ಮಗನ ಜೊತೆ ಶಿಲ್ವಾ ಶೆಟ್ಟಿ ದೀಪಾವಳಿ ಶಾಪಿಂಗ್ ಫೋಟೋ ವೈರಲ್!
ಬಾಲಿವುಡ್ (Bollywood) ತಾರೆಯರು ದೀಪಾವಳಿ (Diwali) ತಯಾರಿಯಲ್ಲಿ ತೊಡಗಿದ್ದಾರೆ. ಪ್ರತಿ ಬಾರಿಯಂತೆ ದೀಪಾವಳಿಯನ್ನು ಅದ್ದೂರಿಯಾಗಿ ಆಚರಿಸುವ ಹುಮ್ಮಸ್ಸಿನಲ್ಲಿ ಶಿಲ್ಪಾ ಶೆಟ್ಟಿ (Shilpa Shetty) ಕಾಣಿಸಿಕೊಂಡಿದ್ದಾರೆ. ಧಂತೇರಸ್ ದಿನದಂದು ಆಕೆ ತನ್ನ ಮಗನೊಂದಿಗೆ ಶಾಪಿಂಗ್ ಮಾಡುತ್ತಿದ್ದರು. ಈ ಸಮಯದ ಶಿಲ್ಪಾ ಅವರ ಫೋಟೋಗಳು ವೈರಲ್ ಆಗಿವೆ.

ಧಡ್ಕನ್ ಗರ್ಲ್ ಶಿಲ್ಪಾ ಶೆಟ್ಟಿ ಸಾಂಪ್ರದಾಯಿಕ ಲುಕ್‌ನಲ್ಲಿ (Ethnic Wear) ಮಾರುಕಟ್ಟೆಗೆ ಬಂದಿದ್ದರು. ಶಿಲ್ಪಾ ಶೆಟ್ಟಿ ಕೆಂಪು ಕುರ್ತಾ ಮತ್ತು ಬಿಳಿ ಲೆಗ್ಗಿಂಗ್ಸ್ ಧರಿಸಿದ್ದರು. ಅದೇ ಸಮಯದಲ್ಲಿ, ಅವರ ಮಗ ವಿಯಾನ್ ಕೂಡ ಗುಲಾಬಿ ಬಣ್ಣದ ಕುರ್ತಾ-ಪೈಜಾಮಾವನ್ನು ಧರಿಸಿದ್ದನು.
ಶಾಪಿಂಗ್ ಮಾಡುವಾಗ, ಶಿಲ್ಪಾ ಶೆಟ್ಟಿ ಸಾಮಾನ್ಯ ಮಹಿಳೆಯರಂತೆ ಸ್ವಲ್ಪ ಗೊಂದಲಕ್ಕೊಳಗಾದರು. ಶಿಲ್ಪಾಗೆ ಅಂಗಡಿಯಲ್ಲಿ ಏನು ಖರೀದಿಸಬೇಕೆಂದು ತೋಚಲಿಲ್ಲ. ಶಿಲ್ಪಾ ಶೆಟ್ಟಿಯ ಫೋಟೋಗಳನ್ನು ಭಯಾನಿ ಪೋಸ್ಟ್ ಮಾಡಿದ್ದಾರೆ.
ಶಿಲ್ಪಾ ಶೆಟ್ಟಿ ಸಾಕಷ್ಟು ಚಾಕಲೇಟ್‌ಗಳನ್ನು ಕೂಡ ಖರೀದಿಸಿದ್ದಾರೆ. ವಿಯಾನ್ ಶಾಪಿಂಗ್‌ನಲ್ಲಿ ತಾಯಿಗೆ ಸಹಾಯ ಮಾಡಿದ್ದಾನೆ. ಕಳೆದ ದೀಪಾವಳಿಯಂದು ಶಿಲ್ಪಾ ಶೆಟ್ಟಿ ಅವರು ತಮ್ಮ ಪತಿ ರಾಜ್ ಕುಂದ್ರಾ, ಮಗಳು ಸಮೀಶಾ ಮತ್ತು ಮಗ ವಿಯಾನ್ ಅವರೊಂದಿಗೆ ಪೂಜೆ ಸಲ್ಲಿಸಿದ್ದರು.
ಶಿಲ್ಪಾ ಶೆಟ್ಟಿ ಪ್ರತಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಅವರು ಮಂಗಳವಾರ ತಮ್ಮ ಅಭಿಮಾನಿಗಳಿಗೆ ವಿಶ್ ಮಾಡಿದ್ದಾರೆ. ಪ್ರತಿ ಬಾರಿಯಂತೆ ದೀಪಾವಳಿಯನ್ನು ಅದ್ದೂರಿಯಾಗಿ ಆಚರಿಸುವ ಹುಮ್ಮಸ್ಸಿನಲ್ಲಿ ಶಿಲ್ಪಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಈ ವರ್ಷದ ದೀಪಾವಳಿ ಅವರಿಗೆ ಮತ್ತೂ ವಿಶೇಷ. ಪತಿ ಅಶ್ಲೀಲ ವೀಡಿಯೋ ಚಿತ್ರೀಕರಣದ ಪ್ರಕರಣದಲ್ಲಿ ಜೈಲು ವಾಸ ಅನುಭವಿಸಿ, ಮನೆಗೆ ಮರಳಿದ್ದಾರೆ.
ಶಿಲ್ಪಾ ಶೆಟ್ಟಿ ತನ್ನ ಪತಿ ರಾಜ್‌ಕುಂದ್ರಾಗಾಗಿ ಕರ್ವಾ ಚೌತ್ ವ್ರತ ಸಹ ಇಟ್ಟುಕೊಂಡಿದ್ದರು. ಅವರು ತಮ್ಮ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸಮಯದಲ್ಲಿ ನಟಿ ತುಂಬಾ ಸುಂದರವಾಗಿ ಕಾಣುತ್ತಿದ್ದರು.
ರಾಜ್ ಕುಂದ್ರಾ ಪೊರ್ನ್ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ವಿಷಯ ಎಲ್ಲರಿಗೂ ತಿಳಿದಿದೆ. ಇತ್ತೀಚೆಗೆ ಅವರಿಗೆ ಜಾಮೀನು ಮೇಲೆ ಮನೆಗೆ ಮರಳಿದ್ದಾರೆ. ಜೈಲಿನಿಂದ ಹೊರಬಂದ ನಂತರ ರಾಜ್ ಕುಂದ್ರಾ ಸಾಮಾಜಿಕ ಜಾಲತಾಣಗಳಿಂದ ದೂರ ಉಳಿದಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಹಾಗೂ ಟ್ವೀಟರ್ ಅಕೌಂಟ್‌ಗಳನ್ನು ಡಿಲಿಟ್ ಮಾಡಿರುವ ವರದಿಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.