

ರಿಲೀಸ್ ನಂತರ ಆರ್ಯನ್ ಖಾನ್(Aryan Khan) ಏನ್ಮಾಡ್ತಾರೆ ಗೊತ್ತಾ ? ಬಡವರ ಏಳಿಗೆಗೆ ಕೆಲಸ ಮಾಡಿ ನಿಮಗೆ ಹೆಮ್ಮೆ ತರುತ್ತೇನೆ ಎಂದ ಸ್ಟಾರ್ ಕಿಡ್ ಎನ್‌ಸಿಬಿ(NCB) ಆಫೀಸರ್ ಸಮೀರ್ ವಾಖಂಡೆಗೆ ಆರ್ಯನ್ ಮಾತು

2 Min read
Author : Suvarna News
| Updated : Oct 17 2021, 09:53 AM IST
Share this Photo Gallery
  • FB
  • TW
  • Linkdin
  • Whatsapp
18

ಮುಂಬೈನಿಂದ ಗೋವಾಗೆ ಪ್ರಯಾಣಿಸುತ್ತಿದ್ದ ಐಷರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿ(Drugs Party) ಮೇಲೆ ಎನ್‌ಸಿಬಿ(NCB) ದಾಳಿ ನಡೆಸಿತ್ತು. ಈ ರೈಡ್‌ನಲ್ಲಿ ಅರೆಸ್ಟ್ ಆದ ಆರ್ಯನ್ ಖಾನ್ ಜೈಲಿನಲ್ಲಿದ್ದಾರೆ. ಬಿಡುಗಡೆಯಾದ ಮೇಲೆ ಬಡವರ ಹಾಗೂ ಕೆಳವರ್ಗದ ಜನರ ಏಳಿಗೆಗಾಗಿ ಕೆಲಸ ಮಾಡುತ್ತೇನೆ ಎಂದು ಆರ್ಯನ್ ಖಾನ್(Aryan Khan) ಹೇಳಿದ್ದಾರೆ.

28

ಬಾಲಿವುಡ್ ಸ್ಟಾರ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಅ.02ರಂದು ಎನ್‌ಸಿಬಿಯಿಂದ ಅರೆಸ್ಟ್ ಆಗಿದ್ದಾರೆ. ಎನ್‌ಸಿಬಿ ಪ್ರಾದೇಶಿಕ ನಿರ್ದೇಶಕ ಸಮೀರ್ ವಾಂಖೆಡೆ(Sameer Wankhede) ಅವರ ಜೊತೆ ಆರ್ಯನ್ ಖಾನ್ ಕೌನ್ಸೆಲಿಂಗ್ ಸಮಯದಲ್ಲಿ ಮಾತನಾಡಿದ್ದಾರೆ.

38

ಬಡಜನರ ಆರ್ಥಿಕ ಬೆಳವಣಿಗೆಗೆ ನೆರವು: ನೀವು ನನ್ನ ಬಗ್ಗೆ ಹೆಮ್ಮೆ ಪಡುವಂತೆ ಮಾಡುತ್ತೇನೆ ಎಂದು ಆರ್ಯನ್ ಸಮೀರ್ ಅವರಿಗೆ ಹೇಳಿದ್ದಾರೆ. ಸಮಾಲೋಚನೆ ಸಂದರ್ಭ ಭವಿಷ್ಯದಲ್ಲಿ ತನ್ನ ಹೆಸರನ್ನು ಹಾಳು ಮಾಡುವಂತಹ ಕೆಲಸವನ್ನು ತಾನು ಎಂದಿಗೂ ಮಾಡುವುದಿಲ್ಲ ಎಂದು ಖಾನ್ ಹೇಳಿದ್ದಾರೆ.

48

ಒಂದು ಮೂಲದ ಪ್ರಕಾರ ಖಾನ್ ವಾಂಖೇಡೆ ಮತ್ತು ಸಾಮಾಜಿಕ ಕಾರ್ಯಕರ್ತರಲ್ಲಿ ತನ್ನ ಬಿಡುಗಡೆ ನಂತರ, ಬಡವರ ಮತ್ತು ದೀನದಲಿತರ ಸಾಮಾಜಿಕ ಮತ್ತು ಆರ್ಥಿಕ ಉನ್ನತಿಗಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

58

ಕ್ರೂಸ್ ಪಾರ್ಟಿಯಿಂದ ಬಂಧನ: ಅಕ್ಟೋಬರ್ 2 ರಂದು, ಸಮೀರ್ ವಾಂಖೆಡೆ ನೇತೃತ್ವದ ಎನ್‌ಸಿಬಿಯ ತಂಡವು ಮುಂಬೈ ಕರಾವಳಿಯಲ್ಲಿ ನಡೆದ ಕ್ರೂಸ್ ಪಾರ್ಟಿಯ ಮೇಲೆ ದಾಳಿ ನಡೆಸಿತ್ತು.

Aryan Arrest: ಭಾರತ ಬಿಡೋ ಪ್ಲಾನ್‌ನಲ್ಲಿದ್ದಾರಾ ಸ್ಟಾರ್ ನಟರ ಮಕ್ಕಳು

68

ಅಧಿಕಾರಿಗಳು ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೇಚಾ, ಇಸ್ಮೀತ್ ಸಿಂಗ್, ಮೊಹಕ್ ಜಸ್ವಾಲ್, ಗೋಮಿತ್ ಚೋಪ್ರಾ, ನೂಪುರ್ ಸತಿಜಾ ಮತ್ತು ವಿಕ್ರಾಂತ್ ಚೋಕರ್ ಅವರನ್ನು ರೇವ್ ಪಾರ್ಟಿಯಿಂದ ಬಂಧಿಸಿದ್ದಾರೆ. ದಾಳಿಯ ಸಮಯದಲ್ಲಿ ಅಧಿಕಾರಿಗಳು ಚರಸ್, ಮೆಫೆಡ್ರೋನ್ (MD), MDMA ಮತ್ತು ಕೊಕೇನ್ ಅನ್ನು ವಶಪಡಿಸಿಕೊಂಡರು.

78

ಖಾನ್ ಮುಂಬೈ ನ್ಯಾಯಾಲಯದ ಮುಂದೆ ಜಾಮೀನು ಅರ್ಜಿ ಸಲ್ಲಿಸಿದರೂ ಅದನ್ನು ನಿರಾಕರಿಸಲಾಗಿದೆ. ಇತರ ಆರೋಪಿಗಳೊಂದಿಗೆ ಆತನನ್ನು ಅಕ್ಟೋಬರ್ 7 ರವರೆಗೆ ಕಸ್ಟಡಿಗೆ ಕಳುಹಿಸಲಾಯಿತು. ಅಕ್ಟೋಬರ್ 7 ರಂದು ನ್ಯಾಯಾಲಯವು ಖಾನ್ ಮತ್ತು ಇತರ 7 ಮಂದಿಯನ್ನು 14 ದಿನಗಳ ಕಸ್ಟಡಿಗೆ ಕಳುಹಿಸಿತು.

88

ನಂತರ ಅವರನ್ನು ಆರ್ಥರ್ ರಸ್ತೆ ಜೈಲಿಗೆ ಕರೆದೊಯ್ಯಲಾಯಿತು. ಖಾನ್ ಅವರ ಮನವಿಯ ಕೊನೆಯ ವಿಚಾರಣೆಯ ಸಮಯದಲ್ಲಿ, ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿತು ಮತ್ತು ವಿಚಾರಣೆಯನ್ನು ಅಕ್ಟೋಬರ್ 20 ಕ್ಕೆ ಮುಂದೂಡಿತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News

Latest Videos
Recommended Stories
Recommended image1
ಏಂಜಲಿನಾ ಜೋಲಿ, ಹಾಗೊಂದು ಕಿಸ್‌ ಮಾಡಿದ್ದೇ ತಪ್ಪಾ ?
Recommended image2
ಮದುವೆಯಂತೆ ವಿಶೇಷ ರೀತಿಯಲ್ಲಿ ವಿರೋಶ್ ರೆಸೆಪ್ಶನ್ ಆಯೋಜನೆ, ಅಭಿಮಾನಿಗಳಲ್ಲಿ ವಿಶೇಷ ಮನವಿ
Recommended image3
Dog Satish ಮಗನಿಗೆ ಡಿಂಪಲ್​ ಕ್ವೀನ್​ ರಚಿತಾ ರಾಮ್​ ನಾಯಕಿ? 1 ಕೋಟಿಗೆ ಆಫರ್​; ಏನಿದು ಬಿಸಿಬಿಸಿ ಸುದ್ದಿ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved