Asianet Suvarna News Asianet Suvarna News

ಶೆರ್ಲಿನ್ ಚೋಪ್ರಾ ವಿರುದ್ಧ 50 ಕೋಟಿ ರೂ ಮಾನನಷ್ಟ ಮೊಕದ್ದಮೆ ಹೂಡಿದ ರಾಜ್ ಕುಂದ್ರಾ!

  • ಶೆರ್ಲಿನ್ ಚೋಪ್ರಾಗೆ ಶುರುವಾಯ್ತು ಸಂಕಷ್ಟ 
  • ಶಿಲ್ಪಾ, ರಾಜ್ ಕುಂದ್ರಾ ವಿರುದ್ಧ ದೂರು ದಾಖಲಿಸಿದ್ದ ಚೋಪ್ರಾ
  • ಶೆರ್ಲಿನ್ ಚೋಪ್ರಾ ವಿರುದ್ಧ 50 ಕೋಟಿ ರೂ ಡಿಫಮೇಶನ್ ಕೇಸ್
Bollywood actress Shilpa Shetty and Raj Kundra filed Rs 50 crore defamation suit against Sherlyn Chopra ckm
Author
Bengaluru, First Published Oct 19, 2021, 7:31 PM IST
  • Facebook
  • Twitter
  • Whatsapp

ಮುಂಬೈ(ಅ.19): ಅಶ್ಲೀಲ ಚಿತ್ರ ನಿರ್ಮಾಣ ಆರೋಪದಡಿ ಅರೆಸ್ಟ್ ಆಗಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ(Shilpa shetty) ಪತಿ, ಉದ್ಯಮಿ ರಾಜ್ ಕುಂದ್ರಾಗೆ(Raj Kundra) ಮತ್ತಷ್ಟು ಮುಜುರಗ ಮಾಡಿದ್ದ ಮಾಡೆಲ್ ಶೆರ್ಲಿನ್ ಚೋಪ್ರಾಗೆ(Sherlyn Chopra) ಸಂಕಷ್ಟ ಎದುರಾಗಿದೆ. ರಾಜ್ ಕುಂದ್ರಾ ಬಂಧನದಿಂದ ಬಿಡುಗಡೆಯಾದ ಬಳಿಕ ಪೊಲೀಸು ದೂರು ದಾಖಲಿಸಿದ್ದ ಶೆರ್ಲಿನ್ ಚೋಪ್ರಾ ಮೇಲೆ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. 

ಪೋರ್ನ್ ವಿಡಿಯೋ ದಂಧೆಗೆ ಕುಂದ್ರಾನ ಎಳೆದಿದ್ದೇ ನಟಿ ಶೆರ್ಲಿನ್..! ಮತ್ತೊಂದು ಟ್ವಿಸ್ಟ್

ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ತನಗೆ ಮೋಸ, ಮಾನಸಿಕ ಕಿರುಕುಳ ಹಾಗೂ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಶೆರ್ಲಿನ್ ಚೋಪ್ರಾ ಜುಹೂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದರ ಬೆನ್ನಲ್ಲೇ ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ, ಸಾರ್ವಜನಿಕ ವೇದಿಕೆಯಲ್ಲಿ ವಿನಾ ಕಾರಣ ಮಾನ ಹರಾಜು ಮಾಡಿದ್ದಾರೆ. ನಮಗಾದ ನಷ್ಟ ಪರಿಹಾರಕ್ಕೆ 50 ಕೋಟಿ ರೂಪಾಯಿ ನೀಡಬೇಕು ಎಂದು ಕುಂದ್ರಾ ದಂಪತಿ ಮಾನ ನಷ್ಟ ಮೊಕದ್ದಮೆ ಕೇಸ್(defamation suit) ಹೂಡಿದ್ದಾರೆ.

 

ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ಜೊತೆಯಾಗಿ ಮಾನ ನಷ್ಟ ಮೊಕದ್ದಮೆ ಹೂಡಿದ್ದಾರೆ. ತಮ್ಮ ವಕೀಲರ ಮೂಲಕ ಶೆರ್ಲಿನ್ ಚೋಪ್ರಾಗೆ ನೊಟಿಸ್ ನೀಡಲಾಗಿದೆ. ಇದೀಗ ಶೆರ್ಲಿನ್ ಚೋಪ್ರಾ ಹಾಗೂ ರಾಜ್ ಕುಂದ್ರಾ ನಡುವಿನ ಗುದ್ದಾಟ ಮತ್ತೊಂದು ಹಂತ ಪ್ರವೇಶಿಸಿದೆ. ಅಶ್ಲೀಲ ಚಿತ್ರ ನಿರ್ಮಾಣ, ಹಣ ನೀಡದೆ ಮೋಸ ಹಾಗೂ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಶೆರ್ಲಿನ್ ಚೋಪ್ರಾಗೆ ಕಾನೂನಾತ್ಮಕ ಸವಾಲು ಎದುರಾಗಿದೆ.

ಕುಂದ್ರಾಗೆ ಪೋರ್ನ್ ಐಡಿಯಾ ಕೊಟ್ಟಿದ್ದೇ ಈ 'ಬಿಚ್ಚಮ್ಮ' ನಟಿ ಬಿಚ್ಚಿಟ್ಟ ನಗ್ನ ಸತ್ಯ!

ಅಶ್ಲೀಲ ಚಿತ್ರ ನಿರ್ಮಾಣ ಆರೋಪದಡಿ ರಾಜ್ ಕುಂದ್ರಾ ಬಂಧನವಾಗುತ್ತದಂತೆ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ವಿರುದ್ಧ ಶೆರ್ಲಿನ್ ಹಲವು ಆರೋಪ ಮಾಡಿದ್ದರು. ತನ್ನನ್ನು ಬಳಸಿಕೊಂಡು ಹಣ ನೀಡಿದ ಮೋಸ ಮಾಡಿದ್ದಾರೆ ಎಂದಿದ್ದರು. ರಾಜ್ ಕುಂದ್ರಾ ಬಂಧನದಿಂದ ಬಿಡುಗಡೆಯಾದ ಬೆನ್ನಲ್ಲೇ ಶೆರ್ಲಿನ್ ಚೋಪ್ರಾ ಈ ಕುರಿತು ದೂರು ದಾಖಿಲಿಸಿದ್ದರು 

ಜೆಎಲ್ ಸ್ಟ್ರೀಮ್ ಕಂಪನಿಗೆ ರಾಜ್ ಕುಂದ್ರಾ ವಿಡಿಯೋಗಳನ್ನು ಚಿತ್ರೀಕರಿಸಿದ್ದಾರೆ. ಅಶ್ಲೀಲ ಚಿತ್ರ ಚೀತ್ರೀಕರಿಸಿದ ಹಲವು ನಟಿಯರಿಗೆ ಸಂಭಾವನೆ ನೀಡಿಲ್ಲ. ಸಂಭಾವನೆ ಕೇಳಿದರೆ ವಿಡಿಯೋ ಬಳಸಿ ಬೆದರಿಸಿದ್ದಾರೆ. ಲೈಂಗಿಕವಾಗಿ ನನ್ನನ್ನು ಬಳಸಿಕೊಂಡು ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಶೆರ್ಲಿನ್ ಉಲ್ಲೇಖಿಸಿದ್ದಾರೆ.

 

ಕೊನೆಗೂ ರಾಜ್ ಕುಂದ್ರಾಗೆ ಜಾಮೀನು.. ಯಾವ ಪಾಯಿಂಟ್ ನೆರವಿಗೆ ಬಂತು?

ರಾಜ್ ಕುಂದ್ರಾ ಭೂಗತ ಜಗತ್ತಿನ ಪಾತಕಿಗಳಿಂದ ಕರೆ ಮಾಡಿಸಿ ಬೆದರಿಕೆ ಹಾಕಿದ್ದಾರೆ. ಜೀವ ಬೆದರಿಕೆಯಿಂದ ದೂರು ದಾಖಲಿಸುತ್ತಿದ್ದೇನೆ ಎಂದು ಶೆರ್ಲಿನ್ ಚೋಪ್ರಾ ಹೇಳಿದ್ದಾರೆ. ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಶೆರ್ಲಿನ್ ಚೋಪ್ರಾ ಹೇಳಿದ್ದಾರೆ.
 

Follow Us:
Download App:
  • android
  • ios