ದೇಶ ಬಿಟ್ಟು ಹೋಗುವ ಪ್ಲಾನ್‌ನಲ್ಲಿದ್ದಾರಾ ಸ್ಟಾರ್ ಕಿಡ್ಸ್ ? ಆರ್ಯನ್ ಖಾನ್ ಅರೆಸ್ಟ್ ಬೆನ್ನಲ್ಲೇ ಇಂತದ್ದೊಂದು ಮಾತು ಶುರು
ಮುಂಬೈನ ಐಷರಾಮಿ ಹಡಗಿನ ಡ್ರಗ್ಸ್ ಪಾರ್ಟಿಯಲ್ಲಿ ಆರ್ಯನ್ ಖಾನ್ ಅರೆಸ್ಟ್ ಆದ ನಂತರ ಈ ವಿಚಾರ ಭಾರೀ ಚರ್ಚೆಯಾಗಿದೆ. ಪ್ರತಿ ಕ್ಷಣದ ಅಪ್ಡೇಟ್ ಕೂಡಾ ಕುತೂಹಲ ಮೂಡಿಸಿದೆ. ಹೀಗಿರುವಾಗಲೇ ಬಾಲಿವುಡ್‌ನ ವಿಮರ್ಶಕ ಎಂದು ತನ್ನನ್ನು ತಾನೆ ಕರೆದುಕೊಳ್ಳುವ ಕಮಾಲ್ ಆರ್ ಖಾನ್ ಅಚ್ಚರಿಯ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ.
ಜಾಲಿಯಾಗಿದ್ದ ಶಾರೂಖ್ ಮಗನನ್ನು ರಾತ್ರೋ ರಾತ್ರಿ ಅರೆಸ್ಟ್ ಮಾಡಿ ಜೈಲಿನಲ್ಲಿಟ್ಟು ಈಗ ಜಾಮೀನು ನಿರಾಕರಣೆಯಾಗಿ ಸ್ಟಾರ್ ನಟನ ಮಗ ಜೈಲಿನಲ್ಲೇ ಕಳೆಯುವಂತಾಗಿದೆ. ಹೀಗಿರುವಾಗ ಈ ಘಟನೆ, ಡ್ರಗ್ಸ್ ಕೇಸ್ ಬೆಳವಣಿಗೆ ಬಾಲಿವುಡ್ ಸಿನಿ ಇಂಡಸ್ಟ್ರಿಗೇ ದೊಡ್ಡ ಶಾಕ್ ಕೊಟ್ಟಿದೆ.
Drugs Case: BJP ಲಿಂಕ್ ಇದ್ದವರು ಬಿಡುಗಡೆ, NCB ವಿರುದ್ಧ ಆರೋಪ
ಹಿರಿಯ ಸ್ಟಾರ್ ನಟರು ಶಾರೂಖ್ ಖಾನ್ ಬೆಂಬಲಕ್ಕೆ ನಿಂತಿದ್ದರೂ ಎಲ್ಲರೂ ನಿಸ್ಸಹಾಯಕರಾಗಿದ್ದಾರೆ. ಡ್ರಗ್ಸ್ ಕೇಸ್‌ನಲ್ಲಿ ಸಿಕ್ಕಿಹಾಕಿಕೊಂಡರೆ ನಂತರ ಹೊರಬರುವುದು ಕಷ್ಟ ಎಂಬುದು ಆರ್ಯನ್ ವಿಚಾರದಲ್ಲಿಯೂ ಸ್ಪಷ್ಟವಾಗಿ ಕಂಡು ಬರುತ್ತಿದೆ.
ಕಮಾಲ್ ಆರ್ ಖಾನ್ ಪ್ರಕಾರ ಬಹಳಷ್ಟು ಸ್ಟಾರ್ ಕಿಡ್ಸ್ ಭಾರತವನ್ನು ಬಿಟ್ಟು ಫಾರಿನ್‌ಗೆ ಹೋಗೋ ಪ್ಲಾನ್‌ನಲ್ಲಿದ್ದಾರೆ ಎನ್ನಲಾಗಿದೆ. ಆರ್ಯನ್‌ಗೆ ಆಗಿರುವ ಸ್ಥಿತಿ ತಮಗೂ ಬರಬಹುದೆಂದ ಭೀತಿಯಲ್ಲಿ ಸ್ಟಾರ್ ಕಿಡ್ಸ್ ದೇಶ ಬಿಡುತ್ತಿದ್ದಾರೆ ಎನ್ನಲಾಗಿದೆ.
Aryan Drugs Case: ಪ್ಯಾಡ್ ಒಳಗೆ ಡ್ರಗ್ಸ್: ಶಾರೂಖ್ ಡ್ರೈವರ್ ವಿಚಾರಣೆ
ನನ್ನ ಮೂಲಗಳ ಪ್ರಕಾರ ಸೆಲೆಬ್ರಿಟಿ ಕಿಡ್ಸ್ ಆರ್ಯನ್ ಖಾನ್ ಘಟನೆಯ ನಂತರ ಭಾರತ ಬಿಡುವ ಸಿದ್ಧತೆಯಲ್ಲಿದ್ದಾರೆ. ಈ ಘಟನೆ ಆರ್ಯನ್ ಖಾನ್‌ಗೆ ಅಯಿತು ಎಂದಾದರೆ ತಮಗೂ ಆಗಬಹುದು ಎಂಬ ಭೀತಿಯಲ್ಲಿದ್ದಾರೆ ಎಂದು ಕಮಾಲ್ ಟ್ವೀಟ್ ಮಾಡಿದ್ದಾರೆ.
ಆರ್ಯನ್ ಬಗ್ಗೆ ಕೆಟ್ಟದಾಗಿ ಮಾತನಾಡುವುದನ್ನು ನಿಲ್ಲಿಸುವಂತೆ ಅವರು ಮಾಧ್ಯಮಗಳನ್ನು ಕೇಳಿದ್ದರು. ಆತ್ಮೀಯ ಮಾಧ್ಯಮದವರೇ, ನೀವು ಆರ್ಯನ್ ಮತ್ತು ಎಸ್‌ಆರ್‌ಕೆ ಸಂಬಂಧದ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರೆ, ನೀವು ನಿಮ್ಮ ಮತ್ತು ನಿಮ್ಮ ಮಕ್ಕಳ ಸಂಬಂಧದ ಬಗ್ಗೆ ಯಾರಾದರೂ ಕೆಟ್ಟದಾಗಿ ಮಾತನಾಡುತ್ತಾರೆಯೇ ಎಂದು ಊಹಿಸಿ. ಆದ್ದರಿಂದ ಇದನ್ನು ದಯವಿಟ್ಟು ಇದನ್ನು ನಿಲ್ಲಿಸಿ ಎಂದಿದ್ದಾರೆ
