MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • Kangana Ranaut ಚಿತ್ರ ಧಾಕಡ್ ಪ್ರೀಮಿಯರ್‌ಗೆ ಬಾಲಿವುಡ್‌ನ ಯಾವುದೇ ದೊಡ್ಡ ಸ್ಟಾರ್‌ಗಳಿಲ್ಲ

Kangana Ranaut ಚಿತ್ರ ಧಾಕಡ್ ಪ್ರೀಮಿಯರ್‌ಗೆ ಬಾಲಿವುಡ್‌ನ ಯಾವುದೇ ದೊಡ್ಡ ಸ್ಟಾರ್‌ಗಳಿಲ್ಲ

ಕಂಗನಾ ರಣಾವತ್  (Kangana Ranaut) ಅಭಿನಯದ 'ಧಾಕಡ್' (Dhaakad) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಮೊನ್ನೆ ಗುರುವಾರ ರಾತ್ರಿ ಮುಂಬೈನಲ್ಲಿ ಚಿತ್ರದ ವಿಶೇಷ ಪ್ರೀಮಿಯರ್ ಕಾರ್ಯಕ್ರಮ ನಡೆದಿದ್ದು, ಚಿತ್ರದ ನಿರ್ದೇಶಕ ರಜನೀಶ್ ಘಾಯ್, ನಾಯಕ ನಟಿ ಕಂಗನಾ ರನೌತ್, ಸಹನಟರಾದ ಅರ್ಜುನ್ ರಾಂಪಾಲ್, ದಿವ್ಯಾ ದತ್ತಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಬಾಲಿವುಡ್‌ನ ಯಾವುದೇ ದೊಡ್ಡ ಸ್ಟಾರ್‌ಗಳು ಈ ಸನಿಮಾದ ಪ್ರೀಮಿಯರ್‌ ಶೋನಲ್ಲಿ ಕಾಣಿಸಿಕೊಂಡಿಲ್ಲ.  ಅರ್ಜುನ್ ರಾಂಪಾಲ್, ಅವರ ಗೆಳತಿ ಗೇಬ್ರಿಯೆಲಾ ಡಿಮೆಟ್ರಿಯಾಡ್ಸ್ ಮತ್ತು ಪುತ್ರಿಯರಾದ ಮಿಹಿಕಾ ಮತ್ತು ಮೇರಾ ಸೇರಿದಂತೆ ಎಲ್ಲರೂ ಚಲನಚಿತ್ರವನ್ನು ವೀಕ್ಷಿಸಲು ಬಂದರು.

2 Min read
Author : Suvarna News
Published : May 20 2022, 04:55 PM IST
Share this Photo Gallery
  • FB
  • TW
  • Linkdin
  • Whatsapp
114

ಪ್ರೀಮಿಯರ್ ಸಮಯದಲ್ಲಿ ಕಂಗನಾ ರಣಾವತ್ ಅವರ ಕೂಲ್ ಸ್ಟೈಲ್ ಕಂಡುಬಂದಿದೆ. ಧಾಕಡ್‌ ಸಿನಿಮಾದಲ್ಲಿ ಕಂಗನಾ , ಅವರು ಏಜೆಂಟ್ ಅಗ್ನಿ ಪಾತ್ರವನ್ನು ನಿರ್ವಹಿಸುತ್ತಾರೆ, ಅವರು ಅಂತರರಾಷ್ಟ್ರೀಯ ಮಾನವ ಮತ್ತು ಶಸ್ತ್ರಾಸ್ತ್ರ ಕಳ್ಳಸಾಗಣೆ ಗ್ಯಾಂಗ್ ಅನ್ನು ನಿರ್ಮೂಲನೆ ಮಾಡಲು ಹೊರಟಿದ್ದಾರೆ.
 

214

ಚಿತ್ರದಲ್ಲಿ ಸ್ಮಗ್ಲಿಂಗ್ ಗ್ಯಾಂಗ್ ಲೀಡರ್ ರುದ್ರವೀರ್ ಪಾತ್ರದಲ್ಲಿ ಅರ್ಜುನ್ ರಾಂಪಾಲ್ ನಟಿಸಿದ್ದಾರೆ. ಅರ್ಜುನ್ ರಾಂಪಾಲ್ ಅವರ ಗರ್ಲ್‌ಫ್ರೆಂಡ್‌ ಗೇಬ್ರಿಯೆಲಾ ಡಿಮೆಟ್ರಿಯಾಡ್ಸ್ ಅವರೊಂದಿಗೆ 'ಧಕಡ್' ವಿಶೇಷ ಪ್ರೀಮಿಯರ್‌ಗೆ ಹಾಜರಾಗಿದ್ದರು.
 

314

ಇಬ್ಬರು ಪುತ್ರಿಯರಾದ ಮಿಹೀಕಾ ಮತ್ತು ಮೈರಾ  ಕೂಡ ಅರ್ಜುನ್ ರಾಮ್ ಜೊತೆಗೆ 'ಧಕಡ್' ಪ್ರಥಮ ಪ್ರದರ್ಶನದಲ್ಲಿ ಕಾಣಿಸಿಕೊಂಡರು. ಇಬ್ಬರೂ ಅರ್ಜುನ್ ಮತ್ತು ಅವರ ಮೊದಲ ಪತ್ನಿ ಮೆಹರ್ ಜೆಸಿಯಾ ಅವರ ಪುತ್ರಿಯರು.

414

ಪ್ರೀಮಿಯರ್ ಸಮಯದಲ್ಲಿ, ಕಂಗನಾ ಅರ್ಜುನ್ ಗೆಳತಿ ಗೇಬ್ರಿಯೆಲಾ ಡಿಮೆಟ್ರಿಯಾಡ್ಸ್ ಅವರನ್ನು ಭೇಟಿಯಾದಾಗ, ಇಬ್ಬರೂ ಮಾತಿನಲ್ಲಿ ಮುಳುಗಿದ್ದರು. ಬಾಕ್ಸ್ ಆಫೀಸ್ ನಲ್ಲಿ ಚಿತ್ರಕ್ಕೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

514

ನಟಿ ಮತ್ತು ರೂಪದರ್ಶಿ ಪೂನಂ ಪಾಂಡೆ ಪ್ರೀಮಿಯರ್‌ಗೆ ಆಗಮಿಸಿ ಕಂಗನಾ ರಣಾವತ್‌ ಅವರ 'ಧಕಡ್' ಚಿತ್ರವನ್ನು ವೀಕ್ಷಿಸಿದರು. ಈ ಸಮಯದಲ್ಲಿ, ಅವರು ತುಂಬಾ ಕೂಲ್‌ ಸ್ಟೈಲ್‌ನಲ್ಲಿ ಕಾಣಿಸಿಕೊಂಡರು.

614

ಹಿರಿಯ ಗಾಯಕಿ ಮತ್ತು ನಟಿ ಇಲಾ ಅರುಣ್ ಕಂಗನಾ ಅವರ  'ಧಕಡ್' ಚಿತ್ರವನ್ನು ಪ್ರೀಮಿಯರ್‌ ಶೋನಲ್ಲಿ ನೋಡಿದರು. ಅವರೊಂದಿಗೆ ಪೂನಂ ಪಾಂಡೆ ಮತ್ತಿತರರು ಕಾಣಿಸಿಕೊಂಡಿದ್ದರು.

714

ಗುರುವಾರ ರಾತ್ರಿ ಮುಂಬೈನಲ್ಲಿ ನಡೆದ ಧಾಕಡ್‌ ಸಿನಿಮಾದ ಪ್ರಥಮ ಪ್ರದರ್ಶನದಲ್ಲಿ  ಹಿರಿಯ ಸಿನಿಮಾ  ಮತ್ತು ಕಿರುತೆರೆ ನಟ ರಜಿತ್ ಕಪೂರ್ ಮತ್ತು ಇತರರು ಕಂಡು ಬಂದರು.

814

ನಟ ಚೇತನ್ ಹಂಸರಾಜ್ ಅವರು ಪತ್ನಿ ಲವಿನಾ ಪಟೇರಿಯಾ ಅವರೊಂದಿಗೆ ಪ್ರಥಮ ಪ್ರದರ್ಶನಕ್ಕೆ ಆಗಮಿಸಿ ಕಂಗನಾ ರಣಾವತ್ ಅವರ 'ಧಕಡ್' ಚಲನಚಿತ್ರವನ್ನು ವೀಕ್ಷಿಸಿದರು.

914

ಕಂಗನಾ ರಣಾವತ್ ಅವರ ಅಗ್ನಿ ಅವತಾರವನ್ನು ವೀಕ್ಷಿಸಲು ಜನಪ್ರಿಯ ಟಿವಿ ನಟ ಕರಣ್ವೀರ್ ಬೋಹ್ರಾ ಅವರು 'ಧಾಕಡ್' ನ ಪ್ರಥಮ ಪ್ರದರ್ಶನಕ್ಕೆ ಹಾಜರಾಗಿದ್ದರು.

1014

'ಧಾಕಡ್' ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಷರೀಬ್ ಹಶ್ಮಿ ಮತ್ತು ದಿವ್ಯಾ ದತ್ತಾ ಪ್ರೀಮಿಯರ್ ಸಮಯದಲ್ಲಿ ಪಾಪರಾಜಿಗಳಿಗೆ ಈ ಸ್ಟೈಲಾಗಿ ಪೋಸ್ ನೀಡಿದ್ದಾರೆ.

1114

ಬಾಲಿವುಡ್‌ನಲ್ಲಿ ನೆಗೆಟಿವ್‌ ಪಾತ್ರದಲ್ಲಿ ಜನಪ್ರಿಯರಾಗಿರುವ ನಟ ಅರುಣೋದಯ್ ಸಿಂಗ್ ಪ್ರೀಮಿಯರ್‌ಗೆ ಹಾಜರಾಗಿದ್ದರು. ಈ ಸಿನಿಮಾವನ್ನು ರಜನೀಶ್ ಘಾಯ್ ನಿರ್ದೇಶನ ಮಾಡಿದ್ದಾರೆ.

1214

ನಟಿ ಮತ್ತು ರೂಪದರ್ಶಿ ಪಾಯಲ್ ರೋಹಟಗಿ ಅವರು ಕಂಗನಾ ರಣಾವತ್ ಅಭಿನಯದ 'ಧಕಡ್' ಚಲನಚಿತ್ರವನ್ನು ವೀಕ್ಷಿಸಲು ವಿಶೇಷ ಪ್ರದರ್ಶನಕ್ಕೆ ಹಾಜರಾಗಿದ್ದರು. ಈ ಸಮಯದಲ್ಲಿ ಅವಳು ತುಂಬಾ ಸಂತೋಷದಿಂದ ಕಾಣುತ್ತಿದ್ದರು.
 

1314

ಕಂಗನಾ ರಣಾವತ್ ಮತ್ತು ಅರ್ಜುನ್ ರಾಂಪಾಲ್ ಅವರಲ್ಲದೆ, ನಿರ್ದೇಶಕ ರಜನೀಶ್ ಘಾಯ್, ನಟಿ ದಿವ್ಯಾ ದತ್ತಾ ಸೇರಿದಂತೆ 'ಧಕಡ್' ತಂಡದ ಅನೇಕ ಸದಸ್ಯರು ಪ್ರಥಮ ಪ್ರದರ್ಶನದಲ್ಲಿ ಉಪಸ್ಥಿತರಿದ್ದರು.

1414

ಇತ್ತೀಚಿಗೆ ಮುಕ್ತಾಯಗೊಂಡ  ಕಂಗನಾ ರಣಾವತ್ ಅವರ 'ಲಾಕಪ್' ಕಾರ್ಯಕ್ರಮದ ವಿಜೇತರಾದ ಮುನವ್ವರ್ ಫಾರೂಕಿ, ಗೆಳತಿ ನಾಜಿಲಾ ಅವರ ಜೊತೆ 'ಧಕಡ್' ನ ಪ್ರೀಮಿಯರ್‌ಗೆ ಹಾಜರಾಗಿದ್ದರು.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಬಾಲಿವುಡ್
ಕಂಗನಾ ರಣಾವತ್

Latest Videos
Recommended Stories
Recommended image1
ಹೀರೋ ಚಿರಂಜೀವಿ, ನಿರ್ಮಾಪಕಿ ಶ್ರೀದೇವಿ; ಶುರುವಾಗಿ ಅರ್ಧಕ್ಕೆ ನಿಂತುಹೋದ ಆ ಸಿನಿಮಾ ಯಾವುದು ಗೊತ್ತಾ?
Recommended image2
Viral Pics: ವಿಜಯ್‌ ದೇವರಕೊಂಡ ತಾಳಿ ಕಟ್ಟುವ ವೇಳೆ ಭಾವುಕಳಾಗಿ ಕಣ್ಣೀರಿಟ್ಟ ರಶ್ಮಿಕಾ ಮಂದಣ್ಣ!
Recommended image3
ಮುಂಬೈನಲ್ಲಿ ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿ ಮೊದಲ ಬೀಚ್ ಕ್ಲಬ್ ಶುರು; ದೇವಲೋಕವೋ ಪ್ರೇಮಲೋಕವೋ ಎಂಬಂತಿದೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved