ರಣಬೀರ್ ಕಪೂರ್ ಜೊತೆ ನಟಿಸಿದ ನಟಿಯರು ಇವರು, ಯಾರ ಯಾರ ಜೊತೆ ಡೇಟಿಂಗ್ ಮಾಡಿದ್ದಾರೆ!
ಬಾಲಿವುಡ್‌ನ ಹ್ಯಾಂಡ್‌ಸಮ್ ನಟ ರಣಬೀರ್ ಕಪೂರ್ (Ranbir Kapoor) ಅವರ ಆನಿಮಲ್ (Animal) ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಡಿಸೆಂಬರ್ ಒಂದರಂದು ತೆರೆಗೆ ಬರಲಿರುವ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ರಣಬೀರ್ ಅವರಿಗೆ ಜೋಡಿಯಾಗಿದ್ದಾರೆ. ರಣಬೀರ್ ಕಪೂರ್ ಅವರ ಜೊತೆ ಕೆಲಸ ಮಾಡಿದ ಸಹ ತಾರೆಯರ ಪಟ್ಟಿ ಇಲ್ಲಿದೆ.

ಸೋನಮ್ ಕಪೂರ್:
ಸಾವಾರಿಯಾ ಇದು ರಣಬೀರ್ ಕಪೂರ್ ಅವರ ಚೊಚ್ಚಲ ಚಿತ್ರ. ಇದರಲ್ಲಿ ಅವರು ಸೋನಮ್ ಕಪೂರ್ ಅವರೊಂದಿಗೆ ಜೋಡಿಯಾಗಿ ನಟಿಸಿದ್ದಾರೆ, ಈ ಚಿತ್ರವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ್ದಾರೆ.
ಕೊಂಕಣಾ ಸೇನ್ ಶರ್ಮಾ:
ಇಯಾನ್ ಮುಖರ್ಜಿ ನಿರ್ದೇಶನದ ವೇಕಪ್ ಸಿದ್ ಚಿತ್ರದಲ್ಲಿ ರಣಬೀರ್ ಕಪೂರ್ ಅವರು ಕೊಂಕಣಾ ಸೇನ್ ಶರ್ಮಾ ಜೊತೆ ನಟಿಸಿದ್ದಾರೆ . ಈ ಸಿನಿಮಾದಲ್ಲಿ ರಣಬೀರ್ ಕೇರ್‌ಲೆಸ್ ಶ್ರೀಮಂತ ಕಾಲೇಜು ಹುಡುಗನ ಪಾತ್ರವನ್ನು ನಿರ್ವಹಿಸಿದ್ದಾರೆ.
ಕತ್ರಿನಾ ಕೈಫ್:
ರಾಜ್‌ಕುಮಾರ್ ಸಂತೋಷಿ ನಿರ್ದೇಶನದ ಈ ರೊಮ್ಯಾಂಟಿಕ್ ಕಾಮಿಡಿ ಅಜಬ್ ಪ್ರೇಮ್ ಕಿ ಗಜಬ್ ಕಹಾನಿಯಲ್ಲಿ ಕತ್ರಿನಾ ಕೈಫ್ ಎದುರು ರಣಬೀರ್ ಕಪೂರ್ ಜೋಡಿಯಾಗಿದ್ದರು.
ನರ್ಗಿಸ್ ಫಕ್ರಿ:
ಇಮ್ತಿಯಾಜ್ ಅಲಿ ನಿರ್ದೇಶನದ ರಾಕ್‌ಸ್ಟಾರ್‌ನಲ್ಲಿ ರಣಬೀರ್ ಕಪೂರ್ ಸಂಗೀತಗಾರನ ಪಾತ್ರ ನಿರ್ವಹಿಸಿದ್ದಾರೆ. ಈ ಸಿನಮಾದಲ್ಲಿ ಸಹನಟಿಯಾಗಿರುವ ನರ್ಗಿಸ್ ಫಕ್ರಿ ಅವರ ಜೊತೆ ರಣಬೀರ್ ಕೆಮಿಸ್ಟ್ರಿ ಭಾರೀ ಮೆಚ್ಚುಗೆಗೆ ಪಾತ್ರವಾಯಿತು.
ಪ್ರಿಯಾಂಕಾ ಚೋಪ್ರಾ:
ಬರ್ಫಿ ಈ ಹಾಟ್ ವಾರ್ಮಿಂಗ್ ಅನುರಾಗ್ ಬಸು ಚಿತ್ರದಲ್ಲಿ ರಣಬೀರ್ ಕಪೂರ್ ಪ್ರಿಯಾಂಕಾ ಚೋಪ್ರಾ ಮತ್ತು ಇಲಿಯಾನಾ ಡಿಕ್ರೂಜ್ ಅವರೊಂದಿಗೆ ನಟಿಸಿದ್ದಾರೆ.
ದೀಪಿಕಾ ಪಡುಕೋಣೆ:
ಅಯಾನ್ ಮುಖರ್ಜಿ ನಿರ್ದೇಶಿಸಿದ ಯೇ ಜವಾನಿ ಹೇ ದೀವಾನಿ ರೊಮ್ಯಾಂಟಿಕ್ ಡ್ರಾಮಾದಲ್ಲಿ ದೀಪಿಕಾ ಪಡುಕೋಣೆ ಜೊತೆಗೆ ರಣಬೀರ್ ಕಪೂರ್ ತೆರೆ ಹಂಚಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ:
ಆನಿಮಲ್ ಸಿನಿಮಾದಲ್ಲಿ ರಣಬೀರ್ ಕಪೂರ್ ಜೋಡಿಯಾಗಿ ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ಕೆಲಸ ಮಾಡಿದ್ದಾರೆ. ಡಿಸೆಂಬರ್ 1ರಂದು ಬಿಡುಗಡೆಗೆ ಸಿದ್ಧವಾಗಿರುವ ಈ ಸಿನಿಮಾದ ಟ್ರೇಲರ್ ಈಗಾಗಲೇ ಭಾರೀ ಹವಾ ಸೃಷ್ಟಿಸಿದೆ ಮತ್ತು ಜೋಡಿಯನ್ನು ಹಿಟ್ ಮಾಡುವ ನಿರೀಕ್ಷೆಯಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.